For Quick Alerts
ALLOW NOTIFICATIONS  
For Daily Alerts

1 ಲಕ್ಷ ಕೋಟಿ ರೂ.ಗಳ ಚಿನ್ನ ಸಾಲದ ಮೊತ್ತ ದಾಟಿದ ಕೆನರಾ ಬ್ಯಾಂಕ್

|

ಬೆಂಗಳೂರು, ಜುಲೈ 2: ಕೆನರಾ ಬ್ಯಾಂಕ್ 30.06.2022 ರಲ್ಲಿ ಬಾಕಿ ಉಳಿದಿರುವ ಚಿನ್ನದ ಸಾಲದ ಅಡಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಚಿನ್ನದ ಸಾಲದ ಮೊತ್ತವನ್ನು ದಾಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ, ಕೆನರಾ ಬ್ಯಾಂಕ್ ಚಿನ್ನದ ಸಾಲ ಶೇಕಡ 26.19ರಷ್ಟು ಹೆಚ್ಚು ಬೆಳವಣಿಗೆ ಕಂಡಿದೆ. 435 ಕೆನರಾ ಬ್ಯಾಂಕ್ ಗೋಲ್ಡ್ ಲೋನ್ ಪ್ಲಾಜಾ ಶಾಖೆಗಳ ಕೊಡುಗೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಕೆನರಾ ಬ್ಯಾಂಕ್ ಮುಖ್ಯ ಜನರಲ್ ಮ್ಯಾನೇಜರ್, ಭವೇಂದ್ರ ಕುಮಾರ್ ಅವರು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದು, ಕೆನರಾ ಬ್ಯಾಂಕ್ ಚಿನ್ನದ ಸಾಲದ ಹೊರತಾಗಿ, ಚಿಲ್ಲರೆ, ವಸತಿ, ಎಂಎಸ್‍ಎಂಇ, ಕೃಷಿ ಮತ್ತು ಕಾರ್ಪೋರೇಟ್‌ಗಳು ಸೇರಿದಂತೆ ಎಲ್ಲಾ ಸಾಲ ಮಾನದಂಡಗಳಲ್ಲಿ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದರು.

ಆರ್‌ಬಿಐಗೂ ಮುನ್ನ ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ದರ ಪರಿಶೀಲಿಸಿಆರ್‌ಬಿಐಗೂ ಮುನ್ನ ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ದರ ಪರಿಶೀಲಿಸಿ

ಅಲ್ಪಾವಧಿಯಿಂದ ಮಧ್ಯಮಾವಧಿಯವರೆಗೆ ಚಿನ್ನದ ಸಾಲದ ಅಡಿಯಲ್ಲಿ ಭಾರಿ ಬೇಡಿಕೆ ಬರುವ ನಿರೀಕ್ಷೆಯನ್ನು ಬೆಂಗಳೂರಿನ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಕೆನರಾ ಬ್ಯಾಂಕ್ ಮುಖ್ಯ ಜನರಲ್ ಮ್ಯಾನೇಜರ್, ಭವೇಂದ್ರ ಕುಮಾರ್ ಹೊಂದಿದ್ದಾರೆ.

1 ಲಕ್ಷ ಕೋಟಿ ರೂ.ಗಳ ಚಿನ್ನ ಸಾಲದ ಮೊತ್ತ ದಾಟಿದ ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಕುರಿತು ಮಾಹಿತಿ

ಕೆನರಾ ಬ್ಯಾಂಕ್ ಅಮ್ಮೆಂಬಾಳ್ ಸುಬ್ಬ ರಾವ್ ಪೈ ಸ್ಥಾಪಿಸಿದ್ದು, ಇದು 1906ರ ಜುಲೈನಲ್ಲಿ ಕರ್ನಾಟಕದ ಬಂದರು ನಗರಿ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ಆರಂಭವಾಗಿದೆ. 2020ರ ಏಪ್ರಿಲ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್ ಜೊತೆ ವಿಲೀನಗೊಂಡ ಬಳಿಕ ದೇಶದ 4ನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಕೆನರಾ ಬ್ಯಾಂಕ್ ಗುರುತಿಸಿಕೊಂಡಿದೆ.

ಪ್ರಸ್ತುತ 3075 ಗ್ರಾಮೀಣ, 3175 ಪಟ್ಟಣ, 2103 ನಗರ ಮತ್ತು 2138 ಮೆಟ್ರೋ ಶಾಖೆಗಳು ಸೇರಿ ಒಟ್ಟಾರೆ 10,491 ಶಾಖೆಗಳನ್ನು ಹೊಂದಿರುವ ಕೆನರಾ ಬ್ಯಾಂಕ್, 12973 ಎಟಿಎಂ ಕೇಂದ್ರಗಳನ್ನು ಒಳಗೊಂಡಿದೆ.

969ರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮಾನ್ಯತೆ ಪಡೆದ ಬಳಿಕ ಭೌಗೋಳಿಕ ವ್ಯಾಪ್ತಿ ಗ್ರಾಹಕರ ವಿಭಾಗದಲ್ಲಿ ರಾಷ್ಟ್ರಮಟ್ಟದ ಸಂಸ್ಥೆಯಾಗಿ ಬ್ಯಾಂಕ್ ಗುರುತಿಸಿಕೊಂಡಿದೆ. ಕೆನರಾ ಬ್ಯಾಂಕ್ 2006ರ ಜೂನ್‌ನಲ್ಲಿ ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿ 100 ವರ್ಷಗಳನ್ನು ಪೂರ್ಣಗೊಳಿಸಿದೆ. ಸಂ

English summary

Canara Bank celebrates Rs 1 lakh Crore Gold Loan

Canara Bank is celebrating surpassing of Rs. 1 Lakh Crore under Gold Loan outstanding as on 30.06.2022.
Story first published: Saturday, July 2, 2022, 20:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X