For Quick Alerts
ALLOW NOTIFICATIONS  
For Daily Alerts

40 ನಿಮಿಷದ ಚಾರ್ಜ್ ಗೆ 280 ಕಿ.ಮೀ. ಸಂಚರಿಸುವ ಸ್ಕೂಟರ್ ಬೆಂಗಳೂರಿನ ಸ್ಟಾರ್ಟ್ ಅಪ್ ನಿಂದ

|

ಈಗಾಗಲೇ ಮೂರು ಸ್ಟಾರ್ಟ್ ಅಪ್ ಗಳನ್ನು ಶುರು ಮಾಡಿರುವ ಬೆಂಗಳೂರು ಮೂಲದ, ಇಪ್ಪತ್ನಾಲ್ಕು ವರ್ಷದ ಆರ್ಕೆಟೆಕ್ಟ್ ಸುಹಾಸ್ ರಾಜ್ ಕುಮಾರ್ ಇದೀಗ ನಾಲ್ಕನೆಯದನ್ನು ಆರಂಭಿಸಲು ಮುಂದಾಗಿದ್ದಾರೆ. ಎಲೆಕ್ಟ್ರಿಕಲ್ ಸ್ಕೂಟರ್ ಉತ್ಪಾದಿಸುವ ಕಂಪೆನಿಯದು. ಉಳಿದೆಲ್ಲ ಇ- ಸ್ಕೂಟರ್ ಗಳಿಗಿಂತ ಅತ್ಯುತ್ತಮವಾದ ಸ್ಕೂಟರ್ ಇದು ಎಂಬುದು ಚರ್ಚೆಯ ಮುಖ್ಯ ವಿಷಯ.

 

ತಲಾ 1 ಬಿಲಿಯನ್ USD ಮೌಲ್ಯದ ಭಾರತದ 11 ಸ್ಟಾರ್ಟ್ ಅಪ್ ನಲ್ಲಿ ಚೀನಾ ಹೂಡಿಕೆತಲಾ 1 ಬಿಲಿಯನ್ USD ಮೌಲ್ಯದ ಭಾರತದ 11 ಸ್ಟಾರ್ಟ್ ಅಪ್ ನಲ್ಲಿ ಚೀನಾ ಹೂಡಿಕೆ

ಈ ಸ್ಕೂಟರ್ ಅಂದಾಜು ಬೆಲೆ ಒಂದು ಲಕ್ಷ ರುಪಾಯಿ ಆಗಬಹುದು. ಬ್ಯಾಟರಿ ಮೂಲಕ ಚಲಿಸುವ ಈ ಸ್ಕೂಟರ್ ಅನ್ನು ಒಂದು ಸಲ ಪೂರ್ತಿಯಾಗಿ ಚಾರ್ಜ್ ಮಾಡಿದರೆ 280 ಕಿ.ಮೀ.ಗೂ ಹೆಚ್ಚು ಸಂಚರಿಸಬಹುದು ಎಂದು ಅವರು ಹೇಳಿಕೊಳ್ಳುತ್ತಾರೆ. ಆ ಸ್ಕೂಟರ್ ಗೆ Mark 2 ಎಂದು ಹೆಸರಿಡಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಮಾರಾಟ ಶುರುವಾಗುತ್ತದೆ.

