For Quick Alerts
ALLOW NOTIFICATIONS  
For Daily Alerts

ಕೊರೊನೊಯಿಂದ ಕರಗಿತು ಮುಕೇಶ್ ಅಂಬಾನಿಯ 3.65 ಲಕ್ಷ ಕೋಟಿ ಸಂಪತ್ತು: ಶ್ರೀಮಂತರ ಪಟ್ಟಿಯಲ್ಲಿ ಚೀನಿಯರಿಗೆ ಬಡ್ತಿ

|

ಕೊರೊನಾವೈರಸ್ ಹರಡುವಿಕೆಯಿಂದ ವಿಶ್ವದ ಆರ್ಥಿಕತೆ ಪತರುಗುಟ್ಟಿ ಹೋಗಿದ್ದು, ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ಹೂಡಿಕೆದಾರರ ಲಕ್ಷಾಂತರ ಕೋಟಿ ಸಂಪತ್ತು ನೋಡ ನೋಡುತ್ತಿದ್ದಂತೆ ಕರಗಿ ಹೋಗಿದೆ. ವಿಶ್ವದ ಟಾಪ್ ಶ್ರೀಮಂತರ ಲಕ್ಷಾಂತರ ಕೋಟಿ ರುಪಾಯಿ

ಭಾರತದ ಶ್ರೀಮಂತ ವ್ಯಕ್ತಿ ಹಾಗೂ ಏಷ್ಯಾದ 2ನೇ ಅತಿದೊಡ್ಡ ಶ್ರೀಮಂತ ಖ್ಯಾತಿಯ ಮುಕೇಶ್ ಅಂಬಾನಿಯು ಕೂಡ ಷೇರುಪೇಟೆ ಕುಸಿತದಿಂದಾಗಿ ಭಾರೀ ನಷ್ಟ ಅನುಭವಿಸಿದ್ದಾರೆ.

ಪ್ರತಿ ದಿನ ಸುಮಾರು 2,282 ಕೋಟಿ ರುಪಾಯಿ ನಷ್ಟ

ಪ್ರತಿ ದಿನ ಸುಮಾರು 2,282 ಕೋಟಿ ರುಪಾಯಿ ನಷ್ಟ

ಷೇರುಪೇಟೆಯಲ್ಲಾದ ಏರಿಳಿತಗಳಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಯ ನಿವ್ವಳ ಆಸ್ತಿ ಮೌಲ್ಯವು ಎರಡು ತಿಂಗಳಿನಲ್ಲಿ 28 ಪರ್ಸೆಂಟ್‌ ಇಳಿಕೆಯಾಗಿದೆ. ದಿನಕ್ಕೆ ಸುಮಾರು 300 ಮಿಲಿಯನ್ ಯುಎಸ್ ಡಾಲರ್‌ ನಷ್ಟವಾಗಿದೆ. ( ಭಾರತದ ರುಪಾಯಿಗಳಲ್ಲಿ ಸುಮಾರು 2,282 ಕೋಟಿ)

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8 ಸ್ಥಾನ ಕುಸಿದ ಅಂಬಾನಿ

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8 ಸ್ಥಾನ ಕುಸಿದ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಯ ನಿವ್ವಳ ಸಂಪತ್ತು ಫೆಬ್ರವರಿ -ಮಾರ್ಚ್ ತಿಂಗಳ ಅವಧಿಯಲ್ಲಿ 19 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಕರಗಿದೆ. ಇದರಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8 ಸ್ಥಾನ ಕೆಳಗಿಳಿದಿರುವ ಅಂಬಾನಿ 17ನೇ ಸ್ಥಾನಕ್ಕೆ ತಲುಪಿದ್ದಾರೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಹೇಳಿದೆ.

ಗೌತಮ್ ಅದಾನಿ, ಶಿವ್ ನಡಾರ್ ಸಂಪತ್ತು ಇಳಿಕೆ

ಗೌತಮ್ ಅದಾನಿ, ಶಿವ್ ನಡಾರ್ ಸಂಪತ್ತು ಇಳಿಕೆ

ಮುಕೇಶ್ ಅಂಬಾನಿ ಅಷ್ಟೇ ಅಲ್ಲದೆ ದೇಶದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಸಂಪತ್ತು 6 ಶತಕೋಟಿ ಡಾಲರ್ ಅಥವಾ 37 ಪರ್ಸೆಂಟ್‌ ಕರಗಿ ಹೋಗಿದೆ. ಹೆಚ್‌ಸಿಎಎಲ್ ಟೆಕ್ನಾಲಜೀಸ್ ಮಾಲೀಕ ಶಿವ್ ನಡಾರ್ ಸಂಪತ್ತು 5 ಶತಕೋಟಿ ಡಾಲರ್ ಅಥವಾ 26 ಪರ್ಸೆಂಟ್ ಇಳಿಕೆಯಾಗಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೋಟಕ್ ಸಂಪತ್ತು 4 ಶತಕೋಟಿ ಡಾಲರ್ ಅಥವಾ 28 ಪರ್ಸೆಂಟ್ ಕುಸಿದಿದೆ.

