For Quick Alerts
ALLOW NOTIFICATIONS  
For Daily Alerts

45,000 ಉದ್ಯೋಗಿಗಳಿಗೆ ತಲಾ 75,000 ರುಪಾಯಿ ಬೋನಸ್ ನೀಡಲಿರುವ ಫೇಸ್‌ಬುಕ್

|

ವಿಶ್ವದಾದ್ಯಂತ ಈಗೇನಿದ್ದರೂ ಕೊರೊನಾವೈರಸ್‌ನದ್ದೇ ಹಾವಳಿಯಾಗಿಬಿಟ್ಟಿದೆ. ಹೀಗಾಗಿ ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಸಹಾಯ ಆಗಲಿ ಎಂದು ಹಣದ ಸಹಾಯಕ್ಕೆ ಮುಂದಾಗಿದ್ದು ತನ್ನ 45,000 ಉದ್ಯೋಗಿಗಳಿಗೆ ತಲಾ 75,000 ರುಪಾಯಿ ಬೋನಸ್ ನೀಡುತ್ತಿದೆ.

ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಈ ಘೋಷಣೆಯನ್ನು ಮಾಡಿದ್ದು ತನ್ನ ಎಲ್ಲಾ ಉದ್ಯೋಗಿಗಳಿಗೆ ಕಳೆದ ಆರು ತಿಂಗಳ ಪರಿಶೀಲನೆಗಾಗಿ ಕನಿಷ್ಟ 1,000 ಅಮೆರಿಕನ್ ಡಾಲರ್‌ ಬೋನಸ್ ಪಡೆಯುತ್ತಾರೆ ಎಂದು ಪ್ರಕಟಿಸಿದ್ದಾರೆ.

45,000 ಉದ್ಯೋಗಿಗಳಿಗೆ ತಲಾ 75,000 ರುಪಾಯಿ ಬೋನಸ್ : ಫೇಸ್‌ಬುಕ್

"ಫೇಸ್‌ಬಕ್ ತನ್ನ 16 ವರ್ಷಗಳ ಇತಿಹಾಸದಲ್ಲಿ ಈ ರೀತಿಯಾಗಿ ಕನಿಷ್ಟ ಸಾಮಾನ್ಯ ಬೋನಸ್‌ಗಳನ್ನು ನೀಡುತ್ತಿದೆ'' ಎಂದು ಪತ್ರಕರ್ತ ಅಲೆಕ್ಸ್ ಹೆಲ್ತ್ ಟ್ವೀಟ್ ಮಾಡಿದ್ದಾರೆ.

ಕೆಲವು ಪೂರ್ಣ ಸಮಯದ ಫೇಸ್‌ಬುಕ್ ಉದ್ಯೋಗಿಗಳು ತೃತೀಯ ಗುತ್ತಿಗೆದಾರರು ಮಾಡಿದ ಕೆಲವು ಕೆಲಸಗಳನ್ನು ಸ್ಪಷ್ಟವಾಗಿ ವಹಿಸಿಕೊಂಡಿದ್ದಾರೆ, ಇದರಿಂದಾಗಿ ಆ ಗುತ್ತಿಗೆದಾರರು ಮನೆಯಲ್ಲೇ ಇರುತ್ತಾರೆ.

ಫೇಸ್‌ಬುಕ್ ಈಗಾಗಲೇ ತನ್ನ ಸಿಯಾಟಲ್ ಮತ್ತು ಬೇ ಏರಿಯಾ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಹೇಳಿದೆ.

ಸಾಮಾಜಿಕ ಜಾಲತಾಣ ದೈತ್ಯವು 30 ಕ್ಕೂ ಹೆಚ್ಚು ದೇಶಗಳಲ್ಲಿ 30,000 ಅರ್ಹ ಸಣ್ಣ ಉದ್ಯಮಗಳಿಗೆ 100 ಮಿಲಿಯನ್ ಡಾಲರ್ ನಗದು ಅನುದಾನ ಮತ್ತು ಸಾಲಗಳನ್ನು ನೀಡುವುದಾಗಿ ಘೋಷಿಸಿತು.

English summary

Coronavirus Effect Facebook To Give Rs 75,000 Bonus To Every Employee

Facebook is giving $1,000 as bonus to each of its 45,000 employees to support them with liquid cash
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X