For Quick Alerts
ALLOW NOTIFICATIONS  
For Daily Alerts

ಸಂತಸದ ಸಂಗತಿ: ಲಾಕ್‌ಡೌನ್ ಮೊದಲಿನ ಹಂತಕ್ಕೆ ಬಂತು ದೇಶದ ನಿರುದ್ಯೋಗದ ದರ

|

ಮುಂಬೈ: ಕೊರೊನಾವೈರಸ್ ಪಿಡುಗಿನ ಪರಿಣಾಮವಾಗಿ ದೇಶದಲ್ಲಿ ಆರ್ಥಿಕತೆ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಎಲ್ಲ ವಲಯಗಳಲ್ಲಿ ನಿರಾಶದಾಯಕ ಬೆಳವಣಿಗೆ ಕಂಡು ಬರುತ್ತಿದೆ ಎಂದು ಹಲವು ವರದಿಗಳು ಈಗಾಗಲೇ ದೇಶದ ಅರ್ಥವ್ಯವಸ್ಥೆಯನ್ನು ತೆರದಿಟ್ಟಿದ್ದವು. ಆದರೆ, ಲಾಕ್‌ಡೌನ್ ಸಡಿಲಿಕೆ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಕುರಿತು ಆಶಾದಾಯಕ ವರದಿಯೊಂದು ಬಂದಿದೆ.

 

ಭಾರತದ ನಿರುದ್ಯೋಗ ದರವು ಲಾಕ್‌ಡೌನ್ ಮೊದಲಿನ ಹಂತಕ್ಕೆ ಕ್ಕೆ ಇಳಿದಿದೆ ಎಂದು ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಸೋಮವಾರ ತಿಳಿಸಿದೆ.

ಲಾಕ್‌ಡೌನ್ ಜಾರಿಯಿದ್ದ ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ದರವು ಶೇಕಡಾ 27.1 ಕ್ಕೆ ಏರಿಕೆಯಾಗಿತ್ತು. ಲಾಕ್‌ಡೌನ್ ಆರಂಭವಾಗುವ ಮುಂಚೆ ಮಾರ್ಚ್‌ನಲ್ಲಿ ಇದು ಶೇಕಡಾ 8.75 ರಷ್ಟಿತ್ತು.

ಶೇ 11.2 ಕ್ಕೆ ಇಳಿದಿದೆ

ಶೇ 11.2 ಕ್ಕೆ ಇಳಿದಿದೆ

ಜೂನ್ 21 ಕ್ಕೆ ಕೊನೆಗೊಂಡ ಇತ್ತೀಚಿನ ವಾರದಲ್ಲಿ ನಗರ ನಿರುದ್ಯೋಗವು ಶೇ 11.2 ಕ್ಕೆ ಇಳಿದಿದೆ. ಆದರೆ, ಲಾಕ್‌ಡೌನ್‌ಗೆ ಮುಂಚಿನ 13 ವಾರಗಳಲ್ಲಿ ಸರಾಸರಿ ನಿರುದ್ಯೋಗ ದರವು ಶೇ 9 ರಷ್ಟಕ್ಕಿಂತ 200 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ.

ಗ್ರಾಮೀಣ ಭಾಗದಲ್ಲಿ

ಗ್ರಾಮೀಣ ಭಾಗದಲ್ಲಿ

ಗ್ರಾಮೀಣ ಭಾಗದಲ್ಲಿ ಉದ್ಯೋಗದಲ್ಲಿ ದೊಡ್ಡ ಬದಲಾವಣೆ ಕಂಡು ಬಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯದಲ್ಲಿ ಭಾರಿ ಏರಿಕೆ ಇದಕ್ಕೆ ಕಾರಣ ಮತ್ತು ಈ ವರ್ಷ ಮುಂಗಾರು ಬಿತ್ತನೆಯ ತೀವ್ರ ಏರಿಕೆ ಕಾರಣ. ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇ 7.26 ಕ್ಕೆ ಇಳಿದಿದೆ. ಇದು ಮಾರ್ಚ್ 22 ಕ್ಕೆ ಲಾಕ್‌ಡೌನ್ ಮೊದಲು ಶೇ 8.3 ಕ್ಕೆ ಇತ್ತು ಎಂದು ಸಿಎಂಐಇ ತಿಳಿಸಿದೆ.

ಗ್ರಾಮೀಣ ಕ್ಷೇತ್ರದತ್ತ ಗಮನ
 

ಗ್ರಾಮೀಣ ಕ್ಷೇತ್ರದತ್ತ ಗಮನ

ಸರ್ಕಾರವು ಗ್ರಾಮೀಣ ಕ್ಷೇತ್ರದತ್ತ ಗಮನ ಹರಿಸುವುದನ್ನು ಮುಂದುವರೆಸಿದೆ. ವಲಸೆ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಗರಿಬ್ ಕಲ್ಯಾಣ್ ಯೋಜನೆ ಪ್ರಾರಂಭಿಸಿದ್ದರಿಂದ ಜನ ತಮ್ಮ ಹಳ್ಳಿಗಳಿಗೆ ಮರಳಿಯೂ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂದು ಸಿಎಂಐಇ ತಿಳಿಸಿದೆ. ಭಾರತಕ್ಕೆ ಕೊರೊನಾವೈರಸ್ ಮಾರಿ ಆಕ್ರಮಣಕ್ಕೆ ಮುಂಚೆಯೇ ಆರ್ಥಿಕ ಬೆಳವಣಿಗೆಯು 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಬೆಳವಣಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇನ್ನೂ ಮಾರಕವಾಗಿದೆ ಎಂದು ಸಿಎಂಐಇ ತಿಳಿಸಿದೆ.

ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಸಿಇಓ ಮಹೇಶ್ ವ್ಯಾಸ್

ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಸಿಇಓ ಮಹೇಶ್ ವ್ಯಾಸ್

ಸಡಿಲಿಕೆ ನಂತರ ಅನೇಕ ನಗರಗಳ ಆರ್ಥಿಕತೆ ​​ತೆರೆಯಲು ಪ್ರಾರಂಭಿಸಿವೆ. ಕೆಲವು ದೊಡ್ಡದಾದ ನಗರ ಪ್ರದೇಶಗಳ ಹೊರತುಪಡಿಸಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಇದರಿಂದ ಉದ್ಯೋಗ ಪ್ರಮಾಣವೂ ನಿಧಾನವಾಗಿ ಹೆಚ್ಚಾಗುತ್ತಿದೆ ಎಂದು ಮುಂಬೈ ಮೂಲದ ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಸಿಇಓ ಮಹೇಶ್ ವ್ಯಾಸ್ ಹೇಳುತ್ತಾರೆ.

English summary

Current India's Unemployment Rate Is Showing Before Lockdown Unemployment Rate

Current India's Unemployment Rate Is Showing Before Lockdown Unemployment Rate Says CMIE.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X