For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಸ್ಮಾರ್ಟ್‌ಫೋನ್ ಉದ್ಯಮದ ಕಾಶಿ ಭಾರತದಲ್ಲಿ 15,000 ಕೋಟಿ ನಷ್ಟದ ಭೀತಿ

|

ಕೊರೊನಾವೈರಸ್‌ ವಿಶ್ವದ ಯಾವುದೇ ರಾಷ್ಟ್ರವನ್ನು ಬಿಡದೆ ಕಾಡುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳೇ ಈ ಮಹಾಮಾರಿಯನ್ನು ಎದುರಿಸಲಾಗದೇ ಪತರುಗುಟ್ಟಿದೆ. ಭಾರತದಲ್ಲೂ ಕೊರೊನಾಯಿಂದಾಗಿ ಲಾಕ್‌ಡೌನ್‌ ಆಗಿದ್ದು, ಎಲ್ಲಾ ಉದ್ಯಮಗಳು ಸ್ಥಗಿತಗೊಂಡಿದೆ.

ದೇಶದಲ್ಲಿ ಬಹುತೇಕ ಎಲ್ಲಾ ಕಾರ್ಖಾನೆಗಳು ಬಂದ್ ಆಗಿವೆ. ಇದು ಎಲ್ಲಾ ಉದ್ಯಮದ ಮೇಲೂ ಪರಿಣಾಮ ಬೀರಿದ್ದು ವಿಶ್ವದ ಬಹುದೊಡ್ಡ ಸ್ಮಾರ್ಟ್‌ಫೋನ್ ಗ್ರಾಹಕ ಭಾರತದ ಮೇಲೂ ಪರಿಣಾಮ ಬೀರಿದೆ.

 15,000 ಕೋಟಿ ರುಪಾಯಿ ನಷ್ಟದ ಭೀತಿ
 

15,000 ಕೋಟಿ ರುಪಾಯಿ ನಷ್ಟದ ಭೀತಿ

ಸ್ಮಾರ್ಟ್‌ ಫೋನ್‌ ಉದ್ಯಮ ಪ್ರಸ್ತುತ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳುಗಳನ್ನು ಕಳೆದ ವರ್ಷಕ್ಕ ಹೋಲಿಸಿದರೆ ಭಾರಿ ಹಿಂಜರಿತ ಕಂಡಿದೆ. ಒಂದು ಅಂದಾಜು ಪ್ರಕಾರ ಎರಡು ಬಿಲಿಯನ್‌ ಅಮೆರಿಕನ್‌ ಡಾಲರ್‌(ಭಾರತದ ರುಪಾಯಿಗಳಲ್ಲಿ ಸುಮಾರು ನಷ್ಟ 15,000 ಕೋಟಿ) ಅನುಭವಿಸಿದೆ.

ಲಾಕ್‌ಡೌನ್‌ನಿಂದಲೇ ಭಾರೀ ಹೊಡೆತ

ಲಾಕ್‌ಡೌನ್‌ನಿಂದಲೇ ಭಾರೀ ಹೊಡೆತ

ಲಾಕ್‌ಡೌನ್‌ ಪರಿಣಾಮವೇ ಇದರಲ್ಲಿ ಪ್ರಮುಖವಾಗಿದ್ದು, ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಸುಮಾರು 15 ಸಾವಿರ ಕೋಟಿ ರುಪಾಯಿ ನಷ್ಟ ಅನುಭವಿಸಬೇಕಾದೀತು ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆಗಳು ಅಂದಾಜಿಸಿವೆ. ಈ ತಿಂಗಳುಗಳಲ್ಲಿ ಶಿಪ್‌ಮೆಂಟ್‌ಗಳ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಮಾರ್ಚ್‌ ತಿಂಗಳ ಮಧ್ಯದವರೆಗೂ ಸಣ್ಣ ಪ್ರಮಾಣದಲ್ಲಿದ್ದ ವ್ಯಾಪಾರ ಹಿಂಜರಿತ ಈಗ ಹೆಚ್ಚಾಗಿದೆ. 2019 ರಲ್ಲಿ ಒಟ್ಟು 158 ಮಿಲಿಯನ್‌ ಶಿಪ್‌ಮೆಂಟ್‌ಗಳಾಗಿದ್ದರೆ, 2020 ರಲ್ಲಿ 153 ಮಿಲಿಯನ್‌ಗೆ ಕುಸಿದಿದೆ.

