For Quick Alerts
ALLOW NOTIFICATIONS  
For Daily Alerts

ಕಾಗ್ನಿಜೆಂಟ್ ನಿವ್ವಳ ಆದಾಯ ಶೇಕಡಾ 37.6 ರಷ್ಟು ಏರಿಕೆ

|

ಅಮೆರಿಕಾ ಮೂಲದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಕಾಗ್ನಿಜೆಂಟ್‌ನ ನಿವ್ವಳ ಆದಾಯವು ಮಾರ್ಚ್ 2021 ರ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 37.6 ರಷ್ಟು ಏರಿಕೆಯಾಗಿದೆ. ಈ ಆದಾಯವು $505 ಮಿಲಿಯನ್ ಗಡಿ ದಾಟಿದೆ. 2021 ರ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯದ ಬೆಳವಣಿಗೆಯು ಶೇಕಡಾ 7 ರಿಂದ 9ರಷ್ಟುಕಂಪನಿಯು ನಿರೀಕ್ಷಿಸುತ್ತದೆ.

ಮಾರ್ಚ್ 2020 ರ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು $367 ಮಿಲಿಯನ್ ಎಂದು ಕಾಗ್ನಿಜಂಟ್ ವರದಿ ಮಾಡಿದೆ. ಈ ಕಂಪನಿಯು ಭಾರತದಲ್ಲಿ 2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಕಾಗ್ನಿಜೆಂಟ್‌ನ ಆದಾಯವು ಮಾರ್ಚ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 4.2 ರಷ್ಟು ಏರಿಕೆಯಾಗಿದೆ ಮತ್ತು ಕಂಪನಿಯ ಆದಾಯವು $4.4 ಬಿಲಿಯನ್‌ಗೆ ಏರಿತು.

ಕಾಗ್ನಿಜೆಂಟ್ ನಿವ್ವಳ ಆದಾಯ ಶೇಕಡಾ 37.6 ರಷ್ಟು ಏರಿಕೆ

ಜೂನ್ 2021 ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದ ಬೆಳವಣಿಗೆ 10.5% ರಿಂದ 11.5% ರಷ್ಟಿದೆ ಎಂದು ಕಾಗ್ನಿಜಂಟ್ ಹೇಳಿದ್ದಾರೆ. ಈ ಅವಧಿಯಲ್ಲಿ ಕಂಪನಿಯ ಗಳಿಕೆ $4.42 ಬಿಲಿಯನ್‌ನಿಂದ $4.46 ಬಿಲಿಯನ್ ಆಗಿರಬಹುದು. 2021 ರ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯವು ಶೇಕಡಾ 7 ರಿಂದ 9 ರವರೆಗೆ ಮತ್ತು 17.8 ಬಿಲಿಯನ್ ಡಾಲರ್‌ನಿಂದ 18.1 ಬಿಲಿಯನ್ ಡಾಲರ್‌ಗಳವರೆಗೆ ಬೆಳೆಯುವ ನಿರೀಕ್ಷೆಯಿದೆ.

ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಸಾಗರೋತ್ತರ ವ್ಯವಹಾರವನ್ನು ವಿಸ್ತರಿಸಲು ಮತ್ತು ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಹೆಚ್ಚು ಗಮನಹರಿಸಿದ್ದು, ಇದರಿಂದ ಲಾಭವಾಗಿದೆ. ಹೆಚ್ಚಿದ ಡಿಜಿಟಲೀಕರಣ ಮತ್ತು ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಿಗೆ ವಲಸೆ ಹೋಗುವುದರಿಂದ ಕಾಗ್ನಿಜೆಂಟ್ ಪ್ರಯೋಜನ ಪಡೆದಿದೆ. ಜೊತೆಗೆ ಕೊರೊನಾವನ್ನು ಎದುರಿಸಲು ಕಾಗ್ನಿಜಂಟ್ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡಲು ಹೊರಟಿದೆ ಎಂದು ಅವರು ಹೇಳಿದರು.

English summary

Cognizant Posts 38 Percent Jump In Q1 Net Income

US-based Cognizant Technology Solutions Corp on Thursday reported a 37.60 per cent year-on-year rise in consolidated net income
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X