For Quick Alerts
ALLOW NOTIFICATIONS  
For Daily Alerts

WazirX ಬ್ಯಾಂಕ್ ಖಾತೆ ಸಕ್ರಿಯಗೊಳಿಸಿದ ಇಡಿ, ಕಾರ್ಯಾಚರಣೆ ಎಂದಿನಂತೆ ಮುಂದುವರಿಕೆ

|

ಭಾರತೀಯ ಕ್ರಿಪ್ಟೋ ಎಕ್ಸ್ಚೇಂಜ್ WazirX ಸೋಮವಾರ ಜಾರಿ ನಿರ್ದೇಶನಾಲಯವು ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿದೆ ಎಂದು ಘೋಷಣೆ ಮಾಡಿದೆ. ಈ ಕ್ರಿಪ್ಟೋ ವಿನಿಯಮ ಸಂಸ್ಥೆಯು ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

"ಜಾರಿ ನಿರ್ದೆಶನಾಲಯವು WazirX ನ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸಿದೆ. ತನಿಖಾಧಿಕಾರಿಗಳ ಸಹಕಾರದೊಂದಿಗೆ, WazirX WazirX ಪ್ಲಾಟ್‌ಫಾರ್ಮ್ ಅನ್ನು ಬಳಸಿದ ಆರೋಪದಲ್ಲಿ ಕಂಪನಿಗಳ ಎಲ್ಲ ಅಗತ್ಯ ವಿವರಗಳನ್ನು ಮತ್ತು ದಾಖಲೆಗಳನ್ನು ಒದಗಿಸಿದೆ," ಎಂದು ಟ್ವೀಟ್‌ನಲ್ಲಿ ಹೇಳಿದೆ.

ಚೀನಾದ ಸಾಲ ಆಪ್ ಪ್ರಕರಣ: ಪೇಟಿಎಂ ಮೇಲೆ ಇಡಿ ದಾಳಿಚೀನಾದ ಸಾಲ ಆಪ್ ಪ್ರಕರಣ: ಪೇಟಿಎಂ ಮೇಲೆ ಇಡಿ ದಾಳಿ

ಇನ್ನು ಕ್ರಿಪ್ಟೋ ಎಕ್ಸ್ಚೇಂಜ್ WazirX ಸಂಪೂರ್ಣ ಹೇಳಿಕೆಯಲ್ಲಿ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿದೆ. "ಜಾರಿ ನಿರ್ದೆಶನಾಲಯವು (ಇಡಿ) 16 ಫಿನ್‌ಟೆಕ್ ಕಂಪನಿಗಳು ಮತ್ತು ಇನ್‌ಸ್ಟಂಟ್ ಲೋನ್ ಅಪ್ಲಿಕೇಶನ್‌ಗಳ ತನಿಖೆಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಕೆಲವು ವಝಿರ್‌ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿವೆ. ವಝಿರ್‌ಎಕ್ಸ್ ಅವುಗಳನ್ನು ಒದಗಿಸುವ ಮೂಲಕ ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತಿದೆ. WazirX ಪ್ಲಾಟ್‌ಫಾರ್ಮ್ ಅನ್ನು ಬಳಸಿದ ಆರೋಪಿತ ಕಂಪನಿಗಳ ಎಲ್ಲಾ ಅಗತ್ಯ ವಿವರಗಳು, ಮಾಹಿತಿ ಮತ್ತು ದಾಖಲೆಗಳನ್ನು ನೀಡುವ ಮೂಲಕ ತನಿಖೆಗೆ ಸಹಕಾರ ನೀಡುತ್ತಿದೆ," ಎಂದು ಉಲ್ಲೇಖ ಮಾಡಲಾಗಿದೆ.

 WazirX ಬ್ಯಾಂಕ್ ಖಾತೆ ಸಕ್ರಿಯಗೊಳಿಸಿದ ಜಾರಿ ನಿರ್ದೆಶನಾಲಯ

ಆರೋಪಿತ ಸಂಸ್ಥೆಯೊಂದಿಗೆ ಸಂಬಂಧವಿಲ್ಲ: ವಝಿರ್‌ಎಕ್ಸ್ ಸ್ಪಷ್ಟಣೆ

ಇನ್ನು ಇಡಿ ತನಿಖೆಯ ವಿಷಯವಾಗಿ ಕಂಡುಬರುವ ಯಾವುದೇ ಆರೋಪಿತ ಫಿನ್‌ಟೆಕ್ ಮತ್ತು ಇನ್‌ಸ್ಟಂಟ್ ಲೋನ್ ಅಪ್ಲಿಕೇಶನ್ ಘಟಕಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ಯಾವುದೇ ಕಾನೂನು ಬಾಧ್ಯತೆಯಿಲ್ಲದಿದ್ದರೂ KYC/AML ತಪಾಸಣೆಗಳನ್ನು ನಡೆಸುತ್ತಿದೆ. ಇತರೆ ವೇದಿಕೆಗಳನ್ನು ಕೆಲವರು ದುರುಪಯೋಗಪಡಿಸಿಕೊಂಡಿರುವ ಘಟನೆ ನಮ್ಮ ಕಣ್ಣಮುಂದಿದೆ. ಅದರಂತೆಯೇ WazirXನ ವೇದಿಕೆಯನ್ನು ದುರುಪಯೋಗ ಮಾಡಿರಬಹುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ

ಕುತೂಹಲಕಾರಿಯಾಗಿ, ಆಗಸ್ಟ್ ತಿಂಗಳಿನಲ್ಲಿ ಇಡಿ ವಜೀರ್‌ಎಕ್ಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಸಮೀರ್ ಮ್ಹಾತ್ರೆ ಅವರಿಗೆ ಸೇರಿದ 64.67 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿಯನ್ನು ಫ್ರೀಜ್ ಮಾಡಿದೆ. ಕ್ರಿಪ್ಟೋ ಸ್ವತ್ತುಗಳ ಮೂಲಕ ಮನಿ ಲಾಂಡರಿಂಗ್ ಆರೋಪಗಳಿಗೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ.

English summary

ED Unfreezes WazirX Bank Accounts, Bank Operations To Continue As Usual

Indian crypto exchange WazirX announced on Monday that the Enforcement Directorate had unfrozen their bank accounts.
Story first published: Monday, September 12, 2022, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X