For Quick Alerts
ALLOW NOTIFICATIONS  
For Daily Alerts

30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್‌ಜೆಮಿನಿ

|

ಫ್ರಾನ್ಸ್‌ ಮೂಲದ ಐಟಿ ಕಂಪನಿ ಕ್ಯಾಪ್‌ಜೆಮಿನಿ 2021ರಲ್ಲಿ ಭಾರತದಲ್ಲಿ ಸುಮಾರು 30,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಶೇಕಡಾ 25ರಷ್ಟು ಹೆಚ್ಚು ಜನರನ್ನು ನೇಮಿಸಿಕೊಳ್ಳಲಿದೆ.

''ಈ ರೀತಿಯ ಬಲವಾದ ನೇಮಕಾತಿಯು 2021ರ ಆದಾಯವು ಶೇಕಡಾ 7 ರಿಂದ 9ರಷ್ಟು ಹೆಚ್ಚಾಗಿರುವುದನ್ನು ಪ್ರತಿಬಿಂಬಿಸುತ್ತದೆ'' ಎಂದು ಭಾರತದ ಕ್ಯಾಪ್‌ಜೆಮಿನಿ ಮುಖ್ಯ ಕಾರ್ಯನಿರ್ವಾಹಕ ಅಶ್ವಿನ್ ಯಾರ್ಡಿ ಹೇಳಿದ್ದಾರೆ.

30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್‌ಜೆಮಿನಿ

ಕೋವಿಡ್-19 ಸಾಂಕ್ರಾಮಿಕ ನಡುವೆ ಕಂಪನಿಯು ಉತ್ತಮ ಪ್ರಗತಿಯೊಂದಿಗೆ ಆದಾಯ ಹೆಚ್ಚಾಗಿದ್ದು, ಹೊಸ ಕಾರ್ಯಾಚರಣೆಗಳು ಮತ್ತು ಸೇವಾ ವಲಯ ವಿಸ್ತರಣೆಗೆ ಹೊಸ ಸುಮಾರು 30,000 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಇದರಲ್ಲಿ 50:50 ಮಿಶ್ರಣವಿರಲಿದ್ದು, ಫೆಶ್ರರ್‌ಗಳು ಮತ್ತು ಅನುಭವಿಗಳನ್ನು ಒಳಗೊಂಡಿರಲಾಗುತ್ತದೆ.

COVID-19 ಪ್ರಚೋದಿತ ಡಿಜಿಟಲ್ ಪರಿಹಾರಗಳ ಬೇಡಿಕೆ ಮತ್ತು ಸಂಸ್ಥೆಯ ಬಲಿಷ್ ವ್ಯಾಪಾರ ಭವಿಷ್ಯದ ಮಧ್ಯೆ ಕ್ಯಾಪ್ಜೆಮಿನಿಯ ಮುನ್ಸೂಚನೆ ಬಂದಿದೆ ಎಂದು ಮಿಂಟ್ ವರದಿ ಮಾಡಿದೆ. "ಜನರು ಫ್ರೆಶರ್‌ಗಳು ಮತ್ತು ಲ್ಯಾಟರಲ್‌ಗಳ 50:50 ಮಿಶ್ರಣವಾಗುತ್ತಾರೆ" ಎಂದು ಅವರು ಹೇಳಿದರು.

ಭಾರತದಲ್ಲಿ 1.25 ಲಕ್ಷ ಉದ್ಯೋಗಿಗಳನ್ನು ಕ್ಯಾಪ್ ಜೆಮಿನಿ ಹೊಂದಿದೆ. ಕಳೆದ ವರ್ಷ 24,000 ಮಂದಿಯನ್ನು ಭಾರತದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಒಟ್ಟಾರೆ ಕಂಪನಿಯು 2,70,000 ಉದ್ಯೋಗಿಗಳನ್ನು ಹೊಂದಿದೆ.

English summary

Capgemini to hire 30,000 people in India in 2021

French IT services provider Capgemini plans to hire about 30,000 people in India in 2021, a 25 per cent increase from last year
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X