LIVE
HIGHLIGHTS
Budget 2023 (ಬಜೆಟ್) Live Updates in Kannada: FM Nirmala Sitharaman Speech, Key Announcements and Highlights

Budget 2023 Live: ತೆರಿಗೆ ಕಡಿತ ಸ್ವಾಗತಾರ್ಹ ಎಂದ ಕಾರ್ತಿ ಚಿದಂಬರಂ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು ಜನವರಿ 31ರಿಂದಲೇ ಆರಂಭವಾಗಿದೆ. ಬಜೆಟ್ ಅಧಿವೇಶನವು ರಾಷ್ಟ್ರಪತಿ ಭಾಷಣದೊಂದಿಗೆ ಆರಂಭವಾಗಿದೆ. ಅದಾದ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಸುಗಮ ಕಲಾಪಕ್ಕಾಗಿ ಸಂಪ್ರದಾಯದಂತೆ ಸೋಮವಾರ ಸಂಜೆ ಸಂಸತ್ ಭನನದಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆದಿದೆ. ಕಾಂಗ್ರೆಸ್ ನಾಯಕರು ಸರ್ವಪಕ್ಷಗಳ ಸಭೆಗೆ ಗೈರಾಗಿದ್ದರು. ಸಭೆ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ, "ಸಂಸತ್ತಿನ ಸೆಂಟ್ರಲ್‌ಹಾಲ್‌ನಲ್ಲಿ ರಾಷ್ಟ್ರಪತಿ ಮುರ್ಮು ಭಾಷಣದೊಂದಿಗೆ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ," ಎಂದು ಭಾನುವಾರ ಮಾಹಿತಿ ನೀಡಿದ್ದರು. ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿ, ಅದಾದ ಬಳಿಕ ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಪತ್ರಿಕಾಗೋಷ್ಠಿ ನಡೆಸಿ ಆರ್ಥಿಕ ಸಮೀಕ್ಷೆಯ ವಿವರಣೆ ನೀಡಿದ್ದಾರೆ.

ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತದೆ. ಗುರುವಾರದಿಂದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ ಮೇಲೆ ಚರ್ಚೆ ಆರಂಭವಾಗಲಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರಿಸಲಿದ್ದಾರೆ. ಬಜೆಟ್ ಅಧಿವೇಶನ ಎರಡು ಭಾಗದಲ್ಲಿ ನಡೆಯಲಿದೆ. ಮೊದಲ ಭಾಗದ ಕಾರ್ಯ ಕಲಾಪಗಳು ಫೆಬ್ರವರಿ 13ರ ತನಕ ನಡೆಯಲಿವೆ. ಎರಡನೇ ಭಾಗವು ಮಾರ್ಚ್ 13ರಂದು ಪ್ರಾರಂಭವಾಗಿ ಏಪ್ರಿಲ್ 6ರವರೆಗೆ ನಡೆಯಲಿದೆ.

8:58 PM
Feb 1, 2023
ರಾಷ್ಟ್ರದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ʼಯೂನಿಟಿ ಮಾಲ್‌ʼಗಳನ್ನು ತೆರೆದು, ದೇಶೀಯ ಮತ್ತು ಪ್ರಾದೇಶಿಕ ಮಟ್ಟದ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರದ ಚಿಂತನೆ. ಈ ಮಾಲ್ ಗಳಲ್ಲಿ ಪ್ರಾದೇಶಿಕವಾಗಿ ಹೆಸರುವಾಸಿಯಾಗಿರುವ ಉತ್ಪನ್ನಗಳ ಮಾರಾಟಕ್ಕೆ ಅವಕಾಶ.
8:22 PM
Feb 1, 2023
ದೆಹಲಿ ಪೊಲೀಸರಿಗೆ ಅನುದಾನ:
ದೆಹಲಿ ಪೊಲೀಸರಿಗೆ ಅನುದಾನ:
ಪ್ರಸಕ್ತ 2023ರ ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರಿಗೆ 11,932 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
8:01 PM
Feb 1, 2023
ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
ಕೇಂದ್ರ ಬಜೆಟ್ 2023 ಕುರಿತು ಬೆಂಗಳೂರಿನಲ್ಲಿ ನಾಳೆ ಗುರುವಾರ (ಫೆ.2) ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ
7:41 PM
Feb 1, 2023
ಚುನಾವಣಾ ಕೇಂದ್ರೀಕೃತ ಬಜೆಟ್
ಚುನಾವಣಾ ಕೇಂದ್ರೀಕೃತ ಬಜೆಟ್
ಬುಧವಾರ ಮಂಡನೆಯಾದ ಕೇಂದ್ರ ಬಜೆಟ್ ಸಂಪೂರ್ಣವಾಗಿ ಮುಂಬರುವ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದೆ. ಬಜೆಟ್‌ನಲ್ಲಿ ಛತ್ತೀಸ್‌ಗಢಕ್ಕೆ ಏನೂ ನೀಡಿಲ್ಲ. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 'ನಿರ್ಮಮ್' ಬಜೆಟ್ ಎನ್ನಬಹುದು. ಯುವಕರು, ರೈತರು, ಮಹಿಳೆಯರು, ಆದಿವಾಸಿಗಳು ಅಥವಾ ಪರಿಶಿಷ್ಟ ಜಾತಿಗಳಿಗೆ ಈ ಬಜೆಟ್‌ನಲ್ಲಿ ಏನನ್ನು ಘೋಷಿಸಿಲ್ಲ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದರು.
7:37 PM
Feb 1, 2023
ದೇಶದ ಆರ್ಥಿಕ ಬೆಳವಣಿಗೆ ದರ ಶೇ.7
ದೇಶದ ಆರ್ಥಿಕ ಬೆಳವಣಿಗೆ ದರ ಶೇ.7
ಭಾರತದ ಆರ್ಥಿಕ ಬೆಳವಣಿಗೆ ದರವು 7 ಪ್ರತಿಶತ ಎಂದು ಅಂದಾಜಿಸಲಾಗಿದೆ. ಸರಕು ಸೇವಾ ತೆರಿಗೆ (GST) ಮಾಸಿಕ ಆದಾಯವು ಸುಮಾರು 1.5 ಲಕ್ಷ ಕೋಟಿ ಉಳಿತಾಯವಾಗಿದೆ. ವಿದೇಶಿ ವಿನಿಮಯ ಮೀಸಲು 9 ತಿಂಗಳ ಆಮದುಗಳನ್ನು ಸರಿದೂಗಿಸಲು ಸಾಕಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
7:37 PM
Feb 1, 2023
ಬಜೆಟ್: ಮಾಯಾವತಿ ಸರಣಿ ಟ್ವಿಟ್
ಬಜೆಟ್: ಮಾಯಾವತಿ ಸರಣಿ ಟ್ವಿಟ್
ಕೇಂದ್ರ ಬಜೆಟ್ 2023 ಕುರಿತು ಸರಣಿ ಟ್ವೀಟ್‌ಗಳಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ಕೇಂದ್ರವು ಯೋಜನೆಗಳ ಫಲಾನುಭವಿಗಳ ಅಂಕಿಅಂಶಗಳ ಕುರಿತು ಪ್ರಸ್ತಾಪಿಸಿದೆ. ಈ ವೇಳೆ ಭಾರತವು ಸುಮಾರು 130 ಕೋಟಿ ಬಡವರು, ಕಾರ್ಮಿಕರು, ವಂಚಿತರು, ರೈತರು ಮುಂತಾದ ವಿಶಾಲವಾದ ದೇಶವಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಅಮೃತ ಕಾಲದ ಬಗ್ಗೆ ಹೇಳುವ ಕೇಂದ್ರ ಸರ್ಕಾರವು ಪಕ್ಷಕ್ಕಿಂತ ದೇಶದ ಹಿತಕ್ಕಾಗಿ ಬಜೆಟ್ ಮಾಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ.
7:36 PM
Feb 1, 2023
2021-22ರಲ್ಲಿ ಮೂಲಸೌಕರ್ಯ ವಿಭಾಗದಲ್ಲಿ ಹಂಚಿಕೆ ದ್ವಿಗುಣಗೊಂಡಿದೆ. ಇದು ಗಡಿಯ ಮೂಲಸೌಕರ್ಯವನ್ನು ಉತ್ತೇಜಿಸುತ್ತದೆ ಮತ್ತು ಸೆಲಾ ಸುರಂಗ, ನೆಚಿಪು ಸುರಂಗ ಮತ್ತು ಸೆಲಾ-ಛಬ್ರೆಲಾ ಸುರಂಗದಂತಹ ಆಯಕಟ್ಟಿನಲ್ಲಿ ಆಸ್ತಿಗಳ ಸೃಷ್ಟಿಗೆ ಮತ್ತು ಗಡಿ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
7:36 PM
Feb 1, 2023
ಹಣಕಾಸು ಸಚಿವಾಲಯ
ಹಣಕಾಸು ಸಚಿವಾಲಯ
ಉತ್ತರದ ಗಡಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಲು ರಕ್ಷಣಾ ಸಚಿವಾಲಯ ಬದ್ಧವಾಗಿದೆ. ಅದರಂತೆ, ಗಡಿ ರಸ್ತೆಗಳ ಸಂಸ್ಥೆಯ (BRO) ಬಂಡವಾಳ ಬಜೆಟ್ ಅನ್ನು ಆರ್ಥಿಕ ವರ್ಷ 2022-23ರಲ್ಲಿ 3,500 ಕೋಟಿ ರೂ.ಗಳಿಗೆ ಹೋಲಿಸಿದರೆ ಆರ್ಥಿಕ ವರ್ಷ 2023-24ರಲ್ಲಿ 5,000 ಕೋಟಿಗೆ ಅಂದರೆ ಶೇ. 43ರಷ್ಟು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
7:35 PM
Feb 1, 2023
ರೈತ ವಿರೋಧಿ ಬಜೆಟ್: SKM
ರೈತ ವಿರೋಧಿ ಬಜೆಟ್: SKM
ಕೇಂದ್ರ ಬಜೆಟ್ 2023 ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಅದರಲ್ಲಿ, ಈ ಪ್ರಸಕ್ತ ಬಜೆಟ್ ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ರೈತ ವಿರೋಧಿ ಬಜೆಟ್ ಆಗಿದೆ ಎಂದು ದೂರಿದೆ. ಇಂತಹ ಬಜೆಟ್ ನೋಡಿ ಆಘಾತವಾಗಿದೆ. ಬಿಜೆಪಿ ಸರ್ಕಾರವು ಕೃಷಿ ಮತ್ತು ರೈತರನ್ನು ಆರ್ಥಿಕವಾಗಿ ನಿರ್ಲಕ್ಷಿಸಿದೆ ಎಂಬುದು ಸಾರ್ವತ್ರಿಕವಾಗಿ ತಿಳಿದಿದೆ. ದೆಹಲಿಯಲ್ಲಿ ರೈತರ ನಿರಂತರ ಮತ್ತು ದೃಢವಾದ ಪ್ರತಿಭಟನೆಯ ನಂತರ ಸರ್ಕಾರ ಕೃಷಿ ಕ್ಷೇತ್ರದ ಮಹತ್ವ ಅರಿತುಕೊಂಡಿದೆ. ದೇಶದ ಜನಸಂಖ್ಯೆಯ ಬಹುಭಾಗವನ್ನು ರೂಪಿಸುವ ಗ್ರಾಮೀಣ ರೈತ ಸಮುದಾಯದ ಆದಾಯ ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸುವ ಅಗತ್ಯತೆ ಇದೆ. ಇದ ಈ ಬಜೆಟ್‌ನಲ್ಲಿ ಆಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
7:34 PM
Feb 1, 2023
ಮೊಬೈಲ್ ತಯಾರಿಕೆಯಲ್ಲಿ ಭಾರತ ವಿಶ್ವದ 2ನೇ ದೊಡ್ಡ ದೇಶ
ಮೊಬೈಲ್ ತಯಾರಿಕೆಯಲ್ಲಿ ಭಾರತ ವಿಶ್ವದ 2ನೇ ದೊಡ್ಡ ದೇಶ
ಭಾರತ ನಾವು ಒಂದು ಕಾಲದಲ್ಲಿ ಮೊಬೈಲ್ ಫೋನ್‌ಗಳ ಆಮದುದಾರ ದೇಶವಾಗಿತ್ತು. ಇಂದು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದೆ. ನಮ್ಮ ವಿದೇಶಿ ವಿನಿಮಯ ಮೀಸಲು 605 ಶತಕೋಟಿ ಡಾಲರ್‌ಗಿಂತ ಹೆಚ್ಚಿದೆ. ಈ ಬಜೆಟ್ ರಫ್ತುಗಳನ್ನು ಬಲಪಡಿಸುತ್ತದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
7:33 PM
Feb 1, 2023
ಭವಿಷ್ಯತ್ತು ಇಲ್ಲದ ಬಜೆಟ್: ದಿದಿ
ಭವಿಷ್ಯತ್ತು ಇಲ್ಲದ ಬಜೆಟ್: ದಿದಿ
ಪ್ರಸ್ತುತ ಬಜೆಟ್‌ನಲ್ಲಿ ಭವಿಷ್ಯತ್ತು ಇಲ್ಲ, ಇದು ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಕೇಂದ್ರ ಆಯವ್ಯಯವು ಸಂಪೂರ್ಣ ಅವಕಾಶವಾದಿ ಬಜೆಟ್ ಆಗಿದೆ. ಗಗನಕ್ಕೇರುತ್ತಿರುವ ಹಣದುಬ್ಬರದ ಮಧ್ಯೆ ಆದಾಯ ತೆರಿಗೆ ವಿನಾಯಿತಿಯ ಪ್ರಯೋಜನವೇನು?. ನಿರುದ್ಯೋಗಿಗಳಿಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಅವರು ಟೀಕಿಸಿದರು.
6:08 PM
Feb 1, 2023
3 ಕ್ಷೇತ್ರಗಳಿಗೆ ದಾಖಲೆಯ ಬಜೆಟ್: ಪಿಯೂಷ್
3 ಕ್ಷೇತ್ರಗಳಿಗೆ ದಾಖಲೆಯ ಬಜೆಟ್: ಪಿಯೂಷ್
ಅಮೃತ್ ಕಾಲದಲ್ಲಿರುವ ಭಾರತವು ಮತ್ತಷ್ಟು ವಿಶ್ವಾಸದಿಂದ ಮುನ್ನಡೆಯಲು ಇಂದು ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ಬಜೆಟ್ 2023-24 ಸಹಕಾರಿಯಾಗಲಿದೆ. ಬಜೆಟ್ ಎಲ್ಲಾ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ. ದೇಶವು "ಆರ್ಥಿಕತೆ ಬೆಳೆದಂತೆ ಎಲ್ಲರೂ ಬೆಳೆಯುವ" ಸ್ಥಳವಾಗುವುದನ್ನು ಈ ಬಜೆಟ್ ಖಚಿತಪಡಿಸುತ್ತದೆ. ರಕ್ಷಣಾ, ರೈಲ್ವೆ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ದಾಖಲೆಯ ಬಜೆಟ್ ಇದಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
6:04 PM
Feb 1, 2023
ಸ್ವದೇಶಿ ಹೈಡ್ರೋಜನ್ ರೈಲು ಆಗಮನ
ಸ್ವದೇಶಿ ಹೈಡ್ರೋಜನ್ ರೈಲು ಆಗಮನ
ಭಾರತದಲ್ಲಿ ವಿನ್ಯಾಸಗೊಳಿಸಿ ತಯಾರಿಸಿದ ಸ್ವದೇಶಿ ಹೈಡ್ರೋಜನ್ ರೈಲುಗಳು ಡಿಸೆಂಬರ್ 2023ರ ವೇಳೆಗೆ ಆಗಮಿಸಲಿವೆ. ಮೊದಲು ಈ ರೈಲುಗಳು ಕಲ್ಕಾ-ಶಿಮ್ಲಾದಂತಹ ಪಾರಂಪರಿಕ ಸರ್ಕ್ಯೂಟ್‌ಗಳಲ್ಲಿ ಚಲಿಸುತ್ತದೆ.ತದನಂತ ಅವುಗಳನ್ನು ಇತರ ಸ್ಥಳಗಳಿಗೆ ವಿಸ್ತರಿಸಲಾಗುವುದು ಎಂದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
5:57 PM
Feb 1, 2023
ರೈಲ್ವೆ ಪ್ರಯಾಣಿಕರ ಆಶೋತ್ತರ ಈಡೇರಿಕೆ
ರೈಲ್ವೆ ಪ್ರಯಾಣಿಕರ ಆಶೋತ್ತರ ಈಡೇರಿಕೆ
2023ರ ಕೇಂದ್ರ ಬಜೆಟ್‌ನಲ್ಲಿ ಇಲಾಖೆಗೆ ಮೀಸಲಿಟ್ಟ ಹಣವು ಪ್ರಯಾಣಿಕರ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರೈಲ್ವೆಗೆ 2.41 ಲಕ್ಷ ಕೋಟಿ ರೂ. ವಂದೇ ಭಾರತ್ ರೈಲುಗಳ ಉತ್ಪಾದನೆ ನವೀಕರಿಸಲಾಗುವುದು ಎಂದು ಅವರು ಭವರವಸೆ ನೀಡಿದರು.
