For Quick Alerts
ALLOW NOTIFICATIONS  
For Daily Alerts

ಬಜೆಟ್ 2022: ಎನ್ಆರ್‌ಐಗಳ ನಿರೀಕ್ಷೆಗಳೇನು?

|

ನವದೆಹಲಿ, ಜನವರಿ 29: ಈ ಬಾರಿಯ ಕೇಂದ್ರ ಬಜೆಟ್‌ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಫೆಬ್ರವರಿ 1ರಂದು 2022ನೇ ಸಾಲಿನ ಬಜೆಟ್ ಮಂಡಿಸಲಾಗುತ್ತಿದೆ.

ಈ ಕೊರೊನಾವು ಏಕಾಏಕಿ ಭಾರತದಿಂದ ಹೊರಗಿರುವವರನ್ನು ತನ್ನ ದೇಶಕ್ಕೆ ಮರಳಿಸಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರು ಮತ್ತು ಇನ್ನೂ ಭಾರತದೊಳಗೆ ತಮ್ಮ ಉದ್ಯೋಗ ಸೇವೆಯನ್ನು ಮುಂದುವರೆಸಿರುವವರು ತೆರಿಗೆಗೆ ಒಳಪಡುತ್ತಾರೆ.

ಎನ್‌ಆರ್‌ಐಗಳು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಆಸ್ತಿಯನ್ನು ಹೊಂದಿದ್ದರೆ ಅದನ್ನು 50 ಲಕ್ಷಕ್ಕಿಂತ ಕಡಿಮೆ ಆಸ್ತಿಯನ್ನು ಮಾರಾಟ ಮಾಡಿದಾಗ ಬಂಡವಾಳ ಲಾಭದ ಮೇಲೆ ಶೇಕಡ 20ರಷ್ಟು ಟಿಡಿಎಸ್‌ ಅನ್ನು ಪಾವತಿಸಬೇಕಾಗುತ್ತದೆ. ಬಂಡವಾಳ ಲಾಭಗಳು ಅಲ್ಪಾವಧಿಯದ್ದಾಗಿದ್ದರೆ ಅಂದರೆ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಆಸ್ತಿ ಆಗಿದ್ದರೆ, ಟಿಡಿಎಸ್‌ ಆ ವ್ಯಕ್ತಿಯ ಆದಾಯ ತೆರಿಗೆಯ ಆದಾರದಲ್ಲಿ ಇರುತ್ತದೆ.

 ಬಜೆಟ್ 2022: ಎನ್ಆರ್‌ಐಗಳ ನಿರೀಕ್ಷೆಗಳೇನು?

ಆಸ್ತಿಯು 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ್ದಾಗಿದ್ದರೆ ಎಲ್‌ಟಿಸಿಜಿ ಅಂದರೆ ದೀರ್ಘಾವಧಿಯ ಬಂಡವಾಳ ಲಾಭಗಳ ತೆರಿಗೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗು‌ತ್ತದೆ. ಅದೇ ರೀತಿ, ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಭಾರತೀಯ ನಿವಾಸಿ ಹೂಡಿಕೆದಾರರಿಗೆ ಯಾವುದೇ ಟಿಡಿಎಸ್ ಇಲ್ಲದಿದ್ದರೂ, ಎನ್‌ಆರ್‌ಐಗಳು ಹೆಚ್ಚಿನ ತೆರಿಗೆ ದರಗಳಲ್ಲಿ ಟಿಡಿಎಸ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಅನಿವಾಸಿ ಭಾರತೀಯರು ಈ ತೆರಿಗೆ ವಿನಾಯಿತಿ ವಿಚಾರದಲ್ಲಿ ತಮ್ಮ ಹಾಗೂ ನಿವಾಸಿ ಭಾರತೀಯರ ನಡುವೆ ಸಮಾನತೆಯನ್ನು ಆಶಿಸುತ್ತಿದ್ದಾರೆ.

ಎನ್‌ಆರ್‌ಐಗಳು ಬಯಸಬಹುದಾದ ಇತರ ಕೆಲವು ಪ್ರಯೋಜನಗಳು ಕೆಲವು ಸಣ್ಣ ಪುಟ್ಟ ವಿನಾಯಿತಿಗಳು ಆಗಿದೆ. ಆದರೆ ಕೆಲವು ಜನರಿಗೆ ಅದು ತೀರಾ ಮುಖ್ಯವಾಗಿದೆ. ಎನ್‌ಆರ್‌ಐಗಳು ವಿದೇಶದಲ್ಲಿ ವಾಸಿಸುತ್ತಿರುವವರಾಗಿದ್ದು, ಸ್ವದೇಶದಲ್ಲಿ ಸಂಬಂಧಿಕರು ಮತ್ತು ಕುಟುಂಬವನ್ನು ಹೊಂದಿದ್ದಾರೆ.

