For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ಕ್ರೆಡಿಟ್ ಬ್ಯುರೋದಿಂದ ಎಚ್ ಡಿಎಫ್ ಸಿ ಬ್ಯಾಂಕ್ ವಿರುದ್ಧ ದೂರು

|

ಭಾರತದ ದೊಡ್ಡ ಕ್ರೆಡಿಟ್ ಬ್ಯುರೋಗಳಲ್ಲಿ ಒಂದಾದ Experianನಿಂದ ಎಚ್ ಡಿಎಫ್ ಸಿ ಬ್ಯಾಂಕ್ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ದೂರು ನೀಡಲಾಗಿದೆ. Experian ಸ್ಥಳೀಯ ಘಟಕವು ಜುಲೈನಲ್ಲಿ ಈ ಬಗ್ಗೆ ಆರ್ ಬಿಐಗೆ ದೂರು ನೀಡಿದ್ದು, ಲಕ್ಷಾಂತರ ಮಂದಿ ರೀಟೇಲ್ ಸಾಲಗಾರರದೂ ಸೇರಿ ಇತರ ಸಾಲ ಮರುಪಾವತಿಯ ಸ್ಥಿತಿಯನ್ನು ತಿಳಿಸಲು ಎಚ್ ಡಿಎಫ್ ಸಿ ಬ್ಯಾಂಕ್ ತಡ ಮಾಡುತ್ತಿದೆ ಎಂದಿದೆ.

ಈ ಸಮಸ್ಯೆ ಕಳೆದ ಎರಡು ವರ್ಷಗಳಿಂದ ಇದೆ ಎನ್ನಲಾಗಿದೆ. ಎಷ್ಟು ವಿಳಂಬ ಮಾಡುತ್ತಿದೆ, ಅದೆಷ್ಟು ದಿನ ಎಂಬ ನಿಖರ ಮಾಹಿತಿಯನ್ನು ನೀಡಿಲ್ಲ. ಭಾರತದ ಬ್ಯಾಂಕ್ ಗಳು ಸಾಲ ವಿತರಿಸುವ ಸಂದರ್ಭದಲ್ಲಿ Experianನಂಥ ಕ್ರೆಡಿಟ್ ಬ್ಯೂರೋಗಳು ನೀಡುವ ಮಾಹಿತಿಗಳಿಂದ ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯ ಅಳೆಯುತ್ತವೆ.

 

ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಆರ್ ಬಿಐ ಸೂಚನೆ ಅನ್ವಯ ಸಾಲ ನೀಡುವ ಸಂಸ್ಥೆಗಳು Experian ಮತ್ತು ಇತರ ಮೂರು ಕ್ರೆಡಿಟ್ ಬ್ಯೂರೋಗೆ ಪ್ರತಿ ತಿಂಗಳು ಈ ಮಾಹಿತಿ ಒದಗಿಸಬೇಕು. ಆದರೆ ಯಾವುದೇ ತಡ ಮಾಡುತ್ತಿಲ್ಲ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಕಡೆಯಿಂದ ಆರೋಪವನ್ನು ತಳ್ಳಿ ಹಾಕಲಾಗಿದೆ.

ದೇಶದ ಪ್ರಮುಖ ಕ್ರೆಡಿಟ್ ಬ್ಯುರೋದಿಂದ HDFC ಬ್ಯಾಂಕ್ ವಿರುದ್ಧ ದೂರು

ಈ ಬಗ್ಗೆ Experian ಬಳಿ ಪ್ರತಿಕ್ರಿಯೆ ಕೇಳಿದಾಗ, ಆರ್ ಬಿಐ ಕುರಿತಾದ ಮಾಹಿತಿಯಾಗಲಿ, ಬ್ಯಾಂಕ್ ಗಳು ಹಾಗೂ ಕ್ರೆಡಿಟ್ ಬ್ಯುರೋ ಕುರಿತಾದಂಥವು ಕಡ್ಡಾಯವಾಗಿ ರಹಸ್ಯವಾದದ್ದು ಎಂದು ಇಮೇಲ್ ನಲ್ಲಿ ಪ್ರತಿಕ್ರಿಯಿಸಲಾಗಿದೆ. ಆರ್ ಬಿಐ ಕೂಡ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಎಚ್ ಡಿಎಫ್ ಸಿ ಬ್ಯಾಂಕ್ ಒಟ್ಟು 10 ಲಕ್ಷ ಕೋಟಿ ರುಪಾಯಿ ಸಾಲ ನೀಡಿದ್ದು, 5.6 ಕೋಟಿಗೂ ಹೆಚ್ಚು ಗ್ರಾಹಕರಿದ್ದಾರೆ. ಟ್ರಾನ್ಸ್ ಯೂನಿಯನ್ ಸಿಬಿಲ್ ಹಾಗೂ ಸ್ಥಳೀಯ ಘಟಕವಾದ ಈಕ್ವಿಫ್ಯಾಕ್ಸ್ ಮತ್ತು CRIF ಹೈ ಮಾರ್ಕ್ ಕ್ರೆಡಿಟ್ ಇನ್ಫರ್ಮೇಷನ್ ಸರ್ವೀಸಸ್ ನಿಂದ ಈ ಕುರಿತಾಗಿ ಯಾವುದೇ ಉತ್ತರ ಅಥವಾ ಸ್ಪಂದನೆಯನ್ನು ನೀಡಿಲ್ಲ.

English summary

Credit Bureau Complaint Against HDFC Bank With RBI

One of the biggest credit bureau Experian complaint against HDFC bank for delaying to provide information about borrowers.
Company Search
COVID-19