For Quick Alerts
ALLOW NOTIFICATIONS  
For Daily Alerts

ಮದ್ಯ, ಸಿಗರೇಟು ಸಿಕ್ಕಾಪಟ್ಟೆ ದುಬಾರಿ; ದುಪ್ಪಟ್ಟು ಬೆಲೆಗೆ ಮಾರ್ತಾರೀ

|

ಮದ್ಯವ್ಯಸನಿಗಳಿಗೆ ಲಾಕ್ ಡೌನ್ ನಿಂದಾಗಿ ಅತಿ ದೊಡ್ಡ ಸಮಸ್ಯೆಯಾಗಿದ್ದರೆ, ಈ ಸಮಯದಲ್ಲಿ ಒಂದಕ್ಕೆ ಎರಡರ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವವರು ಕೂಡ ದಿನದಿನಕ್ಕೂ ಹೆಚ್ಚಾಗುತ್ತಿದ್ದಾರೆ. ಈ ಬಗ್ಗೆ ಕನ್ನಡ ಗುಡ್ ರಿಟರ್ನ್ಸ್ ನಿಂದ ಕಲೆ ಹಾಕಿದ ಎಕ್ಸ್ ಕ್ಲೂಸಿವ್ ಡಿಟೇಲ್ಸ್ ಇಲ್ಲಿದೆ.

 

ಸಿಗರೇಟು ಬೆಲೆಯಲ್ಲಿ ನಿಧಾನವಾಗಿ ಬೆಲೆ ಏರಿಸುತ್ತಾ ಹೋಗಿ, ಭಾನುವಾರ (ಏಪ್ರಿಲ್ 5, 2020) ಹೊತ್ತಿಗೆ ಕೆಲವು ಕಡೆ ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ಸರಕು ಬರ್ತಿಲ್ಲ, ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವುದರಿಂದ ಹೆಚ್ಚಿನ ಬೆಲೆ ಕೇಳುತ್ತಿದ್ದಾರೆ ಎಂಬ ಮಾಹಿತಿಯನ್ನು ಮಾರಾಟಗಾರರು ನೀಡುತ್ತಾರೆ.

 

"ಲಾಕ್ ಡೌನ್ ಇನ್ನಷ್ಟು ಮುಂದುವರಿದರೆ ಅರ್ಥವ್ಯವಸ್ಥೆ ಕಷ್ಟಕಷ್ಟ"

"ಕೆಂಗೇರಿಯಲ್ಲಿ ಒಂದು ಕಡೆ ಡಬಲ್ ರೇಟ್ ಗೆ ಎಣ್ಣೆ ಸಿಗುತ್ತೆ ಬೇಕಾ? ಆದರೆ ಡಬಲ್ ರೇಟ್. ನಿಮಗೆ ಯಾವ ಬ್ರ್ಯಾಂಡ್ ಬೇಕು ಅಂತ ಹೇಳಿ. ನಾವು ತಂದುಕೊಡ್ತೀವಿ. ಇಲ್ಲಿಗೆ ತಂದುಕೊಟ್ಟ ಮೇಲೆ ಮನೆಯ ತನಕ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು. ಎಲ್ಲೂ ನಮ್ಮ ಹೆಸರು ಬರಬಾರದು. ನಿಮ್ಮ ಮನೆಗೇ ಎಣ್ಣೆ ತಲುಪಿಸಬೇಕು ಅಂದರೆ ಅದಕ್ಕೆ ಬೇರೆ ರೇಟ್ ಇದೆ" ಎಂದು ಹೇಳಿದ ಒಬ್ಬ ಮಧ್ಯವರ್ತಿ.

ಮದ್ಯ, ಸಿಗರೇಟು ಸಿಕ್ಕಾಪಟ್ಟೆ ದುಬಾರಿ; ದುಪ್ಪಟ್ಟು ಬೆಲೆಗೆ ಮಾರ್ತಾರೀ

"ಲಾಕ್ ಡೌನ್ ಮುಗಿದ ಮೇಲೂ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂಬ ಸುದ್ದಿ ಇದೆ. ಇನ್ನು ಮುಂದೆ ನಿರ್ಬಂಧವನ್ನು ಕಠಿಣ ಮಾಡಬಹುದು. ಹಾಗೊಂದು ವೇಳೆ ಆಗಿಬಿಟ್ಟರೆ ಈಗ ಏನು ಸಿಗುತ್ತಿದೆ, ಅದು ಕೂಡ ಸಿಗುವುದಿಲ್ಲ. ಬೇಗ ಬೇಗ ನಿರ್ಧಾರ ಮಾಡಿ" ಎಂದು ಆ ವ್ಯಕ್ತಿ ಅವಸರಿಸಿದ.

ಕೆಂಗೇರಿಯಲ್ಲಿ ಎಲ್ಲಿ ಸಿಗುತ್ತದೆ ಎಂಬ ವಿಚಾರವನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಿಲ್ಲ. ಲಾಕ್ ಡೌನ್ ಶುರುವಾದ ಆರಂಭದಲ್ಲಿ ತುಂಬ ಹೆಚ್ಚಿನ ಬೆಲೆಗೇನೂ ಮಾರುತ್ತಿರಲಿಲ್ಲ. ಆದರೆ ದಿನ ಕಳೆದಂತೆ ಬ್ರ್ಯಾಂಡ್ ಮತ್ತೊಂದು ಏನನ್ನೂ ನೋಡದೆ ವಿಪರೀತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಮೊದಲಿಗೆ ಹೇಳಿದಂತೆ ಸಿಗರೇಟಿನದು ಅದೇ ಕಥೆ. ಲಾಕ್ ಡೌನ್ ಮುಂದುವರಿಯಬಹುದು, ಇನ್ನೂ ಕೆಲ ಸಮಯ ಸಿಗರೇಟು ಸಿಗಲ್ಲ ಅಂತೆಲ್ಲ ಸುದ್ದಿ ಹಬ್ಬಿ ಒಂದಕ್ಕೆರಡು ಬೆಲೆಗೆ ಮಾರಲಾಗುತ್ತಿದೆ. ಅಷ್ಟೇ ಅಲ್ಲ, ಕೆಲವು ಕಡೆ ಹತ್ತು ಪಟ್ಟು ಬೆಲೆ ಕೇಳಲಾಗುತ್ತಿದೆ ಎಂಬ ವರದಿಯೂ ಬರುತ್ತಿದೆ. ಈ ರೀತಿ ಸಿಕ್ಕಾಪಟ್ಟೆ ಬೆಲೆಗೆ ಮಾರಾಟ ಮಾಡುವುದನ್ನು ತುರ್ತಾಗಿ ಸರ್ಕಾರವೇ ತಡೆಯಬೇಕಾಗಿದೆ.

ಒಂದು ಕಡೆ ಕೊರೊನಾವನ್ನೇ ತಡೆಯೋದಾ ಅಥವಾ ಸಿಗರೇಟು- ಮದ್ಯಕ್ಕಾಗಿ ಹುಡುಕಾಡುತ್ತಾ ತಿರುಗಾಡುತ್ತಿರುವವರನ್ನು ಹಾಗೂ ಸಿಗರೇಟು- ಮದ್ಯವನ್ನು ದುಬಾರಿ ಬೆಲೆಗೆ ಮಾರುತ್ತಿರುವವರನ್ನು ತಡೆಯೋದಾ ಎಂಬ ಪ್ರಶ್ನೆಗಳಿಗಂತೂ ಉತ್ತರ ಕಂಡುಕೊಳ್ಳಬೇಕಿದೆ.

English summary

Cigarette, Liquor Become Very Costly; Here Is The Reason

During Corona lock down cigarette, liquor become costly. Here is the reason.
Story first published: Sunday, April 5, 2020, 18:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X