ಏಪ್ರಿಲ್ ತಿಂಗಳಿನಲ್ಲೂ ಶಿಪ್‌ಮೆಂಟ್‌ ಕುಸಿತ ಸಾಧ್ಯತೆ

ಏಪ್ರಿಲ್ ತಿಂಗಳಿನಲ್ಲೂ ಶಿಪ್‌ಮೆಂಟ್‌ ಕುಸಿತ ಸಾಧ್ಯತೆ

ಕಳೆದ ತಿಂಗಳು ಮಾರ್ಚ್‌ನಲ್ಲಿ ಶಿಪ್‌ಮೆಂಟ್‌ಗಳು ಸುಮಾರು 27 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ. ಏಪ್ರಿಲ್‌ ಅರ್ಧ ತಿಂಗಳು ಲಾಕ್‌ಡೌನ್‌ನಲ್ಲಿ ಇರುವುದರಿಂದ ಉದ್ಯಮಕ್ಕೆ 2 ಬಿಲಿಯನ್‌ ಯುಎಸ್‌ ಡಾಲರ್‌ ರಷ್ಟು ನಷ್ಟವಾಗಬಹುದು ಎಂದು ಅಧ್ಯಯನ ಸಂಸ್ಥೆ ಅಭಿಪ್ರಾಯಪಟ್ಟಿದೆ. ಲಾಕ್‌ಡೌನ್‌ ಮತ್ತಷ್ಟು ಅವಧಿಗೆ ಮುಂದುವರೆದಲ್ಲಿ ನಷ್ಟ ಇನ್ನೂ ಹೆಚ್ಚಲಿದೆ ಹಾಗೂ ಸರಕು ಸೇವಾ ಜಾಲ ಸಂಪೂರ್ಣ ಕುಸಿಯಬಹುದು. ಅಲ್ಲದೇ ಬಾಕಿ ಪಾವತಿಗಳು ಸಹ ವಸೂಲಾಗದಿರಬಹುದು ಎನ್ನಲಾಗಿದೆ.

ಮೊಬೈಲ್‌ ಅಗತ್ಯ ವಸ್ತುವಲ್ಲ
 

ಮೊಬೈಲ್‌ ಅಗತ್ಯ ವಸ್ತುವಲ್ಲ

ಪ್ರಸ್ತುತ ಪರಿಸ್ಥಿತಿಯಲ್ಲಿ ಹಣ ಉಳಿತಾಯದತ್ತ ಜನರು ಗಮನ ಹರಿಸಿದ್ದು, ಮಿತವ್ಯಯಕ್ಕೆ ಮೊರೆ ಹೋಗಿದ್ದಾರೆ. ಹೀಗಾಗಿ ವರ್ಷದ ಮಧ್ಯದೊಳಗೆ ಎಲ್ಲವೂ ಸಾಮಾನ್ಯವಾದರೂ ಜನ ಈ ಹಿಂದಿನಂತೆ ಫೋನ್‌ಗಳ ಖರೀದಿಗೆ ಮುಂದಾಗಲಾರರು. ಸದ್ಯಕ್ಕೆ ಸ್ಮಾರ್ಟ್‌ ಫೋನ್‌ಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಆನ್‌ಲೈನ್‌ ಜಾಲತಾಣಗಳು ಸ್ಮಾರ್ಟ್‌ ಫೋನ್‌ಗಳ ಮಾರಾಟದಿಂದ ದೂರ ಉಳಿದಿವೆ. ಆದರೆ ಪರಿಸ್ಥಿತಿ ಸಾಮಾನ್ಯವಾದ ನಂತರ ಆನ್‌ಲೈನ್‌ ಮಾರಾಟ ಪೋರ್ಟಲ್‌ಗ‌ಳು ಆಕರ್ಷಕ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆಯೂ ಇದೆ.

ಭಾರತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಕೇಂದ್ರ

ಭಾರತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಕೇಂದ್ರ

ಭಾರತವು ಸ್ಮಾರ್ಟ್‌ ಫೋನ್‌ ಉದ್ಯಮಕ್ಕೆ ಅಚ್ಚುಮೆಚ್ಚಿನ ತಾಣವಾಗಿದ್ದು, 2022 ರ ವೇಳೆಗೆ 442 ಮಿಲಿಯನ್‌ ಸ್ಮಾರ್ಟ್‌ ಫೋನ್‌ ಬಳಕೆದಾರರು ಇರುವರು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 5 ಜಿ ಬಂದರಂತೂ ಸ್ಮಾರ್ಟ್‌ ಫೋನ್‌ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿಯೇ ಜಗತ್ತಿನ ಎಲ್ಲ ಸ್ಮಾರ್ಟ್‌ ಫೋನ್‌ ಕಂಪೆನಿಗಳು ಭಾರತದತ್ತ ಚಿತ್ತ ಹರಿಸಲು ಕಾರಣವಾಗಿದೆ. ಆದರೆ ಕೊರೊನಾವೈರಸ್‌ನಿಂದಾಗಿ ಸ್ಮಾರ್ಟ್ ಫೋನ್ ಉತ್ಪಾದನೆ ನಾಲ್ಕು ವರ್ಷಗಳ ಹಿಂದಿನಷ್ಟು ಹಿಂದಕ್ಕೆ ಹೋಗಲಿದೆಯೇ ಎಂಬ ಭೀತಿ ಸೃಷ್ಟಿಯಾಗಿದೆ.

English summary

Corona Lockdown Effect Indian Smartphone Industry Stares 15000 Crore Loss

Smartphone industry in India could take a $2 billion hit on account of the coronavirus pandemic
Story first published: Wednesday, April 8, 2020, 10:11 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more