For Quick Alerts
ALLOW NOTIFICATIONS  
For Daily Alerts

2020ರಲ್ಲಿ ಭಾರತದ ವಾಹನ ಉತ್ಪಾದನೆ 8.3 ಪರ್ಸೆಂಟ್‌ಗೆ ಇಳಿಕೆ ಸಾಧ್ಯತೆ : ಫಿಚ್ ಏಜೆನ್ಸಿ

|

ಚೀನಾದ ಕೊರೊನಾವೈರಸ್ ಭೀತಿಯು ಆಟೋಮೊಬೈಲ್ ಮೇಲೂ ಪರಿಣಾಮವನ್ನು ಬೀರಿದ್ದು, 2020ರಲ್ಲಿ ಭಾರತದಲ್ಲಿ ವಾಹನ ಉತ್ಪಾದನೆಯು 8.3 ಪರ್ಸೆಂಟ್‌ಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಫಿಚ್ ಸೊಲ್ಯೂಷನ್ಸ್ ಬುಧವಾರ ಹೇಳಿದೆ.

ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್‌ ಈಗಾಗಲೇ ಬಹುತೇಕ ಉದ್ಯಮದ ಮೇಲೆ ಪರಿಣಾಮ ಬೀರಿದೆ. ವಾಹನ ಪೂರೈಕೆಯಲ್ಲೂ ವ್ಯತ್ಯಾಸ ಕಂಡು ಬರುತ್ತದೆ. ಚೀನಾದಲ್ಲಿ ಜನರು(ಸಿಬ್ಬಂದಿಗಳು) ಹೆಚ್ಚು ಸೇರುವುದನ್ನು ಮಿತಿಗೊಳಿಸಲು ವಾಹನ ತಯಾರಕರು ಕೂಡ ವಾಹನ ಉತ್ಪಾದನೆಯನ್ನೂ ತಗ್ಗಿಸಿದ್ದಾರೆ. '' ಕೊರೊನಾ ವೈರಸ್ ದೇಶಾದ್ಯಂತ ಹಬ್ಬಿದರೆ ಭಾರತವು ಇದೇ ರೀತಿಯ ನೀತಿಗಳನ್ನು ಅನುಸರಿಸುವ ಸಾಧ್ಯತೆ ಇರುತ್ತದೆ ಎಂದು ಫಿಚ್ ಹೇಳಿದೆ.

2020ರಲ್ಲಿ ಭಾರತದ ವಾಹನ ಉತ್ಪಾದನೆ 8.3 ಪರ್ಸೆಂಟ್‌ಗೆ ಇಳಿಕೆ ಸಾಧ್ಯತೆ

ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯು ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಜ್ಜುಗೊಂಡಿಲ್ಲವಾದ್ದರಿಂದ, ರೇಟಿಂಗ್ ಏಜೆನ್ಸಿ "ಭಾರತೀಯ ವಾಹನ ಉತ್ಪಾದನೆಯ ಮೇಲೆ ಪರಿಣಾಮವು ಹೆಚ್ಚು ದೊಡ್ಡದಾಗಿರುತ್ತದೆ. ಏಕೆಂದರೆ ಚೀನಾಕ್ಕೆ ಹೋಲಿಸಿದರೆ ವೈರಸ್ ದೇಶದಲ್ಲಿ ಹೆಚ್ಚು ವೇಗವಾಗಿ ಹರಡುತ್ತದೆ" ಎಂದು ಹೇಳಿದೆ.

ಇದಲ್ಲದೆ, ಚೀನಾ ಭಾರತದ ಅತಿದೊಡ್ಡ ವಾಹನ ಘಟಕಗಳ ಪೂರೈಕೆದಾರರಲ್ಲಿ ಒಂದಾಗಿರುವುದರಿಂದ, ಚೀನಾ ನಿರ್ಮಿತ ಘಟಕಗಳ ಪೂರೈಕೆಯಲ್ಲಿನ ಮಂದಗತಿಯು ಭಾರತದಲ್ಲಿ ಕೊರತೆಗೆ ಕಾರಣವಾಗುತ್ತದೆ ಮತ್ತು ಉತ್ಪಾದನೆಯನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ವಾಹನ ತಯಾರಕರನ್ನು ಒತ್ತಾಯಿಸುತ್ತದೆ.

ಇದರ ಪರಿಣಾಮವಾಗಿ, 2019 ರಲ್ಲಿ 13.2 ಪರ್ಸೆಂಟ್‌ರಷ್ಟು ಸಂಕೋಚನದ ನಂತರ ಭಾರತದಲ್ಲಿ ವಾಹನ ಉತ್ಪಾದನೆಯು 2020 ಕ್ಕೆ 8.3 ಪರ್ಸೆಂಟ್‌ರಷ್ಟು ಕುಗ್ಗಲಿದೆ ಎಂದು ಅಂದಾಜಿಸಿದೆ.

English summary

Auto Production To Slide 8.3 Percent In 2020

Fitch Solutions on Wednesday said it expects vehicle production in India to contract by 8.3 per cent in 2020
Story first published: Wednesday, February 12, 2020, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X