For Quick Alerts
ALLOW NOTIFICATIONS  
For Daily Alerts

100ನೇ ವಾರ್ಷಿಕೋತ್ಸವದಲ್ಲಿರುವ ಬಾಷ್ ಲಿಮಿಟೆಡ್‌ಗೆ ಶೇ.13.3 ರಷ್ಟು ತೆರಿಗೆ ಪೂರ್ವ ಲಾಭ

|

ಬಾಷ್ ಲಿಮಿಟೆಡ್ ತನ್ನ 100ನೇ ವರ್ಷದ ಸಂಭ್ರಮದಲ್ಲಿದೆ. ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ 2022- 23 ನೇ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳ ಮೂಲಕ 3,662 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ ಸಂಸ್ಥೆಯು ಹಿಂದಿನ ಹಣಕಾಸು ಸಾಲಿನ ಇದೇ ಅವಧಿಗಿಂತ ಶೇ.25.5 ರಷ್ಟು ಹೆಚ್ಚಳ ಸಾಧಿಸಿದೆ.

ಈ ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯು 3,544 ಕೋಟಿ ರೂಪಾಯಿಗಳೊಂದಿಗೆ ಸಾರ್ವಕಾಲಿಕ ಸಾಧನೆ ತೋರಿತ್ತಾದರೂ ಈ ಸಾಧನೆಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಆದಾಯದಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆ ಪ್ರಮುಖ ಕಾರಣ ಚಿಪ್ ಕೊರತೆಯನ್ನು ಕಡಿಮೆ ಮಾಡಿರುವುದು. ಆಟೋ ಪೂರೈಕೆಯಲ್ಲಿ ವಿಶಾಲ ಆಧಾರಿತವಾದ ಬೆಳವಣಿಗೆಗೆ ಸಹಕಾರಿಯಾಗಿದ್ದರಿಂದ ಈ ಸಾಧನೆ ಸಾಧಿಸಲು ಸಾಧ್ಯವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಲಾಭ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಬ್ಯಾಂಕ್ ಷೇರು ಶೇ. 19 ಏರಿಕೆಲಾಭ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಬ್ಯಾಂಕ್ ಷೇರು ಶೇ. 19 ಏರಿಕೆ

ತೆರಿಗೆಗೆ ಮುಂಚಿನ ಲಾಭವು 487 ಕೋಟಿ ರೂಪಾಯಿಗಳಷ್ಟಿದ್ದು, ಇದು ಕಾರ್ಯಾಚರಣೆಗಳಿಂದ ಒಟ್ಟು ಆದಾಯದ ಶೇ.13.3 ರಷ್ಟಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ.22.5 ರಷ್ಟು ಹೆಚ್ಚಳವಾಗಿದೆ. ತೆರಿಗೆ ನಂತರದ ಲಾಭವು 334 ಕೋಟಿ ರೂಪಾಯಿಗಳಿದ್ದರೆ, ಕಾರ್ಯಾಚರಣೆಗಳಿಂದ ಬರುವ ಆದಾಯದ ಶೇ.9.4 ರಷ್ಟಾಗಿದೆ.

 ಬೇಡಿಕೆ ಪ್ರಮಾಣದಲ್ಲೂ ಹೆಚ್ಚಳ

ಬೇಡಿಕೆ ಪ್ರಮಾಣದಲ್ಲೂ ಹೆಚ್ಚಳ

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್, ಇಂಡಿಯಾದ ಅಧ್ಯಕ್ಷರಾದ ಸೌಮಿತ್ರ ಭಟ್ಟಾಚಾರ್ಯ, "ಆಟೋಮೋಟಿವ್ ಮಾರುಕಟ್ಟೆಯಲ್ಲಿ ಚೇತರಿಕೆಯು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಪ್ರಮಾಣದಲ್ಲೂ ಹೆಚ್ಚಳ ಕಂಡು ಬಂದಿದೆ. ಇದರ ಪರಿಣಾಮ ಈ ತ್ರೈಮಾಸಿಕದಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ಸಾಧಿಸಲು ಸಾಧ್ಯವಾಗಿದೆ. ಕಳೆದ ವರ್ಷದ ಅದೇ ತ್ರೈಮಾಸಿಕದಲ್ಲಿ ಕಡಿಮೆ ಆಧಾರದ ಮೇಲೆ ಸ್ಥಿರವಾದ ಲಾಭವನ್ನು ಗಳಿಸುವ ಮೂಲಕ ನಾವು ದೃಢವಾದ ಟಾಪ್ ಲೈನ್ ಪ್ರಗತಿಯನ್ನು ಸಾಧಿಸಿದ್ದೇವೆ. ಸೆಮಿಕಂಡಕ್ಟರ್‌ಗಳಲ್ಲಿ ಪೂರೈಕೆಗಳು ಉತ್ತಮವಾಗಿದ್ದರೂ, ಪೂರೈಕೆ ಜಾಲದ ಪರಿಸರ ವ್ಯವಸ್ಥೆಯು ದುರ್ಬಲವಾದ ರೀತಿಯಲ್ಲಿತ್ತು. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಸೇರಿದಂತೆ ಈ ಅನಿಶ್ಚಿತತೆಗಳ ಹೊರತಾಗಿಯೂ ಈ ತ್ರೈಮಾಸಿಕದಲ್ಲಿ ನಾವು ಸದೃಢವಾದ ಕಾರ್ಯಕ್ಷಮತೆಯನ್ನು ನಿರ್ಮಾಣ ಮಾಡುವುದನ್ನು ನಿರೀಕ್ಷಿಸಿದ್ದೇವೆ," ಎಂದರು

