ಬಜೆಟ್ 2021: ಅನೇಕ ಅಗತ್ಯ ವಸ್ತುಗಳ ಮೇಲಿನ ಸುಂಕ ತಗ್ಗುವ ಸಾಧ್ಯತೆ
ಫೆಬ್ರವರಿ 1ರಂದು ಕೇಂದ್ರ ಸರ್ಕಾರವು ತನ್ನ ಎರಡನೇ ಅವಧಿಯ ಮೂರನೇ ಬಜೆಟ್ ಅನ್ನು ಮಂಡಿಸಲಿದೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಆರ್ಥಿಕ ವ್ಯವಸ್ಥೆಯು ಹಳಿ ತಪ್ಪಿತ್ತು.ಹೀಗಾಗಿ ಈ ಬಾರಿಯ ಕೇಂದ್ರ ಬಜೆಟ್ ಹಿಂದೆಂದೂ ಕಾಣದ ರೀತಿಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದರ ಜೊತೆಗೆ ಕೆಲವು ಅಗತ್ಯ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ಮೂಲಗಳನ್ನು ಉಲ್ಲೇಖಿಸಿ, ಈ ಬಾರಿ ಬಜೆಟ್‌ನಲ್ಲಿ ಮೋದಿ ಸರ್ಕಾರವು ಪೀಠೋಪಕರಣಗಳ ಕಚ್ಚಾ ವಸ್ತುಗಳು, ತಾಮ್ರ, ಕೆಲವು ರಾಸಾಯನಿಕ, ಟೆಲಿಕಾಂ ಉಪಕರಣಗಳು, ರಬ್ಬರ್ ಉತ್ಪನ್ನಗಳು ಮುಂತಾದ ಕೆಲವು ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದೆ.
ದೇಶೀಯ ಉತ್ಪನ್ನಗಳನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಹೆಚ್ಚು ಹೆಚ್ಚು ರಫ್ತು ಮಾಡುವುದು ಈ ನಿರ್ಧಾರದ ಉದ್ದೇಶವಾಗಿದೆ. ಇದಲ್ಲದೆ, ವಜ್ರ, ರಬ್ಬರ್ ಸರಕುಗಳು, ಚರ್ಮದ ಬಟ್ಟೆಗಳು, ರತ್ನಗಂಬಳಿಗಳು ಸೇರಿದಂತೆ ಸುಮಾರು 20 ಉತ್ಪನ್ನಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಚಿಂತಿಸುತ್ತಿದೆ.
ಮತ್ತೊಂದೆಡೆ, ಹಾರ್ಡ್ ಬೋರ್ಡ್ ಮುಂತಾದ ಆಯ್ದ ಕಚ್ಚಾ ವಸ್ತುಗಳಿಂದ ಕಸ್ಟಮ್ ಸುಂಕವನ್ನು ತೆಗೆದುಹಾಕಬಹುದು. ದೇಶದ ಪೀಠೋಪಕರಣ ರಫ್ತು ತೀರಾ ಕಡಿಮೆ (ಸುಮಾರು ಒಂದು ಪ್ರತಿಶತ), ಆದರೆ ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳು ಈ ವಲಯದಲ್ಲಿ ಅಗ್ರಸ್ಥಾನದಲ್ಲಿವೆ. ಅದೇ ಸಮಯದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ,
ಉದಾಹರಣೆಗೆ ಹವಾನಿಯಂತ್ರಣ ಮತ್ತು ಎಲ್ಇಡಿ ದೀಪಗಳು ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಪ್ರಾರಂಭಿಸಲಾಗಿದೆ. ಈ ಎಲ್ಲ ನಿರ್ಧಾರಗಳ ಉದ್ದೇಶ ಸ್ವಾವಲಂಬಿ ಭಾರತ ಯೋಜನೆಯನ್ನು ಮತ್ತಷ್ಟು ಉತ್ತೇಜಿಸುವುದು ಆಗಿದೆ.