For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ 6 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಬಹುದು : ವಿಶ್ವ ಬ್ಯಾಂಕ್

|

ಕೊರೊನಾವೈರಸ್ ಸೋಂಕು ವಿಶ್ವದಾದ್ಯಂತ ಎಲ್ಲಾ ಉದ್ಯಮಗಳನ್ನು ನೆಲಕಚ್ಚುವಂತೆ ಮಾಡಿದ್ದು, ವಿಶ್ವದಾದ್ಯಂತ 60 ಮಿಲಿಯನ್ ಅಥವಾ 6 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನಕ್ಕೆ ಸಿಲುಕಿಸಬಹುದು ಎಂದು ವಿಶ್ವಬ್ಯಾಂಕ್ ಮಂಗಳವಾರ ಎಚ್ಚರಿಸಿದೆ.

ಜಾಗತಿಕ ಬಿಕ್ಕಟ್ಟನ್ನು ನಿವಾರಿಸುವ ಅಭಿಯಾನದ ಭಾಗವಾಗಿ 100 ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಜಾಗತಿಕ ಸಂಸ್ಥೆ 160 ಬಿಲಿಯನ್ ಅನುದಾನವನ್ನು ಘೋಷಿಸಿದೆ. ಈ ಸಹಾಯವನ್ನು 15 ತಿಂಗಳ ಅವಧಿಯಲ್ಲಿ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಹೇಳಿದ್ದಾರೆ.

ಕೊರೊನಾದಿಂದ 6 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಬಹುದು

ಬಡತನ ನಿರ್ಮೂಲನೆಗೆ ನಾವು ಇತ್ತೀಚಿನ ದಿನಗಳಲ್ಲಿ ಮಾಡಿದ ಹೆಚ್ಚಿನ ಪ್ರಗತಿ ಕೊನೆಗೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 100 ದೇಶಗಳಲ್ಲಿ ತುರ್ತು ಸಹಾಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಮಾಹಿತಿ ಒದಗಿಸಿದ ಅವರು 15 ತಿಂಗಳಲ್ಲಿ 160 ಬಿಲಿಯನ್ ಡಾಲರ್ ನೀಡಲಾಗುವುದು ಎಂದು ತಿಳಿಸಿದರು.

ವಿಶ್ವದ 70 ಪರ್ಸೆಂಟ್ ಜನಸಂಖ್ಯೆಯನ್ನು ಈ 100 ರಾಷ್ಟ್ರಗಳು ಹೊಂದಿವೆ. ಈ ಪೈಕಿ 39 ಆಫ್ರಿಕಾದ ರಾಷ್ಟ್ರಗಳಾಗಿವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಬಡವರಿಗೆ ಸಹಾಯ ಮಾಡಲು ನಗದು ಮತ್ತು ಇತರ ನೆರವು, ಖಾಸಗಿ ವಲಯವನ್ನು ಕಾಪಾಡಿಕೊಳ್ಳಬೇಕು ಮತ್ತು ಆರ್ಥಿಕತೆಯ ಬಲವರ್ಧನೆ ಮತ್ತು ಪುನರುಜ್ಜೀವನವನ್ನು ಬಲಪಡಿಸಬೇಕು ಎಂದು ಮಲ್ಪಾಸ್ ಹೇಳಿದರು.

English summary

Coronavirus Will Push 60 Million Into Extreme Poverty Says World Bank

The head of the World Bank warned Tuesday that the coronavirus crisis threatens to push some 60 million people into extreme poverty
Story first published: Wednesday, May 20, 2020, 13:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X