For Quick Alerts
ALLOW NOTIFICATIONS  
For Daily Alerts

ಚೀನಾದ ಅತ್ಯಂತ ಸಿರಿವಂತ ಝೊಂಗ್ ಶನ್ಷನ್ ಈಗ ವಿಶ್ವದ 6ನೇ ಶ್ರೀಮಂತ

|

ನೊಂಗ್ ಫು ಸ್ಪ್ರಿಂಗ್ ಸ್ಥಾಪಕರಾದ ಝೊಂಗ್ ಶನ್ಷನ್ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಸೇರಿದ ಬಾಟಲ್ ನೀರು ಕಂಪೆನಿಯ ಷೇರು ಹ್ಯಾಂಗ್ ಸೆಂಗ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಬೆಲೆಗಿಂತ 200% ಏರಿಕೆ ಕಂಡಿದ್ದರಿಂದ ಶ್ರೀಮಂತಿಕೆಯಲ್ಲಿ ಭಾರೀ ಹೆಚ್ಚಳವಾಗಿದೆ.

ಕಳೆದ ವಾರ ನಿವ್ವಳ ಆಸ್ತಿ ಮೌಲ್ಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಆಧ್ಯಕ್ಷ ಮುಕೇಶ್ ಅಂಬಾನಿಯನ್ನು ಮೀರಿ, ಏಷ್ಯಾದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದರು ಶನ್ಷನ್. ಇದೀಗ ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಗಿಂತ ಶ್ರೀಮಂತ ಎನಿಸಿಕೊಂಡಿದ್ದಾರೆ. ನೊಂಗ್ ಫು ಸ್ಪ್ರಿಂಗ್ ಷೇರುಗಳ ಬೆಲೆಯಲ್ಲಿ ಏರಿಕೆ ಆದ ನಂತರ ಅವರ ಆಸ್ತಿಯಲ್ಲಿ 13.5 ಬಿಲಿಯನ್ ಯುಎಸ್ ಡಿ ಹೆಚ್ಚಳವಾಗಿ, 91.7 ಬಿಲಿಯನ್ ಯುಎಸ್ ಡಿ ಇದೆ.

ಶ್ರೀಮಂತರಾಗಲು, ಶ್ರೀಮಂತಿಕೆ ಉಳಿಯಲು ಮೇಧಾವಿಯ ಸಲಹೆಗಳುಶ್ರೀಮಂತರಾಗಲು, ಶ್ರೀಮಂತಿಕೆ ಉಳಿಯಲು ಮೇಧಾವಿಯ ಸಲಹೆಗಳು

ಬ್ಲೂಮ್ ಬರ್ಗ್ ಸೂಚ್ಯಂಕದಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಶನ್ಷನ್ ಆರನೇ ಸ್ಥಾನದಲ್ಲಿ ಇದ್ದಾರೆ. ಈ ಮಧ್ಯೆ ಅಮೆರಿಕನ್ ಹೂಡಿಕೆದಾರ ವಾರೆನ್ ಬಫೆಟ್ ಏಳನೇ ಸ್ಥಾನದಲ್ಲಿದ್ದು, ನಿವ್ವಳ ಆಸ್ತಿ ಮೌಲ್ಯ 86.2 ಬಿಲಿಯನ್ ಯುಎಸ್ ಡಿ ಇದೆ. ಅಂದಹಾಗೆ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಇರುವ ಏಕೈಕ ಚೀನಾ ದೇಶದ ವ್ಯಕ್ತಿ ಶನ್ಷನ್.

ಚೀನಾದ ಅತ್ಯಂತ ಸಿರಿವಂತ ಝೊಂಗ್ ಶನ್ಷನ್ ಈಗ ವಿಶ್ವದ 6ನೇ ಶ್ರೀಮಂತ

ಸದ್ಯಕ್ಕೆ ವಿಶ್ವದ ಟಾಪ್ ಐದು ಸ್ಥಾನದಲ್ಲಿ ಇರುವ ಶ್ರೀಮಂತರ ಪಟ್ಟಿ ಹೀಗಿದೆ:
* ಜೆಫ್ ಬೆಜೋಸ್- $ 188 ಬಿಲಿಯನ್

* ಎಲಾನ್ ಆರ್. ಮಸ್ಕ್- $ 176 ಬಿಲಿಯನ್

* ಬಿಲ್ ಗೇಟ್ಸ್- $ 131 ಬಿಲಿಯನ್

* ಬರ್ನಾರ್ಡ್ ಅರ್ನಾಲ್ಟ್- $ 113 ಬಿಲಿಯನ್

* ಮಾರ್ಕ್ ಝುಕರ್ ಬರ್ಗ್- $ 103 ಬಿಲಿಯನ್

ಶನ್ಷನ್ ಆಸ್ತಿ 2020ರಲ್ಲೇ 70.9 ಬಿಲಿಯನ್ ಯುಎಸ್ ಡಿ ಹೆಚ್ಚಳವಾಗಿ, 77.8 ಬಿಲಿಯನ್ ಯುಎಸ್ ಡಿ ತಲುಪಿದೆ. ಆಸ್ತಿ ಹೆಚ್ಚಳದ ವಿಚಾರದಲ್ಲಿ ಇದು ಐತಿಹಾಸಿಕ ಗಳಿಕೆ ಎನಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

English summary

Chinese National Zhong Shanshan Become World's 6th Richest Person

Chinese national Zhong Shanshan become world's 6th richest, surpassing Warren Buffet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X