40 ನಿಮಿಷದಲ್ಲಿ ಪೂರ್ತಿಯಾಗಿ ಚಾರ್ಜ್

40 ನಿಮಿಷದಲ್ಲಿ ಪೂರ್ತಿಯಾಗಿ ಚಾರ್ಜ್

ಮನೆಯಲ್ಲಿ 40 ನಿಮಿಷದಲ್ಲಿ ಈ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಅದೇ ಚಾರ್ಜಿಂಗ್ ಸ್ಟೇಷನ್ ನಲ್ಲಿ 17 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹೀರೋ ಮೊಟೋಕಾರ್ಪ್ ಸಹಕಾರ ಇರುವ Ather 450 ಚಾರ್ಜ್ ಆಗುವುದಕ್ಕೆ 4 ಗಂಟೆ ಸಮಯ ತೆಗೆದುಕೊಂಡರೆ, ನೂರು ಕಿ.ಮೀ.ಗೂ ಕಡಿಮೆ ಸಂಚರಿಸುತ್ತದೆ. ಬೆಲೆ 1.15 ಲಕ್ಷ ರುಪಾಯಿ ಇದೆ. ರಾಜ್ ಕುಮಾರ್ ಅವರು ತಮ್ಮ Mark 2 ಅನ್ನು ಭಾರತದ ಬೆಸ್ಟ್ ಸೆಲ್ಲಿಂಗ್ ಸ್ಕೂಟರ್ ಹೋಂಡಾ ಆಕ್ಟಿವಾದೊಂದಿಗೆ ಹೋಲಿಸುತ್ತಾರೆ. ಆಕ್ಟಿವಾ 6G ಸ್ಕೂಟರ್ ಅನ್ನು ಫುಲ್ ಟ್ಯಾಂಕ್ ಪೆಟ್ರೋಲ್ (5.3 ಲೀಟರ್ ಸಾಮರ್ಥ್ಯ) ಮಾಡಿಸಿದರೆ 250 ಕಿ.ಮೀ. ಸಂಚರಿಸುತ್ತದೆ. ಒಂದು ಲೀಟರ್ ಗೆ ಮೈಲೇಜ್ 50 ಕಿ.ಮೀ. ಅಂದುಕೊಳ್ಳಬಹುದು. ಆಕ್ಟಿವಾ 6G ಸ್ಕೂಟರ್ ಎಕ್ಸ್ ಶೋ ರೂಮ್ ದರ 70,000 ರುಪಾಯಿ ಇದೆ.

ಒಮ್ಮೆ ಚಾರ್ಜ್ ಮಾಡಿದರೆ 280 ಕಿ.ಮೀ. ಸಂಚಾರ
 

ಒಮ್ಮೆ ಚಾರ್ಜ್ ಮಾಡಿದರೆ 280 ಕಿ.ಮೀ. ಸಂಚಾರ

ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಹೋಲಿಸಿದರೆ ನಮ್ಮ ಮೊದಲ ಗುರಿ 100- 150 ಕಿ.ಮೀ. ಅನ್ನು ಮೀರುವುದಾಗಿತ್ತು. ಆರಂಭದಲ್ಲಿ ನಮ್ಮ ಗುರಿ 200 ಕಿ.ಮೀ. ಇತ್ತು. ಪರೀಕ್ಷಾರ್ಥ ಮಾಡೆಲ್ ನಲ್ಲಿ ನಾವು 240 ಕಿ.ಮೀ. ತಲುಪಿದೆವು. ನಮ್ಮ ಪ್ರೊಡಕ್ಷನ್ ಮಾಡೆಲ್ ನಲ್ಲಿ 280 ಕಿ.ಮೀ. ಸಂಚರಿಸುತ್ತದೆ ಎಂದು ರಾಜ್ ಕುಮಾರ್ ಹೇಳಿದ್ದಾರೆ. ರಾಜ್ ಕುಮಾರ್ ಅವರು ಹೇಳುವ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಚಾಸೀಸ್ ಹಾಗೂ ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್ (ಬಿಎಂಎಸ್) ಬಹಳ ಮುಖ್ಯ. ಬಿಎಂಎಸ್ ಅನ್ನು ರಾಜ್ ಕುಮಾರ್ ಅವರ ಕಂಪೆನಿಯಿಂದಲೇ ತಯಾರಿಸಿ, ಪೇಟೆಂಟ್ ಕೂಡ ಮಾಡಿಸಿದ್ದಾರೆ. ಆ ನಂತರ ಚಾಸೀಸ್ ರೂಪಿಸಲಾಗಿದೆ. ಬ್ಯಾಟರಿಯನ್ನು ಗಮನದಲ್ಲಿ ಇಟ್ಟುಕೊಂಡು ಚಾಸೀಸ್ ರೂಪಿಸಲಾಗಿದೆ. 4.2kWh, 3.7- volt ಸಿಂಗಲ್ ಸೆಲ್ ಬ್ಯಾಟರಿ ಬಳಸಿದ್ದಾರೆ. ಅದನ್ನು ಪ್ಯಾನಾಸೋನಿಕ ಟೆಸ್ಲಾಗಾಗಿ ರೂಪಿಸಿತ್ತಂತೆ.