4:18 PM
Feb 1, 2023
ಕೊರೊನಾ ಬಳಿಕ ಭಾರತದ ಆರ್ಥಿಕ ವ್ಯವಸ್ಥೆ ನಿಭಾಯಿಸಿರುವುದು ಶ್ಲಾಘನೀಯ- ಕೇಂದ್ರ ಸಚಿವ
ಕೊರೊನಾ ಬಳಿಕ ಭಾರತದ ಆರ್ಥಿಕ ವ್ಯವಸ್ಥೆ ನಿಭಾಯಿಸಿರುವುದು ಶ್ಲಾಘನೀಯ- ಕೇಂದ್ರ ಸಚಿವ
ಕೊರೊನಾದಿಂದ ವಿಶ್ವದ ಅನೇಕ ದೇಶಗಳು ಇನ್ನೂ ತಮ್ಮ ಆರ್ಥಿಕತೆಯೊಂದಿಗೆ ಹೆಣಗಾಡುತ್ತಿರುವಾಗಲೂ ಈ ಕಷ್ಟದ ಸಮಯದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸಿದ ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಭಾರತೀಯ ಆರ್ಥಿಕತೆಯು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
4:08 PM
Feb 1, 2023
ಕೇರಳದ ಅಭಿವೃದ್ಧಿಗೆ ಬಜೆಟ್ ಸಹಕಾರಿ - ವಿ ಮುರಳೀಧರನ್
ಕೇರಳದ ಅಭಿವೃದ್ಧಿಗೆ ಬಜೆಟ್ ಸಹಕಾರಿ - ವಿ ಮುರಳೀಧರನ್
ಈ ಬಜೆಟ್ ಕೇರಳದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೇರಳದ ಜನರ ಪರವಾಗಿ ನಾನು ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಜೆಟ್ ದೇಶದ ಭವಿಷ್ಯದ ಅಭಿವೃದ್ಧಿ, ಕೃಷಿ ವಲಯ, ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲು ಮತ್ತು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವ ದೃಷ್ಟಿ ಹೊಂದಿದೆ ಎಂದು ಸಚಿವ ವಿ ಮುರಳೀಧರನ್ ಹೇಳಿದರು.
4:06 PM
Feb 1, 2023
ಇಂದಿನ ಬಜೆಟ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕೆ
ಇಂದಿನ ಬಜೆಟ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕೆ
ಮುಂಬರುವ 3-4 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ಬಡವರಿಗೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಬಜೆಟ್‌ನಲ್ಲಿ ಏನೂ ಇಲ್ಲ. ಸರ್ಕಾರಿ ಖಾಲಿ ಹುದ್ದೆಗಳು ಮತ್ತು MNREGA ಭರ್ತಿಗೆ ಯಾವುದೇ ಕ್ರಮಗಳಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
4:04 PM
Feb 1, 2023
ಈ ಬಜೆಟ್ ಪ್ರತಿಯೊಂದು ರಾಜ್ಯಗಳ ಕಲ್ಯಾಣಕ್ಕಾಗಿದೆ- ಮಧ್ಯಪ್ರದೇಶ ಸಿಎಂ
ಈ ಬಜೆಟ್ ಪ್ರತಿಯೊಂದು ರಾಜ್ಯಗಳ ಕಲ್ಯಾಣಕ್ಕಾಗಿದೆ- ಮಧ್ಯಪ್ರದೇಶ ಸಿಎಂ
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತನಾಡಿ, 'ಈ ಬಜೆಟ್ ದೇಶದ ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ರಾಜ್ಯಗಳ ಕಲ್ಯಾಣಕ್ಕಾಗಿದೆ. ಇದು ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಮತ್ತು ದುರ್ಬಲ ವರ್ಗಗಳು ಮತ್ತು ಯುವಕರನ್ನು ಸಬಲೀಕರಣಗೊಳಿಸುವುದು' ಎಂದರು.
4:01 PM
Feb 1, 2023
ಕೇಂದ್ರ ಬಜೆಟ್ ಬಗ್ಗೆ ಉತ್ತರಾಖಂಡ್ ಸಿಎಂ ಪಿಎಸ್ ಧಾಮಿ ಪ್ರತಿಕ್ರಿಯೆ
ಕೇಂದ್ರ ಬಜೆಟ್ ಬಗ್ಗೆ ಉತ್ತರಾಖಂಡ್ ಸಿಎಂ ಪಿಎಸ್ ಧಾಮಿ ಪ್ರತಿಕ್ರಿಯೆ
ಕೇಂದ್ರ ಬಜೆಟ್‌ ಬಗ್ಗೆ ಮಾತನಾಡಿದ ಉತ್ತರಾಖಂಡ್ ಸಿಎಂ ಪಿಎಸ್ ಧಾಮಿ, "ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ದೇಶದ ಜನರ ಮುಂದೆ ಅದ್ಭುತ ಬಜೆಟ್ ಮಂಡಿಸಿದ್ದಕ್ಕಾಗಿ ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ. ಈ ಬಜೆಟ್ ದೇಶದ ಜನರ ನಿರೀಕ್ಷೆಗಳನ್ನು ಪೂರೈಸುತ್ತದೆ' ಎಂದರು.
3:20 PM
Feb 1, 2023
ಬಜೆಟ್ ಜನರಿಗೆ ಆಶಾ ಬದಲು ನಿರಾಶಾ ನೀಡಿದೆ: ಅಖಿಲೇಶ್ ಯಾದವ್
ಬಜೆಟ್ ಜನರಿಗೆ ಆಶಾ ಬದಲು ನಿರಾಶಾ ನೀಡಿದೆ: ಅಖಿಲೇಶ್ ಯಾದವ್
2023-24ನೇ ಸಾಲಿನ ಕೇಂದ್ರ ಬಜೆಟ್ ದೇಶದ ಜನರಿಗೆ "ಆಶಾ" (ಭರವಸೆ) ಬದಲಿಗೆ "ನಿರಾಶಾ" (ಹತಾಶೆ) ನೀಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದಾರೆ. ಬಜೆಟ್ ಹಣದುಬ್ಬರ ಮತ್ತು ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
3:17 PM
Feb 1, 2023
ಇದು ಮಧ್ಯಮ ವರ್ಗದವರ ಬಜೆಟ್: ಕೇಂದ್ರ ಸಚಿವೆ ಸ್ಮೃತಿ ಇರಾನಿ
ಇದು ಮಧ್ಯಮ ವರ್ಗದವರ ಬಜೆಟ್: ಕೇಂದ್ರ ಸಚಿವೆ ಸ್ಮೃತಿ ಇರಾನಿ
‘ನಾರಿ ಶಕ್ತಿ’ ಹೇಗೆ ಸಶಕ್ತ ರಾಷ್ಟ್ರವನ್ನು ನಿರ್ಮಿಸುತ್ತದೆ ಎಂಬುದನ್ನು ಹೊಸ ಬಜೆಟ್ ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯದ ಘೋಷಣೆಯನ್ನು ಅವರು ಸ್ವಾಗತಿಸಿದರು. "ಇದು ಮಧ್ಯಮ ವರ್ಗದವರ ಬಜೆಟ್ ಆಗಿದೆ. ಪ್ರಧಾನಮಂತ್ರಿ ಅಂತರ್ಗತ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ. ಇದು ಅಂತರ್ಗತ ಬಜೆಟ್ ಆಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ವೃದ್ಧರಿಗೆ ಇದರಿಂದ ಅನೂಕೂಲವಿದೆ" ಎಂದು ಅವರು ಹೇಳಿದರು.
3:15 PM
Feb 1, 2023
'8-9 ವರ್ಷಗಳಿಂದ ಒಂದೇ ಬಜೆಟ್' ಪಿಡಿಪಿಯ ಮೆಹಬೂಬಾ ಮುಫ್ತಿ
'8-9 ವರ್ಷಗಳಿಂದ ಒಂದೇ ಬಜೆಟ್' ಪಿಡಿಪಿಯ ಮೆಹಬೂಬಾ ಮುಫ್ತಿ
ಕಳೆದ 8-9 ವರ್ಷಗಳಿಂದ ಬರುತ್ತಿದ್ದ ಬಜೆಟ್ ಇದೇ ಆಗಿದೆ. ಹೆಚ್ಚಿದ ತೆರಿಗೆ, ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳಿಗೆ ಹಣ ಖರ್ಚು ಮಾಡುತ್ತಿಲ್ಲ. ಕೆಲವು ನೆಕ್ಸಸ್ ಬಂಡವಾಳಶಾಹಿಗಳು ಮತ್ತು ದೊಡ್ಡ ಉದ್ಯಮಿಗಳಿಗೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ತೆರಿಗೆಯಿಂದ ಸಾರ್ವಜನಿಕರಿಗೆ ಲಾಭವಾಗಬೇಕಿದೆ ಎಂದು ಪಿಡಿಪಿಯ ಮೆಹಬೂಬಾ ಮುಫ್ತಿ ಹೇಳಿದರು.
3:09 PM
Feb 1, 2023
ಬಜೆಟ್ ಬಗ್ಗೆ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯೆ
ಬಜೆಟ್ ಬಗ್ಗೆ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯೆ
ಈ ಬಜೆಟ್ ದೇಶದ ನೈಜತೆಯನ್ನು ತಿಳಿಸುತ್ತಿಲ್ಲ. ಇದು ಕೇವಲ ಅಲಂಕಾರಿಕ ಘೋಷಣೆಗಳನ್ನು ಹೊಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ವಿಮಾ ಕಂಪನಿಗಳು ಮಾತ್ರ ಲಾಭ ಪಡೆದಿವೆ. ರೈತರಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
3:07 PM
Feb 1, 2023
ಬಿಆರ್‌ಎಸ್‌ ಮುಖಂಡರಾದ ಕವಿತಾ ಕಲ್ವಕುಂಟ್ಲ ಬಜೆಟ್‌ ಬಗ್ಗೆ ಅಭಿಪ್ರಾಯ
ಬಿಆರ್‌ಎಸ್‌ ಮುಖಂಡರಾದ ಕವಿತಾ ಕಲ್ವಕುಂಟ್ಲ ಬಜೆಟ್‌ ಬಗ್ಗೆ ಅಭಿಪ್ರಾಯ
ಈ ಬಜೆಟ್ ಮೋದಿ ಸರ್ಕಾರದ ವೈಫಲ್ಯವನ್ನು ದೃಢಪಡಿಸುತ್ತದೆ. ಇದು ಕೆಲವು ರಾಜ್ಯಗಳ ಬಜೆಟ್ ಮಾತ್ರ ಎಂದು ತೋರುತ್ತದೆ. 10 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸಿದ್ದೆವು. ನಾವು ತೆಲಂಗಾಣದ ಜನರಿಗೆ ಉತ್ತಮ ಸಂಬಳ ನೀಡುತ್ತೇವೆ, ಆದ್ದರಿಂದ ಈ ವಿನಾಯಿತಿ ನಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಬಿಆರ್‌ಎಸ್‌ ಮುಖಂಡರಾದ ಕವಿತಾ ಕಲ್ವಕುಂಟ್ಲ ಹೇಳಿದರು.
3:05 PM
Feb 1, 2023
ಬಜೆಟ್‌ ಕುರಿತು ಪ್ರಧಾನಿ ಮೋದಿ ಹೇಳಿಕೆ
ಬಜೆಟ್‌ ಕುರಿತು ಪ್ರಧಾನಿ ಮೋದಿ ಹೇಳಿಕೆ
ಅಮೃತ್ ಕಾಲದ ಮೊದಲ ಬಜೆಟ್ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ಹಾಕುತ್ತದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಸಮಾಜದ ಮಹತ್ವಾಕಾಂಕ್ಷೆಯ ಕನಸುಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಜೀವನವನ್ನು ಸುಲಭಗೊಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳು ಇದರ ಸದುಪಯೋಗಪಡಿಸಿಕೊಳ್ಳಲಿವೆ. ಮನೆಯಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿಶೇಷ ಉಳಿತಾಯ ಯೋಜನೆ ಆರಂಭಿಸಲಾಗುವುದು ಎಂದರು.
2:52 PM
Feb 1, 2023
ಆರ್ಥಿಕತೆ ವೇಗದ ಬೆಳವಣಿಗೆ
ಆರ್ಥಿಕತೆ ವೇಗದ ಬೆಳವಣಿಗೆ
ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ
2:51 PM
Feb 1, 2023
ಕಳೆದ ವರ್ಷ ನಾವು 1.75 ಲಕ್ಷ ಕೋಟಿ ಆದಾಯ ತೆರಿಗೆ ಕಟ್ಟಿದ್ದೇವೆ. ಆದರೆ ಬಜೆಟ್‌ನಲ್ಲಿ 325 ಕೋಟಿ ರೂ. ಮಾತ್ರ ನಿಗದಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
2:44 PM
Feb 1, 2023
ಈ ಬಾರಿಯ ಬಜೆಟ್‌ನಲ್ಲಿ ರಸ್ತೆ ಸಾರಿಗೆ, ಹೆದ್ದಾರಿ ವಲಯಕ್ಕೆ 270,434 ಕೋಟಿ, ರೈಲ್ವೆ ವಲಯಕ್ಕೆ 241,267 ಕೋಟಿ, ಗೃಹ ಇಲಾಖೆಗೆ 196,034 ಕೋಟಿ, ಗ್ರಾಮೀಣಾಭಿವೃದ್ಧಿಗೆ 159,964 ಕೋಟಿ ಅನುದಾನ ಹಂಚಿಕೆಯಾಗಿದೆ.
2:41 PM
Feb 1, 2023
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ 2023-24ನೇ ಸಾಲಿನ ಬಜೆಟ್‌ನಲ್ಲಿ ಅತೀ ಹೆಚ್ಚು ಎಂದರೆ 593,537 ಕೋಟಿ ರೂ. ಅನುದಾನ ರಕ್ಷಣಾ ವಲಯಕ್ಕೆ ಹಂಚಿಕೆಯಾಗಿದೆ.
2:38 PM
Feb 1, 2023
ಕೇಂದ್ರ ಬಜೆಟ್‌ ಬಗ್ಗೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್ ಭಾರತದ ಮಧ್ಯಮವರ್ಗದವರ ಪಾಲಿಗೆ ನೆಮ್ಮದಿಯ ನಿಟ್ಟುಸಿರು ಮೂಡಿಸಿದ್ದು ಆತ್ಮನಿರ್ಭರಭಾರತವು ಮೇಕ್ಇನ್ಇಂಡಿಯಾ ಜೊತೆ ಸಾಗಲು ಪೂರಕವಾಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಒದಗಿಸಿರುವುದು ಮಧ್ಯ ಕರ್ನಾಟಕದ ಜನತೆಗೆ ದೊಡ್ಡ ಕೊಡುಗೆಯಾಗಿದೆ. ಮತ್ಸ್ಯ ಸಂಪದ ಯೋಜನೆಗೆ 6000 ಕೋಟಿಯನ್ನು ಒದಗಿಸಿರುವುದು ಭಾರತೀಯ ಮತ್ಸ್ಯೋದ್ಯಮದ ಬೆಳವಣಿಗೆಗೆ ಅತ್ಯಂತ ಪೂರಕವಾಗಿದ್ದು ಮೀನುಗಾರರ ಬದುಕನ್ನು ಮತ್ತಷ್ಟು ಹಸನುಗೊಳಿಸಲಿದೆ ಎಂದು ಹೇಳಿದ್ದಾರೆ.
2:33 PM
Feb 1, 2023
ಆದಾಯ ತೆರಿಗೆ ಮಿತಿ
ಆದಾಯ ತೆರಿಗೆ ಮಿತಿ
ಬಜೆಟ್ ಬಗ್ಗೆ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
2:23 PM
Feb 1, 2023
ಇಂದಿನ ಬಜೆಟ್ 'ಕನಸಿನ ವ್ಯಾಪಾರಿ'ಯಂತೆ- ಜೆಡಿಯು ಸಂಸದ
ಇಂದಿನ ಬಜೆಟ್ 'ಕನಸಿನ ವ್ಯಾಪಾರಿ'ಯಂತೆ- ಜೆಡಿಯು ಸಂಸದ
2023ರ ಬಜೆಟ್ನಲ್ಲಿ ಏನೂ ಇಲ್ಲ. ಇದು 'ಕನಸಿನ ವ್ಯಾಪಾರಿ'ಯಂತೆ. ಕನಸಿನ ನಂತರ ನೀವು ಎಚ್ಚರಗೊಂಡಾಗ ಏನೂ ನನಸಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಬಜೆಟ್ ಬಗ್ಗೆ ಅಸಮಧಾನಗೊಂಡರು.
2:12 PM
Feb 1, 2023
ಬಜೆಟ್‌ ಬಗ್ಗೆ ಭಾರತಿ ಪ್ರವೀಣ್ ಪವಾರ್ ಅಭಿಪ್ರಾಯ
ಬಜೆಟ್‌ ಬಗ್ಗೆ ಭಾರತಿ ಪ್ರವೀಣ್ ಪವಾರ್ ಅಭಿಪ್ರಾಯ
ತಂತ್ರಜ್ಞಾನ, ಆರೋಗ್ಯ ಕ್ಷೇತ್ರ ಮತ್ತು ಚಿಕಿತ್ಸೆಯ ಅಗತ್ಯತೆಗಳ ಮೇಲೆ ಬಜೆಟ್ ಕೇಂದ್ರೀಕರಿಸಿದೆ. ಐಸಿಎಂಆರ್ ಪ್ರಯೋಗಾಲಯಗಳ ಅಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನದ ಬಗ್ಗೆಯೂ ಗಮನಹರಿಸಲಾಗಿದೆ. 2023ರ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಹೇಳಿದರು.
