For Quick Alerts
ALLOW NOTIFICATIONS  
For Daily Alerts

ದೆಹಲಿಯ ಈ ಹುಡುಗಿಗೆ ಸಿಗಲಿದೆ 1.45 ಕೋಟಿ ರುಪಾಯಿ ಸಂಬಳ

|

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ ದೆಹಲಿ ಹುಡುಗಿಗೆ ವರ್ಷಕ್ಕೆ 1.45 ಕೋಟಿ ರುಪಾಯಿ ಸಂಬಳವನ್ನು ಆಫರ್ ಮಾಡಿದೆ. ಇಷ್ಟು ದೊಡ್ಡ ಮಟ್ಟದ ಆಫರ್ ಸಿಕ್ಕಿದೆ ಅಂದಮೇಲೆ ಆಕೆ ಐಐಟಿಯ ವಿದ್ಯಾರ್ಥಿಯೇ ಆಗಿರಬಹುದು ಎಂದು ಬಹುತೇಕ ಜನರು ಊಹಿಸಬಹುದು. ಆದರೆ ಈ ಹುಡುಗಿ ಐಐಟಿಯವಳಲ್ಲ ಬದಲಿಗೆ ದೆಹಲಿಯ ಐಐಐಟಿಯ(ಇಂದ್ರಪ್ರಸ್ಥ ಇನ್ಸಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ) ವಿದ್ಯಾರ್ಥಿನಿ.

ದೆಹಲಿಯ ಐಐಐಟಿಯಲ್ಲಿ ಪ್ರತಿ ವರ್ಷ ನಡೆಯುವ ಕ್ಯಾಂಪಸ್ ಸೆಲೆಕ್ಷನ್‌ ಬಹಳ ಜನಪ್ರಿಯವಾಗಿದೆ. ಏಕೆಂದರೆ ಇಲ್ಲಿಗೆ ಕಾರ್ಪೋರೇಟ್‌ನ ದೈತ್ಯ ಕಂಪನಿಗಳು ಆಗಮಿಸಿ ನಂಬಲಾಗದ ಆಫರ್ ನೀಡುತ್ತವೆ. ಈ ವರ್ಷವೂ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಸಿಕ್ಕಂತಹ ಆಫರ್ ಗಳ ಕುರಿತಾಗಿ ಐಐಐಟಿಯು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ದೆಹಲಿಯ ಈ ಹುಡುಗಿಗೆ ಸಿಗಲಿದೆ 1.45 ಕೋಟಿ ರುಪಾಯಿ ಸಂಬಳ

ಈ ವರ್ಷವೂ ದೆಹಲಿಯ ಐಐಐಟಿಯಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್‌ಗೆ ಅನೇಕ ಕಂಪನಿಗಳು ಭಾಗವಹಿಸಿದ್ದವು. ಗೂಗಲ್, ಮೈಕ್ರೋಸಾಫ್ಟ್‌, ಅಮೆಜಾನ್, ಗೋಲ್ಡನ್‌ ಸ್ಯಾಚ್ಸ್, ಅಡೋಬ್, ಕ್ವಾಲ್ಕಮ್, ಎನ್ವಿಡಿಯ, ರಿಲಯನ್ಸ್ ಮತ್ತು ಸ್ಯಾಮ್ಸಂಗ್, R&D ಸೇರಿದಂತೆ ಇನ್ನಷ್ಟು ಕಂಪನಿಗಳು ಬಂದಿದ್ದವು.

ಕೋಟಿಗಟ್ಟಲೆ ಸಂಬಳ ತಂದುಕೊಡುವ ಉದ್ಯೋಗಗಳಿವುಕೋಟಿಗಟ್ಟಲೆ ಸಂಬಳ ತಂದುಕೊಡುವ ಉದ್ಯೋಗಗಳಿವು

ಐಐಐಟಿಯ ಪತ್ರಿಕಾ ವರದಿ ಪ್ರಕಾರ 2020ರಲ್ಲಿ ಪದವಿ ಪಡೆಯಲಿರುವ ವಿದ್ಯಾರ್ಥಿಗಳಿಗೆ 562 ಆಫರ್ ಗಳು ಬಂದಿದ್ದು, ಅದರಲ್ಲಿ 310 ಪೂರ್ಣ ಪ್ರಮಾಣದ ಉದ್ಯೋಗಗಳು ಮತ್ತು ಉಳಿದವು ಇಂಟರ್ನ್ ಶಿಪ್. ಇದರಲ್ಲಿ ಬಹುದೊಡ್ಡ ಆಫರ್ ನೀಡಿದ್ದು ಮಾತ್ರ ಫೇಸ್‌ಬುಕ್.

ಐಐಐಟಿಯ ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿನಿಗೆ ಭಾರೀ ಆಫರ್ ನೀಡಿದ್ದು ವರ್ಷಕ್ಕೆ 1.45 ಕೋಟಿ ರುಪಾಯಿ ನೀಡುವುದಾಗಿ ತಿಳಿಸಿದೆ. ಇನ್ನಿಬ್ಬರು ವಿದ್ಯಾರ್ಥಿಗಳಿಗೆ 43 ಲಕ್ಷ ರುಪಾಯಿ ಮತ್ತು 33 ಲಕ್ಷ ರುಪಾಯಿ ಪ್ಯಾಕೇಜ್‌ ಆಫರ್ ನೀಡಿದೆ. ಅಲ್ಲದೆ 2021ರಲ್ಲಿ ಬಿ.ಟೆಕ್ CSE ಪದವಿ ಪಡೆಯಲಿರುವ ವಿದ್ಯಾರ್ಥಿಗೆ ಇಂಟರ್ನ್ ಶಿಪ್ ಆಫರ್ ನೀಡಿದ್ದು, ಜೊತೆಗೆ 3.31 ಲಕ್ಷ ರುಪಾಯಿ ನೀಡಲಿದೆ.

English summary

Delhi Girl Will Get 1.45 Crore Salary From Facebook

Delhi Computer science Student offered huge package. IIIT Girl get offered from facebook Rs. 1.45 cr. salary per year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X