For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮೆಟ್ರೋ: ವಾಟ್ಸಾಪ್‌ನಲ್ಲಿ ಟಿಕೆಟ್ ಖರೀದಿ; ವಿಶ್ವದಲ್ಲಿ ಇಂಥದ್ದು ಇದೇ ಮೊದಲು

|

ಬೆಂಗಳೂರು, ನ. 1: ಉದ್ಯಾನನಗರಿಯ ಜನರ ಓಡಾಟಕ್ಕೆ ಬಹಳ ಅನುಕೂಲ ಮಾಡಿಕೊಟ್ಟಿರುವ ನಮ್ಮ ಮೆಟ್ರೋ ರೈಲು ತನ್ನ ಪ್ರಯಾಣಿಕರ ಅನುಕೂಲಕ್ಕೆ ಟಿಕೆಟಿಂಗ್ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಮಾಡಿದೆ. ಮಟ್ರೋ ಪ್ರಯಾಣಿಕರು ವಾಟ್ಸಾಪ್ ಮೂಲಕವೇ ಟಿಕೆಟ್ ಖರೀದಿಸಬಹುದು. ಮತ್ತು ಟ್ರಾವಲ್ ಪಾಸ್ ರೀಚಾರ್ಜ್ ಕೂಡ ಮಾಡಿಸಬಹುದು.

 

ಚಾಟ್‌ಬೋಟ್ ಆಧಾರಿತ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಯನ್ನು ನವೆಂಬರ್ 1ರಿಂದ ಜಾರಿಗೆ ತರುತ್ತಿರುವುದಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿ (ಬಿಎಂಆರ್‌ಸಿಎಲ್) ನಿನ್ನೆ ಸೋಮವಾರ ಪ್ರಕಟಿಸಿತ್ತು.

ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಇಡಲಾಗಿರುತ್ತದೆ. ಅದರ ಜೊತೆಗೆ ಸಿಬ್ಬಂದಿಯೂ ಇರುತ್ತಾರೆ. ಕನ್ನಡ ರಾಜ್ಯೋತ್ಸವ ದಿನದಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿಕೆ ನೀಡಿದ್ದರು.

ಮೆಟ್ರೋ ಪ್ರಯಾಣಿಕರು ವಾಟ್ಸಾಪ್‌ನಲ್ಲೇ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದು. ಅಥವಾ ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕವೂ ಕ್ಯೂಆರ್ ಟಿಕೆಟ್ ಕೊಳ್ಳಬಹುದು. ಪ್ಲೇ ಸ್ಟೋರ್‌ನಲ್ಲಿ ನಮ್ಮ ಮೆಟ್ರೋ ಆ್ಯಪ್ ಲಭ್ಯ ಇದೆ.

ಬಿಎಂಆರ್‌ಸಿಎಲ್ ಪ್ರಕಾರ, ವಿಶ್ವದ ಯಾವುದೇ ಮೆಟ್ರೋದಲ್ಲೂ ವಾಟ್ಸಾಪ್‌ನಲ್ಲಿ ಟಿಕೆಟಿಂಗ್ ವ್ಯವಸ್ಥೆ ಇಲ್ಲ. ಇಂಥದ್ದೊಂದು ಸೌಲಭ್ಯ ನೀಡಿರುವುದು ಬೆಂಗಳೂರು ಮೆಟ್ರೋವೇ ಮೊದಲು.

ಬೆಂಗಳೂರು; ವಾಟ್ಸಾಪ್‌ನಲ್ಲಿ ಮೆಟ್ರೋ ಟಿಕೆಟ್- ವಿಶ್ವದಲ್ಲೇ ಮೊದಲು

ವಾಟ್ಸಾಪ್ ಟಿಕೆಟಿಂಗ್ ಸರ್ವಿಸ್ ಹೇಗೆ?

* ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ 8105556677 ನಂಬರ್ ಅನ್ನು ಸೇವ್ ಮಾಡಿಕೊಳ್ಳಿ. ಇದು ಬಿಎಂಆರ್‌ಸಿಎಲ್‌ನ ವಾಟ್ಸಾಪ್ ಚಾಟ್‌ಬೋಟ್ ನಂಬರ್ ಆಗಿದೆ.
* ಕ್ಯೂಆರ್ ಟಿಕೆಟ್ ಖರೀದಿಸಬೇಕಿದ್ದರೆ ಚಾಟ್‌ಬೋಟ್ ನಂಬರ್‌ಗೆ 'ಹಾಯ್' ಎಂದು ಮೆಸೇಜ್ ಕಳುಹಿಸಿ.
* ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಾಟ್ಸಾಪ್ ಚಾಟ್‌ಬೋಟ್ ಆಯ್ಕೆಗಳಿವೆ. ಈ ಚಾಟ್‌ಬೋಟ್ ಬಳಸಿ ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗಳನ್ನೂ ರೀಚಾರ್ಜ್ ಮಾಡಬಹುದು.

ಬೆಂಗಳೂರು; ವಾಟ್ಸಾಪ್‌ನಲ್ಲಿ ಮೆಟ್ರೋ ಟಿಕೆಟ್- ವಿಶ್ವದಲ್ಲೇ ಮೊದಲು

ವಾಟ್ಸಾಪ್ ಚಾಟ್‌ಬೋಟ್‌ನಿಂದ ಇನ್ನೊಂದು ಅನುಕೂಲವೆಂದರೆ ನೀವಿರುವ ಸ್ಥಳಕ್ಕೆ ಸಮೀಪ ಯಾವ ಮೆಟ್ರೋ ಸ್ಟೇಷನ್ ಇದೆ ಎಂಬ ಮಾಹಿತಿ ಪಡೆಯಬಹುದು. ಬೇರೆ ಬೇರೆ ನಿಲ್ದಾಣಗಳಲ್ಲಿನ ರೈಲು ಸಮಯಗಳ ಮಾಹಿತಿಯನ್ನೂ ಚಾಟ್‌ಬೋಟ್ ನಿಮಗೆ ನೀಡಬಲ್ಲುದು.

 

ಕ್ಯೂಆರ್ ಟಿಕೆಟ್‌ಗಳಿಗೆ ಶೇ. 5ರಷ್ಟು ರಿಯಾಯಿತಿಯನ್ನೂ ಬಿಎಂಆರ್‌ಸಿಎಲ್ ಒದಗಿಸುತ್ತದೆ. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಿದ ಬಳಿಕ ನೀವು ಅದನ್ನು ರದ್ದು ಮಾಡುವ ಅವಕಾಶವೂ ಇರುತ್ತದೆ. ಟಿಕೆಟ್ ಕ್ಯಾನ್ಸಲೇಶನ್‌ಗೆ ಹೆಚ್ಚುವರಿ ಶುಲ್ಕ ಇರುವುದಿಲ್ಲ. ನಿಮ್ಮ ಹಣ ರೀಫಂಡ್ ಆಗುತ್ತದೆ.

English summary

Bengaluru's Namma Metro Whatsapp Ticketing System, First of its Kind In The World

BMRCL has introduced whatsapp chatbot based ticketing system to purchase ticket and recharge smartcard. Namma Metro is the world's first rail transit service to have this system.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X