 ವರ್ಷದಿಂದ ವರ್ಷಕ್ಕೆ ಬಲವಾದ ಬೆಳವಣಿಗೆ
 

ವರ್ಷದಿಂದ ವರ್ಷಕ್ಕೆ ಬಲವಾದ ಬೆಳವಣಿಗೆ

ಎರಡನೇ ತ್ರೈಮಾಸಿಕದಲ್ಲಿ ಆಟೋಮೋಟಿವ್ ಮಾರುಕಟ್ಟೆಯು ಕೊರೊನಾ ಸಾಂಕ್ರಾಮಿಕದ ಪ್ರಭಾವ ಕಡಿಮೆಯಾದ ಮೇಲೆ ವರ್ಷದಿಂದ ವರ್ಷಕ್ಕೆ ಬಲವಾದ ಬೆಳವಣಿಗೆಯನ್ನು ಕಂಡಿದೆ. ಒಟ್ಟು ನಿವ್ವಳ ಮಾರಾಟದ ಶೇ.60 ಕ್ಕಿಂತ ಹೆಚ್ಚಿರುವ ಪವರ್ ಟ್ರೇನ್ ಸಲೂಶನ್‌ಗಳ ವ್ಯವಹಾರವು ಒಟ್ಟಾರೆ ವಾಹನ ಮಾರುಕಟ್ಟೆಯ ಬೆಳವಣಿಗೆಯನ್ನು ಪ್ರದರ್ಶಿಸುವ ಮೂಲಕ ದೃಢವಾದ ಬೆಳವಣಿಗೆಯನ್ನು ಸಾಧಿಸಿದೆ. ಇದು ಆಟೋಮೋಟಿವ್ ವಿಭಾಗದಲ್ಲಿನ ಉತ್ಪನ್ನ ವಿಭಾಗದಲ್ಲಿ ಶೇ.31.1 ರಷ್ಟು ಹೆಚ್ಚಳಕ್ಕೆ ಕಾರಣವಾಗಿದ್ದು, ಚಿಪ್ ಕೊರತೆಯನ್ನು ಕಡಿಮೆ ಮಾಡುವುದರೊಂದಿಗೆ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ಶೇ.21 ರಷ್ಟು ಬೆಳವಣಿಗೆಯನ್ನು ಕಂಡಿದೆ. ನಿವ್ವಳ ಮಾರಾಟದಲ್ಲಿ ಬಿಯಾಂಡ್ ಮೊಬಿಲಿಟ್ ವ್ಯವಹಾರಗಳಲ್ಲಿ ಶೇ.7.5 ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣ ಸೆಕ್ಯೂರಿಟಿ ಸಲೂಶನ್ ಗಳು ಮತ್ತು ಹಬ್ಬದ ಸೀಸನ್ ಗಳಲ್ಲಿ ಗ್ರಾಹಕ ಉತ್ಪನ್ನಗಳ ವಿಭಾಗದಲ್ಲಿ ಕಂಡು ಬಂದ ಸುಸ್ಥಿರ ಬೆಳವಣಿಗೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