ತುಮಕೂರಿನಲ್ಲಿ ಆರ್ಕಿಟೆಕ್ಚರ್ ಅಧ್ಯಯನ

ತುಮಕೂರಿನಲ್ಲಿ ಆರ್ಕಿಟೆಕ್ಚರ್ ಅಧ್ಯಯನ

ಆ ನಂತರ ಹೆಚ್ಚಿನ ದಕ್ಷತೆ ನೀಡುತ್ತದೆ ಎಂಬ ಕಾರಣಕ್ಕೆ ಬ್ಯಾಟರಿಗೆ ಕೂಲಿಂಗ್ ವ್ಯವಸ್ಥೆ ಅಳವಡಿಸಿದ್ದಾರೆ. ರಾಜ್ ಕುಮಾರ್ ಕಂಪೆನಿ ಹೆಸರು ಸಿಂಪಲ್ ಎನರ್ಜಿ. ಚಾಸೀಸ್ ಗಾಗಿ ಎಂಟು, ಬಿಎಂಎಸ್ ಗೆ ಮೂರು ಹಾಗೂ ಮೋಟಾರ್ ಕಂಟ್ರೋಲರ್ ಗೆ ಎರಡು ಪೇಟೆಂಟ್ ದಾಖಲಿಸಲಾಗಿದೆ. ಮಾರಾಟ ಆರಂಭಿಸುವ ಮುನ್ನ Mark- 2 ಸ್ಕೂಟರ್ ಅನ್ನು ಪರೀಕ್ಷಾರ್ಥವಾಗಿ ಮೂವತ್ತೈದರಿಂದ ನಲವತ್ತು ಸಾವಿರ ಕಿ.ಮೀ. ಬಳಕೆ ಮಾಡಲಾಗಿದೆ. ಉಬರ್ ಈಟ್ಸ್, ಝೊಮಾಟೋ, ಓಲಾ ಇವುಗಳಿಗೆ ಬಳಕೆಗೆಂದು ನೀಡಿ, ಪರೀಕ್ಷಿಸಲಾಗಿದೆ. ಡಿಸೆಂಬರ್ ಹೊತ್ತಿಗೆ ಆಟೋಮೊಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಪ್ರಮಾಣ ಸಿಗಲಿದೆ ಎಂದು ರಾಜ್ ಕುಮಾರ್ ಹೇಳಿದ್ದಾರೆ. ತುಮಕೂರಿನಲ್ಲಿ ಆರ್ಕಿಟೆಕ್ಚರ್ ಅಧ್ಯಯನ ಮಾಡಿರುವ ರಾಜ್ ಕುಮಾರ್ ಆಸಕ್ತಿ ಇದ್ದದ್ದು ಆಟೋಮೊಬೈಲ್ಸ್ ನಲ್ಲಿ. 19ರ ವರ್ಷದೊಳಗಿನ ಟಿವಿಎಸ್ ರೇಸಿಂಗ್ ನಲ್ಲಿ ಅವರು ಪಾಲ್ಗೊಂಡಿದ್ದಾರೆ. ಅವರೊಳಗಿನ ಉದ್ಯಮಿ ಮನೋಭಾವದಿಂದ ಮೂರು ಸ್ಟಾರ್ಟ್ ಅಪ್ ಶುರು ಮಾಡಿದ್ದಾರೆ.

English summary

Bengaluru Startup Simple Energy Claims Its E-scooter Crosses 250 km On Full Charge

Suhas Rajkumar owned Bengaluru startup Simple Energy claims its e-scooter crosses 250 km mileage on full charge.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X