UNION BUDGET 2020-21
Live Blogಈ ಬಜೆಟ್ ದೇಶದ ಪ್ರಸ್ತುತ ಅಗತ್ಯತೆಗಳ ಜೊತೆಗೆ ಭವಿಷ್ಯದ ನಿರೀಕ್ಷೆಗಳನ್ನೂ ಪೂರೈಸಲಿದೆ- ಮೋದಿ

ಕೇಂದ್ರ ಬಜೆಟ್ 2020 ಇನ್ನೂ ಕೆಲ ದಶಕಗಳ ನೆನಪಿಟ್ಟುಕೊಳ್ಳುವಂಥದ್ದು ಖಂಡಿತಾ ಆಗಿರುತ್ತದೆ. ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದ ಏರು ಗತಿಯ ಕಡೆಗೆ ಕರೆದೊಯ್ಯುವ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮಾಡಲೇಬೇಕಿದೆ. ಅತಿಯಾದ ನಿರೀಕ್ಷೆ ಹಾಗೂ ಅಗ್ನಿ ಪರೀಕ್ಷೆ ಎರಡನ್ನೂ ಸಂಭಾಳಿಸಬೇಕಿದೆ ಈ ಬಜೆಟ್.

ಆದ್ದರಿಂದ ಆ ಯತ್ನದಲ್ಲಿ ಸಫಲವಾದರೂ ವಿಫಲವಾದರೂ ಇತಿಹಾಸದಲ್ಲಿ ದಾಖಲಾರ್ಹವಂತೂ ಹೌದು. ಹನ್ನೆರಡು ವರ್ಷದ ನಂತರ ಆರ್ಥಿಕ ಕುಸಿತದ ಇಳಿಜಾರು ಆತಂಕ ಸೃಷ್ಟಿಸುತ್ತಿದೆ. ದಿಟ್ಟ ಹಾಗೂ ಸ್ಪಷ್ಟ ನಿರ್ಧಾರ-ಯೋಜನೆ-ಉತ್ತೇಜನ ಎಲ್ಲವೂ ಪ್ರದರ್ಶಿಸಬೇಕು.

ಅಂದ ಹಾಗೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲನೇ ಸಲಕ್ಕೆ ಮಂಡಿಸಿದ್ದು ಮಧ್ಯಂತರ ಬಜೆಟ್ ಆಗಿತ್ತು. ಆರೇಳು ತಿಂಗಳೊಳಗೆ ಬಂದೇ ಬಿಟ್ಟಿದೆ ಈ ಪೂರ್ಣ ಪ್ರಮಾಣದ ಬಜೆಟ್. ಈ ಬಾರಿ ಅವರು ವಿರೋಧ ಪಕ್ಷಗಳಿಗೆ ಹೇಳಬೇಕಾದ್ದೇನೋ ಇರುವಂತೆ ಕಾಣುವುದಿಲ್ಲ. ಆದರೆ ಸಮಾಜದ ನಾನಾ ವಲಯಗಳ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ.

ದೇಶದ ಅಗತ್ಯತೆಗಳ ಜೊತೆಗೆ ಭವಿಷ್ಯದ ನಿರೀಕ್ಷೆಗಳನ್ನೂ ಪೂರೈಸಲಿದೆ- ಮೋದಿ

ಬಜೆಟ್ ಅಂದರೆ, ಮುಂದಿನ ಒಂದು ವರ್ಷದಲ್ಲಿ ಸರ್ಕಾರಕ್ಕೆ ಬರಬಹುದಾದ ಆದಾಯ ಮತ್ತು ಅದನ್ನು ವೆಚ್ಚ ಮಾಡುವ ಬಗೆಯನ್ನು ಜನರ ಮುಂದಿಡುವ ಅಂದಾಜು ಪಟ್ಟಿ. ಏನಿದೆ ನಿರ್ಮಲಾ ಸೀತಾರಾಮನ್ ಮುಂದಿಡುವ ಅಂದಾಜು ಪಟ್ಟಿಯಲ್ಲಿ ಎಂಬುದರ ಲೈವ್ ಅಪ್ ಡೇಟ್ಸ್ ಇಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X