For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸಾಲ ಪಡೆಯೋದ್ರಲ್ಲಿ ಬೆಂಗಳೂರು ನಂಬರ್ 1 ಸಿಟಿ

|

ಭಾರತದ ಹಣಕಾಸು ರಾಜಧಾನಿ ಮುಂಬೈಗಿಂತ ಐಟಿ ಹಬ್, ಸ್ಟಾರ್ಟ್‌ಅಪ್‌ ಕಂಪನಿಗಳ ರಾಜಧಾನಿ ಬೆಂಗಳೂರು ಅತಿ ಹೆಚ್ಚು ಗೃಹ ಸಾಲ ಮತ್ತು ವೈಯಕ್ತಿಕ ಸಾಲ ಪಡೆದುಕೊಂಡಿದೆ ಎಂದು ಮಾರುಕಟ್ಟೆ ವರದಿಯೊಂದು ತಿಳಿಸಿದೆ

2019ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೃಹ ಸಾಲ ಮತ್ತು ವಾಹನ ಸಾಲ ಪಡೆದ ನಗರಗಳಲ್ಲಿ ಬೆಂಗಳೂರು, ವಾಣಿಜ್ಯ ನಗರಿ ಮುಂಬೈಯನ್ನೇ ಹಿಂದಿಕ್ಕಿದೆ. ಬ್ಯಾಂಕ್ ಬಜಾರ್ ಮನಿಮೂಡ್ 2020ರ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಭಾರತದಲ್ಲಿ ಅತಿ ಹೆಚ್ಚು ಗೃಹ ಸಾಲದ ಗಾತ್ರ 2.2 ಕೋಟಿ ಬೆಂಗಳೂರಿನಲ್ಲಿದ್ದರೆ, ಮುಂಬೈ 2 ಕೋಟಿ ರುಪಾಯಿಗೆ ಎರಡನೇ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಬಜಾರ್ ಮನಿಮೂಡ್ ವರದಿ ತಿಳಿಸಿದೆ.

ಗೃಹ ಸಾಲ ಅಷ್ಟೇ ಅಲ್ಲದೆ ವೈಯಕ್ತಿಕ ಸಾಲದಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ವ್ಯಕ್ತಿಯೊಬ್ಬರು 34 ಲಕ್ಷ ರುಪಾಯಿ ವೈಯಕ್ತಿಕ ಸಾಲ ಪಡೆದಿದ್ದಾರೆ. ಈ ಮೂಲಕ ಗೃಹ ಮತ್ತು ವೈಯಕ್ತಿಕ ಸಾಲಗಳೆರಡರ ಗಾತ್ರದಲ್ಲಿ ಸಿಲಿಕಾನ್ ಸಿಟಿ ಮೊದಲ ನಗರವಾಗಿದೆ.

ಸರಾಸರಿ ಗೃಹ ಸಾಲದ ಗಾತ್ರದಲ್ಲೂ ಬೆಂಗಳೂರಿಗೆ ಮೊದಲ ಸ್ಥಾನ
 

ಸರಾಸರಿ ಗೃಹ ಸಾಲದ ಗಾತ್ರದಲ್ಲೂ ಬೆಂಗಳೂರಿಗೆ ಮೊದಲ ಸ್ಥಾನ

ಒಟ್ಟಾರೆ ಪಡೆದ ಗೃಹ ಸಾಲದ ಪ್ರಮಾಣವನ್ನು ಸರಾಸರಿ ಆಧಾರದಲ್ಲಿ ನೋಡಿದಾಗ ಬರುವ ಮೊತ್ತದಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಸರಾಸರಿ ಗೃಹ ಸಾಲ 33.3 ಲಕ್ಷವಿದ್ದು, ಮುಂಬೈ 26.6 ಲಕ್ಷ ರುಪಾಯಿಯೊಂದಿಗೆ ಹಿಂದಿದೆ.

ಅನಾರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ಪ್ರಕಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯು 2016ಕ್ಕೆ ಹೋಲಿಸಿದರೆ 2019ರಲ್ಲಿ ಸರಾಸರಿ ಬೆಲೆಗಳು 11 ಪರ್ಸೆಂಟ್ ಹೆಚ್ಚಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯು ಟಾಪ್ 10 ಸಕ್ರಿಯ ವಸತಿ ಹಾಟ್‌ಸ್ಪಾಟ್‌ಗಳಲ್ಲಿ ಆರನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಗೃಹ ಸಾಲ ಹೆಚ್ಚು ಏಕೆ?

ಬೆಂಗಳೂರಿನಲ್ಲಿ ಗೃಹ ಸಾಲ ಹೆಚ್ಚು ಏಕೆ?

'' ಆಸ್ತಿ ಬೆಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮನೆ ಖರೀದಿಸಲು ವರ್ಷಗಳು ಅಥವಾ ದಶಕಗಳವರೆಗೆ ಕಾಯುವ ಬದಲು, ಬೆಂಗಳೂರಿಗರು ಹೆಚ್ಚಾಗಿ ಗೃಹ ಸಾಲದತ್ತ ಜನರು ಮುಖ ಮಾಡುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಮೌಲ್ಯದ ಸಾಲಗಳನ್ನು ಪಡೆಯುತ್ತಿರುವುದು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಜನರು ಬೆಂಗಳೂರಿನಲ್ಲಿ ಸಾಲವನ್ನು ಪಡೆಯಲು ಮುಂದಾಗುತ್ತಿದ್ದಾರೆ'' ಎಂದು ಬ್ಯಾಂಕ್‌ ಬಜಾರ್.ಕಾಂನ ಸಿಎಂಒ ಅಪರ್ಣಾ ಮಹೇಶ್ ಲೈವ್‌ಮಿಂಟ್‌ಗೆ ಹೇಳಿದ್ದಾರೆ.

ಗೃಹ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ

ಹೆಚ್ಚಿನ ಗೃಹ ಸಾಲ ಪಡೆದ ಐದು ನಗರಗಳು

ಹೆಚ್ಚಿನ ಗೃಹ ಸಾಲ ಪಡೆದ ಐದು ನಗರಗಳು

ಭಾರತದಲ್ಲಿ ಹೆಚ್ಚಿನ ಮೌಲ್ಯದ ಗೃಹ ಸಾಲಗಳನ್ನು ಪಡೆದ ಟಾಪ್ 5 ನಗರಗಳು ಈ ಕೆಳಗಿವೆ:

1) ಬೆಂಗಳೂರು : 2.2 ಕೋಟಿ ರುಪಾಯಿ

2) ಮುಂಬೈ : 2 ಕೋಟಿ ರುಪಾಯಿ

3) ಅಹಮದಾಬಾದ್ : 1.98 ಕೋಟಿ ರುಪಾಯಿ

4) ಪುಣೆ : 1.84 ಕೋಟಿ ರುಪಾಯಿ

5) ಚೆನ್ನೈ : 1.3 ಕೋಟಿ ರುಪಾಯಿ

ಗೃಹಸಾಲ ಮರುಪಾವತಿ ಮಾಡುವ ಉತ್ತಮ ಆಯ್ಕೆಗಳು ಯಾವುವು?

ಹೆಚ್ಚಿನ ವೈಯಕ್ತಿಕ ಸಾಲ ಪಡೆದ ಐದು ನಗರಗಳು
 

ಹೆಚ್ಚಿನ ವೈಯಕ್ತಿಕ ಸಾಲ ಪಡೆದ ಐದು ನಗರಗಳು

1) ಬೆಂಗಳೂರು : 35 ಲಕ್ಷ ರುಪಾಯಿ

2) ಧಾರವಾಡ : 30 ಲಕ್ಷ ರುಪಾಯಿ

3) ಘಾಜೀಯಾಬಾದ್ : 30 ಲಕ್ಷ ರುಪಾಯಿ

4) ಹೈದ್ರಾಬಾದ್ : 30 ಲಕ್ಷ ರುಪಾಯಿ

5) ಕೊಲ್ಕತ್ತಾ : 26 ಲಕ್ಷ ರುಪಾಯಿ

ವೈಯಕ್ತಿಕ ಸಾಲ (personal loan) ಜನಪ್ರಿಯತೆಗೆ ಕಾರಣಗಳೇನು ಗೊತ್ತಾ?