ವಿಶ್ವದ ಅಗ್ರ 100 ಶ್ರೀಮಂತರಲ್ಲಿ ಉಳಿದಿರುವುದು ಅಂಬಾನಿ ಮಾತ್ರ

ವಿಶ್ವದ ಅಗ್ರ 100 ಶ್ರೀಮಂತರಲ್ಲಿ ಉಳಿದಿರುವುದು ಅಂಬಾನಿ ಮಾತ್ರ

ವಿಶ್ವದ ಅಗ್ರ 100 ಶ್ರೀಮಂತರ ಪಟ್ಟಿಯಲ್ಲಿ ಈ ಮೇಲಿನ ಮೂವರು ಶತಕೋಟ್ಯಾಧಿಪತಿಗಳು ಹೊರಗುಳಿದಿದ್ದು ನೂರರ ಪಟ್ಟಿಯಲ್ಲಿ ಇರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ಕೊರೊನಾವೈರಸ್ ಸೋಂಕು ವಿಶ್ವದಾದ್ಯಂತ ಹರಡುವಿಕೆ ಹೆಚ್ಚಿದ್ದರಿಂದ ಕಳೆದ ಎರಡು ತಿಂಗಳಿನಲ್ಲಿ ಭಾರತೀಯ ಷೇರು ಮಾರುಕಟ್ಟೆ 25 ಪರ್ಸೆಂಟ್‌ನಷ್ಟು ಕುಸಿದಿದೆ.

ಜಗತ್ತಿನ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಸಂಪತ್ತು ಕೂಡ ಕರಗಿದೆ

ಜಗತ್ತಿನ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಸಂಪತ್ತು ಕೂಡ ಕರಗಿದೆ

ವಿಶ್ವದ ಷೇರುಪೇಟೆ ಹೂಡಿಕೆ ದಿಗ್ಗಜ ಮತ್ತು ಬರ್ಕ್ಯೈರ್ ಹಾಥ್‌ವೇ ಸಿಇಒ 89 ವರ್ಷದ ವಾರೆನ್ ಬಫೆಟ್ ಸಂಪತ್ತು ಕೂಡ ಕರಗಿ ಹೋಗಿದೆ. ಎರಡು ತಿಂಗಳಿನಲ್ಲಿ ಬಫೆಟ್ ಸುಮಾರು 19 ಶತಕೋಟಿ ಡಾಲರ್‌ಗಳನ್ನು ಕಳೆದುಕೊಂಡು 83 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಇದು ಶೇಕಡಾವಾರು ಪ್ರಮಾಣದಲ್ಲಿ ಸಣ್ಣ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಸಂಪತ್ತು ಕಳೆದುಕೊಂಡವರ ಅಗ್ರ 10ರ ಪಟ್ಟಿಯಲ್ಲಿ ಕಾರ್ಲೋಸ್ ಸ್ಲಿಮ್ ಮತ್ತು ಕುಟುಂಬ, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಮೈಕೆಲ್ ಬ್ಲೂಮ್‌ಬರ್ಗ್ ಕೂಡ ಸೇರಿದ್ದಾರೆ.

ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದ ಅಮೆಜಾನ್‌ನ ಜೆಫ್ ಬೇಜೋಸ್

ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದ ಅಮೆಜಾನ್‌ನ ಜೆಫ್ ಬೇಜೋಸ್

ಇ ಕಾಮರ್ಸ್ ದಿಗ್ಗಜ ಅಮೆಜಾನ್ ಸಂಸ್ಥಾಪಕ, ಸಿಇಒ ಜೆಫ್ ಬೆಜೋಸ್ 131 ಶತಕೋಟಿ ಡಾಲರ್ ನಿವ್ವಳ ಸಂಪತ್ತನ್ನು ಹೊಂದುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಬೇಜೋಸ್ ಸಂಪತ್ತು ಕೇವಲ 9 ಪರ್ಸೆಂಟ್ ಕುಸಿದಿದ್ದು ಇವರ ನಂತರದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ 91 ಶತಕೋಟಿ ಡಾಲರ್‌ಗೆ ತಲುಪಿದ್ದಾರೆ( ನಿವ್ವಳ ಸಂಪತ್ತು 14 ಪರ್ಸೆಂಟ್ ಕುಸಿತ).

English summary

Corona Effect Mukesh Ambani's Net Worth Drops 48 Billion Dollar In 2 Months

The net worth of India’s richest man Mukesh Ambani dropped 28 per cent or USD 300 million a day for two months to USD 48 billion
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X