2:08 PM
Feb 1, 2023
ತೆರಿಗೆ ವಿನಾಯ್ತಿ ಮಧ್ಯಮ ವರ್ಗದವರ ಪಾಲಿಗೆ ನೀರ ಹನಿ ಇದ್ದಂತೆ- ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ತೆರಿಗೆ ವಿನಾಯ್ತಿ ಮಧ್ಯಮ ವರ್ಗದವರ ಪಾಲಿಗೆ ನೀರ ಹನಿ ಇದ್ದಂತೆ- ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ಹಣದುಬ್ಬರ, ನಿರುದ್ಯೋಗಕ್ಕೆ ಬಜೆಟ್‌ನಲ್ಲಿ ಪರಿಹಾರವಿಲ್ಲ. ಬಜೆಟ್‌ನಲ್ಲಿ ಕೇವಲ ಪದಗಳು ಮತ್ತು ವಾಕ್ಚಾತುರ್ಯಗಳು ಕಂಡುಬಂದಿವೆ. ಬೃಹತ್ ಕೈಗಾರಿಕೋದ್ಯಮಿಗಳಿಗೆ ಮಾತ್ರ ಬಜೆಟ್‌ನಿಂದ ಲಾಭ ಸಿಕ್ಕಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿ 7 ಲಕ್ಷದವರೆಗಿನ ತೆರಿಗೆ ವಿನಾಯಿತಿ ಅತ್ಯಲ್ಪವಾಗಿದೆ. ಮಧ್ಯಮ ವರ್ಗದವರ ಪಾಲಿಗೆ ನೀರ ಹನಿ ಇದ್ದಂತೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಬಜೆಟ್‌ ಬಗ್ಗೆ ಬೇಸರ ವ್ಯಕ್ತಪಡಿಸಿದರು.
2:01 PM
Feb 1, 2023
ಇದೊಂದು ಕ್ರಾಂತಿಕಾರಿ ಬಜೆಟ್- ಹರಿಯಾಣ ಸಿಎಂ
ಇದೊಂದು ಕ್ರಾಂತಿಕಾರಿ ಬಜೆಟ್- ಹರಿಯಾಣ ಸಿಎಂ
ಇಂದಿನ ಬಜೆಟ್‌ ಬಗ್ಗೆ ಹರಿಯಾಣ ಸಿಎಂ ಎಂಎಲ್ ಖಟ್ಟರ್ ಅಭಿಪ್ರಾಯ ನೀಡಿದ್ದಾರೆ. ಇದೊಂದು ಕ್ರಾಂತಿಕಾರಿ ಬಜೆಟ್ ಆಗಿದ್ದು, ಸಮಾಜದ ಪ್ರತಿಯೊಂದು ವರ್ಗಕ್ಕೂ ಪರಿಹಾರ ನೀಡಿದೆ. ಆದಾಯ ತೆರಿಗೆಯ ಹೊಸ ದರಗಳು ಜನರಿಗೆ ಪರಿಹಾರವನ್ನು ನೀಡುತ್ತವೆ. ಈ ಬಾರಿಯ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ವೆಚ್ಚವನ್ನು ಶೇ.66ರಷ್ಟು ಹೆಚ್ಚಿಸಲಾಗಿದೆ. ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಹರಿಯಾಣ ಸಿಎಂ ಎಂಎಲ್ ಖಟ್ಟರ್ ಹೇಳಿದರು.
1:58 PM
Feb 1, 2023
2023ರ ಬಜೆಟ್ ಬಗ್ಗೆ ಸಚಿವ ಡಾ.ಕೆ.ಸುಧಾಕರ್‌ ಮೆಚ್ಚುಗೆ
2023ರ ಬಜೆಟ್ ಬಗ್ಗೆ ಸಚಿವ ಡಾ.ಕೆ.ಸುಧಾಕರ್‌ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಮ ವರ್ಗದ ಜನರ ಅವಶ್ಯಕತೆಗೆ ಪೂರಕವಾದ ಹಾಗೂ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್‌ ನೀಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್‌ ಬಜೆಟ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1:55 PM
Feb 1, 2023
ರಕ್ಷಣಾ ಸಚಿವಾಲಯಕ್ಕೆ ರೂ 5.94 ಲಕ್ಷ ಕೋಟಿ ಮೀಸಲು
ರಕ್ಷಣಾ ಸಚಿವಾಲಯಕ್ಕೆ ರೂ 5.94 ಲಕ್ಷ ಕೋಟಿ ಮೀಸಲು
ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ರೂ 5.94 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕಿಂತ 13% ಹೆಚ್ಚಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ರೂ. 5.94 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದು ಕಳೆದ ವರ್ಷ ಕೇಂದ್ರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಕ್ಕಿಂತ ಶೇ.13 ರಷ್ಟು ಹೆಚ್ಚಾಗಿದೆ.
1:43 PM
Feb 1, 2023
'ತೆರಿಗೆ ಕಡಿತ ಸ್ವಾಗತಾರ್ಹ'- ಕಾರ್ತಿ ಚಿದಂಬರಂ
'ತೆರಿಗೆ ಕಡಿತ ಸ್ವಾಗತಾರ್ಹ'- ಕಾರ್ತಿ ಚಿದಂಬರಂ
'ನಾನು ಕಡಿಮೆ ತೆರಿಗೆ ಪದ್ಧತಿಯಲ್ಲಿ ನಂಬಿಕೆಯುಳ್ಳವನು. ಆದ್ದರಿಂದ, ಯಾವುದೇ ತೆರಿಗೆ ಕಡಿತ ಸ್ವಾಗತಾರ್ಹ. ಏಕೆಂದರೆ ಜನರ ಕೈಗೆ ಹೆಚ್ಚಿನ ಹಣವನ್ನು ನೀಡುವುದು ಆರ್ಥಿಕತೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ' ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದರು.
1:41 PM
Feb 1, 2023
2023ರ ಬಜೆಟ್ ಶ್ಲಾಘಿಸಿದ ರಾಜನಾಥ್ ಸಿಂಗ್
2023ರ ಬಜೆಟ್ ಶ್ಲಾಘಿಸಿದ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2023 ರ ಕೇಂದ್ರ ಬಜೆಟ್ ಅನ್ನು ಶ್ಲಾಘಿಸಿದರು. "ದೇಶದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ನಿರೀಕ್ಷಿಸಲಾಗಿದೆ. 2023ರ ಬಜೆಟ್ ಕೆಲವು ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದುವ ನಮ್ಮ ಗುರಿಯನ್ನು ಸಾಧಿಸುವತ್ತ ನಮ್ಮನ್ನು ಕರೆದೊಯ್ಯುತ್ತದೆ" ಎಂದು ಹೇಳಿದರು.
1:38 PM
Feb 1, 2023
'ಮೂಲಭೂತ ಪ್ರಶ್ನೆಗಳಿಗೆ ಉತ್ತರವಿಲ್ಲ': ಬಜೆಟ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್
'ಮೂಲಭೂತ ಪ್ರಶ್ನೆಗಳಿಗೆ ಉತ್ತರವಿಲ್ಲ': ಬಜೆಟ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್
2023 ರ ಕೇಂದ್ರ ಬಜೆಟ್‌ನಲ್ಲಿ "ಕೆಲವು ಒಳ್ಳೆಯ ವಿಷಯಗಳಿವೆ" ಎಂದು ಒಪ್ಪಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ಬಜೆಟ್‌ನಲ್ಲಿ MNREGA, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ಹೇಳಿದರು. "ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ" ಎಂದು ತರೂರ್ ಹೇಳಿದರು.
1:31 PM
Feb 1, 2023
ನಿಫ್ಟಿ 295 ಅಂಕ ಏರಿಕೆ, ಸೆನ್ಸೆಕ್ಸ್ 1175 ಅಂಕ ಜಿಗಿತ
ನಿಫ್ಟಿ 295 ಅಂಕ ಏರಿಕೆ, ಸೆನ್ಸೆಕ್ಸ್ 1175 ಅಂಕ ಜಿಗಿತ
ಕೇಂದ್ರ ಬಜೆಟ್‌ಗೆ ಮಾರುಕಟ್ಟೆ ಪ್ರತಿಕ್ರಿಯೆಯಿಂದಾಗಿ ನಿಫ್ಟಿ 295 ಅಂಕ ಏರಿಕೆಯಾಗಿದ್ದಿ, ಸೆನ್ಸೆಕ್ಸ್ 1175 ಅಂಕ ಜಿಗಿತ ಕಂಡಿದೆ.
1:21 PM
Feb 1, 2023
ತೆರಿಗೆ ವಿನಾಯ್ತಿ!
ತೆರಿಗೆ ವಿನಾಯ್ತಿ!
ತೆರಿಗೆ ಪದ್ದತಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಉದ್ಯೋಗಿಗಳು 7 ಲಕ್ಷದವರೆಗೆ ಆದಾಯವನ್ನು ಹೊಂದಿದ್ದರೆ ಅಂತವರಿಗೆ ಯಾವುದೇ ತೆರಿಗೆ ಇರುವುದಿಲ್ಲ. ಇದರಿಂದ 33800 ಉಳಿತಾಯವಾಗಲಿದೆ. 8 ಲಕ್ಷದವರೆಗೆ ಆದಾಯ ಇದ್ದರೆ 35000 ತೆರಿಗೆ ವಿಧಿಸಬೇಕಾಗುತ್ತದೆ ಇದರಿಂದ 11800 ಉಳಿತಾಯವಾಗಲಿದೆ. ಒಂದು ವೇಳೆ ಉದ್ಯೋಗಿಗಳಿಗೆ 9 ಲಕ್ಷದವರೆಗೆ ಆದಾಯ ಇದ್ದರೆ 4500 ತೆರಿಗೆ ವಿಧಿಸಬೇಕಾಗುತ್ತದೆ, ಇದರಿಂದ 17,400 ಉಳಿತಾಯವಾಗಲಿದೆ. ಜೊತೆಗೆ 10 ಲಕ್ಷದವರೆಗೆ ಆದಾಯ ಇದ್ದರೆ 60000 ತೆರಿಗೆ ವಿಧಿಸಬೇಕಾಗುತ್ತದೆ ಇದರಿಂದ 18000 ಉಳಿತಾಯವಾಗಲಿದೆ. 12ಲಕ್ಷದವರೆಗೆ ಆದಾಯ ಇದ್ದರೆ 90000 ತೆರಿಗೆ ವಿಧಿಸಬೇಕಾಗುತ್ತದೆ ಇದರಿಂದ 29000 ಉಳಿತಾಯವಾಗಲಿದೆ. 15 ಲಕ್ಷದವರೆಗೆ ಆದಾಯ ಇದ್ದರೆ 150000ತೆರಿಗೆ ವಿಧಿಸಬೇಕಾಗುತ್ತದೆ ಇದರಿಂದ 45000 ಉಳಿತಾಯವಾಗಲಿದೆ.
12:55 PM
Feb 1, 2023
ವ್ಯಾಪಾರ ವಹಿವಾಟುಗಳಿಗೆ PAN ಕಾರ್ಡ್
ವ್ಯಾಪಾರ ವಹಿವಾಟುಗಳಿಗೆ PAN ಕಾರ್ಡ್
ಡಿಜಿಟಲ್ ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಒಂದೇ ಸಾಮಾನ್ಯ ಗುರುತಿಸುವಿಕೆ ಆಗಿರಬಹುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕ್ಲಿಯರೆನ್ಸ್‌ಗಳು, ನೋಂದಣಿಗಳು ಮತ್ತು ಪರವಾನಗಿಗಳಿಗೆ ಅರ್ಜಿ ಸಲ್ಲಿಸುವಾಗ PAN ರೂಪದಲ್ಲಿ ಒಂದೇ ಸಾಮಾನ್ಯ ಗುರುತಿಸುವಿಕೆ ಹೂಡಿಕೆದಾರರಿಗೆ ಕಾರ್ಯವಿಧಾನಗಳನ್ನು ಸರಳಗೊಳಿಸುತ್ತದೆ ಎಂದು ಹೇಳಿದರು.
12:53 PM
Feb 1, 2023
ಬಜೆಟ್ 2023: ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ
ಬಜೆಟ್ 2023: ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ
ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪಾಡ್‌ಗಳು, ವಾಟರ್ ಏರೋ ಡ್ರೋನ್‌ಗಳು, ಸುಧಾರಿತ ಲ್ಯಾಂಡಿಂಗ್ ಮೈದಾನಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಎಫ್‌ಎಂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜೊತೆಗೆ ಪರಿಸರ ಸ್ನೇಹಿ ನಡವಳಿಕೆಯನ್ನು ಉತ್ತೇಜಿಸಲು ವ್ಯಕ್ತಿಗಳು ಮತ್ತು ಕಂಪನಿಗಳ ಸ್ಪಂದಿಸುವ ಕ್ರಮಗಳಿಗಾಗಿ ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ಸೂಚಿಸಲಾಗುವುದು ಎಂದು ಎಫ್‌ಎಂ ನಿರ್ಮಲಾ ಸೀತಾರಾಮನ್ ಹೇಳಿದರು.
12:41 PM
Feb 1, 2023
ಸೈಕಲ್, ಟಿವಿ ಪ್ಯಾನಲ್ ಅಗ್ಗ
ಸೈಕಲ್, ಟಿವಿ ಪ್ಯಾನಲ್ ಅಗ್ಗ
ಸೈಕಲ್, ಟಿವಿ ಪ್ಯಾನಲ್, ಜವಳಿ, ಗ್ಲಿಸರಿನ್ ಅಗ್ಗವಾಗಲಿದ್ದು, ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆ(MIS) ಹೂಡಿಕೆ ಮಿತಿ 9 ಲಕ್ಷಕ್ಕೆ ಹೆಚ್ಚಳವಾಗಲಿದೆ.
12:38 PM
Feb 1, 2023
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು
ಮಹಿಳಾ ಸಮ್ಮಾನ್‌ನಲ್ಲಿ ಎರಡು ಲಕ್ಷ ಠೇವಣಿ, ಜಂಟಿ ಖಾತೆಯಲ್ಲಿ 9-15 ಲಕ್ಷ ರವರೆಗೆ ಠೇವಣಿಗೆ ಅವಕಾಶ ನೀಡಲಾಗಿದೆ. ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟನೆ ಮಾಡಲಾಗಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ. 7.5 ಬಡ್ಡಿ ನಿಗದಿ ಮಾಡಲಾಗಿದೆ. ಮುಂದಿನ 3 ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಕೇಂದ್ರದಿಂದ ನೆರವು ನೀಡಲಾಗಿದೆ.
12:30 PM
Feb 1, 2023
7 ಲಕ್ಷದವರೆಗೆ ತೆರಿಗೆ ವಿನಾಯಿತಿ
7 ಲಕ್ಷದವರೆಗೆ ತೆರಿಗೆ ವಿನಾಯಿತಿ
ಹೊಸ ತೆರಿಗೆ ಪದ್ದತಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಮೋದಿ ಜನಸಮಾನ್ಯರ ತೆರಿಗೆ ಭಾರವನ್ನು ಇಳಿಸಿದ್ದಾರೆ. ಮಧ್ಯಮ ವರ್ಗಕ್ಕೆ ಕೇಂದ್ರ ಬಜೆಟ್ ಬಂಪರ್ ಆಫರ್ ನೀಡಿದೆ. ಮೂರು ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇರುವುದಿಲ್ಲ. 3 ರಿಂದ 6 ಲಕ್ಷದವರೆಗೆ 5 ಪರ್ಸೆಂಟ್ ತೆರಿಗೆ, 6-9 ಲಕ್ಷದವರೆಗೆ 10 ಪರ್ಸೆಂಟ್ ತೆರಿಗೆ, 9ರಿಂದ 12ಲಕ್ಷದವರೆಗೆ 15 ಪರ್ಸೆಂಟ್ ತೆರಿಗೆ, 12ರಿಂದ 15ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ ಇರುತ್ತದೆ.
12:22 PM
Feb 1, 2023
ದೇಶದಲ್ಲಿ ಚಿನ್ನ ಪ್ರಿಯರಿಗೆ ಮತ್ತೆ ಶಾಕ್
ದೇಶದಲ್ಲಿ ಚಿನ್ನ ಪ್ರಿಯರಿಗೆ ಮತ್ತೆ ಶಾಕ್
ಬಂಗಾರ, ವಜ್ರ, ಬೆಳ್ಳಿ ಚಿನ್ನ ಸೇರಿದಂತೆ ರೆಡಿಮೇಡ್ ಬಟ್ಟೆ, ಸಿಗರೇಟ್ ದುಬಾರಿಯಾಗಲಿದೆ. ಮೊಬೈಲ್ ಫೋನ್ ಲೆನ್ಸ್ ಆಮದು ಸುಂಕ ರದ್ದಾಗಲಿದ್ದು, ಮೊಬೈಲ್, ಕ್ಯಾಮರಾ, ಟಿವಿ ಬೆಲೆ ಇಳಿಕೆಯಾಗಲಿದೆ. ಜೊತೆಗೆ ಬ್ಯಾಟರಿ ಮೇಲಿನ ಕಸ್ಟಮ್ಸ್ ದರ ಇಳಿಕೆಯಾಗಲಿದೆ.
