For Quick Alerts
ALLOW NOTIFICATIONS  
For Daily Alerts

ಆರ್ಥಿಕ ಮಂದಗತಿ ಉದ್ಯೋಗ ಕ್ಷೇತ್ರದ ಮೇಲೆ ಪರಿಣಾಮ: 16 ಲಕ್ಷ ಉದ್ಯೋಗಗಳು ಕಡಿತ

|

ದೇಶದಲ್ಲಿನ ಮಂದಗತಿಯ ಆರ್ಥಿಕ ಬೆಳವಣಿಗೆಯು ಉದ್ಯೋಗ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, 2020ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಸುಮಾರು 16 ಲಕ್ಷದಷ್ಟು ಕಡಿಮೆ ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಎಸ್‌ಬಿಐ ಅಂದಾಜಿಸಿದೆ.

 

ಎಸ್‌ಬಿಐ ಸಂಶೋಧನಾ ವರದಿ-ಇಕೋವ್ರಾಪ್ ಪ್ರಕಾರ ಅಸ್ಸಾಂ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳಲ್ಲಿ ಹಣ ವಹಿವಾಟು ತುಂಬಾ ಕಡಿಮೆಯಾಗಿದ್ದು, ಇದು ಗುತ್ತಿಗೆ ಕಾರ್ಮಿಕರ ಇಳಿಕೆಯನ್ನು ಪ್ರತಿಬಿಂಬಿಸುತ್ತಿದೆ. ಹಣ ರವಾನೆ ಕಡಿಮೆ ಆಗುತ್ತಿರುವುದನ್ನು ಗಮನಿಸದರೆ 2020ರ ಹಣಕಾಸು ವರ್ಷದಲ್ಲಿ ಕಡಿಮೆ ಉದ್ಯೋಗ ಸೃಷ್ಟಿಯಾಗಲಿವೆ ಎಂದಿದೆ.

 
ಆರ್ಥಿಕ ಮಂದಗತಿ ಉದ್ಯೋಗ ಕ್ಷೇತ್ರದ ಮೇಲೆ ಪರಿಣಾಮ: ಎಸ್‌ಬಿಐ ವರದಿ

'' ಇಪಿಎಫ್‌ಒ ಅಂಕಿ-ಅಂಶಗಳ ಪ್ರಕಾರ 2019ರ ಹಣಕಾಸು ವರ್ಷದಲ್ಲಿ ಭಾರತವು 89.7 ಲಕ್ಷ ಹೊಸ ವೇತನದಾರರನ್ನು ರಚಿಸಿದೆ. ಆದರೆ 2020ರ ಹಣಕಾಸು ವರ್ಷಕ್ಕೆ ಯೋಜಿಸಿದರೆ ಈ ಸಂಖ್ಯೆ ಕನಿಷ್ಠ 15.8 ಲಕ್ಷ ಕಡಿಮೆಯಾಗಬಹುದು'' ಎಂದು ವರದಿ ತಿಳಿಸಿದೆ.

ಇಪಿಎಫ್‌ಒ ಸಾಮಾನ್ಯವಾಗಿ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಪ್ರಾಥಮಿಕ ದತ್ತಾಂಶವನ್ನು ಒಳಗೊಳ್ಳುತ್ತದೆ. ಏಕೆಂದರೆ ಪ್ರತಿ ತಿಂಗಳು 15,000 ರುಪಾಯಿ ಪಡೆಯುವ ಉದ್ಯೋಗಿಗಳ ಸಂಖ್ಯೆಯನ್ನ ಆಧರಿಸಿ ಲೆಕ್ಕಾಚಾರದ ಪ್ರಕಾರ 2019ರ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಹೊಸ ವೇತನದಾರರ ಸಂಖ್ಯೆ 43.1 ಲಕ್ಷವಾಗಿದ್ದು, ವಾರ್ಷಿಕ 2020ರ ಹಣಕಾಸು ವರ್ಷಕ್ಕೆ ಒಟ್ಟಾರೆ 73.9 ಲಕ್ಷ ಇರಬಹುದು ಎಂದು ಹೇಳಲಾಗಿದೆ.

ಇಪಿಎಫ್ಒ ದತ್ತಾಂಶವು ಸರ್ಕಾರಿ ಉದ್ಯೋಗಿಗಳು, ರಾಜ್ಯ ಸರ್ಕಾರಿ ಉದ್ಯೋಗಿಗಳು ಮತ್ತು ಖಾಸಗಿ ಉದ್ಯೋಗಿಗಳನ್ನು ಒಳಗೊಂಡಿರುವುದಿಲ್ಲ. ಏಕೆಂದರೆ ಅಂತಹ ಮಾಹಿತಿಯು 2004ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ(ಎನ್‌ಪಿಎಸ್) ಸ್ಥಳಾಂತರಗೊಂಡಿದೆ.

English summary

Economic Slowdown Hit Job Sector And 16 Lakh Less Jobs Said SBI

The economic slowdown has adversely impacted employment generation in the country as nearly 16 lakh less jobs are projected to be created in FY20
Story first published: Tuesday, January 14, 2020, 10:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X