ಆದರೆ ಅಂಗವಿಕಲ ಅವಲಂಬಿತರ ವೈದ್ಯಕೀಯ ಚಿಕಿತ್ಸೆ (ಸೆಕ್ಷನ್ 80DD), ನಿರ್ದಿಷ್ಟ ರೋಗಗಳಿಂದ ಬಳಲುತ್ತಿರುವ ಕುಟುಂಬದ ಸದಸ್ಯರ ಚಿಕಿತ್ಸೆ (ಸೆಕ್ಷನ್ 80DDB) ಮತ್ತು ಸ್ವಯಂ ಅಥವಾ ಅವಲಂಬಿತ (ಸೆಕ್ಷನ್ 80U) ಅಂಗವೈಕಲ್ಯ ಸೇರಿದಂತೆ ಕೆಲವು ತೆರಿಗೆ ವಿನಾಯಿತಿಗಳಿಗೆ ಎನ್‌ಆರ್‌ಐಗಳು ಅರ್ಹರಾಗಿರುವುದಿಲ್ಲ.

ಯಾವುದೇ ಇತರ ತೆರಿಗೆದಾರರಂತೆ, ಎನ್‌ಆರ್‌ಐಗಳು ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.5 ಲಕ್ಷ ಕಡಿತಕ್ಕೆ ಮತ್ತು ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ರೂ 50,000 ಗೆ ಅರ್ಹರಾಗಿರುತ್ತಾರೆ.

ಆದರೆ ಎನ್‌ಆರ್‌ಐಗಳು ಎಲ್ಲಿ ಹೂಡಿಕೆ ಮಾಡಬಹುದು ಎಂಬುದರ ಮೇಲೆ ನಿರ್ಬಂಧಗಳಿವೆ. ಎನ್‌ಆರ್‌ಐಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಪಿಪಿಎಫ್‌ ಖಾತೆಯನ್ನು ತೆರೆಯಲು ಅಥವಾ ಎನ್‌ಎಸ್‌ಸಿಗಳು ಮತ್ತು ಪೋಸ್ಟ್ ಆಫೀಸ್ ಠೇವಣಿಗಳನ್ನು ಮಾಡಲು ಸಾಧ್ಯವಿಲ್ಲ.

ಭಾರತೀಯ ನಿವಾಸಿ ತೆರಿಗೆದಾರರಿಂದ ಗಳಿಸಿದ ಬಂಡವಾಳದ ಲಾಭಗಳು (ಅಲ್ಪಾವಧಿಯ ಮತ್ತು ದೀರ್ಘಾವಧಿಯ ಎರಡೂ) ಮೂಲ ವಿನಾಯಿತಿ ಮಿತಿಗಿಂತ ಕೆಳಗಿದ್ದರೆ, ಅಂದರೆ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ.

ಆದರೆ ಎನ್‌ಆರ್‌ಐಗಳು ತಮ್ಮ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇದ್ದರೂ ಬಂಡವಾಳದ ಲಾಭದ ಮೇಲೆ ಒಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅನೇಕ ಎನ್‌ಆರ್‌ಐಗಳು ಈ ಬಗ್ಗೆ ಅಗತ್ಯ ಬದಲಾವಣೆಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಿದ್ದಾರೆ.

ಎನ್‌ಆರ್‌ಐಗಳಿಗೆ ಮತ್ತೊಂದು ಪ್ರಮುಖ ನೋವಿನ ಅಂಶವೆಂದರೆ ತಮ್ಮ ಬಂಡವಾಳ ಲಾಭವನ್ನು ಮೂಲ ವಿನಾಯಿತಿ ಮಿತಿಯಾದ 2.5 ಲಕ್ಷಕ್ಕೆ ಹೊಂದಿಕೆ ಮಾಡದಿರುವುದು.

English summary

Budget 2022 : Here's What NRIs Expect From The Budget

Budget 2022 is just around the corner and like every other category NRI population has some of its own set of expectations from the annual budgetary event.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X