12:14 PM
Feb 1, 2023
ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು, ಸಹಾಯಕ ಸಿಬ್ಬಂದಿ ನೇಮಕ
ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು, ಸಹಾಯಕ ಸಿಬ್ಬಂದಿ ನೇಮಕ
3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲಾ ನಗರಗಳು ಮತ್ತು ಪಟ್ಟಣಗಳನ್ನು ಮ್ಯಾನ್‌ಹೋಲ್‌ ನಿಂದ ಮೆಷಿನ್ ಹೋಲ್ ಮೋಡ್‌ಗೆ ಪರಿವರ್ತನೆ ಮಾಡಲು ಸೆಪ್ಟಿಕ್ಸ್ ಟ್ಯಾಂಕ್‌ಗಳು ಮತ್ತು ಒಳಚರಂಡಿಗಳ 100% ಯಾಂತ್ರಿಕ ಡಿ-ಸ್ಲಡ್ಜಿಂಗ್ ಅನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
12:08 PM
Feb 1, 2023
ಕುಶಲಕರ್ಮಿಗಳಿಗಾಗಿ ಪ್ರಧಾನ ಮಂತ್ರಿ ವಿಶ್ವ ಕರ್ಮ ಕೌಶಲ್ ಸಮ್ಮಾನ್
ಕುಶಲಕರ್ಮಿಗಳಿಗಾಗಿ ಪ್ರಧಾನ ಮಂತ್ರಿ ವಿಶ್ವ ಕರ್ಮ ಕೌಶಲ್ ಸಮ್ಮಾನ್
ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ನೆರವು ನೀಡುವ ಪ್ಯಾಕೇಜ್ ಅನ್ನು ಪ್ರಧಾನಮಂತ್ರಿ ವಿಶ್ವ ಕರ್ಮ ಕೌಶಲ್ ಸಮ್ಮಾನ್ ಎಂಬ ಪರಿಕಲ್ಪನೆಯೊಂದಿಗೆ ಮಾಡಲಾಗಿದೆ ಎಂದು ಎಫ್‌ಎಂ ನಿರ್ಮಲಾ ಸೀತಾರಾಮನ್ ಹೇಳಿದರು. ಇದು ಎಂಎಸ್‌ಎಂಇ ಮೌಲ್ಯ ಸರಪಳಿಯೊಂದಿಗೆ ಸಂಯೋಜಿಸುವ ಮೂಲಕ ಅವರ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ತಲುಪುವಿಕೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.
12:05 PM
Feb 1, 2023
ಯುವಕರಿಗೆ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರ ಸ್ಥಾಪನೆ
ಯುವಕರಿಗೆ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರ ಸ್ಥಾಪನೆ
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಪ್ರಾರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಹೆಚ್ಚಿಸಲು ಯುವಕರಿಗೆ ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
12:04 PM
Feb 1, 2023
'ಜನಭಾಗಿದಾರಿ' ಮೂಲಕ ಬೆಳವಣಿಗೆ
'ಜನಭಾಗಿದಾರಿ' ಮೂಲಕ ಬೆಳವಣಿಗೆ
ಕೇಂದ್ರದ ಬಜೆಟ್ ನಾಗರಿಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಬಲವಾದ ಪ್ರಚೋದನೆಯನ್ನು ನೀಡುತ್ತದೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
12:01 PM
Feb 1, 2023
ಪ್ರವಾಸೋದ್ಯಮಕ್ಕೆ ಹೊಸ ಯೋಜನೆ ಘೋಷಣೆ
ಪ್ರವಾಸೋದ್ಯಮಕ್ಕೆ ಹೊಸ ಯೋಜನೆ ಘೋಷಣೆ
ಈ ಬಾರಿ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೂ ಒತ್ತು ನೀಡಲಾಗಿದೆ. ಸರಕಾರಿ ಏಜನ್ಸಿಗಳ ಎಲ್ಲಾ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ (common identifier) ಬಳಸಲು ಸೂಚನೆಯನ್ನು ನೀಡಲಾಗುವುದು. ದೇಖೋ ಅಪ್ನಾ ದೇಶ್ ಎನ್ನುವ ಪ್ರವಾಸೋದ್ಯಮಕ್ಕೆ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದು ವಿತ್ತ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದರು.
11:55 AM
Feb 1, 2023
ಭದ್ರಾ ಮೇಲ್ಡಂಡೆ ಯೋಜನೆಗೆ ರೂ. 5300ಕೋಟಿ ಅನುದಾನ- ಸಿಎಂ ಬೊಮ್ಮಾಯಿ ಟ್ವೀಟ್
ಭದ್ರಾ ಮೇಲ್ಡಂಡೆ ಯೋಜನೆಗೆ ರೂ. 5300ಕೋಟಿ ಅನುದಾನ- ಸಿಎಂ ಬೊಮ್ಮಾಯಿ ಟ್ವೀಟ್
ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ಡಂಡೆ ಯೋಜನೆಗೆ ರೂ. 5300ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಮನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
11:49 AM
Feb 1, 2023
ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ತಂತ್ರಜ್ಞಾನ ಸಂಯೋಜನೆ
ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ತಂತ್ರಜ್ಞಾನ ಸಂಯೋಜನೆ
ಕೃಷಿ ಕ್ಷೇತ್ರವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಸಂಯೋಜಿಸಲಾಗುವುದು. ಹಣಕಾಸು ಸಚಿವರು ಘೋಷಿಸಿದ ಕೃಷಿ ಕ್ರಮಗಳು ತಂತ್ರಜ್ಞಾನ ಮತ್ತು ಡಿಜಿಟಲ್ ಪ್ರಗತಿಯನ್ನು ಹತೋಟಿಗೆ ತರುತ್ತವೆ. -ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು. - ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ ಅನ್ನು ಶ್ರೇಷ್ಠತೆಯ ಕೇಂದ್ರವಾಗಿ ಬೆಂಬಲಿಸಲಾಗುತ್ತದೆ. - ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಅಂತರ್ಗತ ರೈತ-ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ. ಕೃಷಿ ಒಳಹರಿವು, ಮಾರುಕಟ್ಟೆ ಇಂಟೆಲ್, ಕೃಷಿ ಉದ್ಯಮಕ್ಕೆ ಬೆಂಬಲ, ಸ್ಟಾರ್ಟ್‌ಅಪ್‌ಗಳಿಗೆ ಸುಧಾರಿತ ಪ್ರವೇಶಕ್ಕೆ ಸಹಾಯ ಮಾಡುತ್ತದೆ. - ಕೃಷಿ ವೇಗವರ್ಧಕ ನಿಧಿಯನ್ನು ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಸ್ಥಾಪಿಸಲಾಗುವುದು. ರೈತರ ಸವಾಲುಗಳಿಗೆ ನವೀನ ಮತ್ತು ಕೈಗೆಟುಕುವ ಪರಿಹಾರಗಳನ್ನು ತರುತ್ತದೆ. ಲಾಭದಾಯಕತೆಯನ್ನು ಹೆಚ್ಚಿಸುತ್ತದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ತರುತ್ತದೆ.
11:45 AM
Feb 1, 2023
ಬಂಡವಾಳ ಹೂಡಿಕೆ ವೆಚ್ಚ 10 ಲಕ್ಷ ಕೋಟಿಗೆ ಹೆಚ್ಚಳ
ಬಂಡವಾಳ ಹೂಡಿಕೆ ವೆಚ್ಚ 10 ಲಕ್ಷ ಕೋಟಿಗೆ ಹೆಚ್ಚಳ
2023-24ರಲ್ಲಿ ಬಂಡವಾಳ ಹೂಡಿಕೆ ವೆಚ್ಚವನ್ನು 33% ರಿಂದ 10 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.3 ಪ್ರತಿಶತದಷ್ಟಿದೆ.
11:43 AM
Feb 1, 2023
ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಪ್ರಸ್ತಾಪನೆ
ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಪ್ರಸ್ತಾಪನೆ
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ನಷ್ಟವನ್ನು ತುಂಬಲು ಮಕ್ಕಳು ಮತ್ತು ಯುವಕರಿಗೆ ಉಪಯೋಗವಾಗುವಂತೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸುವ ಪ್ರಸ್ತಾಪನೆಯಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
11:41 AM
Feb 1, 2023
ಮೋದಿ..ಮೋದಿ... ಎಂದು ಬಿಜೆಪಿ ಸಂಸದರ ಘೋಷಣೆಗೆ ವಿಪಕ್ಷಗಳ ತಿರುಗೇಟು
ಮೋದಿ..ಮೋದಿ... ಎಂದು ಬಿಜೆಪಿ ಸಂಸದರ ಘೋಷಣೆಗೆ ವಿಪಕ್ಷಗಳ ತಿರುಗೇಟು
ಬಜೆಟ್ ಮಂಡನೆಯ ವೇಳೆ 'ಮೋದಿ..ಮೋದಿ' ಎನ್ನುವ ಬಿಜೆಪಿ ಸಂಸದರ ಘೋಷಣೆ ಮಾಡಿದರು. ಈ ವೇಳೆ ವಿಪಕ್ಷಗಳ ಸದಸ್ಯರು ಮೋದಿ.. ಮೋದಿ ಎಂಬ ಘೋಷಣೆಯನ್ನು ವಿರೋಧಿಸಿ 'ಭಾರತ್ ಜೋಡೋ' ಎಂದು ಘೋಷಣೆಗಳನ್ನು ಕೂಗಿದರು. 'ಮೋದಿ..ಮೋದಿ' ಎಂಬ ಘೋಷಣೆಗೆ 'ಭಾರತ್ ಜೋಡೋ' ಎಂಬ ಘೋಷಣೆಯೊಂದಿಗೆ ವಿಪಕ್ಷಗಳ ತಿರುಗೇಟು ನೀಡಿವೆ.
11:36 AM
Feb 1, 2023
107 ನರ್ಸಿಂಗ್ ಕಾಲೇಜುಗಳ ಸ್ಥಾಪನೆ
107 ನರ್ಸಿಂಗ್ ಕಾಲೇಜುಗಳ ಸ್ಥಾಪನೆ
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. 107 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತದೆ.
11:31 AM
Feb 1, 2023
ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ
ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ
ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನ ಗೋಧಿ ಎಂಬ ವಾಕ್ಯದೊಂದಿಗೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಮಾಡಲಾಗುತ್ತದೆ. ಹೈದರಾಬಾದ್‌ನಲ್ಲಿ ಶ್ರೀ ಅನ್ನ ಹೊಸ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಸಿರು ಕ್ರಾಂತಿ, ಸರ್ವರನ್ನ ಒಳಗೊಂಡ ಬೆಳವಣಿಗೆ, ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
11:24 AM
Feb 1, 2023
7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ
7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ
ಏಳು ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ ಮಾಡಲಾಗಿದೆ. ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಯುವ ಸಬಲೀಕರಣ, ಆರ್ಥಿಕ ಸುಧಾರಣೆ, ಅಭಿವೃದ್ಧಿ, ಎಲ್ಲರಿಗೂ ಸಮಾನ ಸವಲತ್ತು, ಪರಿಸರ ಸ್ನೇಹಿ ಅಭಿವೃದ್ಧಿಗೆ ಕೇಂದ್ರದ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.
11:16 AM
Feb 1, 2023
ಮಹಿಳೆಯರ ಆರ್ಥಿಕ ಸಬಲೀಕರಣ ಗುರಿ
ಮಹಿಳೆಯರ ಆರ್ಥಿಕ ಸಬಲೀಕರಣ ಗುರಿ
81 ಲಕ್ಷ ಸ್ವಸಹಾಯ ಗುಂಪುಗಳಿಗೆ ಸಹಾಯ ದನ ಮೀಸಲಿಡಲಾಗುತ್ತದೆ. ಮಹಿಳೆಯರ ಆರ್ಥಿಕ ಸಬಲೀಕರಣ ಗುರಿಯನ್ನು ಬಜೆಟ್ ಹೊಂದಿದೆ. ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಅಡಿ ಕರಕುಶಲಕರ್ಮಿಗಳಿಗೆ ನೂತನ ಯೋಜನೆಗಳನ್ನು ರೂಪಿಸಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲಾಗುತ್ತದೆ. ಪಿಎಂ ವಿಕಾಸ್ ಹೊಸ ಯೋಜನೆ ಮಾಡಲಾಗುತ್ತದೆ.
11:10 AM
Feb 1, 2023
2023ರ ಬಜೆಟ್ ಬಡವರ, ಮಧ್ಯಮ ವರ್ಗದ ಪರವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
2023ರ ಬಜೆಟ್ ಬಡವರ, ಮಧ್ಯಮ ವರ್ಗದ ಪರವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಲೋಕಸಭೆಯಲ್ಲಿ ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಸಂಸದೀಯ ವ್ಯವಹಾರಗಳ ಪ್ರಲ್ಹಾದ್ ಜೋಶಿ, ಕೇಂದ್ರ ಬಜೆಟ್ 2023-24, "ಇದು ಅತ್ಯುತ್ತಮ ಬಜೆಟ್ ಆಗಿರುತ್ತದೆ. ಇದು ಬಡವರು, ಮಧ್ಯಮ ವರ್ಗದ ಪರವಾದ ಬಜೆಟ್ ಆಗಿರುತ್ತದೆ" ಎಂದು ಹೇಳಿದರು.
11:08 AM
Feb 1, 2023
2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಮುಂದಿನ ವರ್ಷಕ್ಕೆ ಯೋಜನೆ ವಿಸ್ತರಣೆ ಮಾಡಲಾಗುತ್ತದೆ.
11:03 AM
Feb 1, 2023
ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಬಜೆಟ್ ಬಗ್ಗೆ  ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಭಾರತದ ಆರ್ಥಿಕತೆಯು 6.8% ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಜನಪರವಾದ ಬಜೆಟ್ ಆಗಿದ್ದು ಅದು ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದರು.
10:57 AM
Feb 1, 2023
ಬಜೆಟ್ ಪ್ರತಿಗಳಿರುವ ಚೀಲಗಳ ಪರಿಶೀಲನೆ
ಬಜೆಟ್ ಪ್ರತಿಗಳಿರುವ ಚೀಲಗಳ ಪರಿಶೀಲನೆ
ಇಡೀ ದೇಶವೇ ಭಾರತದಲ್ಲಿ ಕೇಂದ್ರ ಬಜೆಟ್ ಮಂಡನೆಯನ್ನು ಎದುರು ನೋಡುತ್ತಿದೆ. ಸಂಸತ್ತಿಗೆ ಬಜೆಟ್ ಪ್ರತಿಗಳನ್ನು ತರಲಾಗಿದ್ದು ಶ್ವಾನಗಳಿಂದ ಬಜೆಟ್ ಪ್ರತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಜೆಟ್ ಪ್ರತಿಗಳಿದ್ದ ಚೀಲಗಳನ್ನು ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಶ್ವಾನಗಳಿಂದ ಬಜೆಟ್ ಚೀಲಗಳನ್ನು ಪರಿಶೀಲಿಸಿದ ಬಳಿಕ ಅವುಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗುತ್ತದೆ.
10:52 AM
Feb 1, 2023
ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ?
ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ?
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಧನಸಾಹಯ, ಗ್ರಾಮಗಳಲ್ಲಿ ಪಶಸಂಗೋಪನೆಗೆ, ಕೃಷಿ ಹಾಗೂ ಶಿಕ್ಷಣ ಪ್ರೋತ್ಸಾಹ, ಮಹದಾಯಿ ಮೇಕೇದಾಟು ಎತ್ತಿನಹೊಳೆ ಯೋಜನೆಗೆ ನೆರವು ನೀಡುವ ಸಾಧ್ಯತೆ ಇದೆ.
10:50 AM
Feb 1, 2023
ಮೋದಿ ಬಜೆಟ್ ಲೆಕ್ಕಾಚಾರ
ಮೋದಿ ಬಜೆಟ್ ಲೆಕ್ಕಾಚಾರ
ಈ ಬಾರಿ ಮೋದಿ ಬಜೆಟ್‌ನಲ್ಲಿ ನವ ಭಾರತವೇ ಫೋಕಸ್ ಮಾಡಲಾಗಿದೆ ಎನ್ನಲಾಗುತ್ತಿದೆ. ಬಜೆಟ್‌ನಲ್ಲಿ ಮದ್ಯಪಾನ, ಸಿಗರೇಟ್, ಐಷಾರಾಮಿ ಕಾರುಗಳು, ಟಿವಿ, ಫ್ರಿಡ್ಜ್‌, ತಂಬಾಕು ಉತ್ಪನ್ನಗಳ ಬೆಲೆ ದುಬಾರಿಯಾಗುವ ಸಾದ್ಯತೆ ಇದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿಯಾಗುವ ನಿರೀಕ್ಷೆ ಇದೆ.
10:44 AM
Feb 1, 2023
ಸಂಸತ್ತಿಗೆ ಬಜೆಟ್ ಪ್ರತಿಗಳನ್ನು ತರಲಾಯಿತು
ಸಂಸತ್ತಿಗೆ ಬಜೆಟ್ ಪ್ರತಿಗಳನ್ನು ತರಲಾಯಿತು
ದೆಹಲಿ: ಇಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಬೆನ್ನಲ್ಲೆ ಅದಕ್ಕೂ ಮುಂಚಿತವಾಗಿ ಸಂಸತ್ತಿಗೆ ಬಜೆಟ್ ಪ್ರತಿಗಳನ್ನು ತರಲಾಯಿತು.
10:32 AM
Feb 1, 2023
ಕೇಂದ್ರ ಸಚಿವ ಸಂಪುಟ ಸಭೆ ಆರಂಭ
ಕೇಂದ್ರ ಸಚಿವ ಸಂಪುಟ ಸಭೆ ಆರಂಭ
ಸಂಸತ್ತಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆಗೆ ಸಂಪುಟದ ಅನುಮೋದನೆ ಪಡೆಯಲಿದ್ದು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
10:20 AM
Feb 1, 2023
ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ
ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ
ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಇದರ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದರ ಬೆನ್ನಲ್ಲೆ ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು.
10:18 AM
Feb 1, 2023
ಸಂಸತ್ತಿಗೆ ಆಗಮಿಸಿದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್
ಸಂಸತ್ತಿಗೆ ಆಗಮಿಸಿದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ಆಗಮಿಸಿದರು. ಕೆಲವೇ ನಿಮಿಷಗಳಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
10:16 AM
Feb 1, 2023
ಹಣದುಬ್ಬರ ಬೆಲೆ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಸೂಕ್ತ ವ್ಯವಸ್ಥೆ ತೆಗೆದುಕೊಳ್ಳಬೇಕಿದೆ. ಹಣದುಬ್ಬರದಿಂದಾಗಿ ವೈಯಕ್ತಿಕ, ಕೌಟುಂಬ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಉದ್ಯೋಗ ಸೃಷ್ಟಿಗೆ ನರೇಗ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಹೀಗೆ ಪ್ರತಿಯೊಂದು ವಲಯಕ್ಕೂ ತಮ್ಮದೇ ಆದ ನಿರೀಕ್ಷೆಗಳಿವೆ. ಹೀಗಾಗಿ ಯಾವ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ಕೊಡಲಾಗಿದೆ ಎನ್ನುವ ಬಗ್ಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
10:14 AM
Feb 1, 2023
ರೈಲ್ವೆ ಕ್ಷೇತ್ರದ ಬೇಡಿಕೆಗಳೇನು?
