For Quick Alerts
ALLOW NOTIFICATIONS  
For Daily Alerts

ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ ತನಿಖೆಗೆ ಆದೇಶ

|

ಇ ಕಾಮರ್ಸ್ ಕಂಪೆನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ನೀಡುವ ರಿಯಾಯಿತಿ ದರಗಳ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಕೆಲವು ನಿರ್ದಿಷ್ಟ ಬ್ರ್ಯಾಂಡ್ ನವರು ಎಕ್ಸ್ ಕ್ಲೂಸಿವ್ ಆಗಿ ಈ ವೆಬ್ ಸೈಟ್ ಗಳ ಮೂಲಕವಷ್ಟೇ ಮಾರಾಟ ಮಾಡುತ್ತವೆ. ಅವುಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ ಎಂಬ ಆರೋಪ ಎದುರಾಗಿದೆ.

ಭಾರತ ಸ್ಪರ್ಧಾತ್ಮಕ ಆಯೋಗವು ಸೋಮವಾರದಂದು ಈ ಬಗ್ಗೆ ಆದೇಶ ಹೊರಡಿಸಿದೆ. "ಮೇಲ್ನೋಟಕ್ಕೆ ಈ ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯದ ಬಗ್ಗೆ ತನಿಖೆ ಅಗತ್ಯ ಇದೆ" ಎನ್ನಲಾಗಿದೆ. ಇನ್ನು ಅರವತ್ತು ದಿನದೊಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಇಂಥ ಪ್ರಕರಣಗಳ ವಿಚಾರಣೆ ನಡೆಸುವ ಡೆರೆಕ್ಟರ್ ಜನರಲ್ ಗೆ ಸೂಚಿಸಲಾಗಿದೆ.

ಅಮೆಜಾನ್ ಸ್ಥಾಪಕ ಬೆಜೋಸ್ ಭಾರತ ಭೇಟಿ ವೇಳೆ ಪ್ರತಿಭಟನೆಗೆ ನಿರ್ಧಾರಅಮೆಜಾನ್ ಸ್ಥಾಪಕ ಬೆಜೋಸ್ ಭಾರತ ಭೇಟಿ ವೇಳೆ ಪ್ರತಿಭಟನೆಗೆ ನಿರ್ಧಾರ

ಈ ವಾರ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. "ಅಮೆಜಾನ್ ವಿರುದ್ಧ ಬಂದಿರುವ ಆರೋಪವನ್ನು ಬಗೆಹರಿಸಿಕೊಳ್ಳಲು ಇರುವ ಅವಕಾಶವನ್ನು ಸ್ವಾಗತಿಸುತ್ತೇವೆ. ನಮ್ಮ ನಿಯಮಾವಳಿ ಪಾಲನೆ ಬಗ್ಗೆ ಭರವಸೆ ಇದೆ. ಸಿಸಿಐಗೆ (ಸ್ಪರ್ಧಾತ್ಮಕ ಆಯೋಗ) ಸಹಕಾರ ನೀಡುತ್ತೇವೆ" ಎಂದು ಅಮೆಜಾನ್ ನಿಂದ ತಿಳಿಸಲಾಗಿದೆ.

ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ ತನಿಖೆಗೆ ಆದೇಶ

ವಾಲ್ ಮಾರ್ಟ್ ಮಾಲೀಕತ್ವದ ಫ್ಲಿಪ್ ಕಾರ್ಟ್, ಆದೇಶವನ್ನು ಪರಿಶೀಲಿಸುತ್ತಿದ್ದೇವೆ. ಜಾರಿಯಲ್ಲಿ ಇರುವ ಕಾನೂನು ಅನುಸರಿಸುತ್ತಿದ್ದೇವೆ ಎಂದು ಹೇಳಿದೆ. ದೆಹಲಿ ವ್ಯಾಪಾರ್ ಮಹಾಸಂಘ್ ನ ದೂರಿನ ಅನ್ವಯ ಈ ಆದೇಶವನ್ನು ಹೊರಡಿಸಲಾಗಿದೆ. ಬಿಗ್ ಬಿಲಿಯನ್ ಡೇ ಮತ್ತಿತರ ಸಂದರ್ಭಗಳಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್ ನಿಂದ ಭಾರೀ ರಿಯಾಯಿತಿ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಎರಡು ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಅರವತ್ತೇಳು ಮೊಬೈಲ್ ಫೋನ್ ಮತ್ತು ಅಮೆಜಾನ್ ನಲ್ಲಿ ನಲವತ್ತೈದು ಮೊಬೈಲ್ ಮಾರಾಟ ಮಾಡಲಾಗಿದೆ. ಇದರಿಂದ ಎಕ್ಸ್ ಕ್ಲೂಸಿವ್ ಬ್ರ್ಯಾಂಡ್, ಮಾರಾಟಗಾರರು, ಹೆಚ್ಚಿನ ರಿಯಾಯಿತಿ ಮತ್ತು ಆದ್ಯತೆ ಲಿಸ್ಟಿಂಗ್ ನೀಡಿದಂತಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary

CCI Ordered Probe Against E Commerce Companies Flipkart, Amazon

CCI ordered probe against Flipkart and Amazon, instructed to file a report within 60 days.
Story first published: Tuesday, January 14, 2020, 13:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X