For Quick Alerts
ALLOW NOTIFICATIONS  
For Daily Alerts

ಲೋಕಸಭೆ, ನಾಲ್ಕು ರಾಜ್ಯದ ಚುನಾವಣೆಗೆ ಬಿಜೆಪಿಯಿಂದ 1,264 ಕೋಟಿ ರುಪಾಯಿ ವೆಚ್ಚ

|

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ, ಲೋಕಸಭೆ ಚುನಾವಣೆಗೆ ಹಾಗೂ ಏಪ್ರಿಲ್ ಮತ್ತು ಮೇ ಮಧ್ಯೆ ನಡೆದ ನಾಲ್ಕು ರಾಜ್ಯಗಳ ಚುನಾವಣೆಗೆ 1,264 ಕೋಟಿ ರುಪಾಯಿ ವೆಚ್ಚ ಮಾಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 714 ಕೋಟಿ ರುಪಾಯಿ ವೆಚ್ಚ ಮಾಡಿತ್ತು.

 

ಚುನಾವಣೆ ಆಯೋಗದ ಬಳಿ ದಾಖಲಿಸಿರುವ ವರದಿಯಲ್ಲಿ ಬಿಜೆಪಿ ಈ ಅಂಶವನ್ನು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವೆಚ್ಚದ ಮಾಹಿತಿಯನ್ನು ಚುನಾವಣೆ ಆಯೋಗವು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ವರದಿ ಪ್ರಕಾರ, ಭಾರತೀಯ ಜನತಾ ಪಕ್ಷವು ಸಾಮಾನ್ಯ ಪ್ರಚಾರ ಹಾಗೂ ಅಭ್ಯರ್ಥಿಗಳ ಖರ್ಚು ಸಹ ಸೇರಿಸಿ 1,264 ಕೋಟಿ ವೆಚ್ಚ ಮಾಡಿದೆ. ಅಭ್ಯರ್ಥಿಗಳಿಗೆ ಒಟ್ಟಾರೆ 186.5 ಕೋಟಿ ಹಾಗೂ ಬಹಿರಂಗ ಸಭೆ ಮತ್ತು ಮೆರವಣಿಗೆಗಳಿಗೆ 9.9 ಕೋಟಿ ಖರ್ಚು ಮಾಡಿದೆ.

 

ಏಪ್ರಿಲ್ ಮತ್ತು ಮೇ ಮಧ್ಯ ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳು ಸಹ ಆಗಿವೆ. ನವೆಂಬರ್ 19ರಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ದಾಖಲೆ ಪ್ರಕಾರ, ಬಿಜೆಪಿಯ ಕೇಂದ್ರ ಕಚೇರಿಯು 755 ಕೋಟಿ ರುಪಾಯಿ ವೆಚ್ಚ ಮಾಡಿದೆ. ಅದರಲ್ಲಿ ತಾರಾ ಪ್ರಚಾರಕರಿಗಾಗಿಯೇ 175.6 ಕೋಟಿ ವೆಚ್ಚ ಮಾಡಿದೆ.

ಲೋಕಸಭೆ, 4 ರಾಜ್ಯದ ಚುನಾವಣೆಗೆ ಬಿಜೆಪಿಯಿಂದ 1,264 ಕೋಟಿ ವೆಚ್ಚ

ಮಾಧ್ಯಮಗಳ ಜಾಹೀರಾತಿಗಾಗಿಯೇ 325 ಕೋಟಿ ವೆಚ್ಚ ಮಾಡಲಾಗಿದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಟೀವಿ ಚಾನೆಲ್ ಗಳು, ಕೇಬಲ್ ನೆಟ್ ವರ್ಕ್, ಸಂದೇಶಗಳು ಸೇರಿ ಇಷ್ಟು ಮೊತ್ತ ಖರ್ಚಾಗಿದೆ. ಇನ್ನು ಬಿಜೆಪಿಯ ರಾಜಕೀಯ ಪ್ರತಿಸ್ಪರ್ಧಿ ಕಾಂಗ್ರೆಸ್ 820 ಕೋಟಿ ರುಪಾಯಿ ವೆಚ್ಚ ಮಾಡಿದೆ. ಅದರಲ್ಲಿ ಚುನಾವಣೆ ಪ್ರಚಾರಕ್ಕೆ 626.36 ಕೋಟಿ ಮತ್ತು ತನ್ನ ಅಭ್ಯರ್ಥಿಗಳಿಗೆ 194 ಕೋಟಿ ವೆಚ್ಚ ಮಾಡಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 516 ಕೋಟಿ ಖರ್ಚು ಮಾಡಿದೆ.

ಭಾರೀ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಾಖಲೆ ಬರೆದಿದೆ. 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 116 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಆದರೆ ಈಗ 303 ಸೀಟುಗಳನ್ನು ಹೊಂದಿದೆ.

English summary

BJP Spent 1,264 Crore Rupees For LS And 4 State Elections

Bharatiya Janata Party spent 1,264 crore rupees on LS polls and state elections.
Story first published: Thursday, January 16, 2020, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X