ರೈಲ್ವೆ ಕ್ಷೇತ್ರದ ಬೇಡಿಕೆಗಳೇನು?
2022-23ರಲ್ಲಿ ಕೇಂದ್ರ ಸರ್ಕಾರ ರೈಲ್ವೆ, ಹೆದ್ದಾರಿಗಳಿಗೆ 1.4 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಸದ್ಯ ಒಂದೇ ಭಾರತ್ ರೈಲು ದೇಶದಾದ್ಯಂತ ಸಂಚಾರ ಮಾಡುತ್ತಿದೆ. ಇದರೊಂದಿಗೆ ಎಲ್ಲೆಡೆ ರೈಲುಗಳ ಹೆಚ್ಚು ಸಂಚಾರಕ್ಕೆ ಆದ್ಯತೆ ನೀಡುವ ಸಾಧ್ಯತೆ ಇದೆ. ಬೇರೆ ರೈಲುಗಳ ಘೋಷಣೆ ಮಾಡಬೇಕು ಎನ್ನುವ ಬೇಡಿಕೆಗಳು ಸಾರ್ವಜನಿಕ ವಯಲದಲ್ಲಿವೆ. ರಾತ್ರಿ ವೇಳೆ ಸುಗಮ ಪ್ರಯಾಣಕ್ಕೆ ಸ್ಲೀಪರ್ ಕೋಚ್ ವ್ಯವಸ್ಥೆಯನ್ನು ಒಂದೇ ಭಾರತ್ ರೈಲುಗಳಲ್ಲಿ ಮಾಡುವ ಸಾದ್ಯತೆಗಳು ಇವೆ. ಇತರ ರೈಲುಗಳಿಗಿಂತ ವೇಗವಾಗಿ ಸಂಚಾರಿಸುವುದು ಸೇರಿದಂತೆ ರೈಲು ನವೀಕರಣ ಮಾಡಲಾಗುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
10:06 AM
Feb 1, 2023
ಮೂಲಸೌಕರ್ಯ ಕ್ಷೇತ್ರದ ಬೇಡಿಕೆಗಳು
ಮೂಲಸೌಕರ್ಯ ಕ್ಷೇತ್ರದ ಬೇಡಿಕೆಗಳು
ಉದ್ಯೋಗ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಪ್ರಮುಖವಾದ ಬೇಡಿಕೆಯಾಗಿದೆ. ಇನ್ನೂ ಈ ಬಾರಿ ಹೆದ್ದಾರಿ, ರೈಲು, ಡಿಜಿಟಲ್ ವ್ಯವಸ್ಥೆ ಮಾಡಬೇಕು. ಜೊತೆಗೆ ಹೆದ್ದಾರಿ ಯೋಜನೆಗೆ ಹೆಚ್ಚಿನ ಅನುದಾನ ಸಿಗಬೇಕು ಎನ್ನುವ ಮಹದಾಸೆಗಳಿವೆ. ಮಾತ್ರವಲ್ಲದೆ ವಿದ್ಯುತ್, ನೀರು, ನೈರ್ಮಲ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಬೇಡಿಕೆಗಳು ಸಾರ್ವಜನಿಕ ವಲಯಗಳಲ್ಲಿವೆ.
10:03 AM
Feb 1, 2023
ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಇಂದು ಐದನೇ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡಿಸಲು ಸಂಸತ್ತಿಗೆ ಅವರು ಆಗಮಿಸಿದ್ದಾರೆ. ಸಂಸತ್ತಿನಲ್ಲಿ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
10:00 AM
Feb 1, 2023
ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳೇನು?
ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳೇನು?
ಈ ಬಾರಿ ಬಜೆಟ್ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ನಿರೀಕ್ಷೆಗಳಿವೆ. ಶಿಕ್ಷಣ ಮತ್ತು ತಂತ್ರಜ್ಞಾನ ಭಾರತದ ಪ್ರಮುಖ ಕ್ಷೇತ್ರಗಳಾಗಿವೆ. ಜಿಎಸ್‌ಟ್ ಕಡಿಮೆ ಮಾಡುವುದು, ತೆರಿಗೆ ರಿಯಾಯಿತಿ, ಉತ್ತಮ ಇಂಟರ್‌ನೆಟ್ ಸಂಪರ್ಕ, ತಾಲೂಕು, ಗ್ರಾಮಗಳಲ್ಲಿ ಗುಣಮಟ್ಟದ ರಿಸರ್ಚ್ ಸೆಂಡರ್ ಹಾಗೂ ಲಾಭಗಳ ವ್ಯವಸ್ಥೆ, ಶಿಕ್ಷಕರಿಗೆ ಉನ್ನತ ತಂತ್ರಜ್ಞಾನದ ತರಬೇತಿ, ಉನ್ನತ ಶಿಕ್ಷಣ ನೀಡಲು ಪ್ರೋತ್ಸಾಹ, ಸ್ಕಾಲರ್‌ಶಿಪ್ ಯೋಜನೆಗಳುನ್ನು ಘೋಷಿಸಬೇಕು ಎನ್ನುವ ನಿರೀಕ್ಷೆಗಳಿವೆ.
9:54 AM
Feb 1, 2023
ಕೈಯಲ್ಲಿ ಕೆಂಪು 'ಬಹಿ ಖಾತಾ' ಹಿಡಿದ ನಿರ್ಮಲಾ ಸೀತಾರಾಮನ್
ಕೈಯಲ್ಲಿ ಕೆಂಪು 'ಬಹಿ ಖಾತಾ' ಹಿಡಿದ ನಿರ್ಮಲಾ ಸೀತಾರಾಮನ್
ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಕೈಯಲ್ಲಿ ಕೆಂಪು 'ಬಹಿ ಖಾತಾ'ದೊಂದಿಗೆ ನಿರ್ಮಲಾ ಸೀತಾರಾಮನ್ ಅವರು ಭಗವತ್ ಕಿಶನ್ರಾವ್ ಕರಾಡ್ ಮತ್ತು ಹಣಕಾಸು ಸಚಿವಾಲಯದ ಇತರ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡರು.
9:49 AM
Feb 1, 2023
ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್
ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್
2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸುವ ಮೊದಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಡಾ ಭಗವತ್ ಕಿಶನ್ರಾವ್ ಕರಾಡ್ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
9:46 AM
Feb 1, 2023
ಆರೋಗ್ಯ ಕ್ಷೇತ್ರದ ನಿರೀಕ್ಷೆಗಳೇನು?
ಆರೋಗ್ಯ ಕ್ಷೇತ್ರದ ನಿರೀಕ್ಷೆಗಳೇನು?
ಕಳೆದ ಬಾರಿ ಆರೋಗ್ಯ ಕ್ಷೇತ್ರಕ್ಕೆ ಸುಮಾರು 86,200 ಬಜೆಟ್ ಘೋಷಣೆಯಾಗಿತ್ತು. ಈ ಬಾರಿ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಲಾಬ್ ವ್ಯವಸ್ಥೆ, ಯತ್ರೋಪಕರಣಗಳ ವ್ಯವಸ್ಥೆ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕಾಗಿದೆ. ಹೀಗಾಗಿ ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.
9:35 AM
Feb 1, 2023
ಕೇಂದ್ರ ಬಜೆಟ್: ಷೇರುಪೇಟೆ ಆರಂಭ
ಕೇಂದ್ರ ಬಜೆಟ್: ಷೇರುಪೇಟೆ ಆರಂಭ
ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಷೇರು ಮಾರುಕಟ್ಟೆಯ ಬೆಳವಣಿಗೆ ಮೇಲೂ ಪ್ರಭಾವ ಬೀರಿದೆ. ಷೇರು ಮಾರುಕಟ್ಟೆಯು ಬಜೆಟ್‌ಗೂ ಮುನ್ನ ಆರಂಭಿಕ ವಹಿವಾಟಿನಲ್ಲಿ ಲಾಭವನ್ನು ಕಂಡಿದೆ. ಸೆನ್ಸೆಕ್ಸ್ 457.32 ಅಂಕ ಅಥವಾ ಶೇಕಡ 0.77ರಷ್ಟು ಏರಿಕೆಯಾಗಿ, 60007.22ಕ್ಕೆ ತಲುಪಿದೆ. ನಿಫ್ಟಿ 130.60 ಅಂಕ ಅಥವಾ ಶೇಕಡ 0.74ರಷ್ಟು ಹೆಚ್ಚಳವಾಗಿ, 17792.80ಕ್ಕೆ ವಹಿವಾಟು ಆರಂಭ ಮಾಡಿದೆ. 1593 ಷೇರುಗಳು ಹೆಚ್ಚಳವಾಗಿದ್ದರೆ, 382 ಷೇರುಗಳು ಇಳಿಕೆಯಾಗಿದೆ, 110 ಷೇರುಗಳು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.
9:19 AM
Feb 1, 2023
ಬಜೆಟ್‌ಗೂ ಮುನ್ನ ಷೇರುಪೇಟೆ
ಬಜೆಟ್‌ಗೂ ಮುನ್ನ ಷೇರುಪೇಟೆ
ಬಜೆಟ್ ಮಂಡನೆಯಾಗುವುದಕ್ಕೂ ಮುನ್ನ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 17,700ಕ್ಕೂ ಅಧಿಕವಾಗಿ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್ 300 ಅಂಕಗಳಷ್ಟು ಏರಿ, ವಹಿವಾಟಿಗೆ ಇಳಿದಿದೆ. ಬಜೆಟ್‌ನಲ್ಲಿ ಆಗುವ ಎಲ್ಲ ಬೆಳವಣಿಗೆಗಳು ಕೂಡಾ ಷೇರುಪೇಟೆಯ ಮೇಲೆ ಪ್ರಭಾವ ಉಂಟು ಮಾಡಲಿದೆ.
9:10 AM
Feb 1, 2023
ಮೋದಿ ನೇತೃತ್ವದಲ್ಲಿ ಸಭೆ
ಮೋದಿ ನೇತೃತ್ವದಲ್ಲಿ ಸಭೆ
ಬಜೆಟ್ ಮಂಡನೆ ಆರಂಭವಾಗುವುದಕ್ಕೂ ಮುನ್ನ ಬೆಳ್ಳಿಗ್ಗೆ 10:15ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ನಡೆಯಲಿದೆ.
9:08 AM
Feb 1, 2023
ರಾಷ್ಟ್ರಪತಿ ಭವನದತ್ತ ವಿತ್ತ ಸಚಿವೆ
ರಾಷ್ಟ್ರಪತಿ ಭವನದತ್ತ ವಿತ್ತ ಸಚಿವೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನಕ್ಕೆ ಬಜೆಟ್ ಪ್ರತಿಯೊಂದಿಗೆ ಹೊರಟಿದ್ದಾರೆ. ಹಾಗೆಯೇ ಸಂಪುಟದ ಅನುಮೋದನೆಯನ್ನು ಕೂಡಾ ವಿತ್ತ ಸಚಿವೆ ಪಡೆದುಕೊಂಡಿದ್ದಾರೆ.
9:04 AM
Feb 1, 2023
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಯೊಂದಿಗೆ ಅಧಿಕಾರಿಗಳ ಜೊತೆ ಫೋಟೋಗೆ ಫೋಸ್ ನೀಡಿದರು.
9:02 AM
Feb 1, 2023
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವಾಲಯಕ್ಕೆ ಆಗಮಿಸಿದ್ದಾರೆ. ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಬಜೆಟ್ ಪುಸ್ತಕವನ್ನು ಅಧಿಕಾರಿಗಳು ಸಚಿವರಿಗೆ ಹಸ್ತಾಂತರ ಮಾಡಲಿದ್ದಾರೆ.
8:42 AM
Feb 1, 2023
ಕೇಂದ್ರ ಬಜೆಟ್ ದೇಶದ ಎಲ್ಲ ಜನರಿಗೆ ಸಹಾಯಕವಾಗಲಿದೆ. ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಲಿದೆ. ಬಜೆಟ್ ಜನಪರವಾಗಿರಲಿದೆ: ಸಚಿವ ಪಂಕಜ್ ಚೌಧರಿ
8:19 AM
Feb 1, 2023
ಬಜೆಟ್‌ಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗುವ ಸಾಧ್ಯತೆಯಿದೆ. ಎಸ್‌ಜಿಎಕ್ಸ್ ನಿಫ್ಟಿ ಭಾರತೀಯ ಮಾರುಕಟ್ಟೆಯು ಇಂದು ಕೊಂಚ ಏರಿಕೆಯೊಂದಿಗೆಯೇ ಆರಂಭವಾಗುವ ಸೂಚನೆ ಕಂಡುಬಂದಿದೆ.
8:00 AM
Feb 1, 2023
2024 ರ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಕೊನೆಯ ಬಜೆಟ್‌
2024 ರ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಕೊನೆಯ ಬಜೆಟ್‌
ಕೇಂದ್ರ ಸರ್ಕಾರವು ಬುಧವಾರ ತನ್ನ ಬಜೆಟ್ ಅನ್ನು ಮಂಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹಣಕಾಸಿನ ಸಾಮರ್ಥ್ಯವನ್ನು ಇದು ಪರೀಕ್ಷಿಸಲಿದೆ. ಆ ಮೂಲಕ ಹೂಡಿಕೆದಾರರನ್ನು ಸೆಳೆಯಲು ಹೆಚ್ಚಿನ ಪ್ರಯತ್ನ ಮಾಡಲಿದೆ. ನಿರ್ಮಲಾ ಸೀತಾರಾಮನ್‌ ಅವರು ಜನಸಾಮಾನ್ಯರು ಹಾಗೂ ಕೈಗಾರಿಕೋದ್ಯಮಗಳನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಬಜೆಟ್‌ ಅನ್ನು ಮಂಡಿಸಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
7:51 AM
Feb 1, 2023
ಮೋದಿ 2.0 ಸರ್ಕಾರದ ಕೊನೆಯ ಕೇಂದ್ರ ಬಜೆಟ್‌: ಹೊಸ ಕಾರ್ಯಕ್ರಮ, ಯೋಜನೆಗಳು
ಮೋದಿ 2.0 ಸರ್ಕಾರದ ಕೊನೆಯ ಕೇಂದ್ರ ಬಜೆಟ್‌: ಹೊಸ ಕಾರ್ಯಕ್ರಮ, ಯೋಜನೆಗಳು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾಜ ಕಲ್ಯಾಣಕ್ಕಾಗಿ ಅನುದಾನವನ್ನು ಹೆಚ್ಚಿಸಲು ಯತ್ನವನ್ನು ಮಾಡಲಿದ್ದಾರೆ. ಈ ವರ್ಷ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು 2024 ರ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಓಲೈಸಲು ಹೊಸ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪರಿಚಯಿಸಲು ಒತ್ತಡದಲ್ಲಿದ್ದಾರೆಂದು. ಹೀಗಾಗಿ, ಕೇಂದ್ರ ಬಜೆಟ್‌ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿವೆ.
6:53 AM
Feb 1, 2023
ಬಜೆಟ್ 2023: ಸಿನಿಮಾ ಟಿಕೆಟ್ ಬೆಲೆಗಳು, ಒಟಿಟಿ ಚಂದಾದಾರಿಕೆ ದುಬಾರಿ?
ಕೇಂದ್ರ ಬಜೆಟ್ 2023 ಅನ್ನು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಈ ವೇಳೆ ಅನೇಕ ಹೊಸ ತೆರಿಗೆಗಳು ಮತ್ತು ಅಸ್ತಿತ್ವದಲ್ಲಿರುವ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಸರ್ಕಾರವು ಘೋಷಿಸುವ ಸಾಧ್ಯತೆಯಿದೆ.
6:48 AM
Feb 1, 2023
Economic Survey: ನವೆಂಬರ್‌ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಿದೆ. ಅಧಿವೇಶನವು ರಾಷ್ಟ್ರಪತಿ ದ್ರೌಪತಿ ಮುರ್ಮು ಭಾಷಣದೊಂದಿಗೆ ಆರಂಭವಾಗಿದೆ. ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದ್ದಾರೆ.
6:42 AM
Feb 1, 2023
Economic Survey 2023: ಕೃಷಿ ವಲಯದ ಸಾಮರ್ಥ್ಯ ಪ್ರತಿನಿಧಿಸುತ್ತದೆ: ವಿಶ್ಲೇಷಕರು
ಕೃಷಿ ಕ್ಷೇತ್ರದಲ್ಲಿ ರೈತರ ಜೀವನೋಪಾಯದ ಬೆಳವಣಿಗೆ ಹಾಗೂ ವರ್ಧನೆಗೆ ಬಲಗೊಂಡಿದೆ ಎಂದು 2023ರ ಆರ್ಥಿಕ ಸಮೀಕ್ಷೆ, ವಿಶ್ಲೇಷಕರು, ಉದ್ಯಮಿಗಳು ತಿಳಿಸಿದ್ದಾರೆ.
