For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ರೈಲ್ವೆ ಸುರಕ್ಷತೆ ಶೇ. 50ರಷ್ಟು ಹೆಚ್ಚು ಮೀಸಲಿಡಲು ಮನವಿ

By ಅನಿಲ್ ಆಚಾರ್
|

ಸುರಕ್ಷತಾ ನಿಧಿ- ರಾಷ್ಟ್ರೀಯ ರೈಲ್ ಸಂರಕ್ಷಣಾ ಕೋಶ್ ಗೆ ಶೇಕಡಾ 50ರಷ್ಟು ಹೆಚ್ಚು ಮೀಸಲಿಡಬೇಕು ಎಂದು ರೈಲ್ವೆ ಸಚಿವಾಲಯವು ಕೇಳಿದೆ. ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, ಪ್ರತಿ ವರ್ಷ ರು. 30 ಸಾವಿರ ಕೋಟಿಯಂತೆ ಐದು ವರ್ಷಗಳ ಕಾಲ ಮಂಜೂರು ಮಾಡುವಂತೆ ಹಣಕಾಸು ಸಚಿವಾಲಯಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

 

2017- 18ರಲ್ಲಿ ಆಗಿನ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಐದು ವರ್ಷದ ಅವಧಿಗೆ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ನಿಧಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ್ದರು. ಪ್ರಯಾಣಿಕರ ಸುರಕ್ಷಣೆಯನ್ನು ಖಾತ್ರಿ ಮಾಡುವ ಗುರಿಯೊಂದಿಗೆ FY18ರೊಂದಿಗೆ ಶುರುವಾಗಿತ್ತು.

 

ಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಗೆ ಚಾಲನೆ ನೀಡಿದ ನಿರ್ಮಲಾಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಗೆ ಚಾಲನೆ ನೀಡಿದ ನಿರ್ಮಲಾ

ಆಗ ಜೇಟ್ಲಿ ಮಾತನಾಡಿ, ಸರ್ಕಾರದಿಂದ ಮೂಲನಿಧಿಯನ್ನು ನೀಡುತ್ತದೆ. ಆದರೆ ರೈಲ್ವೆಯಿಂದ ಬಾಕಿ ಸಂಪನ್ಮೂಲವನ್ನು ಆದಾಯ ಮತ್ತು ಇತರ ಮೂಲಗಳಿಂದ ಹೊಂದಿಸಿಕೊಳ್ಳುವಂತೆ ತಿಳಿಸಿದ್ದರು.

ಬಜೆಟ್ 2021: ರೈಲ್ವೆ ಸುರಕ್ಷತೆ ಶೇ. 50ರಷ್ಟು ಹೆಚ್ಚು ಮೀಸಲಿಡಲು ಮನವಿ

2022- 23ರಿಂದ ಆರಂಭವಾಗಿ ಇನ್ನೂ ಐದು ವರ್ಷಗಳ ಅವಧಿಗೆ ರಾಷ್ಟ್ರೀಯ ರೈಲ್ ಸಂರಕ್ಷಣಾ ಕೋಶ್ ವಿಸ್ತರಣೆಗೆ ಚರ್ಚೆ ನಡೆಯುತ್ತಿದೆ. ಈ ಸಲ ಪ್ರಯಾಣಿಕರ ಸುರಕ್ಷೆಗೆ ಹೆಚ್ಚು ಖರ್ಚು ಮಾಡುವ ನಿರೀಕ್ಷೆಯಲ್ಲಿ ಭಾರತೀಯ ರೈಲ್ವೆ ಇದೆ. ಈ ತನಕ ಹತ್ತಿರಹತ್ತಿರ 20 ಸಾವಿರ ಕೋಟಿ ರುಪಾಯಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಅದನ್ನು ವಾರ್ಷಿಕ 30 ಸಾವಿರ ಕೋಟಿ ರುಪಾಯಿಗೆ ಹೆಚ್ಚಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ತನಕ ಪ್ರತಿ ವರ್ಷ ನಾಲ್ಕನೇ ಮೂರು ಭಾಗದಷ್ಟು ಮೊತ್ತವು ಭಾರತೀಯ ರೈಲ್ವೇಸ್ ನೀಡುತ್ತದೆ ಮತ್ತು ಬಾಕಿ ಮೊತ್ತವನ್ನು ಬಜೆಟ್ ಮೊತ್ತದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ದತ್ತಾಂಶದ ಪ್ರಕಾರ, 2017-18 ಮತ್ತು 2019-20ರಲ್ಲಿ 54,000 ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ.

ಫೆಬ್ರವರಿ 1ನೇ ತಾರೀಕಿನಂದು ಘೋಷಣೆ ಮಾಡಬಹುದು. ಈ ಸುರಕ್ಷತೆ ನಿಧಿಯನ್ನು ಮಾನವ ತಪ್ಪುಗಳಿಂದ ಆಗುವ ರೈಲು ಅಪಘಾತಗಳನ್ನು ತಡೆಯಲು ಮತ್ತು ಸುರಕ್ಷತೆ ಹೆಚ್ಚಳಕ್ಕೆ, ಇದರ ಜತೆಗೆ ರೈಲ್ವೆ ಮೂಲಸೌಕರ್ಯಕ್ಕೆ ಹಣವನ್ನು ಬಳಸಲಾಗುತ್ತದೆ.

English summary

Budget 2021: Railways Seek 50 Percent More Fund For Safety

Indian railways seek 50% more safety fund in budget 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X