For Quick Alerts
ALLOW NOTIFICATIONS  
For Daily Alerts

ದಿನಕ್ಕೆ 30 ಲಕ್ಷ, 12 ವರ್ಷಕ್ಕೆ 1350 ಕೋಟಿ; ಇದು ಕಾಗ್ನಿಜಂಟ್ ಸಿಇಒ ವೇತನ

|

ಐಟಿ ಕಂಪೆನಿಯೊಂದರ ಸಿಇಒ ಹನ್ನೆರಡು ವರ್ಷದ ಅವಧಿಯಲ್ಲಿ ಎಷ್ಟು ವೇತನ ಪಡೆದಿರಬಹುದು? ಈಗ ತಿಳಿಸುವ ಸಂಖ್ಯೆಯನ್ನು ಕೇಳಿದರೆ ಗಾಬರಿ ಆಗಿಬಿಡ್ತೀರಿ. ಕಾಗ್ನಿಜಂಟ್ ಕಂಪೆನಿಯ ಸಿಇಒ ಫ್ರಾನ್ಸಿಸ್ಕೋ ಡಿಸೋಜಾ ಹನ್ನೆರಡು ವರ್ಷದ ಅವಧಿಯಲ್ಲಿ $ 191.4 ಮಿಲಿಯನ್ ಪಡೆದಿದ್ದಾರೆ. $ 19.14 ಕೋಟಿ ಆಯಿತು. ಅದನ್ನು ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 1350 ಕೋಟಿ ರುಪಾಯಿ.

2007ರಿಂದ ಡಿಸೋಜಾ ಕಾಗ್ನಿಜಂಟ್ ನ ಸಿಇಒ ಆಗಿದ್ದಾರೆ. ಈ ಹಂತದ ಜವಾಬ್ದಾರಿ ವಹಿಸಿಕೊಂಡವರಿಗೆ ವೇತನವನ್ನು ನೀಡುವ ವಿಧಾನ ಹೇಗೆಂದರೆ, ನಗದು ಎಂಬ ಲೆಕ್ಕದಲ್ಲಿ ಇಂತಿಷ್ಟು ಮೊತ್ತ ಇರುತ್ತದೆ. ಅದೇ ರೀತಿ ಕಂಪೆನಿಯ 'ಸ್ಟಾಕ್ ಆಪ್ಷನ್' ಅಂದರೆ ಷೇರುಗಳನ್ನು ಸಹ ನೀಡಲಾಗುತ್ತದೆ. ಕಂಪೆನಿಯ ಷೇರಿನ ಮಾರುಕಟ್ಟೆ ಬೆಲೆ ಎಷ್ಟೇ ಇರಲಿ, ಇಂತಿಷ್ಟು ಪ್ರಮಾಣದ ಷೇರು ಎಂದು ನೀಡಲಾಗುತ್ತದೆ.

ಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆ

ಹನ್ನೆರಡು ವರ್ಷದ ಅವಧಿಯಲ್ಲಿ ಡಿಸೋಜಾ 191.4 ಮಿಲಿಯನ್ ಸಂಪಾದಿಸಿದ್ದಾರೆ. ಕಾಗ್ನಿಜಂಟ್ ಟೆಕ್ನಾಲಜಿ ಸಲ್ಯೂಷನ್ ಕಾರ್ಪೊರೇಷನ್ ನಿಂದ ಡಿಸೋಜಾ ಅವರ ಸಂಪಾದನೆಯನ್ನು ಬಯಲು ಮಾಡಲಾಗಿದೆ. ಸಿಇಒ ಹುದ್ದೆಯಿಂದ ಕೆಳಗಿಳಿದು, ಏಪ್ರಿಲ್ 1, 2019ರಿಂದ ಅವರು ಕಂಪೆನಿಯ ಎಕ್ಸ್ ಕ್ಯೂಟಿವ್ ಚೇರ್ ಮನ್ ಆಗಿದ್ದಾರೆ.

ದಿನಕ್ಕೆ 30 ಲಕ್ಷ, 12 ವರ್ಷಕ್ಕೆ 1350 ಕೋಟಿ; ಕಾಗ್ನಿಜಂಟ್ CEO ವೇತನ

ಮೊದಲೇ ಹೇಳಿದ ಹಾಗೆ ಕಂಪೆನಿಯ ಷೇರುಗಳ ಪ್ರಮಾಣ ಇಂತಿಷ್ಟು ಎಂದು ಮೊದಲೇ ನಿರ್ಧಾರ ಆಗಿರುತ್ತದೆ. ಆದ್ದರಿಂದ ಕಂಪೆನಿ ಲೆಕ್ಕಾಚಾರದ ಪ್ರಕಾರ $ 104.3 ಮಿಲಿಯನ್ ಪಾವತಿ ಮಾಡಲಾಗಿದೆ. 2016ನೇ ಇಸವಿಯಲ್ಲಿ ಡಿಸೋಜಾ ಅವರಿಗೆ ಮಾರುಕಟ್ಟೆ ಲೆಕ್ಕದಲ್ಲಿ ಪಾವತಿ ಆಗಿರುವುದು $ 32.9 ಮಿಲಿಯನ್. ಆದರೆ ಕಂಪೆನಿ ಲೆಕ್ಕದಲ್ಲಿ $ 8.3 ಮಿಲಿಯನ್ ಮಾತ್ರ. ಅಂದರೆ ಡಿಸೋಜಾ ಅವರ ಆದಾಯ ಬಂದಿರುವುದು ಕಾಗ್ನಿಜಂಟ್ ನ ಷೇರುಗಳಿಂದ.

2008ನೇ ಇಸವಿ ಹೊರತು ಪಡಿಸಿದರೆ ಡಿಸೋಜಾ ಅವರಿಗೆ ಕಂಪೆನಿಯು ಗೊತ್ತು ಮಾಡಿದ ಮೊತ್ತಕ್ಕಿಂತ ಹೆಚ್ಚಿನ ಹಣವೇ ದೊರೆತಿದೆ. ಇಲ್ಲಿ ಇನ್ನೊಂದು ವಿಚಾರ ಹೇಳಬೇಕು, ಐಟಿ ಕ್ಷೇತ್ರದಲ್ಲಿ ದುಡ್ಡಿದೆ ಬಿಡಿ ಅಂತ ನೀವು ಅಂದುಕೊಳ್ಳುವಂತಿಲ್ಲ. ಭಾರತದಲ್ಲಿ ಐಟಿ ಉದ್ಯೋಗಿಗಳ ವೇತನ ಕಳೆದ 5 ವರ್ಷದಲ್ಲಿ ಶೇಕಡಾ 15ರಷ್ಟು ಕಡಿಮೆ ಆಗಿದೆ.

English summary

Cognizant’s Ex-CEO Francisco D’Souza Earned 1350 Crore In 12 Years

Former CEO of Cognizant Francisco D’Souza received about $ 191.4 million for a service of 12 years as CEO.
Story first published: Friday, November 8, 2019, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X