For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ವಿಶ್ವದೆಲ್ಲೆಡೆ ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೊಟೊಕಾರ್ಪ್

|

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಲಿಮಿಟೆಡ್ (ಎಚ್‌ಎಂಸಿಎಲ್) ಕೊರೊನಾವೈರಸ್ ಭೀತಿಯಿಂದಾಗಿ ತನ್ನೆಲ್ಲಾ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಭಾರತದಲ್ಲಿ ಅಷ್ಟೇ ಅಲ್ಲದೆ ಕೊಲಂಬಿಯಾ ಮತ್ತು ಬಾಂಗ್ಲಾದೇಶದ ಘಟಕಗಳು ಸೇರಿದಂತೆ ತನ್ನ ಎಲ್ಲಾ ಉತ್ಪಾದನಾ ಮತ್ತು ಅಸೆಂಬಲ್ ಸ್ಥಾವರಗಳಲ್ಲಿನ ಕಾರ್ಯಾಚರಣೆಯನ್ನು ಈ ತಿಂಗಳ ಅಂತ್ಯದವರೆಗೆ ಸ್ಥಗಿತಗೊಳಿಸಿದ್ದು, ತಕ್ಷಣದಿಂದ ಜಾರಿಗೆ ತಂದಿದೆ.

ವಿಶ್ವದೆಲ್ಲೆಡೆ ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೊಟೊಕಾರ್ಪ್

ಭಾರತದಲ್ಲಿ ತನ್ನ ಪ್ರಮುಖ ಉತ್ಪಾದನಾ ಘಟಕಾ ಹರಿಯಾಣದ ನೀಮ್ರಾನಾದಲ್ಲಿರುವ ಜಾಗತಿಕ ಭಾಗಗಳ ಕೇಂದ್ರವು ಸಹ ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ. ಮಾರಣಾಂತಿಕ ವೈರಸ್ ಪೀಡಿತರ ಸಂಖ್ಯೆ ಭಾರತದಲ್ಲಿ 320ನ್ನು ದಾಟಿದೆ. ಶನಿವಾರವಷ್ಟೇ 70 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗವು ಈವರೆಗೆ ದೇಶದಲ್ಲಿ ಏಳು ಜೀವಗಳನ್ನು ಬಲಿ ಪಡೆದಿದೆ.

"ಉತ್ತರ ಭಾರತದ ರಾಜಸ್ಥಾನದ ಜೈಪುರದ ಸೆಂಟರ್ ಆಫ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಸಿಐಟಿ) ಸೇರಿದಂತೆ ಇತರ ಎಲ್ಲಾ ಕಾರ್ಯಗಳು ಮತ್ತು ಸ್ಥಳಗಳಲ್ಲಿನ ನೌಕರರನ್ನು ಕಾರ್ಯದಿಂದ ಹಿಂದಕ್ಕೆ ಕಳುಹಿಸಲಾಗಿದೆ. ಮನೆಯಿಂದಲೇ ಕೆಲಸ ಮಾಡುವವರನ್ನು ಮುಂದುವರಿಸಿದ್ದೇವೆ '' ಎಂದು ಹೀರೋ ಮೊಟೊಕಾರ್ಪ್ ಭಾನುವಾರ ಷೇರು ವಿನಿಮಯ ಕೇಂದ್ರಗಳಿಗೆ ಕಳುಹಿಸಿದ ಟಿಪ್ಪಣಿಯಲ್ಲಿ ತಿಳಿಸಿದೆ.

ಕರೋನವೈರಸ್ ಹರಡುವಿಕೆಯ ಆರಂಭಿಕ ಹಂತಗಳಿಂದ ಪರಿಸ್ಥಿತಿಯನ್ನು ಪೂರ್ವಭಾವಿಯಾಗಿ ಮೇಲ್ವಿಚಾರಣೆ ಮಾಡಲು ಕಾರ್ಯಪಡೆಯೊಂದನ್ನು ಸ್ಥಾಪಿಸಿದೆ ಮತ್ತು ತನ್ನ ಉದ್ಯೋಗಿಗಳಿಗೆ ಹಲವಾರು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಕಂಪನಿ ಹೇಳಿದೆ.

English summary

Corona Impact Hero Motocorp Shut Down All Plants Globally

India's largest two-wheeler manufacturer Hero MotoCorp Ltd (HMCL) has shut down operations across world
Story first published: Sunday, March 22, 2020, 12:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X