For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿಯಲ್ಲಿ ಒಂದೇ ಒಂದು ರೂಪಾಯಿ ಹೂಡಿಕೆ ಮಾಡಿಲ್ಲ ಎಂದ ಆನಂದ್ ಮಹೀಂದ್ರಾ

|

ನವದೆಹಲಿ, ನವೆಂಬರ್ 20: ಕ್ರಿಪ್ಟೋ ಮಾರುಕಟ್ಟೆಯ ಕರೆನ್ಸಿಗಳಲ್ಲಿ ಒಂದೇ ಒಂದು ರೂಪಾಯಿ ಹಣವನ್ನೂ ಹೂಡಿಕೆ ಮಾಡಿಲ್ಲ ಎಂದು ಭಾರತೀಯ ಉದ್ಯಮಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿರುವ ಕುರಿತು ಬಂದಿರುವ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯನ್ನು ಬಳಸಿಕೊಂಡು ಟನ್‌ಗಳಷ್ಟು ಹಣವನ್ನು ಸಂಪಾದನೆ ಮಾಡಿದ್ದಾರೆ ಎಂದು ಹೇಳುವ ಕೆಲವು ವರದಿಗಳ ಸ್ಕ್ರೀನ್ ಗ್ರ್ಯಾಬ್‌ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವರದಿಗಳಲ್ಲಿ ಆನಂದ್ ಮಹೀಂದ್ರಾ ಅವರು ಕ್ರಿಪ್ಟೋ ನಾಣ್ಯಗಳ ಸ್ವಯಂ-ಟ್ರೇಡಿಂಗ್ ಪ್ರೋಗ್ರಾಂ ಬಿಟ್‌ಕಾಯಿನ್ ಎರಾವನ್ನು ಬಳಸಿಕೊಂಡು ಹಣ ಗಳಿಸಿದ್ದಾರೆ ಎಂದು ಹೇಳುತ್ತದೆ.

ನವೆಂಬರ್ 20: ಎರಡು ದಿನ ಕುಸಿತ ಕಂಡಿದ್ದ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಗಣನೀಯ ಚೇತರಿಕೆ ನವೆಂಬರ್ 20: ಎರಡು ದಿನ ಕುಸಿತ ಕಂಡಿದ್ದ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಗಣನೀಯ ಚೇತರಿಕೆ

ಇಂತಹ ಸುದ್ದಿಗಳು "ನಕಲಿ ಸುದ್ದಿ"ಯನ್ನು ಸಂಪೂರ್ಣ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತವೆ. "ಯಾರೋ ಈ ವರದಿಗಳನ್ನು ಆನ್‌ಲೈನ್‌ನಲ್ಲಿ ನೋಡಿ ನನ್ನನ್ನು ಎಚ್ಚರಿಸಿದರು. ಇದು ಸಂಪೂರ್ಣವಾಗಿ ಕಪೋಲಕಲ್ಪಿತ ಮತ್ತು ಮೋಸ ಎಂದು ನಾನು ಜನರಿಗೆ ತಿಳಿಸಬೇಕಿದೆ. ಇಂತಹ ನಕಲಿ ಸುದ್ದಿಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿಪರ್ಯಾಸವೆಂದರೆ, ನಾನು ಕ್ರಿಪ್ಟೋಸ್‌ನಲ್ಲಿ ಒಂದು ರೂಪಾಯಿ ಹೂಡಿಕೆ ಮಾಡಿಲ್ಲ, "ಎಂದು ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿಯಲ್ಲಿ ಒಂದು ರೂ. ಹೂಡಿಕೆ ಮಾಡಿಲ್ಲ: ಆನಂದ್ ಮಹೀಂದ್ರಾ

ನಕಲಿ ವರದಿಯಲ್ಲಿ ಇರುವುದೇನು?:

ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಆನಂದ್ ಮಹೀಂದ್ರಾ ಅವರು, "ಸಂಪತ್ತಿನ ಲೋಪದೋಷ"ಗಳಿಂದ ಮೂರ್ನಾಲ್ಕು ತಿಂಗಳಿನಲ್ಲಿ ಯಾರನ್ನಾದರೂ "ಮಿಲಿಯನೇರ್" ಆಗಿ ಬದಲಾಯಿಸಬಹುದು ಎಂದು ಹೇಳಿಕೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿಂದೆ, ಸೆಪ್ಟೆಂಬರ್‌ನಲ್ಲಿ ಮಹೀಂದ್ರಾ ಅವರ ವಿರುದ್ಧ ಆರೋಪಿಸಲಾದ ಪೋಸ್ಟ್‌ ಹರಿದಾಡಿತ್ತು. ಅಂದು ವರದಿಯ ಉಲ್ಲೇಖವನ್ನು ಹಂಚಿಕೊಂಡ ಮಹೀಂದ್ರಾ ಸಮೂಹದ ಅಧ್ಯಕ್ಷರು ಈ ಉಲ್ಲೇಖವು ವಾಸ್ತವವಾಗಿ ಆನಂದ್ ಮಹೀಂದ್ರಾರಿಗೆ ಸೇರಿದ್ದಲ್ಲ ಎಂದು ಹೇಳಿದರು. "ನನ್ನ ಹೇಳಿಕೆಗಳು ಉಲ್ಲೇಖನೀಯ ಎಂದು ಕೆಲವರು ನಂಬುತ್ತಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಾನು ಯಾವಾಗಲೂ ವಿಶ್ವಾಸ ಇಟ್ಟುಕೊಂಡಿದ್ದೇನೆ. ಆದರೆ ತಪ್ಪಾದ ವರದಿಗಳನ್ನು ತಪ್ಪಿಸುವುದಕ್ಕೆ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ," ಎಂದು ಅವರು ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿಯಲ್ಲಿ ಜಾಗತಿಕ ಹೂಡಿಕೆ:

ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಭಾರತೀಯರೇ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಪ್ರಮಾಣ ಮೊದಲಿಗಿಂತ ಏರಿಕೆಯಾಗಿದೆ.

ಏನಿದು ಕ್ರಿಪ್ಟೋಕರೆನ್ಸಿ:

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.

ಬಿಟ್‌ಕಾಯಿನ್ ಬೆಲೆಯಲ್ಲಿ ಏರಿಕೆ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 58,524.70 ಯುಎಸ್ ಡಾಲರ್‌ಗೆ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದು, ಶೇ 3.80ರಷ್ಟು ಇಳಿಕೆಯಾಗಿದೆ. ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 1,103,595,961,754 ಯುಎಸ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 59,040.61 ಡಾಲರ್ ಮತ್ತು ಕಡಿಮೆ ಬೆಲೆ 55,885.06 ಡಾಲರ್ ಆಗಿತ್ತು. ಕಳೆದ ವಾರದಲ್ಲಿ ಶೇ.8.10ರಷ್ಟು ಇಳಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 101.97 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ.

English summary

Billionaire Anand Mahindra Not Invested a Single Rupees in Cryptocurrencies

Billionaire Anand Mahindra Not Invested a Single Rupees in Cryptocurrencies: Here Read More Details.
Story first published: Saturday, November 20, 2021, 17:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X