For Quick Alerts
ALLOW NOTIFICATIONS  
For Daily Alerts

2023ನೇ ಇಸವಿ ಹೊತ್ತಿಗೆ ಮಾರುಕಟ್ಟೆಯ ಶೇ 50ರಷ್ಟು 5G ಸ್ಮಾರ್ಟ್ ಫೋನ್

|

ಜಾಗತಿಕ ಸ್ಮಾರ್ಟ್ ಫೋನ್ ಮಾರ್ಕೆಟ್ 2022ನೇ ಇಸವಿ ಹೊತ್ತಿಗೆ ಚೇತರಿಸಿಕೊಳ್ಳುತ್ತದೆ ಮತ್ತು 2023ನೇ ಇಸವಿ ಹೊತ್ತಿಗೆ ಶೇಕಡಾ 50ರಷ್ಟು ಮಾರುಕಟ್ಟೆಯನ್ನು 5G ಸ್ಮಾರ್ಟ್ ಫೋನ್ ಗಳು ಆವರಿಸಿಕೊಂಡಿರುತ್ತವೆ ಎಂದು ಐಡಿಸಿ ಹೊಸ ವರದಿ ತಿಳಿಸಿದೆ. ಏನೇ ಕೊರೊನಾ ಬಿಕ್ಕಟ್ಟು ಅಂತಿದ್ದರೂ, ಗ್ರಾಹಕರ ಬೇಡಿಕೆ ಕಡಿಮೆ ಆಗಿದ್ದರೂ ಎಲ್ಲ ಸ್ಮಾರ್ಟ್ ಫೋನ್ ಬಳಕೆದಾರರಿಗೆ 5G ಆದ್ಯತೆ ಆಗಿದೆ.

ಮಾರ್ಕೆಟ್ ಬೇಡಿಕೆ ಕುಸಿತ ಆಗಿರುವ ಹಿನ್ನೆಲೆಯಲ್ಲಿ ಪ್ರಮುಖ ಮಾರಾಟ ಕಂಪೆನಿಗಳು 2020ರಲ್ಲಿ ಉತ್ಪಾದನೆಯನ್ನೇ ಕಡಿಮೆ ಮಾಡಿವೆ. 4G ಫೋನ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿವೆ ಎಂದು ತಜ್ಞರು ತಿಳಿಸುತ್ತಾರೆ. 2020ರ ಕೊನೆಯ ಹೊತ್ತಿಗೆ 5G ಮೊಬೈಲ್ ಫೋನ್ ಗಳ ಸಂಖ್ಯೆಯಲ್ಲಿ ಹೆಚ್ಚಾಗಿ, 4G ಫೋನ್ ಗಳ ಮಾರಾಟ ಗಣನೀಯವಾಗಿ ಕಡಿಮೆ ಆಗಲಿದೆ.

ಲಾಕ್‌ಡೌನ್ ಸಮಯದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಶೇ 41 ರಷ್ಟು ಕುಸಿತಲಾಕ್‌ಡೌನ್ ಸಮಯದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಶೇ 41 ರಷ್ಟು ಕುಸಿತ

ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಆ ಕಾರಣಕ್ಕೆ 5Gಗೆ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇನ್ನು 5G ಹಾರ್ಡ್ ವೇರ್ ಹಾಗೂ ಸೇವೆಗೆ ಸಂಬಂಧಿಸಿದ ಶುಲ್ಕಗಳು ಕೂಡ ಬಹಳ ಮುಖ್ಯವಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಸ್ಮಾರ್ಟ್ ಫೋನ್ ಮಾರ್ಕೆಟ್ 9.5% ಕಡಿಮೆ ಆಗುವ ಬಗ್ಗೆ ಅಂದಾಜು ಮಾಡಲಾಗಿದೆ. 120 ಕೋಟಿ ಯೂನಿಟ್ ಗಳು ಮಾರಾಟ ಆಗುವ ಲೆಕ್ಕಾಚಾರ ಇದೆ.

2023ನೇ ಇಸವಿ ಹೊತ್ತಿಗೆ ಮಾರುಕಟ್ಟೆಯ ಶೇ 50ರಷ್ಟು 5G ಸ್ಮಾರ್ಟ್ ಫೋನ್

ಕಳೆದ ತ್ರೈಮಾಸಿಕದಲ್ಲಿ 400 USDಗಿಂತ ಕಡಿಮೆ ಬೆಲೆಯ 5G ಫೋನ್ 43% ಮಾರಾಟ ಆಗಿದೆ. 2023ರ ಹೊತ್ತಿಗೆ 5G ಮೊಬೈಲ್ ಫೋನ್ ಗಳ ಸರಾಸರಿ ಬೆಲೆ 495 ಅಮೆರಿಕನ್ ಡಾಲರ್ ಆಗಬಹುದು ಎಂದು ಐಡಿಸಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 5G ಎಂಬುದರ ಹೊರತಾಗಿ ಮಾರುಕಟ್ಟೆ ಚೇತರಿಕೆಗೆ ಕಾರಣ ಆಗುವ ಅಂಶಗಳು ಬೇಕಾದಷ್ಟಿವೆ. ಅದರಲ್ಲಿ ಅಭಿವೃದ್ಧಿ ಆಗುತ್ತಿರುವ ಮಾರ್ಕೆಟ್ ಗಳಲ್ಲಿ ಅವಕಾಶಗಳು ಮುಂದುವರಿಯಲಿವೆ ಎನ್ನಲಾಗಿದೆ.

English summary

By 2023 5G Smartphones Will Capture 50 Percent Of Market Share: IDC

According to IDC, by 2023 5G smartphones will capture 50 percent of market share.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X