For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಾನಿಕ್ ಗೋಲ್ಡ್ ರೆಸಿಪ್ಟ್ ಜಾರಿ ಮಾಡಿದ ಬಿಎಸ್‌ಇ, ಏನಿದು?

|

ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ ಆದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎಲೆಕ್ಟ್ರಾನಿಕ್ ಗೋಲ್ಡ್ ರೆಸಿಪ್ಟ್ (ಇಜಿಆರ್) ಅನ್ನು ಜಾರಿ ಮಾಡಿದೆ. ಇದು ಹಳದಿ ಲೋಹದ ಪರಿಣಾಮಕಾರಿ ಮತ್ತು ಪಾರದರ್ಶಕ ಬೆಲೆ ತಿಳಿಯಲು ಸಹಾಯ ಮಾಡುತ್ತದೆ.

ದೀಪಾವಳಿಯ ಮುಹೂರ್ತದ ವಹಿವಾಟಿನ ಸಮಯದಲ್ಲಿ ಬಿಎಸ್‌ಇ 995 ಮತ್ತು 999 ಶುದ್ಧತೆಯ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಟ್ರೇಡಿಂಗ್ ಒಂದು ಗ್ರಾಂ, ಹತ್ತು ಗ್ರಾಂ ಹಾಗೂ ನೂರು ಗ್ರಾಂ ಲೆಕ್ಕಾಚಾರದಲ್ಲಿ ನಡೆಯುತ್ತದೆ ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ತಿಳಿಸಿದೆ.

ಬಜಾಜ್ ಫೈನಾನ್ಸ್ ಚಿನ್ನದ ಸಾಲ: ಬಡ್ಡಿ ದರ ಕೇವಲ ಶೇ. 9.50ಬಜಾಜ್ ಫೈನಾನ್ಸ್ ಚಿನ್ನದ ಸಾಲ: ಬಡ್ಡಿ ದರ ಕೇವಲ ಶೇ. 9.50

ಕಳೆದ ತಿಂಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಬಿಎಸ್‌ಇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇಜಿಆರ್ ಅಥವಾ ಎಲೆಕ್ಟ್ರಾನಿಕ್ ಗೋಲ್ಡ್ ರೆಸಿಪ್ಟ್ ಅನ್ನು ಆರಂಭ ಮಾಡಲು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಂದ ಅಂತಿಮ ಅನುಮೋದನೆಯನ್ನು ಪಡೆದಿದೆ. ಇದಾದ ನಂತರ ಈ ಪ್ರಕಟಣೆಯು ಹೊರಬಿದ್ದಿದೆ.

ಎಲೆಕ್ಟ್ರಾನಿಕ್ ಗೋಲ್ಡ್ ರೆಸಿಪ್ಟ್  ಜಾರಿ ಮಾಡಿದ ಬಿಎಸ್‌ಇ, ಏನಿದು?

ಅಣಕು ವ್ಯಾಪಾರದ ಮೂಲಕ ಮಾಹಿತಿ

ಫೆಬ್ರವರಿಯಲ್ಲಿ ಬಿಎಸ್‌ಇ ಸೆಬಿಯಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಅದಾದ ಬಳಿಕ ಬಿಎಸ್‌ಇ ತನ್ನ ಸದಸ್ಯರಿಗೆ ಹಲವಾರು ಬಾರಿ ಅಣಕು ವ್ಯಾಪಾರವನ್ನು ನಡೆಸಿ ಈ ಬಗ್ಗೆ ಮಾಹಿತಿ ನೀಡಿದೆ. ಇಜಿಆರ್‌ಗಳು ಮಾರುಕಟ್ಟೆ ವಹಿವಾಟಿನಲ್ಲಿ ಭಾಗಿಯಾಗುವ ಎಲ್ಲರಿಗೂ ಲಭ್ಯವಾಗಲಿದೆ. ಖರೀದಿದಾರರು ಮತ್ತು ಮಾರಾಟಗಾರರು ವೈಯಕ್ತಿಕ ಹೂಡಿಕೆದಾರರು, ಜೊತೆಗೆ ಆಮದುದಾರರು, ಬ್ಯಾಂಕ್‌ಗಳು, ರಿಫೈನರ್‌ಗಳು, ಬುಲಿಯನ್ ವ್ಯಾಪಾರಿಗಳು, ಆಭರಣ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳಂತಹ ಪ್ರಮುಖ ವಹಿವಾಟು ಭಾಗಿದಾರರು ಒಳಗೊಂಡಿರುತ್ತಾರೆ.

ಹಣದುಬ್ಬರದ ನಡುವೆಯೂ ಧನತ್ರಯೋದಶಿ ದಿನ ಬಂಪರ್ ಚಿನ್ನ ಖರೀದಿ!ಹಣದುಬ್ಬರದ ನಡುವೆಯೂ ಧನತ್ರಯೋದಶಿ ದಿನ ಬಂಪರ್ ಚಿನ್ನ ಖರೀದಿ!

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬಿಎಸ್‌ಇ ಸಿಇಒ ಸಮೀರ್ ಪಾಟೀಲ್, "ಇಜಿಆರ್‌ಗಳ ಆರಂಭವು ಬಿಎಸ್‌ಇಗೆ ಮಾತ್ರವಲ್ಲದೆ ಜಾಗತಿಕ ಬುಲಿಯನ್ ಉದ್ಯಮಕ್ಕೂ ಗಮನಾರ್ಹವಾದ ಮೈಲಿಗಲ್ಲಾಗಿದೆ. ನಮ್ಮ ಮಧ್ಯಸ್ಥಗಾರರಿಗೆ ಉತ್ತಮ-ಗುಣಮಟ್ಟದ ಹೂಡಿಕೆ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಬಿಎಸ್‌ಇ ಬದ್ಧವಾಗಿದೆ," ಎಂದು ತಿಳಿಸಿದ್ದಾರೆ.

ಇಜಿಆರ್ ಚಿನ್ನದ ಗುಣಮಟ್ಟ, ಬೆಲೆ ಹಾಗೂ ವಹಿವಾಟಿನ ಪಾರದರ್ಶಕತೆಗೆ ಸಹಕಾರಿಯಾಗುತ್ತದೆ. ಇದು ಚಿನ್ನದ ನಿಜವಾದ ವಿನಿಮಯ ವಸ್ತು ಹಾಗೂ ಭಾರತದಲ್ಲಿ ಚಿನ್ನದ ವಹಿವಾಟಿನ ವಾತಾವರಣಕ್ಕೆ ಸಹಾಯಕವಾಗಲಿದೆ. ಪ್ರಮುಖವಾಗಿ ಭಾರತವು ಚಿನ್ನವವನ್ನು ಹೆಚ್ಚಾಗಿ ಬಳಕೆ ಮಾಡುವ ವಿಶ್ವದ ಎರಡನೇ ದೇಶವಾಗಿದೆ. ಭಾರತದಲ್ಲಿ ವಾರ್ಷಿಕವಾಗಿ ಅಂದಾಜು 800-900 ಟನ್‌ಗಳಷ್ಟು ಚಿನ್ನದ ಬೇಡಿಕೆ ಇದೆ ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದು.

English summary

BSE launches Electronic Gold Receipts, Details Here in Kannada

Leading stock exchange BSE has launched Electronic Gold Receipt (EGR) on its platform. Here details in kannada. read on.
Story first published: Tuesday, October 25, 2022, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X