 ಕಾಮನ್ ರೇಲ್ ಇಂಜೆಕ್ಟರ್ ವಾಹನ

ಕಾಮನ್ ರೇಲ್ ಇಂಜೆಕ್ಟರ್ ವಾಹನ

ಬಾಷ್ ಇಂಡಿಯಾ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಇದೇ ಸಂದರ್ಭದಲ್ಲಿ ನಾಸಿಕ್ ನಲ್ಲಿನ ಉತ್ಪಾದನಾ ಘಟಕ 50ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ನಾಸಿಕ್ ಘಟಕದ ಮೂಲಕ ಮೇಕ್ ಇನ್ ಇಂಡಿಯಾದ 50ನೇ ವರ್ಷ ಆಚರಿಸಲಾಗುತ್ತಿದೆ. ಈ ಮೈಲಿಗಲ್ಲಿನ ಸವಿನೆನಪಿಗಾಗಿ ಹೊಸದಾದ ಕಾಮನ್ ರೇಲ್ ಇಂಜೆಕ್ಟರ್ (CRIN) ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಈ ವಾಹನಗಳನ್ನು ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಬಾಷ್ ಲಿಮಿಟೆಡ್ ಬೆಂಗಳೂರಿನಲ್ಲಿ ತಾತ್ಕಾಲಿಕ ಸ್ಟೋರೇಜ್ ವ್ಯವಸ್ಥೆಯೊಂದಿಗೆ ಹೈಡ್ರೋಜನ್ ಎಂಜಿನ್ ಟೆಸ್ಟಿಂಗ್ ಇನ್ ಫ್ರಾಸ್ಟ್ರಕ್ಚರ್ ಎಂಬ ಪೈಲಟ್ ಯೋಜನೆಯನ್ನು ಆರಂಭಿಸಿದೆ. ಇದು ಬಾಷ್ ಸಂಸ್ಥೆಯಲ್ಲಿ ಮೊದಲ ಉಪಕ್ರಮವಾಗಿದೆ.

 ಬೆಂಗಳೂರಿನ ಹೈಡ್ರೋಜನ್ ಎಂಜಿನ್ ಟೆಸ್ಟ್ ಇನ್ ಫ್ರಾಸ್ಟ್ರಕ್ಚರ್

ಬೆಂಗಳೂರಿನ ಹೈಡ್ರೋಜನ್ ಎಂಜಿನ್ ಟೆಸ್ಟ್ ಇನ್ ಫ್ರಾಸ್ಟ್ರಕ್ಚರ್

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್, ಇಂಡಿಯಾದ ಅಧ್ಯಕ್ಷರಾದ ಸೌಮಿತ್ರ ಭಟ್ಟಾಚಾರ್ಯ, "ಭಾರತೀಯ ವಾಣಿಜ್ಯ ವಾಹನಗಳ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಾಸಿಕ್‌ನಲ್ಲಿ ಸಿಆರ್ ಐಎನ್‌ ಅನ್ನು ಆರಂಭಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಇದನ್ನು ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಆರಂಭಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಾರ್ಗಸೂಚಿಗಳು ಬದಲಾವಣೆಯಾಗಿದ್ದು, ಇವುಗಳ ಪ್ರಕಾರ ನಾವು ಸ್ಥಳೀಯ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತೇವೆ," ಎಂದು ತಿಳಿಸಿದರು.

"ಮೊಬಿಲಿಟಿ ಕ್ಷೇತ್ರದಲ್ಲಿ ಹೊಸ ಪೀಳಿಗೆಯ ತಂತ್ರಜ್ಞಾನಗಳಿಗೆ ಸಿಸ್ಟಂ ಸಲೂಶನ್ ಪೂರೈಕೆದಾರನಾಗಲು ಬಾಷ್ ಸಜ್ಜುಗೊಳ್ಳುತ್ತಿದೆ. ಈ ದಿಸೆಯಲ್ಲಿ ನಾವು ಬೆಂಗಳೂರಿನ ಆಡುಗೋಡಿ ಕ್ಯಾಂಪಸ್‌ನಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಎಂಜಿನ್ ಟೆಸ್ಟ್ ಇನ್ ಫ್ರಾಸ್ಟ್ರಕ್ಚರ್ ಅನ್ನು ಆರಂಭಿಸಿದ್ದೇವೆ. ಇದರ ಮೂಲಕ ಹೈಡ್ರೋಜನ್ ಎಂಜಿನ್ ಮತ್ತು ಫ್ಯುಯೆಲ್ ಸೆಲ್ ಟೆಕ್ನಾಲಾಜಿಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಮತ್ತು ಭಾರತದಲ್ಲಿ ಪರ್ಯಾಯ ಇಂಧನ ಕ್ರಾಂತಿಗೆ ನಾಂದಿ ಹಾಡಲಿದ್ದೇವೆ," ಎಂದು ಅವರು ಹೇಳಿದರು.

 

English summary

Bosch Limited Earns 13.3 Percent Pre-Tax Profit, Explained in Kannada

Bosch Limited celebrating 50th anniversary. company Earns 13.3 Percent Pre-Tax Profit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X