For Quick Alerts
ALLOW NOTIFICATIONS  
For Daily Alerts

ಸ್ಯಾಮ್ಸಂಗ್ ಗೆ 100 ಕೋಟಿ USD ದಂಡ ತೆತ್ತ ಆಪಲ್ ಕಂಪೆನಿ

|

ಆಪಲ್ ಕಂಪೆನಿಯಿಂದ ಸ್ಯಾಮ್ಸಂಗ್ ಗೆ 100 ಕೋಟಿ ಅಮೆರಿಕನ್ ಡಾಲರ್ ದಂಡ ಪಾವತಿಸಲಾಗಿದೆ ಎಂದು ವರದಿ ಆಗಿದೆ. ಆಪಲ್ ಐಫೋನ್ ಗಳಿಗೆ ಅತಿ ದೊಡ್ಡ ಪ್ರಮಾಣದಲ್ಲಿ OLED ಡಿಸ್ ಪ್ಲೇ ಪೂರೈಕೆ ಆಗುವುದು ಸ್ಯಾಮ್ಸಂಗ್ ನಿಂದ. ಆದರೆ ಅದನ್ನು ಆರ್ಡರ್ ಮಾಡಿದಂತೆ ಖರೀದಿಸಲು ವಿಫಲವಾದ ಹಿನ್ನೆಲೆಯಲ್ಲಿ 100 ಕೋಟಿ USD (ಭಾರತದ ರುಪಾಯಿಗಳಲ್ಲಿ 7500 ಕೋಟಿಗೂ ಹೆಚ್ಚು) ದಂಡ ಪಾವತಿಸಿದೆ.

 

OLED ಖರೀದಿ ಅಗತ್ಯಗಳನ್ನು ಪೂರೈಸದ ಆಪಲ್ ಕಂಪೆನಿಗೆ 74.5 ಕೋಟಿ USDಯನ್ನು ಸ್ಯಾಮ್ಸಂಗ್ ಗೆ ಪಾವತಿಸಲಾಗಿದೆ ಎಂದು ವರದಿ ಆಗಿತ್ತು. ಆದರೆ ಡಿಸ್ ಪ್ಲೇ ಪೂರೈಸುವ ಜಾಲದ ಕಡೆಯಿಂದಲೇ ಹೊಸ ವರದಿ ಬಂದಿದೆ. ದಂಡ ವಿಧಿಸಿರುವುದು 95 ಕೋಟಿ ಡಾಲರ್ ಎನ್ನಲಾಗಿದೆ.

ನಷ್ಟದಲ್ಲಿದ್ದ ಡಿಸ್ ಪ್ಲೇ ವ್ಯವಹಾರ ಲಾಭಕ್ಕೆ

ನಷ್ಟದಲ್ಲಿದ್ದ ಡಿಸ್ ಪ್ಲೇ ವ್ಯವಹಾರ ಲಾಭಕ್ಕೆ

ಈ ಮೂಲಕ ಸ್ಯಾಮ್ಸಂಗ್ ದ್ವಿತೀಯ ತ್ರೈಮಾಸಿಕ ಲಾಭದಲ್ಲಿ ಹೆಚ್ಚಳ ಆಗಲು ಕಾರಣವಾಗಲಿದೆ. ಡಿಸ್ ಪ್ಲೇ ವ್ಯವಹಾರದಲ್ಲಿ ಒಂದು ಬಾರಿ ಆದಾಯವಾಗಿ ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸ್ಯಾಮ್ಸಂಗ್ ನಿಂದ ಮೊತ್ತವನ್ನು ಬಹಿರಂಗ ಮಾಡಿಲ್ಲ. ಆದರೆ ಆಪಲ್ ಪಾವತಿಸುವ ದಂಡ 100 ಕೋಟಿಗೆ ಸಮೀಪ ಎಂದು ಹೇಳಲಾಗಿದೆ. ಈ ಮೂಲಕ ನಷ್ಟದಲ್ಲಿದ್ದ ಡಿಸ್ ಪ್ಲೇ ವ್ಯವಹಾರ ಲಾಭಕ್ಕೆ ಬದಲಾಗಲಿದೆ.

ಈ ಹಿಂದೆ OLED ಪ್ಯಾನೆಲ್ ಖರೀದಿಸಿರಲಿಲ್ಲ

ಈ ಹಿಂದೆ OLED ಪ್ಯಾನೆಲ್ ಖರೀದಿಸಿರಲಿಲ್ಲ

ಹೀಗೆ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಸ್ಯಾಮ್ಸಂಗ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಂತೆ OLED ಪ್ಯಾನೆಲ್ ಖರೀದಿಸಿರಲಿಲ್ಲ. ಆಗ 68.4 ಕೋಟಿ USD ದಂಡವಾಗಿ ಪಾವತಿಸಿತ್ತು. ಕೊರೊನಾ ಕಾರಣಕ್ಕೆ ಬೇಡಿಕೆ ಮತ್ತು ಮಾರಾಟದಲ್ಲಿನ ಕುಸಿತದ ಕಾರಣಕ್ಕೆ ಆಪಲ್ ನಿಂದ OLED ಪ್ಯಾನೆಲ್ ಖರೀದಿಸಿರಲಿಲ್ಲ.

ಈ ವರೆಗೆ ಸ್ಯಾಮ್ಸಂಗ್ ನಿಂದ OLED ಪೂರೈಕೆ
 

ಈ ವರೆಗೆ ಸ್ಯಾಮ್ಸಂಗ್ ನಿಂದ OLED ಪೂರೈಕೆ

ಆಪಲ್ ಐಫೋನ್ 12ರ ಸರಣಿಗೆ ಚೀನಾದ BOE ಟೆಕ್ ನಿಂದ OLED ಖರೀದಿ ಮಾಡಲಾಗುತ್ತಿದೆ. ಆದ್ದರಿಂದ ಸ್ಯಾಮ್ಸಂಗ್ ನಿಂದ ಈ ವರೆಗೆ OLED ಖರೀದಿ ಮಾಡುತ್ತಿದ್ದ ಆಪಲ್ ನಿರ್ಧಾರ ಬದಲಾಯಿಸಬಹುದು ಎಂಬ ನಿರೀಕ್ಷೆ ಇದೆ. 5G ತಂತ್ರಜ್ಞಾನ ಒಳಗೊಂಡಂಥ ಆಪಲ್ 12ರ ಸರಣಿಯ 4 ಐಫೋನ್ ಗಳನ್ನು ಈ ವರ್ಷ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆ ಎಲ್ಲ 5G ಫೋನ್ ಗಳಲ್ಲೂ OLED ಡಿಸ್ ಪ್ಲೇ ಇರಲಿದೆ.

English summary

Apple Paid 100 Crore USD Penalty To Samsung For Not Purchasing OLED

Apple company paid 100 crore USD to Samsung for not purchasing OLED according to agreement, according to report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X