5:53 PM
Jan 31, 2023
ಬಜೆಟ್ ಸೆಷನ್: ಷೇರುಪೇಟೆ ಮಾಹಿತಿ
ಬಜೆಟ್ ಸೆಷನ್: ಷೇರುಪೇಟೆ ಮಾಹಿತಿ
ಷೇರು ಮಾರುಕಟ್ಟೆಯಲ್ಲಿ ಎಂ&ಎಂ, ಎಸ್‌ಬಿಐ, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್ ಲಾಭವನ್ನು ಪಡೆದ ಸ್ಟಾಕ್‌ಗಳು ಆಗಿದೆ. ಬಜಾಜ್ ಫೈನಾನ್ಸ್, ಟಿಸಿಎಸ್, ಟೆಕ್ ಮಹೀಂದ್ರ, ಬ್ರಿಟಾನಿಯಾ ಇಂಡಸ್ಟ್ರಿ, ಸನ್‌ ಫಾರ್ಮ್ ಸ್ಟಾಕ್ ನಷ್ಟವನ್ನು ಕಂಡಿದೆ.
5:16 PM
Jan 31, 2023
Market Close: ಷೇರುಪೇಟೆ ವಹಿವಾಟು ಅಂತ್ಯ
Market Close: ಷೇರುಪೇಟೆ ವಹಿವಾಟು ಅಂತ್ಯ
ಜನವರಿ 31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾದ ಬಳಿಕ ಷೇರು ಮಾರುಕಟ್ಟೆ ಕೊಂಚ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಸೆನ್ಸೆಕ್ಸ್ 49.49 ಅಂಕ ಅಥವಾ ಶೇಕಡ 0.08ರಷ್ಟು ಏರಿಕೆಯಾಗಿ, 59,549.9ಕ್ಕೆ ತಲುಪಿದೆ. ನಿಫ್ಟಿ 13.20 ಅಂಕ ಅಥವಾ ಶೇಕಡ 0.07ರಷ್ಟು ಹೆಚ್ಚಾಗಿ 17,662.20ಕ್ಕೆ ಸ್ಥಿರವಾಗಿದೆ. 2368 ಷೇರುಗಳು ಏರಿಕೆಯಾಗಿದ್ದರೆ, 1026 ಷೇರುಗಳು ಇಳಿಕೆಯಾಗಿದೆ. 131 ಷೇರುಗಳು ಸ್ಥಿರವಾಗಿದೆ.
5:06 PM
Jan 31, 2023
ಆಗುವುದೆಲ್ಲ ಒಳ್ಳೆಯದ್ದಕ್ಕೆ (All is well), ಬೆಳವಣಿಗೆಯಲ್ಲಿ ಏರಿಳಿತಕ್ಕೆ ಭಾರತ ಯಾವುದೇ ಆತಂಕ ಪಡೆಬೇಕಾಗಿಲ್ಲ: ಆರ್ಥಿಕ ಸಮೀಕ್ಷೆ
4:57 PM
Jan 31, 2023
PAHAL ಮತ್ತು MGNREGSನಂತಹ ಕೇಂದ್ರ ಯೋಜನೆಗಳು ಆಧಾರ್ ವಹಿವಾಟಿನ ಅಡಿಯಲ್ಲಿ ನವೆಂಬರ್ 2022ರವರೆಗೆ 1,010 ಕೋಟಿ ಯಶಸ್ವಿ ವಹಿವಾಟಿನಲ್ಲಿ 7,66,055.9 ಕೋಟಿ ರೂಪಾಯಿ ಪಾವತಿ ಮಾಡಿದೆ. ಕೋವಿನ್‌ ಪ್ಲಾಟ್‌ಫಾರ್ಮ್‌ನಲ್ಲಿಯೂ ಆಧಾರ್ ಮುಖ್ಯ ಪಾತ್ರ ವಹಿಸಿದೆ.
4:38 PM
Jan 31, 2023
ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಲಿಂಕ್
ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಲಿಂಕ್
27.9 ಕೋಟಿ ಜನರು ತಮ್ಮ ಆಧಾರ್ ಅನ್ನು ಎಲ್‌ಪಿಜಿ ಸಬ್ಸಿಡಿಗೆ ಲಿಂಕ್ ಮಾಡಿಕೊಂಡಿದ್ದಾರೆ. ಇನ್ನು 75.4 ಕೋಟಿ ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಲಿಂಕ್ ಆಗಿದೆ. ಆಧಾರ್ ಪಾವತಿ ವಿಧಾನದಿಂದ (AePS) 1,549.8 ಕೋಟಿ ವಹಿವಾಟು ನಡೆದಿದೆ.
4:22 PM
Jan 31, 2023
1,350.2 ಕೋಟಿ ಇಕೆವೈಸಿಗೆ ಆಧಾರ್ ಬಳಕೆ
1,350.2 ಕೋಟಿ ಇಕೆವೈಸಿಗೆ ಆಧಾರ್ ಬಳಕೆ
ಆರ್ಥಿಕ ಸಮೀಕ್ಷೆಯ ಪ್ರಕಾರ ಈವರೆಗೆ ಆಧಾರ್ ಬಳಸಿಕೊಂಡು 1,350.2 ಕೋಟಿ ಇಕೆವೈಸಿ ಮಾಡಲಾಗಿದೆ. ಭಾರತದಲ್ಲಿ 75.3 ಕೋಟಿ ಕಟುಂಬವು ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿದ್ದಾರೆ.
4:15 PM
Jan 31, 2023
2022ರ ನವೆಂಬರ್‌ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್ ಮಾಡಲಾಗಿದ್ದು, ಸುಮಾರು 71.1 ಕೋಟಿ ಆಧಾರ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲಾಗಿದೆ. ನವೆಂಬರ್‌ 2022ರವರೆಗೆ ಆಧಾರ್ ಅಡಿಯಲ್ಲಿ 8,621.2 ಕೋಟಿ ದೃಢೀಕರಣ ಮಾಡಲಾಗಿದೆ.
3:53 PM
Jan 31, 2023
ಜಾಗತಿಕ ಸೂಚನೆಗಳ ನಡವೆ ಭಾರತದ ರೂಪಾಯಿ ಕುಗ್ಗುತ್ತಿರುವ ವಿಚಾರವನ್ನು ಉಲ್ಲೇಖಿಸಿದ ಅನಂತ್ ನಾಗೇಶ್ವರನ್ ನಾವು ರೂಪಾಯಿಯ ಬಗ್ಗೆ ಮುನ್ಸೂಚನೆಯನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಜನವರಿ 31ರಂದು 2022-23ರ ಆರ್ಥಿಕ ಸಮೀಕ್ಷೆ ಮಂಡನೆಯಾದ ಬಳಿಕ ವಹಿವಾಟಿನ ಮಧ್ಯದಲ್ಲಿ ಯುಎಸ್‌ ಡಾಲರ್ ಎದುರು ರೂಪಾಯಿ ಮೌಲ್ಯ 52 ಕುಸಿದು 82.04ಕ್ಕೆ ತಲುಪಿದೆ.
3:30 PM
Jan 31, 2023
ಆರ್ಥಿಕ ಸಮೀಕ್ಷೆ: ಸರ್ಕಾರದ ಆರೋಗ್ಯ ವಿಮಾ ಕಾರ್ಯಕ್ರಮದಿಂದಾಗಿ ಕುಟುಂಬಗಳಿಗೆ 66% ರಿಂದ 48%ರಷ್ಟು ಆರೋಗ್ಯ ವೆಚ್ಚ ಕಡಿಮೆಯಾಗಿದೆ ಎಂದು ಸಿಇಎ ವಿ ಅನಂತ ನಾಗೇಶ್ವರನ್ ಹೇಳಿದರು.
3:11 PM
Jan 31, 2023
ಹಣಕಾಸು ವರ್ಷ 2022-2023ರ ಮೊದಲಾರ್ಧದಲ್ಲಿ ಖಾಸಗಿ ವಲಯದಲ್ಲಿ ಸಂಸ್ಥೆಗಳ ಹೂಡಿಕೆಯು ಹಣಕಾಸು ವರ್ಷ 2021-22ರ ಮೊದಲಾರ್ಧಕ್ಕಿಂತ ಅಧಿಕವಾಗಿದೆ: ವಿ ಅನಂತ ನಾಗೇಶ್ವರನ್
3:02 PM
Jan 31, 2023
ಸರ್ಕಾರದ ಆರೋಗ್ಯ ವಿಮಾ ಯೋಜನೆಗಳಿಂದಾಗಿ, ಒಂದು ಕುಟುಂಬವು ಆರೋಗ್ಯಕ್ಕಾಗಿ ತಮ್ಮ ಜೇಬಿನಿಂದ ಮಾಡಬೇಕಾದ ಖರ್ಚು ಶೇಕಡ 66ರಿಂದ ಶೇಕಡ 48ಕ್ಕೆ ಇಳಿಕೆಯಾಗಿದೆ: ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್
2:50 PM
Jan 31, 2023
ಕೋವಿಡ್ ಲಸಿಕೆ ಆರಂಭ ಮಾಡಿದರಿಂದಾಗಿ ವಲಸೆ ಕಾರ್ಮಿಕರು ಮತ್ತೆ ನಗರ, ಪಟ್ಟಣ ಪ್ರದೇಶಗಳಿಗೆ ಆಗಮಿಸಿದ್ದಾರೆ. ಇದರಿಂದಾಗಿ ಆರ್ಥಿಕ ಅಭಿವೃದ್ಧಿ ಮೇಲೆ ಉತ್ತಮ ಪ್ರಭಾವ ಉಂಟಾಗಿದೆ. ವಸತಿ ಮಾರುಕಟ್ಟೆಯಲ್ಲಿ ಬಹಳ ಗಮನಾರ್ಹ ಕುಸಿತ ಕಂಡು ಬಂದಿದೆ: ಆರ್ಥಿಕ ಸಮೀಕ್ಷೆ
2:36 PM
Jan 31, 2023
ಅಂಕಿಅಂಶ ವಿಚಾರದಲ್ಲಿ ಪಾರದರ್ಶಕತೆ
ಅಂಕಿಅಂಶ ವಿಚಾರದಲ್ಲಿ ಪಾರದರ್ಶಕತೆ
"ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಮಾಡುವ ವೆಚ್ಚದ ಗುಣಮಟ್ಟ ಮಾತ್ರವಲ್ಲ, ಸರ್ಕಾರವು ಕೂಡಾ ಅಂಕಿ ಅಂಶಗಳ ವಿಚಾರದಲ್ಲಿ ಪಾರದರ್ಶಕವಾಗಿದೆ," ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್
2:19 PM
Jan 31, 2023
ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಐಎಂಎಫ್ ನೀಡಿದೆ. ಐಎಂಎಫ್‌ ಅಂದಾಜಿನ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವು ವೇಗವಾಗಲಿದೆ ಎಂದು ತೋರಿಸುತ್ತಿದೆ: ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್
2:17 PM
Jan 31, 2023
ಆರ್ಥಿಕ ಸಮೀಕ್ಷೆ
ಆರ್ಥಿಕ ಸಮೀಕ್ಷೆ
ಮುಖ್ಯ ಹಣಕಾಸು ಸಲಹೆಗಾರ (ಸಿಇಎ) ಡಾ ವಿ ಅನಂತ ನಾಗೇಶ್ವರನ್ 2023ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಿದ್ದಾರೆ.
2:11 PM
Jan 31, 2023
ಮೂಲಸೌಕರ್ಯಕ್ಕೆ ಸರ್ಕಾರದ ಕೊಡುಗೆ
ಮೂಲಸೌಕರ್ಯಕ್ಕೆ ಸರ್ಕಾರದ ಕೊಡುಗೆ
141.4 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 89,151 ಯೋಜನೆಗಳನ್ನು ಜಾರಿ ಮಾಡಲಾಗಿದೆ. 5.5 ಲಕ್ಷ ಕೋಟಿ ರೂಪಾಯಿಯ 1009 ಯೋಜನೆಗಳು ಸಂಪೂರ್ಣವಾಗಿದೆ. ಯೋಜನೆಯ ಕ್ಲಿಯರೆನ್ಸ್, ಅನುಮೋದನೆಗಾಗಿ ಎನ್‌ಐಪಿ ಮತ್ತು ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ (ಪಿಎಂಜಿ) ಪೋರ್ಟಲ್‌ ಲಿಂಕ್‌ ಆರಂಭಿಸಲಾಗಿದೆ.
2:07 PM
Jan 31, 2023
ಮೌಲ್ಯ (ಶೇ. 121) ಹಾಗೂ ಪರಿಮಾಣದ (ಶೇಕಡ 115) ಲೆಕ್ಕಾಚಾರದಲ್ಲಿ ಯುಪಿಐ ವಹಿವಾಟು 2019-2022ರಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯವಾಗಿ ಗಮನವನ್ನು ಸೆಳೆಯುತ್ತಿದೆ: ಆರ್ಥಿಕ ಸಮೀಕ್ಷೆ
2:03 PM
Jan 31, 2023
ಆರ್ಥಿಕ ಸಮೀಕ್ಷೆ: ಶಿಕ್ಷಣ ಕ್ಷೇತ್ರ
ಆರ್ಥಿಕ ಸಮೀಕ್ಷೆ: ಶಿಕ್ಷಣ ಕ್ಷೇತ್ರ
ಹಣಕಾಸು ವರ್ಷ 2020ರಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾತಿಯಾಗುವ ಸಂಖ್ಯೆಯು 3.9 ಕೋಟಿ ಆಗಿತ್ತು. ಆದರೆ ಈ ಸಂಖ್ಯೆಯು ಹಣಕಾಸು ವರ್ಷ 2021ರಲ್ಲಿ 4.1 ಕೋಟಿಗೆ ಹೆಚ್ಚಳವಾಗಿದೆ. ಹಣಕಾಸು ವರ್ಷ 2015ರಿಂದ ಈವರೆಗೆ ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಶೇಕಡ 21ರಷ್ಟು ಅಂದರೆ 72 ಲಕ್ಷದಷ್ಟು ಏರಿಕೆ ಕಂಡು ಬಂದಿದೆ. ಹಣಕಾಸು ವರ್ಷ 2020ರಲ್ಲಿ 1.9 ಹೆಣ್ಣು ಮಕ್ಕಳು ದಾಖಲಾತಿಯಾಗಿತ್ತು. ಆದರೆ ಹಣಕಾಸು ವರ್ಷ 2021ರಲ್ಲಿ 2.0 ಕೋಟಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಮಾಡಲು ಮುಂದಾಗಿದ್ದಾರೆ.
