For Quick Alerts
ALLOW NOTIFICATIONS  
For Daily Alerts

ಚಿಂಗಾರಿ ಆ್ಯಪ್‌ಗೆ ಸಲ್ಮಾನ್ ಖಾನ್‌ ಹೂಡಿಕೆ: $13 ಮಿಲಿಯನ್ ಸಂಗ್ರಹ

|

ಭಾರತದಲ್ಲಿ ಚೀನಾದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ನಿಷೇಧದ ಬಳಿಕ ಸಾಕಷ್ಟು ಬಳಕೆದಾರರನ್ನು ಆಕರ್ಷಿಸಿದ ದೇಸಿ ಕಿರು ವೀಡಿಯೋ ಆ್ಯಪ್ ಚಿಂಗಾರಿಗೆ 13 ಮಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದೆ.

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್‌ ಖಾನ್‌ ಚಿಂಗಾರಿ ವೀಡಿಯೋ ಆ್ಯಪ್‌ನ ರಾಯಭಾರಿ ಆಗುವುದರ ಜೊತೆಗೆ ಹೂಡಿಕೆಯನ್ನು ಕೂಡ ಮಾಡಿರುವುದಾಗಿ ಕಂಪನಿ ಶುಕ್ರವಾರ ಪ್ರಕಟಿಸಿದೆ. ತಿಳಿದುಬಂದಿದೆ. ಮಾರ್ಚ್ 31 ರಂದು, ಚಿಂಗಾರಿಯಲ್ಲಿ 13 ಮಿಲಿಯನ್ ಡಾಲರ್ (98.7 ಕೋಟಿ ರೂ.) ಹೂಡಿಕೆ ಆಗಿದೆ ಎಂದು ಆನ್‌ಮೊಬೈಲ್ ಗ್ಲೋಬಲ್ ಹೇಳಿದೆ.

ಚಿಂಗಾರಿ ಆ್ಯಪ್‌ಗೆ ಸಲ್ಮಾನ್ ಖಾನ್‌ ಹೂಡಿಕೆ: $13 ಮಿಲಿಯನ್ ಸಂಗ್ರಹ

ಚಿಂಗಾರಿಯಲ್ಲಿ ಗುರುವಾರ ಬೆಂಗಳೂರು ಮೂಲದ ದೂರಸಂಪರ್ಕ ಸಂಸ್ಥೆ ಆನ್‌ಮೊಬೈಲ್ 13 ಮಿಲಿಯನ್ ಡಾಲರ್ ಹೂಡಿಕೆ ಕುರಿತು ತಿಳಿಸಿತ್ತು.

''ಇದು ಚಿಂಗಾರಿಗೆ ನಿಜವಾಗಿಯೂ ಮಹತ್ವದ ಪಾಲುದಾರಿಕೆಯಾಗಿದೆ, ಭಾರತದ ಪ್ರತಿಯೊಂದು ರಾಜ್ಯಕ್ಕೂ ತಲುಪುವುದು ನಮ್ಮ ಧ್ಯೇಯವಾಗಿದ್ದು, ಸಲ್ಮಾನ್ ಖಾನ್ ನಮ್ಮ ಜಾಗತಿಕ ಬ್ರಾಂಡ್ ರಾಯಭಾರಿ ಮತ್ತು ಹೂಡಿಕೆದಾರರಲ್ಲಿ ಒಬ್ಬರಾಗಿರುವುದು ನಮ್ಮ ಸಂತೋಷವಾಗಿದೆ" ಎಂದು ಚಿಂಗಾರಿ ಸಹ ಸಂಸ್ಥಾಪಕ ಮತ್ತು ಸಿಇಒ ಸುಮಿತ್ ಘೋಷ್ ಹೇಳಿದರು.

ಸದ್ಯದಲ್ಲಿಯೇ ಚಿಂಗಾರಿ ಮತ್ತಷ್ಟು ಎತ್ತರಕ್ಕೆ ಬೆಳೆಯುವುದರ ಕುರಿತು ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ನಟ ಸಲ್ಮಾನ್‌ ಖಾನ್ ಎಷ್ಟು ಹಣ ಹೂಡಿಕೆ ಮಾಡಿದ್ದಾರೆ ಎಂಬುದರ ಕುರಿತು ಬಹಿರಂಗಪಡಿಸಲಾಗಿಲ್ಲ.

ಈ ಅಪ್ಲಿಕೇಶನ್ ಪ್ರಸ್ತುತ ಭಾರತದಲ್ಲಿ 56 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇಂಗ್ಲೀಷ್ ಮತ್ತು ಸ್ಪ್ಯಾನಿಷ್ ಜೊತೆಗೆ 12ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ. ಚಿಂಗಾರಿ ತನ್ನ ಬಳಕೆದಾರರಿಗೆ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು, ಸ್ನೇಹಿತರೊಂದಿಗೆ ಚಾಟ್ ಮಾಡಲು, ಹೊಸ ಜನರೊಂದಿಗೆ ಸಂವಹನ ನಡೆಸಲು, ವಿಷಯವನ್ನು ಹಂಚಿಕೊಳ್ಳಲು, ಫೀಡ್ ಮೂಲಕ ಬ್ರೌಸ್ ಮಾಡಲು ಮತ್ತು ಇನ್ನೂ ಹೆಚ್ಚಿನದನ್ನು ಅನುಮತಿಸುತ್ತದೆ.

English summary

Bollywood Superstar Salman Khan Invests In Short Form Video App Chingari

Bollywood superstar Salman Khan has invested in homegrown short-form video app Chingari, the company announced on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X