For Quick Alerts
ALLOW NOTIFICATIONS  
For Daily Alerts

ಐಟಿ ಪೋರ್ಟಲ್ ದೋಷ ಪರಿಹರಿಸಲು ಇನ್ಫೋಸಿಸ್‌ಗೆ ಸೆಪ್ಟೆಂಬರ್ 15 ಡೆಡ್‌ಲೈನ್: FM

|

ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಮುಂದುವರಿದ ತಾಂತ್ರಿಕ ದೋಷ ಪರಿಹರಿಸಲು ಇನ್ಫೋಸಿಸ್‌ಗೆ ಸೆಪ್ಟೆಂಬರ್ 15ರವರೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡೆಡ್‌ಲೈನ್ ನೀಡಿದ್ದಾರೆ.

ಹೊಸ ಆದಾಯ ತೆರಿಗೆ ಇ-ಪೋರ್ಟಲ್‌ ಕಾರ್ಯಾರಂಭ ಆರಂಭಿಸಿದ ಎರಡು ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆಗಳು ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್‌ಗೆ ಆಗಸ್ಟ್‌ 23ರಂದು ಹಣಕಾಸು ಇಲಾಖೆ ಸಮನ್ಸ್‌ ನೀಡಿತ್ತು. ಸಮನ್ಸ್‌ಗೆ ಸೋಮವಾರ ಬೆಳಿಗ್ಗೆ ಪರೇಖ್‌ ಹಾಜರಾಗಿದ್ದರು. ಈ ವೇಳೆ ಇನ್ಫೋಸಿಸ್‌ಗೆ ಅಂತಿಮ ಗಡುವು ನೀಡಲಾಗಿದೆ.

ನಿನ್ನೆ ನಡೆದ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ನಡೆಗೆ ತೀವ್ರ ನಿರಾಸೆ ವ್ಯಕ್ತಪಡಿಸಿದರು. ಪೋರ್ಟಲ್ ಉದ್ಘಾಟನೆಯಾಗಿ ಎರಡೂವರೆ ತಿಂಗಳು ಕಳೆದ್ರೂ, ತಾಂತ್ರಿಕ ದೋಷ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಪರೇಖ್‌ ಜತೆ ಕಂಪನಿಯ ಭಾರತದ ಉದ್ಯಮದ ಮುಖ್ಯಸ್ಥ ಸಿಎನ್‌ ರಘುಪತಿ ಕೂಡ ಉಪಸ್ಥಿತರಿದ್ದರು.

ಐಟಿ ಪೋರ್ಟಲ್ ದೋಷ ಪರಿಹರಿಸಲು ಇನ್ಫೋಸಿಸ್‌ಗೆ ಡೆಡ್‌ಲೈನ್..!

ಸಮನ್ಸ್‌ಗೆ ಉತ್ತರಿಸಿದ ಸಲೀಲ್ ಪರೇಖ್, ಪೋರ್ಟಲ್‌ನಲ್ಲಿರುವ ತಾಂತ್ರಿಕ ದೋಷದ ಮಾಹಿತಿ ನೀಡಿದ್ದಾರೆ. ಬಳಿಕ ಈ ಸಮಸ್ಯೆ ಪರಿಹಾರಕ್ಕೆ ಇನ್ಫೋಸಿಸ್ ಕಾರ್ಯವನ್ನು ತಿಳಿಸಿದ್ದಾರೆ. ಇಷ್ಟಲ್ಲದೆ ಪೋರ್ಟಲ್‌ನಲ್ಲಿನ ಎಲ್ಲಾ ಸಮಸ್ಯೆ ನಿವಾರಿಸುವ ಕುರಿತು ರೋಡ್ ಮ್ಯಾಪ್ ನೀಡಿದ್ದಾರೆ.

2019ರಲ್ಲಿ ಇನ್ಫೋಸಿಸ್‌ಗೆ ಈ ಪೋರ್ಟಲ್‌ನ ಟೆಂಡರ್‌ನ್ನು 4,242 ಕೋಟಿ ರೂ.ಗೆ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್‌ಗಳ ಪ್ರೊಸೆಸಿಂಗ್‌ ಅವಧಿಯನ್ನು 63 ದಿನಗಳಿಂದ 1 ದಿನಕ್ಕೆ ಇಳಿಕೆ ಮಾಡುವ ಗುರಿಯನ್ನು ಈ ಸಂದರ್ಭದಲ್ಲಿ ಇನ್ಫೋಸಿಸ್‌ಗೆ ನೀಡಲಾಗಿತ್ತು.

ಆದಾಯ ತೆರಿಗೆ ಹೊಸ ಇ-ಫೈಲಿಂಗ್ ಪೋರ್ಟಲ್‌ ಅನ್ನು ಬಳಸುವುದು ಹೇಗೆ?ಆದಾಯ ತೆರಿಗೆ ಹೊಸ ಇ-ಫೈಲಿಂಗ್ ಪೋರ್ಟಲ್‌ ಅನ್ನು ಬಳಸುವುದು ಹೇಗೆ?

ಜೂನ್ 7 ರಂದು ಪ್ರಾರಂಭವಾದ ಹೊಸ ಐಟಿ ಇ-ಪೋರ್ಟಲ್ ಎರಡು ತಿಂಗಳಿಗಿಂತಲೂ ಹೆಚ್ಚಿನ ನಂತರವೂ, ತಾಂತ್ರಿಕ ದೋಷಗಳನ್ನು ಎದುರಿಸುತ್ತಲೇ ಇದೆ, ಬಳಕೆದಾರರು ಅನೇಕ ವಿಭಾಗಗಳು ಕಾರ್ಯನಿರ್ವಹಿಸುತ್ತಿಲ್ಲ ಅಥವಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದ್ದಾರೆ.

ಈ ಹಿಂದೆ ಜೂನ್ 22 ರಂದು ಸಹ, ಸೀತಾರಾಮನ್ ಅವರು ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದರು ಮತ್ತು ಸಾಧ್ಯವಾದಷ್ಟು ಬೇಗ ಎಲ್ಲಾ ದೋಷಗಳನ್ನು ಸರಿಪಡಿಸಲು ಮತ್ತು ತೆರಿಗೆದಾರರ ಎಲ್ಲಾ ಕುಂದುಕೊರತೆಗಳನ್ನು ಪರಿಹರಿಸಲು ಕೇಳಿದ್ದರು.

English summary

Central Govt Sets 15 Sep Deadline For Infosys To Fix Tax Portal Glitches

The Union finance ministry has set 15 September as the deadline for Infosys Ltd to fix glitches that have plagued the income tax department’s new e-filing portal since its launch in June.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X