1:58 PM
Jan 31, 2023
ಕೃಷಿ ಕ್ಷೇತ್ರದಲ್ಲಿ ಹೂಡಿಕೆ
ಕೃಷಿ ಕ್ಷೇತ್ರದಲ್ಲಿ ಹೂಡಿಕೆ
ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯು 2020-21ರಲ್ಲಿ ಶೇಕಡ 9.3ರಷ್ಟು ಏರಿಕೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಒಂದು ವರ್ಷ ಕಾಲಕ್ಕೆ 81.4 ಕೋಟಿ ಜನರಿಗೆ ಉಚಿತ ಆಹಾರ ಉತ್ಪನ್ನ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ 2022-23ರ ಏಪ್ರಿಲ್-ಜುಲೈ ಪಾವತಿ ಅವಧಿಯಲ್ಲಿ 11.3 ಕೋಟಿ ರೈತರಿಗೆ ಹಣಕಾಸು ಸಹಾಯ ಮಾಡಲಾಗಿದೆ: ಆರ್ಥಿಕ ಸಮೀಕ್ಷೆ
1:52 PM
Jan 31, 2023
ಜಿಎಸ್‌ಟಿ ಸಂಗ್ರಹ
ಜಿಎಸ್‌ಟಿ ಸಂಗ್ರಹ
ಹಣಕಾಸು ವರ್ಷ 2021ರಲ್ಲಿ ಜಿಎಸ್‌ಟಿ ಸಂಗ್ರಹ ಕುಂಠಿತವಾದ ಬಳಿ, ಈಗ ಸಣ್ಣ ಉದ್ಯಮಗಳಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ. ಕೋವಿಡ್‌ ಪೂರ್ವದಲ್ಲಿ ಸಂಗ್ರಹವಾಗುತ್ತಿದ್ದ ಜಿಎಸ್‌ಟಿಗೂ ಅಧಿಕ ಜಿಎಸ್‌ಟಿಯನ್ನು ಸಣ್ಣ ಉದ್ಯಮಗಳು ಪಾವತಿಸಿದೆ: ಆರ್ಥಿಕ ಸಮೀಕ್ಷೆ
1:49 PM
Jan 31, 2023
ನವೆಂಬರ್‌ 2022ರಿಂದ ರಿಟೇಲ್ ಹಣದುಬ್ಬರವು ಆರ್‌ಬಿಐನ ಸಹಿಷ್ಣುಮಟ್ಟವನ್ನು ತಲುಪಿದೆ. ಸುಮಾರು ಮೂರು ನಾಲ್ಕು ದಶಕಗಳ ಬಳಿಕ 2022ರಲ್ಲಿ ವಿಶ್ವದಲ್ಲೇ ಭಾರೀ ಪ್ರಮಾಣದಲ್ಲಿ ಹಣದುಬ್ಬರ ಏರಿಕೆಯಾಗಿದೆ. ಭಾರತದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಹಣದುಬ್ಬರವನ್ನು ಹತೋಟಿಗೆ ತರಲು ಆರ್‌ಬಿಐನ ಕ್ರಮವು ಸಹಕಾರಿಯಾಗಿದೆ: ಆರ್ಥಿಕ ಸಮೀಕ್ಷೆ
1:46 PM
Jan 31, 2023
ಎಫ್‌ಡಿಐ ಏರಿಕೆ
ಎಫ್‌ಡಿಐ ಏರಿಕೆ
ಕಳೆದ ಕೆಲವು ವರ್ಷಗಳಿಂದ ಉತ್ಪಾದನಾ ವಲಯದಲ್ಲಿ ವಾರ್ಷಿಕವಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣವು ಅಧಿಕವಾಗುತ್ತಾ ಸಾಗುತ್ತಿದೆ. ಹಣಕಾಸು ವರ್ಷ 2021ರಲ್ಲಿ ಎಫ್‌ಡಿಐ 12.1 ಬಿಲಿಯನ್ ಡಾಲರ್ ಆಗಿದ್ದು, ಹಣಕಾಸು ವರ್ಷ 2022ರಲ್ಲಿ 21.3 ಬಿಲಿಯನ್ ಡಾಲರ್‌ಗೆ ಎಫ್‌ಡಿಐ ಜಿಗಿದಿದೆ: ಆರ್ಥಿಕ ಸಮೀಕ್ಷೆ
1:43 PM
Jan 31, 2023
ಡಿಮ್ಯಾಟ್ ಖಾತೆಯಲ್ಲಿ ಹೆಚ್ಚಳವಾದರೂ ಕೂಡಾ ಈಕ್ವಿಟಿ ವಹಿವಾಟಿನಲ್ಲಿ ವೈಯಕ್ತಿಕ ಹೂಡಿಕೆದಾರರ ಷೇರು ಕಡಿಮೆಯಾಗಿದೆ. ತೆರಿಗೆ ಸಂಗ್ರಹ ಹಣಕಾಸು ವರ್ಷ 2023ರಲ್ಲಿ ಅಂದಾಜಿಗಿಂತ ಅಧಿಕವಾಗಿಯೇ ಇರುವ ಸಾಧ್ಯತೆಯಿದೆ: ಆರ್ಥಿಕ ಸಮೀಕ್ಷೆ
1:40 PM
Jan 31, 2023
ಸ್ಟೀಲ್ ಉತ್ಪಾದನೆ
ಸ್ಟೀಲ್ ಉತ್ಪಾದನೆ
ಸ್ಟೀಲ್ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ದೇಶವಾಗಿದೆ. ಎರಡನೇ ಕಚ್ಚಾ ಸ್ಟೀಲ್ ಉತ್ಪಾದನೆ ಮಾಡುವ ದೇಶವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಸ್ಟೀಲ್ ವಲಯದಲ್ಲಿ ಬೆಳವಣಿಗೆ ಕಂಡು ಬಂದಿದೆ: ಆರ್ಥಿಕ ಸಮೀಕ್ಷೆ
1:37 PM
Jan 31, 2023
ಫಾರ್ಮಾ ವಲಯಕ್ಕೆ ಎಫ್‌ಡಿಐ
ಫಾರ್ಮಾ ವಲಯಕ್ಕೆ ಎಫ್‌ಡಿಐ
ಫಾರ್ಮಾ ಸೆಕ್ಟರ್‌ನಲ್ಲಿ ಎಫ್‌ಡಿಐ ಸೆಪ್ಟೆಂಬರ್‌ 2022ರಲ್ಲಿ 20 ಬಿಲಿಯನ್ ಡಾಲರ್ ದಾಟಿದೆ. ಫಾರ್ಮಾ ವಲಯದಲ್ಲಿ ಸೆಪ್ಟೆಂಬರ್ 2022ರವರೆಗೆ ಕಳೆದ ಐದು ವರ್ಷದಲ್ಲಿ ಎಫ್‌ಡಿಐ ನಾಲ್ಕು ಪಟ್ಟು ಹೆಚ್ಚಾಗಿ 699 ಮಿಲಿಯನ್ ಯುಎಸ್‌ ಡಾಲರ್‌ಗೆ ತಲುಪಿದೆ. ಪ್ರತಿಕೂಲ ಸ್ಥಿತಿ ಮತ್ತು ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿದ್ದಂತೆ ಔಷಧೀಯ ಉತ್ಪಾದನೆ ಬೆಳವಣಿಗೆ ಮಂದಗತಿಯಾಗಿದೆ: ಆರ್ಥಿಕ ಸಮೀಕ್ಷೆ
1:29 PM
Jan 31, 2023
"ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡ 6.8 ಆಗಿದೆ. ಇದು ಖಾಸಗಿ ಬಳಕೆಯನ್ನು ತಡೆಯುವಷ್ಟು ಅಧಿಕವಾಗಿಲ್ಲ ಮತ್ತು ಹೂಡಿಕೆಯನ್ನು ತಗ್ಗಿಸುವಷ್ಟು ಕಡಿಮೆಯಾಗಿಲ್ಲ. ಬಡ್ಡಿದರವು ದೀರ್ಘಾವಧಿಯವರೆಗೆ ಅಧಿಕವಾಗಿಯೇ ಉಳಿಯಬಹುದು," ಆರ್ಥಿಕ ಸಮೀಕ್ಷೆ
1:24 PM
Jan 31, 2023
ಆರ್ಥಿಕ ಕೊರತೆ ಇನ್ನಷ್ಟು ಮುಂದುವರಿಯಲಿದೆ. ರೂಪಾಯಿಯು ಇನ್ನಷ್ಟು ಒತ್ತಡಕ್ಕೆ ಒಳಗಾಗಬಹುದು: ಆರ್ಥಿಕ ಸಮೀಕ್ಷೆ
1:21 PM
Jan 31, 2023
ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ: ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ
1:19 PM
Jan 31, 2023
2023-24ರಲ್ಲಿ ಜಿಡಿಪಿಯು ಶೇಕಡ 6.5ಕ್ಕೆ ಬೆಳೆಯುವ ಅಂದಾಜು ಮಾಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇಕಡ 7 ಆಗಿದೆ. 2021-22ರಲ್ಲಿ ಶೇಕಡ 8.7 ಆಗಿತ್ತು.
1:16 PM
Jan 31, 2023
ಜಿಡಿಪಿ ಬೆಳವಣಿಗೆ ದರ
ಜಿಡಿಪಿ ಬೆಳವಣಿಗೆ ದರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 6.5 ಎಂದು ಅಂದಾಜು ಮಾಡಲಾಗಿದೆ. ಭಾರತದ ಜಿಡಿಪಿ ದರವು ಶೇಕಡ 6-6.8ಕ್ಕೆ ತಗ್ಗುವ ಅಂದಾಜು ಮಾಡಲಾಗಿದೆ.
1:11 PM
Jan 31, 2023
2022-23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಮುಖ್ಯ ಹಣಕಾಸು ಸಲಹೆಗಾರರಾದ ವಿ ಅನಂತ್ ನಾಗೇಶ್ವರನ್ ಪತ್ರಿಕಾಗೋಷ್ಠಿಯ ಮೂಲಕ ಬಿಡುಗಡೆ ಮಾಡಲಿದ್ದಾರೆ.
12:56 PM
Jan 31, 2023
ಸಂಸತ್ತಿನಲ್ಲಿ ಸಂತೋಷ್ ಸಿಂಗ್ ಚೌಧರಿ ಸೇರಿ ಮೂವರು ಗಣ್ಯರಿಗೆ ಶ್ರದ್ಧಾಂಜಲಿಯನ್ನು ಸ್ಪೀಕರ್ ಸಲ್ಲಿಸಿದ್ದಾರೆ.
12:34 PM
Jan 31, 2023
ರಾಷ್ಟ್ರಪತಿ ದ್ರೌಪತಿ ಮುರ್ಮು ಬಜೆಟ್ ಭಾಷಣ ಮುಕ್ತಾಯ ಮಾಡಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಶೀಘ್ರವೇ ಮಂಡಿಸಲಾಗುತ್ತದೆ. ಜಿಡಿಪಿ ದರ, ಮೊದಲಾದವುಗಳ ಮಾಹಿತಿಗಾಗಿ ಲೈವ್‌ ಅಪ್‌ಡೇಟ್ ಪರಿಶೀಲಿಸಿ.
12:27 PM
Jan 31, 2023
ಜಾಗತಿಕ ಆವಿಷ್ಕಾರಗಳ ಸೂಚ್ಯಂಕದಲ್ಲಿ ಭಾರತವು 81ನೇ ಸ್ಥಾನದಲ್ಲಿತ್ತು. ಆದರೆ ನಾವೀಗ 40ನೇ ಸ್ಥಾನಕ್ಕೆ ತಲುಪಿದ್ದೇವೆ. ಕಳೆದ 7 ವರ್ಷಗಳ ಹಿಂದೆ ಬೆರಳೆಣಿಕೆಯ ಸ್ಟಾರ್ಟ್‌ಅಪ್ ಸಂಸ್ಥೆಗಳು ಇದ್ದವು. ಈಗ ಸ್ಟಾರ್ಟ್‌ಅಪ್ ಸಂಸ್ಥೆಗಳ ಸಂಖ್ಯೆಯು 90,000ಕ್ಕೆ ಏರಿಕೆಯಾಗಿದೆ: ರಾಷ್ಟ್ರಪತಿ
12:25 PM
Jan 31, 2023
ನಮ್ಮ ದೇಶವು ಈ ವರ್ಷ G20 ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಜಿ20ಯ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಭಾರತವು ವಿಶ್ವದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಗುರಿ ಹೊಂದಿದೆ. ರಾಷ್ಟ್ರಪತಿಗಳ ಭಾಷಣ ಮುಕ್ತಾಯ. ಶಿಷ್ಟಾಚಾರದ ಪ್ರಕಾರ ಸಂಸತ್ ಗೌರವಗಳ ಮೂಲಕ ರಾಷ್ಟ್ರಪತಿ ಭವನಕ್ಕೆ ತೆರಳಿದ ದ್ರೌಪದಿ ಮರ್ಮು.
12:21 PM
Jan 31, 2023
ಗಡಿಭಾಗದಲ್ಲಿರುವ ಹಳ್ಳಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ನನ್ನ ಸರ್ಕಾರವು ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯು ಗಡಿ ಭಾಗದಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ: ರಾಷ್ಟ್ರಪತಿ
12:19 PM
Jan 31, 2023
ನಮ್ಮ ದೇಶ ಒಂದು ಕಡೆ ಪ್ರಾಚೀನ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ವಿಶ್ವಕ್ಕೆ ಪಸರಿಸುತ್ತಿದೆ. ಇನ್ನೊಂದು ಕಡೆ, 'ವಿಶ್ವದ ಔಷಧಾಲಯ' ಎಂದು ವಿಶ್ವದಲ್ಲಿ ಹೆಸರುವಾಸಿಯಾಗುತ್ತಿದೆ - ರಾಷ್ಟ್ರಪತಿ
12:17 PM
Jan 31, 2023
ಭಾರತವು ಜಾಗತಿಕವಾಗಿ ಸಂಬಂಧವನ್ನು ಬೆಳೆಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಬೇರೆ ದೇಶದೊಂದಿಗೆ ತನ್ನ ಸಂಪರ್ಕವನ್ನು ಭಾರತ ಹೆಚ್ಚಿಸುತ್ತಿದೆ. ಭಾರತವು ಶಾಂತಿಗಾಗಿ, ಇಂಡೋ-ಪೆಸಿಫಿಕ್‌ನಲ್ಲಿ ಸ್ಥಿರತೆಗಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಭಾರತ ಅಫ್ಘಾನಿಸ್ತಾನ, ಶ್ರೀಲಂಕಾದ ಸಹಾಯಕ್ಕೆ ಮುಂದೆ ಬಂದಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.
12:15 PM
Jan 31, 2023
ಗುಲಾಮಗಿರಿಯಿಂದ ಮುಕ್ತವಾಗುವ ಪ್ರತೀ ಹೆಜ್ಜೆಯನ್ನು ನಮ್ಮ ಸರಕಾರ ಸಮರ್ಥವಾಗಿ ಇಡುತ್ತಿದೆ. ಇದಕ್ಕೆ ಕೊಡಬಹುದಾದ ಉದಾಹರಣೆ ಎಂದರೆ ರಾಜಪಥ್‌ ಎನ್ನುವ ಹೆಸರನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ್ದು - ರಾಷ್ಟ್ರಪತಿ.
12:14 PM
Jan 31, 2023
ಭಾರತದಲ್ಲಿ 90,000 ಸ್ಟಾರ್ಟ್‌ಅಪ್‌ಗಳಿದೆ. ಕಳೆದ 8 ವರ್ಷದಲ್ಲಿ ಮೆಟ್ರೋ ನೆಟ್‌ವರ್ಕ್ ಮೂರು ಪಟ್ಟು ಹೆಚ್ಚಾಗಿದೆ. 27 ನಗರಗಳಲ್ಲಿ ಮೆಟ್ರೋ ಆರಂಭವಾಗಿದೆ. ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಳೆದ ಎಂಟು ವರ್ಷದಲ್ಲಿ 55 ಶೇಕಡ ಬೆಳವಣಿಗೆ ಕಂಡಿದೆ: ರಾಷ್ಟ್ರಪತಿ ಮುರ್ಮು
12:12 PM
Jan 31, 2023
ಭಾರತದಲ್ಲಿ ಉತ್ಪಾದಕತೆ ಹೆಚ್ಚಳ
ಭಾರತದಲ್ಲಿ ಉತ್ಪಾದಕತೆ ಹೆಚ್ಚಳ
ಭಾರತದಲ್ಲಿ ಉತ್ಪಾದಕತೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಉತ್ಪಾದಕರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಆಟಿಕೆಗಳ ಆಮದು ಶೇಕಡ 70ರಷ್ಟು ಕುಸಿದಿದೆ. ರಫ್ತು ಶೇಕಡ 60ರಷ್ಟು ಏರಿಕೆಯಾಗಿದೆ. ಮೊಬೈಲ್ ಫೋನ್ ಮತ್ತು ಪಾರ್ಟ್‌ಗಳ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಉತ್ಪಾದನಾ ಹಬ್‌ ಆಗುತ್ತಿದೆ: ರಾಷ್ಟ್ರಪತಿ
12:09 PM
Jan 31, 2023
ಷೇರುಪೇಟೆ ಬೆಳವಣಿಗೆ
ಷೇರುಪೇಟೆ ಬೆಳವಣಿಗೆ
ಅದಾನಿ ಗ್ರೂಪ್ ಸ್ಟಾಕ್ ಚೇತರಿಕೆ ಕಂಡರೂ ಸೆನ್ಸೆಕ್ಸ್ 37 ಅಂಕ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ.
12:04 PM
Jan 31, 2023
ಅಫ್ಘಾನಿಸ್ತಾನದಲ್ಲಿ ಭೂಕಂಪವಾದಾಗ ನಮ್ಮ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಮಾಡಿದೆ. ಉಕ್ರೇನ್ ರಷ್ಯಾ ಯುದ್ಧ, ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಉಂಟಾದಾಗ ಅಲ್ಲಿಂದ ಭಾರತಕ್ಕೆ ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಭಾರತವು ಮಾನವೀಯತೆಯನ್ನು ಮತ್ತೆ ಎತ್ತಿಹಿಡಿದಿದೆ: ರಾಷ್ಟ್ರಪತಿ
12:02 PM
Jan 31, 2023
ಈಶಾನ್ಯ ರಾಜ್ಯಗಳು ಮತ್ತು ಗಡಿ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತಿದೆ. ಮಹಿಳೆಯರಿಗೆ ಯಾವುದೇ ವಿಭಾಗದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸಲು ನಮ್ಮ ಸರಕಾರ ಸೂಕ್ತವಾದ ಹೆಜ್ಜೆಯನ್ನು ಇಟ್ಟಿದೆ - ರಾಷ್ಟ್ರಪತಿ.
12:00 PM
Jan 31, 2023
ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ ಯಶಸ್ವಿ: ಮುರ್ಮು
ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ ಯಶಸ್ವಿ: ಮುರ್ಮು
ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವೂ ಯಶಸ್ವಿಯಾಗುತ್ತಿದೆ. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ನಮ್ಮ ದೇಶದ ಯುವಕರು ರಾಷ್ಟ್ರ ನಿರ್ಮಾಣದ ವಿಚಾರದಲ್ಲಿ ಮಂಚೂಣಿಯಲ್ಲಿರುವುದು ಸಂತೋಷದ ವಿಚಾರ - ರಾಷ್ಟ್ರಪತಿ.
11:59 AM
Jan 31, 2023
ಸರ್ಕಾರದ ಸತತ ಪ್ರಯತ್ನದಿಂದಾಗಿ ನಮ್ಮ ರಕ್ಷಣಾ ರಫ್ತು ಆರು ಪಟ್ಟು ಅಧಿಕವಾಗಿದೆ: ರಾಷ್ಟ್ರಪತಿ
11:57 AM
Jan 31, 2023
ಇಂದು ನಮ್ಮ ಯುವಕರು ತಮ್ಮ ಆವಿಷ್ಕಾರಗಳ ಮೂಲಕ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸುತ್ತಿದ್ದಾರೆ: ರಾಷ್ಟ್ರಪತಿ
11:56 AM
Jan 31, 2023
ಒಂದು ಕಡೆ ಅಯೋಧ್ಯಾ ದೇವಾಲಯ, ಇನ್ನೊಂದು ಕಡೆ ಸುಸಜ್ಜಿತ ಸಂಸತ್ ಭವನ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಳ್ಳುತ್ತಿದೆ. ಕೇದಾರನಾಥ ಧಾಮ, ಕಾಶಿ ವಿಶ್ವನಾಥ ಕಾರಿಡಾರ್, ಉಜ್ಜೈನಿಯಲ್ಲಿ ಮಹಾಕಾಳ ಪ್ರೊಜೆಕ್ಟ್ ಮುಕ್ತಾಯಗೊಂಡಿದೆ. ಇನ್ನೊಂದು ಕಡೆ ಪ್ರತೀ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ತೆರೆಯುವ ನಿರ್ಧಾರಕ್ಕೂ ನಮ್ಮ ಸರಕಾರ ಬಂದಿದೆ - ರಾಷ್ಟ್ರಪತಿ.
