For Quick Alerts
ALLOW NOTIFICATIONS  
For Daily Alerts

ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ

|

ಎಟಿಎಂ ಕಾರ್ಡ್ ಬಳಕೆ ಮಾಡುವವರು ಅದರ 'ಪಿನ್' ಅನ್ನು ಒಂದೊಂದು ರೀತಿಯಲ್ಲಿ ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಈ ವರದಿಯಲ್ಲಿ ಆಗಿರುವಂತೆ ಕೆಲವರು ಎಟಿಎಂ ಕಾರ್ಡ್ ಹಿಂಬದಿಯಲ್ಲೇ ಪಿನ್ ಬರೆದಿಟ್ಟುರುತ್ತಾರೆ. ಒಂದು ವೇಳೆ ನೀವೂ ಹೀಗೇ ಮಾಡುತ್ತಿದ್ದಲ್ಲಿ ಎಚ್ಚರವಾಗಿರಿ. ಬೆಂಗಳೂರಿನಲ್ಲಿ ಮೂವತ್ತು ವರ್ಷದ ಮಹಿಳಾ ಕಾನ್ ಸ್ಟೇಬಲ್ ನಲವತ್ತು ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ.

ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್

ರಾಜ್ಯ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಸುಬ್ರಹ್ಮಣ್ಯಪುರದ ರುಕ್ಮಿಣಿ ಬಾಯಿ ಹಣ ಕಳೆದುಕೊಂಡವರು. ಅವರ ವ್ಯಾಲೆಟ್ ಅನ್ನು ಎಗರಿಸಿದ ದುಷ್ಕರ್ಮಿಯೊಬ್ಬ ಕಿಯೋಸ್ಕ್ ನಿಂದ 40 ಸಾವಿರ ರುಪಾಯಿ ಹಣ ವಿಥ್ ಡ್ರಾ ಮಾಡಿದ್ದಾನೆ. ಜನವರಿ 12ನೇ ತಾರೀಕಿನಂದು ಬಿಎಂಟಿಸಿ ಬಸ್ಸಿನಲ್ಲಿ ಆಕೆಯ ಮನೆಯಿಂದ ತೆರಳುವಾಗ ವ್ಯಾಲೆಟ್ ನಾಪತ್ತೆ ಆಗಿದೆ ಎಂಬುದು ಗಮನಕ್ಕೆ ಬಂದಿತ್ತು.

ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ಎಗರಿಸಿ 40 ಸಾವಿರ ರು. ವಿಥ್ ಡ್ರಾ

ಹತ್ತು ಗ್ರಾಮ್ ತೂಕದ ಚಿನ್ನದ ಸರ, ಆಕೆಯ ಮತದಾನದ ಗುರುತು ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಇಟ್ಟಿದ್ದರು. ಅದರಲ್ಲಿ ಪಿನ್ ಕೂಡ ಇಟ್ಟಿದ್ದರು. ವ್ಯಾಲೆಟ್ ಕಳೆದ ಕೆಲ ಹೊತ್ತಿಗೆ ತಲಾ 10 ಸಾವಿರ ರುಪಾಯಿಯಂತೆ ನಾಲ್ಕು ಕಂತಿನಲ್ಲಿ ಹಣ ವಿಥ್ ಡ್ರಾ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಜಯನಗರ ಪೊಲೀಸರು ಹೇಳಿದ್ದಾರೆ.

English summary

Bengaluru Constable writes PIN behind ATM card, loses Rs 40,000

Woman constable loses Rs 40,000, she writes PIN behind ATM card. Miscreants withdraw money after stolen her wallet, where she kept ATM card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X