For Quick Alerts
ALLOW NOTIFICATIONS  
For Daily Alerts

ಕೊರೊನಾ ಭೀತಿ:: 1 ಲಕ್ಷ ಕೋಟಿಗೂ ಅಧಿಕ ವಿದೇಶಿ ಬಂಡವಾಳ ಹೊರಹರಿವು

|

ಕೊರೊನಾವೈರಸ್‌ ಜಾಗತಿಕವಾಗಿ ಆರ್ಥಿಕತೆಯನ್ನು ಹಿಂಡುತ್ತಿದ್ದು, ಭಾರತವು ಇದರಿಂದ ಹೊರತಾಗಿಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಭಾರತದ ಬಂಡವಾಳ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ.

ಮಾರ್ಚ್‌ ತಿಂಗಳಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು(ಎಫ್‌ಪಿಐ) 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಬಂಡವಾಳ ಹಿಂಪಡೆದಿದ್ದಾರೆ. ಇದು ಕಳೆದ ಕೆಲ ವರ್ಷದಲ್ಲಿ ಕಂಡಂತಹ ಗರಿಷ್ಟ ಪ್ರಮಾಣದ ಬಂಡವಾಳ ಹೊರಹರಿವು ಇದಾಗಿದೆ. ಹೂಡಿಕೆದಾರರು ಮಾರ್ಚ್ 2 ರಿಂದ 27ರವರೆಗೆ ನಡೆದಿರುವ ವಹಿವಾಟಿನಲ್ಲಿ 59,377 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ 52,811 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ.

ಕೊರೊನಾ ಭೀತಿ:: 1 ಲಕ್ಷ ಕೋಟಿಗೂ ಅಧಿಕ ವಿದೇಶಿ ಬಂಡವಾಳ ಹೊರಹರಿವು

ಜಗತ್ತಿನ ಬಹುತೇಕ ಎಲ್ಲಾ ದೇಶಗಳಲ್ಲಿ ಕೊರೊನಾವೈರಸ್ ಸೋಂಕು ಹರಡಿದ್ದು, ಎಲ್ಲೆಡೆ ಲಾಕ್‌ಡೌನ್ ಮಾಡಲಾಗಿದೆ. ಹೀಗಾಗಿ ಹೂಡಿಕೆದಾರರು ಬಹು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

2020ರಲ್ಲಿ ಭಾರತದ ಬೆಳವಣಿಗೆ ದರವನ್ನು ಮೂಡಿಸ್ ಸಂಸ್ಥೆಯು 2.5 ಪರ್ಸೆಂಟ್‌ ಗೆ ಇಳಿಸಿದೆ. ಲಾಕ್‌ಡೌನ್‌ಗೂ ಮೊದಲು ಭಾರತದ ಜಿಡಿಪಿಯ ಬೆಳವಣಿಗೆಯನ್ನು 5.3 ಪರ್ಸೆಂಟ್ ಎಂದು ಅಂದಾಜಿಸಿತ್ತು.

English summary

Coronavirus Effect FPIs Pull Out 1 lakh Plus Crore In March

coronavirus scare foreign investors have started rowing back from indian capital market by withdraw massive ammount
Story first published: Monday, March 30, 2020, 9:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X