For Quick Alerts
ALLOW NOTIFICATIONS  
For Daily Alerts

ವಾರಕ್ಕೆ ಮೂರೇ ದಿನ ಕೆಲಸ: ಬೆಂಗಳೂರಿನ ಸ್ಟಾರ್ಟ್‌ಅಪ್‌ವೊಂದರ ಭರ್ಜರಿ ಆಫರ್!

|

ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಫಿನ್‌ಟೆಕ್ ಉದ್ಯೋಗಿಗಳನ್ನ ಆಕರ್ಷಿಸಲು ಬಂಪರ್ ಆಫರ್ ಒಂದನ್ನ ನೀಡಿದೆ. ಅದೇನಂದ್ರೆ ವಾರಕ್ಕೆ ಮೂರೇ ದಿನ ಕೆಲಸ!. ಹೌದು ಇದು ಕೇಳಲು ಆಶ್ಚರ್ಯವೆನಿಸಿದ್ರು ನಿಜ.

ಭಾರತೀಯ ಐಟಿ ಕಂಪನಿಗಳಲ್ಲಿ ಪ್ರತಿಭೆಗಳ ಕೊರತೆ ಹೆಚ್ಚಾದ ನಡುವೆ ನುರಿತ ಹಾಗೂ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಆಯ್ಕೆಗೆ ಈ ವಿಭಿನ್ನ ರೀತಿಯ ತಂತ್ರಕ್ಕೆ ಫಿನ್‌ಟೆಕ್ ಕಂಪನಿ ಮುಂದಾಗಿದೆ.

ಶೇಕಡಾ 80ರಷ್ಟು ವೇತನ ನೀಡಲಾಗುವುದು!

ಶೇಕಡಾ 80ರಷ್ಟು ವೇತನ ನೀಡಲಾಗುವುದು!

ಫಿನ್‌ಟೆಕ್ ಕಂಪನಿ ಹೊಸ ನೇಮಕಾತಿಯಲ್ಲಿ ವಾರದಲ್ಲಿ ಮೂರು ದಿನಗಳ ಕೆಲಸ ಮಾಡುವವರಿಗೆ ಮಾರುಕಟ್ಟೆ ದರದೊಂದಿಗೆ ಶೇಕಡಾ 80ರಷ್ಟು ವೇತನ ನೀಡುವುದಾಗಿ ತಿಳಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

"ಇದು ಒಂದು ಗೆಲುವು-ಗೆಲುವಿನ ವಿಧಾನವಾಗಿದ್ದು, ಕಾರ್ಮಿಕರಿಗೆ ಇತರ ಆಸಕ್ತಿಗಳನ್ನು ಅಥವಾ ಇತರ ಗಿಗ್‌ಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸ್ಥಿರವಾದ ವೇತನ ನೀಡುವುದರ ಜೊತೆಗೆ ಲಾಭವನ್ನು ಪಡೆಯುತ್ತಿದೆ" ಎಂದು ಕಂಪನಿಯ ಸಂಸ್ಥಾಪಕ ರಾಜನ್ ಬಜಾಜ್ ಹೇಳಿದರು.

ಮಾತನ್ನು ಮುಂದುವರಿಸಿದ ರಾಜನ್ ಬಜಾಜ್ ''ಇದು ಕೆಲಸದ ಭವಿಷ್ಯವಾಗಿದೆ. ಜನರು ಕೆಲಸಕ್ಕೆ ತಮ್ಮನ್ನು ತಾವು ಕಟ್ಟಿಹಾಕಿಕೊಳ್ಳಲು ಬಯಸುವುದಿಲ್ಲ'' ಎಂದು ಬ್ಲೂಮ್‌ಬರ್ಗ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

 

ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹರಿದು ಬರುತ್ತಿದೆ ಭಾರೀ ಬಂಡವಾಳ

ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹರಿದು ಬರುತ್ತಿದೆ ಭಾರೀ ಬಂಡವಾಳ

ಜಾಗತಿಕ ಹೂಡಿಕೆದಾರರು ಭಾರತದ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಶತಕೋಟಿ ಡಾಲರ್‌ಗಳನ್ನು ಸುರಿಯುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ವೇಗವಾಗಿ ಹೊಸ ಸ್ಟಾರ್ಟ್‌ಅಪ್‌ಗಳ ಉದಯವೂ ಆಗ್ತಿದೆ. ಆದರೆ ಇದಕ್ಕೆ ಸರಿಯಾದ ಮಟ್ಟದಲ್ಲಿ ಪ್ರತಿಭೆಗಳು ಸಿಗದೆ ಕೊರತೆಯು ಎದ್ದು ಕಾಣುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್‌ಗಳೊಂದಿಗೆ ಪೈಪೋಟಿ ನಡೆಸುತ್ತಿರುವುದರಿಂದ ಬೃಹತ್ ಪ್ರತಿಭೆ ಕುಸಿತ ಉಂಟಾಗಿದೆ.

ಮುಂದಿನ 3 ವರ್ಷದಲ್ಲಿ 1,000 ಉದ್ಯೋಗಿಗಳ ನೇಮಕ
 

ಮುಂದಿನ 3 ವರ್ಷದಲ್ಲಿ 1,000 ಉದ್ಯೋಗಿಗಳ ನೇಮಕ

ಫಿನ್‌ಟೆಕ್ ಕಂಪನಿಯು ಸದ್ಯ 450 ಉದ್ಯೋಗಿಗಳನ್ನು ಹೊಂದಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 1,000 ಎಂಜಿನಿಯರ್‌ಗಳು ಮತ್ತು ಉತ್ಪನ್ನ ನಿರ್ವಾಹಕರನ್ನು ನೇಮಿಸಿಕೊಳ್ಳಲು ಬಯಸುತ್ತದೆ.

''ಕೆಲಸಗಾರರು ವಾರಕ್ಕೆ ಮೂರು ದಿನ ಕೆಲಸ ಮಾಡುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳಬಹುದು. ವಾರದ ಉಳಿದ ದಿನಗಳಲ್ಲಿ ತಮ್ಮ ಇತರೆ ಕನಸುಗಳನ್ನು ಬೆನ್ನಟ್ಟಲು ಸಾಧ್ಯವಾಗುತ್ತದೆ'' ಎಂದು ಬಜಾಜ್ ಹೇಳಿದ್ದಾರೆ.

 

ಇತರೆ ಐಟಿ ಕಂಪನಿಗಳಿಗೆ ಈ ಹೊಸ ಯೋಜನೆ ಮಾದರಿ

ಇತರೆ ಐಟಿ ಕಂಪನಿಗಳಿಗೆ ಈ ಹೊಸ ಯೋಜನೆ ಮಾದರಿ

ಫಿನ್‌ಟೆಕ್ ಸ್ಟಾರ್ಟ್‌ಅಪ್‌ನ ವಾರಕ್ಕೆ ಮೂರು ದಿನಗಳ ಕೆಲಸದ ಹೊಸ ಯೋಜನೆಯು ಮುಂದಿನ ದಿನಗಳಲ್ಲಿ ಅನೇಕ ಕಂಪನಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಮತ್ತು ಐಟಿ ಕಂಪನಿಗಳಿಗೆ ಮಾದರಿಯಾಗಲಿದೆ. ಇದ್ರಿಂದ ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಾರಕ್ಕೆ ಕಡಿಮೆ ಕೆಲಸ ಮಾಡಿಸಿ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ.

ವಾರದಲ್ಲಿ ಕಡಿಮೆ ಕೆಲಸ ಮಾಡಿಸುವ ಪ್ರಯತ್ನ ಇಂದು, ನಿನ್ನೆಯದಲ್ಲ!

ವಾರದಲ್ಲಿ ಕಡಿಮೆ ಕೆಲಸ ಮಾಡಿಸುವ ಪ್ರಯತ್ನ ಇಂದು, ನಿನ್ನೆಯದಲ್ಲ!

