ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ದೇಶದ ಐದನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಯೆಸ್ ಬ್ಯಾಂಕ್‌ನಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂದು ಗ್ರಾಹಕರಿಗೆ ಕಳೆದ ವರ್ಷವೇ ಅನುಮಾನ ಮೂಡಿತ್ತು. ಇದಕ್ಕೆ ಸಾಕ್ಷಿ ಕಳೆದ ವರ್ಷ ಕೆಲವು ತಿಂಗಳ ಅವಧಿಯಲ್ಲಿ ಹೆಚ್ಚಾಗಿದ್ದು ಹಣ ವಿತ್‌ಡ್ರಾ ಪ್ರಮಾಣ.
ಕಳೆದ ವರ್ಷ ಮಾರ್ಚ್ ರಿಂದ ಸೆಪ್ಟೆಂಬರ್ ಅವಧಿಯಲ್ಲಿ ಯೆಸ್ ಬ್ಯಾಂಕಿನ ಠೇವಣಿಯು ಸ್ಥಿರವಾಗಿ ಕುಸಿತ ಕಂಡಿದ್ದು, ಗ್ರಾಹಕರು 18,100 ಕೋಟಿಗೂ ಅಧಿಕ ಹಣವನ್ನು ಹಿಂತೆಗೆದುಕೊಂಡಿದ್ದಾರೆ, ಇದು ಬ್ಯಾಂಕಿನ ಮೇಲಿನ ವಿಶ್ವಾಸದ ಕುಸಿತದ ಪ್ರತಿಬಿಂಬವಾಗಿದೆ.

ಪ್ರಸಕ್ತ ಹಣಕಾಸು ವರ್ಷದ (2019-20) ಜೂನ್ ಅಂತ್ಯದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ 2,25,902 ಕೋಟಿಗೆ ಠೇವಣಿ ಕುಸಿದಿದೆ. ಮತ್ತು ಸೆಪ್ಟೆಂಬರ್ 20 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ 2,09,497 ಕೋಟಿಗೆ ಇಳಿದಿದೆ.
ಮಾರ್ಚ್ 2019 ರಿಂದ ಸೆಪ್ಟೆಂಬರ್ 2019 ರ ನಡುವಿನ ಠೇವಣಿಗಳ ವ್ಯತ್ಯಾಸವು ಅಂದರೆ ವಿತ್ ಡ್ರಾ 18,110 ಕೋಟಿ ರುಪಾಯಿ ಎಂದು ವರದಿಯಾಗಿದೆ. ಈ ಮೂಲಕ ಕಳೆದ ವರ್ಷವೇ ಗ್ರಾಹಕರು ಬ್ಯಾಂಕ್ ಮೇಲಿನ ವಿಶ್ವಾಸ ತಗ್ಗಿಸಿದ್ದರು.
ಏಪ್ರಿಲ್ 3ರವರೆಗೆ 50,000 ಮಾತ್ರ ವಿತ್‌ಡ್ರಾ ಮಾಡಬಹುದು ಎಂದು ಆರ್‌ಬಿಐ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದೆ.


Click it and Unblock the Notifications