For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸೈಬರ್ ಅಪರಾಧದಿಂದ 2019ರಲ್ಲಿ 1.25 ಲಕ್ಷ ಕೋಟಿ ನಷ್ಟ

|

ಸ್ಮಾರ್ಟ್ ಸಿಟೀಸ್ ಅಭಿವೃದ್ಧಿ ಆಗುತ್ತಿದ್ದಂತೆ ಹಾಗೂ 5G ನೆಟ್ ವರ್ಕ್ ಇನ್ನೇನು ಆರಂಭವಾಗುವ ಹಂತದಲ್ಲಿರುವಾಗ ಸೈಬರ್ ಕ್ರೈಮ್ ನಿಂದ 2019ರಲ್ಲಿ ಭಾರತಕ್ಕೆ 1.25 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡನೇಟರ್ ಲೆ. ಜನರಲ್ (Dr) ರಾಜೇಶ್ ಪಂತ್ ಮಂಗಳವಾರ ಹೇಳಿದ್ದಾರೆ.

 

ಭಾರತದ ಕೆಲವು ಕಂಪೆನಿಗಳು ಮಾತ್ರ ಸೈಬರ್ ಸೆಕ್ಯೂರಿಟಿ ಉತ್ಪನ್ನಗಳು ತಯಾರಿಸುತ್ತಿವೆ. ಈ ವಲಯದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ. ಸೈಬರ್ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ನಂಬಿಕಸ್ಥ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಪರಿಹಾರ ಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಆನ್ ಲೈನ್ ವ್ಯವಹಾರದ ಬಗ್ಗೆ 'ಭಾರತದ ಜೇಮ್ಸ್ ಬಾಂಡ್' ಅಜಿತ್ ದೋವಲ್ ಎಚ್ಚರಿಕೆಆನ್ ಲೈನ್ ವ್ಯವಹಾರದ ಬಗ್ಗೆ 'ಭಾರತದ ಜೇಮ್ಸ್ ಬಾಂಡ್' ಅಜಿತ್ ದೋವಲ್ ಎಚ್ಚರಿಕೆ

ಕಳೆದ ವರ್ಷ ನಮ್ಮ ಅಧಿಕೃತ ಸಂಖ್ಯೆಗಳ ಪ್ರಕಾರ ಭಾರತದಲ್ಲಿ ಸೈಬರ್ ಕ್ರೈಮ್ ನಿಂದ 1.25 ಲಕ್ಷ ಕೋಟಿ ನಷ್ಟವಾಗಿದೆ. ರಾನ್ಸಮ್ ವೇರ್ ಪ್ರತಿ ದಿನ ಹೆಚ್ಚಾಗುತ್ತಿದೆ. ಈ ಕ್ರಿಮಿನಲ್ ಗಳು ಮನೆಗಳಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಹೃದಯಹೀನ ಜನರು. ಅವರು ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಾರೆ. ಏಕೆಂದರೆ ಅವರಿಗೆ ಗೊತ್ತು, ತುರ್ತು ಅಂದರೆ ಆಸ್ಪತ್ರೆಯಿಂದ ಹಣ ಪಾವತಿಯಾಗುತ್ತದೆ ಎಂಬುದು ಅವರಿಗೆ ಗೊತ್ತು ಎಂದು ಎಫ್ ಐಸಿಸಿಐ ಕಾರ್ಯಕ್ರಮದಲ್ಲಿ ಪಂತ್ ಹೇಳಿದ್ದಾರೆ.

ಭಾರತದಲ್ಲಿ ಸೈಬರ್ ಅಪರಾಧದಿಂದ 2019ರಲ್ಲಿ 1.25 ಲಕ್ಷ ಕೋಟಿ ನಷ್ಟ

ಮೊಬೈಲ್ ಮೂಲಕ ವಿವಿಧ ಸೇವೆಗಳನ್ನು ಪಡೆಯುವ ದುರ್ಬಲರೇ ಅವರ ಗುರಿ. ಇನ್ನು ಮೊಬೈಲ್ ಅಪ್ಲಿಕೇಷನ್ ಗಳಿಂದ ಮಾತ್ರ ಅಲ್ಲ, ಪ್ರೊಸೆಸರ್, ಮೆಮೊರಿ ಚಿಪ್, ಬ್ಲೂಟೂಥ್ ಹಾಗೂ ವೈಫೈ ಮೂಲಕವೂ ದಾಳಿ ನಡೆಸುತ್ತಿರುವುದು ಹೀಗೆ ಹದಿನೈದು ವಿವಿಧ ಬಗೆಯ ದಾಳಿಯು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಈ ರೀತಿಯ ಸೈಬರ್ ದಾಳಿಗಳನ್ನು ತಡೆಯುವ ಉದ್ದೇಶದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

English summary

Cyber Crimes Caused 1.25 Lakh Crore Loss To India In 2019

In 2019 cyber crimes caused 1.25 lakh crores in India. Here is the important details about the crime.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X