ವಾರದಲ್ಲಿ ಕಡಿಮೆ ಕೆಲಸ ಮಾಡಿಸುವ ಪ್ರಯತ್ನ ಕನಿಷ್ಠ ಒಂದು ಶತಮಾನದಿಂದ ನಡೆಯುತ್ತಿದೆ. ಆದರೆ ಇತ್ತೀಚಿನ ಜಾಗತಿಕ ಸಾಂಕ್ರಾಮಿಕ ರೋಗವು ಕಚೇರಿಯ ಕೆಲಸದ ಮಾದರಿಯನ್ನೇ ಬದಲಾಯಿಸಿ ಬಿಟ್ಟಿದೆ. ಹಲವಾರು ಕಂಪನಿಗಳು ನಿಧಾನವಾಗಿ ಹೆಚ್ಚು ಹೈಬ್ರಿಡ್ ಆಫೀಸ್ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿವೆ. ಅಲ್ಲಿ ಉದ್ಯೋಗಿಗಳು ಕೆಲವು ದಿನಗಳ ಆಫೀಸ್ ಕೆಲಸದ ಹೊರತಾಗಿ ಕಚೇರಿಯಿಂದ ಪರ್ಯಾಯವಾಗಿ ಕೆಲಸ ಮಾಡಲು ಕೇಳಿಕೊಳ್ಳುತ್ತಿದ್ದಾರೆ.

ಉದ್ಯೋಗಿಗಳನ್ನ ಆಕರ್ಷಿಸಲು ಸ್ಟಾರ್ಟ್‌ಅಪ್‌ಗಳ ಯೋಜನೆ

ಉದ್ಯೋಗಿಗಳನ್ನ ಆಕರ್ಷಿಸಲು ಸ್ಟಾರ್ಟ್‌ಅಪ್‌ಗಳ ಯೋಜನೆ

ಎಂಜಿನಿಯರ್‌ಗಳು ಮತ್ತು ಡಿಸೈನರ್‌ಗಳನ್ನು ಆಕರ್ಷಿಸಲು ಸ್ಟಾರ್ಟ್ಅಪ್‌ಗಳು ಇತರ ಯೋಜನೆಗಳಿಗೆ ಸಾಕಷ್ಟು ಖರ್ಚು ಮಾಡುತ್ತಿದೆ. ಸಾಮಾಜಿಕ ಕಾಮರ್ಸ್ ಫ್ಲಾಟ್‌ಫಾರ್ಮ್ ಮೀಶೋ ನವೆಂಬರ್‌ನಲ್ಲಿ ಕಂಪನಿಯಾದ್ಯಂತ 10 ದಿನಗಳ ವಿರಾಮವನ್ನು ಘೋಷಿಸಿತು. ಇದರಿಂದ ಅಲ್ಲಿನ ಉದ್ಯೋಗಿಗಳು ಕೆಲಸದ ತಲೆ ನೋವು ಇಲ್ಲದೆ ವಾರಕ್ಕೂ ಹೆಚ್ಚು ದಿನ ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುವಂತಾಯ್ತು.

ಕೋವಿಡ್ ಸಾಂಕ್ರಾಂಮಿಕದಿಂದಾಗಿ ಲಕ್ಷಾಂತರ ಎಂಜಿನಿಯರ್‌ಗಳು ವರ್ಕ್ ಫ್ರಮ್ ಹೋಮ್‌ಗೆ ಗುಡ್‌ಬೈ ಹೇಳಲು ತಯಾರಿ ನಡೆಸುತ್ತಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಮನೆಯಿಂದ ಕೆಲಸ ಮಾಡಿದ್ದ ಉದ್ಯೋಗಿಗಳು ಕಚೇರಿಗೆ ಮರಳಲು ಸಜ್ಜಾಗಿದ್ದಾರೆ. ಹೀಗಾಗಿ ಫಿನ್‌ಟೆಕ್ ನಂತಹ ಸ್ಟಾರ್ಟ್‌ ಅಪ್‌ಗಳು ಪ್ರತಿಭಾನ್ವಿತರನ್ನು ಆಕರ್ಷಿಸಲು ಪ್ರಯತ್ನ ನಡೆಸುತ್ತಿವೆ.

 

English summary

Bengaluru Based Fintech company Slice is offering new hires a 3 day work week

Bengaluru Based Fintech company Slice is offering new hires a three-day week with salary at 80% of the going market rate to attract employees. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X