For Quick Alerts
ALLOW NOTIFICATIONS  
For Daily Alerts

ಟೆಸ್ಲಾ ಖರೀದಿಸುವಂತೆ ಆಪಲ್ ಕದ ತಟ್ಟಿದ್ದ ವಿಶ್ವದ ಎರಡನೇ ಶ್ರೀಮಂತ

|

ಜಗತ್ತಿನ ಎರಡನೇ ಶ್ರೀಮಂತ ಎಲಾನ್ ಮಸ್ಕ್ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡು, ಮಂಗಳವಾರ ಮಾಡಿದ ಟ್ವೀಟ್ ಭಾರೀ ಸುದ್ದಿ ಆಗಿದೆ. "ಮಾಡೆಲ್ 3 ಪ್ರೋಗ್ರಾಂನ ಕಡು ಕಷ್ಟದ ದಿನಗಳಲ್ಲಿ" ಟೆಸ್ಲಾ ಕಂಪೆನಿಯನ್ನು ಈಗಿನ ಮೌಲ್ಯದ ಹತ್ತನೇ ಒಂದು ಭಾಗದಷ್ಟು ಬೆಲೆಗೆ ಖರೀದಿಸುವಂತೆ ಕೆಳಲು ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿ ಆಗಲು ಪ್ರಯತ್ನಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

 

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿCIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿ

"ಅವರು ಭೇಟಿಯಾಗಲು ನಿರಾಕರಿಸಿದರು," ಎಂದು ಎಲೆಕ್ಟ್ರಿಕ್ ಕಾರು ತಯಾರಿಕೆ ಕಂಪೆನಿ ಟೆಸ್ಲಾ ಸಿಇಒ ಮಸ್ಕ್ ಹೇಳಿದ್ದಾರೆ. 2024ನೇ ಇಸವಿ ಹೊತ್ತಿಗೆ ಹೊಸ ಬ್ಯಾಟರಿ ತಂತ್ರಜ್ಞಾನದೊಂದಿಗೆ ಪ್ರಯಾಣಿಕರ ವಾಹನ ಉತ್ಪಾದಿಸಲು ಆಪಲ್ ಕಂಪೆನಿ ಆಲೋಚಿಸುತ್ತಿದೆ ಎಂಬ ಸುದ್ದಿಯ ಬಗೆಗಿನ ಟ್ವಿಟ್ಟರ್ ಸರಣಿಗೆ ಮಸ್ಕ್ ಈ ಮೇಲ್ಕಂಡ ವಿಷಯವನ್ನು ದಾಖಲಿಸಿದ್ದಾರೆ.

2017 ಹಾಗೂ 2018ರಲ್ಲಿ ಮಾಡೆಲ್ 3 ಸೆಡಾನ್

2017 ಹಾಗೂ 2018ರಲ್ಲಿ ಮಾಡೆಲ್ 3 ಸೆಡಾನ್

2017 ಹಾಗೂ 2018ರಲ್ಲಿ ಮಾಡೆಲ್ 3 ಸೆಡಾನ್ ಉತ್ಪಾದನೆಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಿತ್ತು. ರೆನೊ, ನೆವಡದಲ್ಲಿನ ಬ್ಯಾಟರಿ ಕಾರ್ಖಾನೆಯಲ್ಲಿ ಆಟೊಮೆಟೆಡ್ ಉತ್ಪಾದನೆ ವ್ಯವಸ್ಥೆಯಲ್ಲೇ ಸಂಕಷ್ಟ ಕಾಣಿಸಿಕೊಂಡಿತ್ತು. ಆದರೂ ಆ ಎಲ್ಲ ಸಮಸ್ಯೆಗಳಿಂದ ಹೊರಬಂದ ಟೆಸ್ಲಾ ತ್ರೈಮಾಸಿಕ ಲಾಭ ಗಳಿಕೆಯನ್ನು ಹೆಚ್ಚು ಮಾಡಿಕೊಂಡಿತು. S&P500 ಸೂಚ್ಯಂಕಕ್ಕೆ ಸೇರ್ಪಡೆಯಾದ ಅತ್ಯಂತ ಮೌಲ್ಯಯುತ ಕಂಪೆನಿ ಟೆಸ್ಲಾ ಎಂಬ ಕೀರ್ತಿಗೆ ಪಾತ್ರವಾಯಿತು.

ಆಪಲ್ ನಿಂದ ಪ್ರಬಲ ಸ್ಪರ್ಧೆ ಎದುರಾಗಬಹುದು

ಆಪಲ್ ನಿಂದ ಪ್ರಬಲ ಸ್ಪರ್ಧೆ ಎದುರಾಗಬಹುದು

S&P500 ಸೂಚ್ಯಂಕಕ್ಕೆ ಸೇರ್ಪಡೆಯಾದ ಮೊದಲ ದಿನವೇ ಕಾರು ತಯಾರಿಕೆಯಲ್ಲಿ ಆಪಲ್ ನಿಂದ ಪ್ರಬಲ ಸ್ಪರ್ಧೆ ಎದುರಾಗಬಹುದು ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಟೆಸ್ಲಾ ಷೇರಿನ ಬೆಲೆ 6.5% ಇಳಿಕೆ ಕಂಡಿತು. ಆಪಲ್ ತನ್ನ ಯೋಜನೆಗೆ ಪ್ರಾಜೆಕ್ಟ್ ಟೈಟಾನ್ ಎಂದು ಹೆಸರಿಟ್ಟಿದೆ. ತನ್ನದೇ ಸ್ವಂತ ರಚನೆಯ ಕಾರು ತಯಾರಿಸಲು 2014ರಿಂದ ಪ್ರಯತ್ನಿಸುತ್ತಿದೆ.

'ಮೊನೊ ಸೆಲ್' ಬಳಸಲು ಯೋಜನೆ
 

'ಮೊನೊ ಸೆಲ್' ಬಳಸಲು ಯೋಜನೆ

ಇನ್ನು ಎಲಾನ್ ಮಸ್ಕ್ ಮುಂದುವರಿದು, ತನ್ನ ಡಿಸೈನ್ ನಲ್ಲಿ 'ಮೊನೊ ಸೆಲ್' ಬಳಸಲು ಆಪಲ್ ಯೋಜನೆ ಹಾಕಿಕೊಂಡಿದೆ. ಇದು ಎಲೆಕ್ಟ್ರೋ ಕೆಮಿಕಲಿ ಅಸಾಧ್ಯ. ಏಕೆಂದರೆ, ಅದರ ಗರಿಷ್ಠ ವೊಲ್ಟೇಜ್ - 100X ಬಹಳ ಕಡಿಮೆ ಎಂದು ಹೇಳಿದ್ದಾರೆ. ಇನ್ನು ಈ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಆಪಲ್ ಹಾಗೂ ಟೆಸ್ಲಾ ಎರಡೂ ಕಂಪೆನಿಗಳು ನಿರಾಕರಿಸಿವೆ.

English summary

Elon Musk says had once reached out to Apple for acquiring Tesla Company

Elon Musk on Tuesday said, he had reached Apple ask to acquire Tesla company. But Apple CEO Tim Cook refused meet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X