ಆರ್ಥಿಕ ಬೆಳವಣಿಗೆ ನಿಧಾನಗತಿಯ ನಡುವೆ ಗೃಹ ಸಾಲದ ಬೆಳವಣಿಗೆ

ಆರ್ಥಿಕ ಬೆಳವಣಿಗೆ ನಿಧಾನಗತಿಯ ನಡುವೆ ಗೃಹ ಸಾಲದ ಬೆಳವಣಿಗೆ

ದೇಶದಲ್ಲಿ ಆರ್ಥಿಕ ಬೆಳವಣಿಗೆಯು ಮಂದಗತಿಯಲ್ಲಿಯೇ ಸಾಗುತ್ತಿದೆ. ಅದರಲ್ಲೂ 2019ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತದ ನಡುವೆ ಗೃಹ ಸಾಲಗಳು 25 ಪರ್ಸೆಂಟ್ ಬೆಳವಣಿಗೆಯನ್ನು ಕಂಡಿವೆ. ಅಕ್ಟೋಬರ್ 2019ರಿಂದ ಕಡಿಮೆ ಬಡ್ಡಿದರಗಳು, ಹೆಚ್ಚಿದ ದಾಸ್ತಾನು ಮತ್ತು ತೆರಿಗೆ ಪ್ರಯೋಜನಗಳಿಂದ ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆಗಳ ಉಪಕ್ರಮಗಳಿಂದ ರಿಯಲ್ ಎಸ್ಟೇಟ್ ಹೆಚ್ಚು ಆಕರ್ಷಿತವಾಗಿಲ್ಲ. ಆದರೂ ಗೃಹ ಸಾಲ ಬೆಳವಣಿಗೆಯು ಪ್ರಾಥಮಿಕವಾಗಿ 30 ಲಕ್ಷ ರುಪಾಯಿ ಇದ್ದು, ಒಟ್ಟು ಅರ್ಜಿಗಳ ಸಂಖ್ಯೆಯಲ್ಲಿ 72 ಪರ್ಸೆಂಟ್ ಏರಿದೆ ಎಂದು ಬ್ಯಾಂಕ್‌ ಬಜಾರ್.ಕಾಂನ ಸಿಎಂಒ ಅಪರ್ಣಾ ಮಹೇಶ್ ಹೇಳಿದ್ದಾರೆ.

ದೇಶದಲ್ಲಿ ಆರ್ಥಿಕ ಮಂದಗತಿಯ ಹೊರತಾಗಿಯೂ ಜನರು ಮನೆಗಳನ್ನು ಖರೀದಿಸುತ್ತಿದ್ದಾರೆ ಎಂದು ಬ್ಯಾಂಕ್ ಬಜಾರ್ ಅಂಕಿ-ಅಂಶಗಳು ತೋರಿಸುತ್ತಿದೆ. ಜನರು ಕಡಿಮೆ ವೆಚ್ಚದ ಬಜೆಟ್ ಮನೆಗಳನ್ನು ಆಯ್ಕೆ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಸಣ್ಣ ಸಾಲ ಮತ್ತು ಇಎಂಐ ಹೊರೆ ಹೊಂದಿದ್ದಾರೆ.

ಪರ್ಸನಲ್ ಲೋನ್ ನೀಡಲು ಮುಂದಾದ ಶಿಯೋಮಿ; ಭಾರತದಲ್ಲಿ Mi Credit ಆರಂಭ

English summary

Banglore Beats Mumbai To Get Highet Home And Personal Loan

Banglore beats India's financial capital mumbai, took the highest home loan and personal loan ticket size in india during 2019.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more