11:54 AM
Jan 31, 2023
ಸರ್ಕಾರ ತನ್ನ ಅಧಿಕಾರಿವಧಿಯಲ್ಲಿ ಅಧಿಕ ಮೆಡಿಕಲ್ ಕಾಲೇಜು ಆರಂಭಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ವಿಶ್ವವಿದ್ಯಾನಿಲಯಗಳ ಸಂಖ್ಯೆ ಅಧಿಕವಾಗಿದೆ : ರಾಷ್ಟ್ರಪತಿ
11:52 AM
Jan 31, 2023
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಸನ್ನಿವೇಶಕ್ಕೆ ತಕ್ಕಂತೆ ವಿಸ್ತರಿಸಲು ಸರ್ಕಾರ ನಿರ್ಧರಿಸಿರುವುದು ಸಂತೋಷದ ವಿಚಾರ. ಇದು ನಮ್ಮ ಸರಕಾರ ಬಡವರ ಪರ ಎನ್ನುವುದನ್ನು ಸಾಬೀತು ಪಡಿಸುತ್ತದೆ ಎಂದ ರಾಷ್ಟ್ರಪತಿ ದ್ರೌಪದಿ ಮರ್ಮು
11:51 AM
Jan 31, 2023
ನನ್ನ ಸರ್ಕಾರವು ಪಿಎಂ ಗತಿ ಮಾಸ್ಟರ್ ಪ್ಲ್ಯಾನ್ ಅನ್ನು ಆರಂಭಿಸಿದೆ. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಮೂಲಸೌಕರ್ಯಗಳ ಸೃಷ್ಟಿಯು ಒಂದು ಸಾಬೀತಾದ ಮಾರ್ಗವಾಗಿದೆ: ರಾಷ್ಟ್ರಪತಿ
11:47 AM
Jan 31, 2023
ಕೋವಿಡ್ ಅವಧಿಯಲ್ಲಿ ಜನರು ಪಟ್ಟ ಕಷ್ಟವನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಬಡವರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ದೇಶಗಳಲ್ಲಿ ಭಾರತ ಕೂಡಾ ಒಂದು. ಈ ಅವಧಿಯಲ್ಲಿ ಯಾವುದೇ ಬಡವರು ಖಾಲಿ ಹೊಟ್ಟೆಯಲ್ಲಿ ಮಲಗದಂತೆ ನೋಡಿಕೊಳ್ಳುವ ವಸ್ತುನಿಷ್ಟ ಕೆಲಸವನ್ನು ನಮ್ಮ ಸರಕಾರ ಮಾಡಿದೆ - ರಾಷ್ಟ್ರಪತಿ.
11:47 AM
Jan 31, 2023
ನನ್ನ ಸರ್ಕಾರವು ಜಾರಿ ಮಾಡಿದ ಎಲ್ಲ ಯೋಜನೆಗಳಲ್ಲಿ ಮಹಿಳಾ ಸಬಲೀಕರಣವು ಮುಖ್ಯ ಉದ್ದೇಶವಾಗಿದೆ: ರಾಷ್ಟ್ರಪತಿ ಮುರ್ಮು
11:44 AM
Jan 31, 2023
ಜನ್ ಧನ್-ಆಧಾರ್-ಮೊಬೈಲ್‌ನಿಂದ ಒನ್ ನೇಷನ್ ಒನ್ ರೇಷನ್ ಕಾರ್ಡ್‌ಗೆ ನಕಲಿ ಫಲಾನುಭವಿಗಳನ್ನು ತೆಗೆದುಹಾಕುವುದರಿಂದ ಶಾಶ್ವತ ಸುಧಾರಣೆಯನ್ನು ತರುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ಡಿಬಿಟಿ/ಡಿಜಿಟಲ್ ಇಂಡಿಯಾ ರೂಪದಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಸರಕಾರ ಮಾಡಿದೆ - ರಾಷ್ಟ್ರಪತಿ.
11:41 AM
Jan 31, 2023
ಸತತವಾಗಿ ಸ್ಥಿರವಾದ ಸರಕಾರವನ್ನು ಚುನಾಯಿಸಿದ್ದಕ್ಕಾಗಿ ನಾನು ಈ ಅಧಿವೇಶನದ ಮೂಲಕ ದೇಶದ ಜನತೆಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ನಮ್ಮ ಸರಕಾರ ದಿಟ್ಟ ಮತ್ತು ಸರಿಯಾದ ಹೆಜ್ಜೆಯನ್ನು ಇಟ್ಟಿದೆ - ರಾಷ್ಟ್ರಪತಿ
11:41 AM
Jan 31, 2023
ಸಣ್ಣ ರೈತರಿಗೆ ಸರ್ಕಾರವು ಹಣಕಾಸು ಸಹಾಯವನ್ನು ಮಾಡುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಾಗಿ 2.5 ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯಿಸಿದೆ: ರಾಷ್ಟ್ರಪತಿ ಮುರ್ಮು
11:39 AM
Jan 31, 2023
ಗರೀಬಿ ಹಟಾವೋ ಎಂಬುವುದು ಬರೀ ಘೋಷಣೆಯಾಗಿಲ್ಲ. ನನ್ನ ಸರ್ಕಾರವು ಬಡತನ ನಿರ್ಮೂಲನೆಗೆ ಸಂಪೂರ್ಣ ಪ್ರಯತ್ನ ಮಾಡುತ್ತಿದೆ: ರಾಷ್ಟ್ರಪತಿ ಮುರ್ಮು
11:38 AM
Jan 31, 2023
ಬಸವಣ್ಣನವರ ವಚನ ಉಲ್ಲೇಖಿಸಿದ ರಾಷ್ಟ್ರಪತಿ
ಬಸವಣ್ಣನವರ ವಚನ ಉಲ್ಲೇಖಿಸಿದ ರಾಷ್ಟ್ರಪತಿ
ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ರಾಷ್ಟ್ರಪತಿ. "ಶಿವ ದೇವರು ತೋರಿಸಿಕೊಟ್ಟ ದಾರಿಯಲ್ಲಿ ನಮ್ಮ ಸರಕಾರ ಮುನ್ನಡೆಯುತ್ತಿದೆ. ರಾಷ್ಟ್ರ ನಿರ್ಮಾಣದ ವಿಚಾರದಲ್ಲಿ ಸರಕಾರ ಹಗಲಿರುಳು ಕೆಲಸವನ್ನು ಮಾಡುತ್ತಿದೆ" ಎಂದ ದ್ರೌಪತಿ ಮುರ್ಮು
11:37 AM
Jan 31, 2023
ಎಲ್ಲ ವಲಯಗಳಲ್ಲಿ ಮಹಿಳೆಯರನ್ನು ಭರ್ತಿ ಮಾಡಲಾಗುತ್ತಿದೆ. ಮಿಲಿಟರಿಯವರೆಗೂ ನಮ್ಮ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಮಹಿಳಾ ಉದ್ಯಮಿಗಳು ಹೆಚ್ಚುತ್ತಿದ್ದಾರೆ. ಇದಕ್ಕೆ ಪಿಎಂ ಆವಾಸ್ ಯೋಜನೆ ಸಹಕಾರಿಯಾಗಿದೆ: ರಾಷ್ಟ್ರಪತಿ
11:34 AM
Jan 31, 2023
ಜಿಎಸ್‌ಟಿ ಮೂಲಕ ಪಾರದರ್ಶಕತೆಯ ಜೊತೆಯೆ, ತೆರಿಗೆ ಪಾವತಿದಾರರ ಘನತೆಗೂ ಯಾವುದೇ ಧಕ್ಕೆ ಉಂಟಾಗದಂತೆ ನೋಡಲಾಗುತ್ತಿದೆ: ರಾಷ್ಟ್ರಪತಿ ಮುರ್ಮು
11:32 AM
Jan 31, 2023
ಶೀಘ್ರ ತೆರಿಗೆ ರಿಫಂಡ್
ಶೀಘ್ರ ತೆರಿಗೆ ರಿಫಂಡ್
ಈ ಹಿಂದೆ ತೆರಿಗೆ ರಿಫಂಡ್‌ಗಾಗಿ ಅಧಿಕ ಕಾಲ ಕಾಯಬೇಕಾಗಿತ್ತು. ಆದರೆ ಈಗ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ ಕೆಲವೇ ದಿನಗಳಿಂದ ರಿಫಂಡ್ ಲಭ್ಯವಾಗುತ್ತದೆ: ರಾಷ್ಟ್ರಪತಿ ಮುರ್ಮು
11:31 AM
Jan 31, 2023
ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಕಠಿಣ ಕ್ರಮ, ಎಲ್‌ಒಸಿ ಮತ್ತು ಎಲ್‌ಎಸಿಯಲ್ಲಿ ಕಟ್ಟುನಿಟ್ಟಿನ ಪಹರೆ. ವಿಶ್ವದ ಇತರ ರಾಷ್ಟ್ರಗಳಲ್ಲಿ ರಾಜಕೀಯ ಅರಾಜಕತೆ ಉಂಟಾದಾಗ ಭಾರೀ ಬಿಕ್ಕಟ್ಟನ್ನು ಎದುರಿಸುತ್ತದೆ. ಆದರೆ, ಸರಕಾರದ ಸೂಕ್ತವಾದ ಕ್ರಮಗಳಿಂದ ಭಾರತ ಈಗ ಉತ್ತಮ ಸ್ಥಾನದಲ್ಲಿದೆ - ರಾಷ್ಟಪತಿ.
11:30 AM
Jan 31, 2023
ಆದಿವಾಸಿಗಳಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಪ್ರಧಾನ ಮಂತ್ರಿ ಉದ್ಯೋಗ ಯೋಜನೆಯಡಿಯಲ್ಲಿ ಉದ್ಯೋಗ ಒದಗಿಸಲಿದೆ. ಬಂಜಾರ ಸಮುದಾಯಕ್ಕಾಗಿ ಕಲ್ಯಾಣ ಯೋಜನೆ ಜಾರಿ ಮಾಡಲಾಗಿದೆ. ಮೊದಲ ಬಾರಿಗೆ ಬಿರ್ಸಾ ಮುಂಡ ಜನ್ಮದಿನವನ್ನು ಆಚರಣೆ ಮಾಡಲಾಗಿದೆ: ರಾಷ್ಟ್ರಪತಿ ಮುರ್ಮು
11:28 AM
Jan 31, 2023
ಭಾರತದ ಡಿಜಿಟಲ್ ನೆಟ್‌ವರ್ಕ್ ವಿಶ್ವಕ್ಕೆ ಸ್ಪೂರ್ತಿಯಾಗಿದೆ: ರಾಷ್ಟ್ರಪತಿ ಮುರ್ಮು
11:27 AM
Jan 31, 2023
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ್ದು, ತ್ರಿಬಲ್ ತಲಾಖ್ ಸೇರಿದಂತೆ ನಮ್ಮ ಸರಕಾರವು ಹಲವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತುಹಾಕುವ ಸೂಕ್ತ ಹೆಜ್ಜೆಯನ್ನು ಸರಕಾರ ಇಟ್ಟಿದೆ - ರಾಷ್ಟ್ರಪತಿ
11:26 AM
Jan 31, 2023
ಕಳೆದ ಮೂರು ವರ್ಷದಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ 11 ಕೋಟಿ ಕುಟುಂಬಗಳಿಗೆ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಬಡ ಕುಟುಂಬವು ಇದರಿಂದಾಗಿ ಅಧಿಕ ಪ್ರಯೋಜನ ಪಡೆಯುತ್ತಿದೆ: ರಾಷ್ಟ್ರಪತಿ ಮುರ್ಮು
11:25 AM
Jan 31, 2023
ಸರ್ಕಾರ ಎಲ್ಲರ ಇಚ್ಛೆಯನ್ನು ಪೂರೈಸಿದೆ. ದಲಿತ, ಬಡವ, ಬಲ್ಲಿದರ ಏಳಿಗೆಗಾಗಿ ಸರ್ಕಾರವು ಕಾರ್ಯನಿರ್ವಹಣೆ ಮಾಡಿದೆ: ರಾಷ್ಟ್ರಪತಿ
11:21 AM
Jan 31, 2023
ಈಗ ಸ್ಥಿರವಾದ ಮತ್ತು ಯಾವುದೇ ಭೀತಿಯಿಲ್ಲದ ಸರಕಾರವನ್ನು ನಾವು ಹೊಂದಿದ್ದೇವೆ. ದೇಶದ ಭವಿಷ್ಯದ ವಿಚಾರದಲ್ಲಿ ಸರಕಾರ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ: ರಾಷ್ಟ್ರಪತಿ
11:20 AM
Jan 31, 2023
ಅಭಿವೃದ್ಧಿಗೆ ಭಾರತ ಹೆಸರುವಾಸಿಯಾಗಿದೆ. ಈ ಹಿಂದಿನ ಎಲ್ಲ ಅಡೆತಡೆಗಳನ್ನು ದಾಟಿ ಮುಂದೆ ಸಾಗುತ್ತಿದೆ: ದ್ರೌಪತಿ ಮುರ್ಮು
11:19 AM
Jan 31, 2023
ಭಾರತ ಬಡತನ ಮುಕ್ತ ದೇಶವಾಗಬೇಕು, ಮಧ್ಯಮ ವರ್ಗದ ಜನರ ಜೀವನವೂ ಹಸನಾಗಬೇಕು. ದೇಶ ನಿರ್ಮಾಣದ ವಿಚಾರದಲ್ಲಿ ಯುವಕರು ಮತ್ತು ಮಹಿಳೆಯರ ಪಾತ್ರ ನಿರ್ಣಾಯಕವಾಗಬೇಕು: ರಾಷ್ಟ್ರಪತಿ
11:17 AM
Jan 31, 2023
2047 ರ ವೇಳೆಗೆ, ನಾವು ಈ ಹಿಂದಿನ ಹೆಮ್ಮೆಯನ್ನು ಹೊಂದಿರುವ, ಆಧುನಿಕತೆಗೆ ಒಗ್ಗಿಕೊಂಡಿರುವ ರಾಷ್ಟ್ರವನ್ನು ನಿರ್ಮಿಸಬೇಕಾಗಿದೆ. ನಾವು 'ಆತ್ಮನಿರ್ಭರ' ಮತ್ತು ಮಾನವೀಯ ಕರ್ತವ್ಯಗಳನ್ನು ಪೂರೈಸಲು ಸಮರ್ಥವಾದ ಭಾರತವನ್ನು ನಿರ್ಮಿಸಬೇಕಾಗಿದೆ: ರಾಷ್ಟ್ರಪತಿ
11:15 AM
Jan 31, 2023
ಭಾರತವು ತನ್ನ ಮೇಲೆ ಭರವಸೆಯನ್ನು ಹೊಂದಿರುವ, ಬಡತನವಿಲ್ಲದ, ಸ್ವಾವಲಂಬಿ ದೇಶವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು: ರಾಷ್ಟ್ರಪತಿ ದ್ರೌಪತಿ ಮುರ್ಮು
11:07 AM
Jan 31, 2023
ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಯವರ ಚೊಚ್ಚಲ ಭಾಷಣ ಆರಂಭ. ಹಾಲೀ ಅಧಿವೇಶನದಲ್ಲಿ ಆರೋಪ/ಪ್ರತ್ಯಾರೋಪಗಳು ನಡೆದರೂ ಉಪಯುಕ್ತವಾದ ಚರ್ಚೆ ನಡೆಯಲಿದೆ ಎನ್ನುವ ವಿಶ್ವಾಸವನ್ನು ಪ್ರಧಾನಿಯವರು ವ್ಯಕ್ತ ಪಡಿಸಿದ್ದಾರೆ.
11:06 AM
Jan 31, 2023
ವಾರ್ಷಿಕ ಆರ್ಥಿಕ ಸಮೀಕ್ಷೆ 2022-23ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡ 6-6.8ರಷ್ಟಿರುವ ಸಾಧ್ಯತೆಯಿದೆ. 2023-24ನೇ ವರ್ಷಕ್ಕೆ ಬೆಳವಣಿಗೆ ದರ ಶೇಕಡ 6.5 ಎಂದು ಅಂದಾಜಿಸಬಹುದು.
11:03 AM
Jan 31, 2023
ಕೆಲವೇ ಕ್ಷಣದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಬಜೆಟ್ ಭಾಷಣೆ ಮಾಡಲಿದ್ದಾರೆ. ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
10:58 AM
Jan 31, 2023
ಷೇರುಪೇಟೆ ಕುಸಿತ
ಷೇರುಪೇಟೆ ಕುಸಿತ
ಆರ್ಥಿಕ ಸಮೀಕ್ಷೆ ಮಂಡನೆಯಾಗುವುದಕ್ಕೂ ಮುನ್ನ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೆನ್ಸೆಕ್ಸ್ 325 ಅಂಕ ಕುಸಿದು, 59,175ಕ್ಕೆ ತಲುಪಿದೆ. ನಿಫ್ಟಿ 17,559ಕ್ಕೆ ಇಳಿದಿದೆ.
10:39 AM
Jan 31, 2023
11 ಗಂಟೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭಾಷಣದೊಂದಿಗೆ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ
6:30 AM
Jan 31, 2023
ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯು ಪ್ರಮುಖ ಬಜೆಟ್ ನಿರೀಕ್ಷೆಯಾಗಿದೆ.
6:29 AM
Jan 31, 2023
ಚುನಾವಣೆಗೂ ಮುನ್ನ ಬರುವ ಬಜೆಟ್ ಆದ ಕಾರಣ ಜನರ ಬಜೆಟ್ ನಿರೀಕ್ಷೆ ಅಧಿಕವಾಗಿದೆ.
6:28 AM
Jan 31, 2023
2024ರ ಲೋಕಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.
6:25 AM
Jan 31, 2023
ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ.