For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್‌ನಲ್ಲಿ 16.82 ಲಕ್ಷ ಇಪಿಎಫ್‌ಒ ಚಂದಾದಾರಿಕೆ, ಇಲ್ಲಿದೆ ವಿವರ

|

2022ರ ಸೆಪ್ಟೆಂಬರ್ ತಿಂಗಳಿನಲ್ಲಿ 16.82 ಲಕ್ಷ ಇಪಿಎಫ್‌ಒ ನಿವ್ವಳ ಚಂದಾದಾರಿಕೆಯಾಗಿದೆ ಎಂದು ಕಾರ್ಮಿಕ ಸಚಿವಾಲಯವು ಭಾನುವಾರ ತಿಳಿಸಿದೆ. ಈ ವರ್ಷದ ನಿವ್ವಳ ಚಂದಾದಾರಿಕೆಗೆ ಕಳೆದ ವರ್ಷದ ಇಪಿಎಫ್‌ಒ ನಿವ್ವಳ ಚಂದಾದಾರಿಕೆಯನ್ನು ನಾವು ಹೋಲಿಕೆ ಮಾಡಿದಾಗ ಚಂದಾದಾರಿಕೆಯು ಶೇಕಡ 9.14ರಷ್ಟು ಹೆಚ್ಚಳವಾಗಿದೆ ಎಂದು ಕೂಡಾ ಸಚಿವಾಲಯ ತಿಳಿಸಿದೆ.

ಸುಮಾರು 2,861 ಹೊಸ ಸಂಸ್ಥೆಗಳು ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆಯಡಿ ಸೇರ್ಪಡೆಯಾಗಿದೆ. ಅಂದರೆ ಹೊಸದಾಗಿ 2,861 ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇಪಿಎಫ್‌ಒ ಚಂದಾದಾರಿಕೆ ಮಾಡಿದೆ. ಇನ್ನು ಈ ತಿಂಗಳಿನಲ್ಲಿ ಇಪಿಎಫ್‌ಒ ಸೇರ್ಪಡೆಯು ಕಳೆದ ಹಣಕಾಸು ವರ್ಷದಲ್ಲಿ ಇದೇ ತಿಂಗಳಲ್ಲಿ ನಡೆದ ಪಿಎಫ್‌ ಸೇರ್ಪಡೆಗಿಂತ ಶೇಕಡ 21.85ರಷ್ಟು ಹೆಚ್ಚಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿದೆ.

ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ಸೆಪ್ಟೆಂಬರ್‌ನಲ್ಲಿ ಇಪಿಎಫ್‌ಒಗೆ 16.82 ಲಕ್ಷ ಸದಸ್ಯತ್ವ ಹೆಚ್ಚಳವಾಗಿದ್ದು, ಈ ಪೈಕಿ 9.34 ಲಕ್ಷ ಸದಸ್ಯತ್ವವು ಹೊಸದಾಗಿದೆ. ಅಂದರೆ ಮೊದಲ ಬಾರಿಗೆ ಇಪಿಎಫ್‌ಒ ಖಾತೆ ತೆರೆಯಲಾಗಿದೆ. ಈ ಹೊಸ ಚಂದಾದಾರಿಕೆಯ ಪೈಕಿ ಹೆಚ್ಚಿನ ಚಂದಾದಾರರು 18-21 ವಯಸ್ಸಿವರು ಆಗಿದ್ದಾರೆ. 16.82 ಲಕ್ಷ ಸದಸ್ಯತ್ವದ ಪೈಕಿ ಸುಮಾರು 9.34 ಲಕ್ಷ ಸದಸ್ಯತ್ವವು 18-21 ವಯಸ್ಸಿನವರದ್ದಾಗಿದೆ. ಹಾಗಾದರೆ ಬೇರೆ ಯಾವ ಯಾವ ವಯಸ್ಸಿವರು ಹೆಚ್ಚು ಚಂದಾದಾರಿಕೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ವಯಸ್ಸಿನ ಆಧಾರದಲ್ಲಿ ಚಂದಾದಾರಿಕೆ ಹೀಗಿದೆ

ವಯಸ್ಸಿನ ಆಧಾರದಲ್ಲಿ ಚಂದಾದಾರಿಕೆ ಹೀಗಿದೆ

18-21 ವಯಸ್ಸಿವರು 9.34 ಲಕ್ಷ ಹೊಸದಾಗಿ ಸದಸ್ಯತ್ವ ಮಾಡಿದ್ದರೆ, ಹೊಸದಾಗಿ 21-25 ವಯಸ್ಸಿನವರು 2.54 ಲಕ್ಷ ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಇನ್ನು ಸುಮಾರು ಶೇಕಡ 58.75ರಷ್ಟು ಇಪಿಎಫ್‌ಒ ಸದಸ್ಯರು 18-25 ವಯೋಮಿತಿಯವರಾಗಿದ್ದಾರೆ. ಅಂದರೆ ಮೊದಲ ಬಾರಿಗೆ ಉದ್ಯೋಗ ಆರಂಭ ಮಾಡಿದವರು ಹೆಚ್ಚಾಗಿ ಇಪಿಎಫ್‌ ಖಾತೆ ತೆರೆಯುತ್ತಿದ್ದಾರೆ ಎಂದು ಇದರ ಅರ್ಥವಾಗಿದೆ ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ.

 ಎಷ್ಟು ಮಂದಿ ಇಪಿಎಫ್‌ ಸದಸ್ಯತ್ವ ತೊರೆದಿದ್ದಾರೆ?

ಎಷ್ಟು ಮಂದಿ ಇಪಿಎಫ್‌ ಸದಸ್ಯತ್ವ ತೊರೆದಿದ್ದಾರೆ?

ಈ ತಿಂಗಳಿನಲ್ಲಿ ಸುಮಾರು 7.49 ಲಕ್ಷ ಸದಸ್ಯರು ಇಪಿಎಫ್‌ ಸದಸ್ಯತ್ವವನ್ನು ತೊರೆದಿದ್ದಾರೆ. ಆದರೆ ಕೂಡಲೇ ತಮ್ಮ ಉದ್ಯೋಗವನ್ನು ಬದಲಾಯಿಸಿಕೊಂಡು ಬೇರೆ ಸಂಸ್ಥೆ ಮೂಲಕ ಮತ್ತೆ ಇಪಿಎಫ್‌ಒ ಸದಸ್ಯತ್ವ ಮಾಡಿಕೊಂಡಿದ್ದಾರೆ. ಹಾಗೆಯೇ ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಬದಲಾಗಿ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳುವ ಆಯ್ಕೆಯನ್ನು ಹಲವಾರು ಮಂದಿ ಆರಿಸಿಕೊಂಡಿದ್ದಾರೆ. ಇನ್ನು ಕಳೆದ ಮೂರು ತಿಂಗಳಿನಿಂದ ಇಪಿಎಫ್‌ಒ ಸದಸ್ಯತ್ವ ತೊರೆಯುತ್ತಿರುವವರ ಸಂಖ್ಯೆಯು ಕಡಿಮೆಯಾಗುತ್ತಿದೆ ಎಂದು ಡೇಟಾ ಹೇಳುತ್ತದೆ. ಕಳೆದ ತಿಂಗಳಿಗೆ ನಾವು ಹೋಲಿಕೆ ಮಾಡಿದರೆ, ಶೇಕಡ 9.65 ಕಡಿಮೆ ಸದಸ್ಯರು ಇಪಿಎಫ್‌ಒ ಸದಸ್ಯತ್ವವನ್ನು ತೊರೆದಿದ್ದಾರೆ.

 ಮಹಿಳಾ ಸದಸ್ಯರು ಎಷ್ಟಿದ್ದಾರೆ ನೋಡಿ...

ಮಹಿಳಾ ಸದಸ್ಯರು ಎಷ್ಟಿದ್ದಾರೆ ನೋಡಿ...

ಇನ್ನು ನಾವು ಲಿಂಗದ ಆಧಾರದಲ್ಲಿ ನೋಡುವುದಾದರೆ ಸೆಪ್ಟೆಂಬರ್ 2022ರಲ್ಲಿ 3.50 ಲಕ್ಷ ಮಹಿಳೆಯರು ಇಪಿಎಫ್‌ಒ ಸದಸ್ಯತ್ವ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಗೆ ಹೋಲಿಕೆ ಮಾಡಿದಾಗ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಇಪಿಎಫ್‌ಒದಲ್ಲಿ ಮಹಿಳಾ ಸದಸ್ಯತ್ವ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಶೇಕಡ 6.98ರಷ್ಟು ಅಧಿಕ ಮಹಿಳಾ ಸದಸ್ಯತ್ವ ನಡೆದಿದೆ. ಹಾಗೆಯೇ ಹೊಸದಾಗಿ ಚಂದಾದಾರಿಕೆ ಮಾಡಿದವರ ಲೆಕ್ಕಾಚಾರದಲ್ಲಿ ನೋಡಿದಾಗ ಹೊಸದಾಗಿ ಶೇಕಡ 26.36ರಷ್ಟು ಮಹಿಳಾ ಚಂದಾದರಿಕೆ ನಡೆದಿದೆ.

 ರಾಜ್ಯವಾರು ಲೆಕ್ಕಾಚಾರದ ವಿವರ

ರಾಜ್ಯವಾರು ಲೆಕ್ಕಾಚಾರದ ವಿವರ

ಕೇಂದ್ರ ಕಾರ್ಮಿಕ ಸಚಿವಾಲಯದ ತನ್ನ ಡೇಟಾದಲ್ಲಿ ರಾಜ್ಯವಾರು ಚಂದಾದಾರಿಕೆ ವಿವರವನ್ನು ಕೂಡಾ ನೀಡಿದೆ. ಪ್ರಮುಖವಾಗಿ ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಒಡಿಸ್ಸಾದಲ್ಲಿ ಕಳೆದ ತಿಂಗಳಿಗಿಂತ ಈ ತಿಂಗಳು ಅಧಿಕ ಇಪಿಎಫ್‌ಒ ಚಂದಾದಾರಿಕೆ ನಡೆದಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದಾಗ ಈ ತಿಂಗಳು ನ್ಯಾಷನಲ್ ಬ್ಯಾಂಕ್‌, ಗಾರ್ಮೆಟ್‌ಗಳು, ವಿಮಾ ಸಂಸ್ಥೆ, ಹೊಟೇಲ್, ಆಸ್ಪತ್ರೆಗಳಲ್ಲಿ ಚಂದಾದಾರಿಕೆ ಹೆಚ್ಚಾಗಿದೆ.

English summary

EPFO Adds 16.82 Lakh Net Subscribers In September 2022, Details in Kannada

Retirement fund body EPFO added 16.82 lakh subscribers on a net basis in September 2022, the labour ministry said in a release on Sunday. Details in Kannada.
Story first published: Monday, November 21, 2022, 13:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X