For Quick Alerts
ALLOW NOTIFICATIONS  
For Daily Alerts

ಸಿಕ್ಕಾಪಟ್ಟೆ ಹೆಚ್ಚಾಯಿತು ಅಮೆರಿಕ ಪೌರತ್ವ ಬಿಟ್ಟುಕೊಡುವವರ ಸಂಖ್ಯೆ

|

ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಸಿಗರು ಅಮೆರಿಕ ಪೌರತ್ವವನ್ನು ಬಿಟ್ಟುಕೊಡುತ್ತಿರುವುದು ಜಾಸ್ತಿ ಆಗಿದೆ. ನ್ಯೂಯಾರ್ಕ್ ನಲ್ಲಿರುವ ಬಾಂಬ್ರಿಡ್ಜ್ ಅಕೌಂಟೆಂಟ್ಸ್ ಸಮೀಕ್ಷೆ ಪ್ರಕಾರ, 2020ರ ಮೊದಲ ಆರು ತಿಂಗಳಲ್ಲಿ 5816 ಮಂದಿ ತನ್ನ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ.

ಅದಕ್ಕೂ ಮುಂಚಿನ ಆರು ತಿಂಗಳು, ಅಂದರೆ ಜುಲೈನಿಂದ ಡಿಸೆಂಬರ್ 2019ರ ತನಕ ಇಂಥ ಪ್ರಕರಣಗಳು ಕೇವಲ 444 ದಾಖಲಾಗಿದ್ದವು. ಇಡೀ 2019ನೇ ಇಸವಿಯಲ್ಲಿ 2072 ಮಂದಿ ಅಮೆರಿಕನ್ನರು ಮಾತ್ರ ತಮ್ಮ ಪೌರತ್ವ ಬಿಟ್ಟಿದ್ದರು. ಒಂದು ಅಂದಾಜಿನ ಪ್ರಕಾರ, ತೊಂಬತ್ತು ಲಕ್ಷ ಮಂದಿ ಯು.ಎಸ್. ವಲಸಿಗರಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ US ಆರ್ಥಿಕತೆ 33% ಇಳಿಕೆ: ಸಾರ್ವಕಾಲಿಕ ಹೀನಾಯ ಕುಸಿತ

 

ಹೀಗೆ ಪೌರತ್ವವನ್ನು ಬಿಟ್ಟುಕೊಡುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ 2350 USD ಸರ್ಕಾರಕ್ಕೆ ಶುಲ್ಕ ಪಾವತಿಸುವಂತೆ ಕೇಳಲಾಗುತ್ತಿದೆ. ಅಮೆರಿಕ ನಾಗರಿಕರಾಗಿದ್ದಲ್ಲಿ ವಿದೇಶದಲ್ಲಿ ಇದ್ದಾಗಲೂ ಪ್ರತಿ ವರ್ಷ ಯು.ಎಸ್. ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕು, ಯುಎಸ್ ತೆರಿಗೆ ಪಾವತಿಸಬೇಕು ಮತ್ತು ವಿದೇಶದಲ್ಲಿನ ಬ್ಯಾಂಕ್ ಖಾತೆಗಳ ಮಾಹಿತಿ, ಹೂಡಿಕೆ ಹಾಗೂ ಯು.ಎಸ್. ಹೊರಗೆ ಇರುವ ಪೆನ್ಷನ್ ಗಳ ವಿವರ ನೀಡಬೇಕು.

ಸಿಕ್ಕಾಪಟ್ಟೆ ಹೆಚ್ಚಾಯಿತು ಅಮೆರಿಕ ಪೌರತ್ವ ಬಿಟ್ಟುಕೊಡುವವರ ಸಂಖ್ಯೆ

ಅಮೆರಿಕನ್ನರ ಪೈಕಿ ಹಲವರಿಗೆ ಇದು ಕಷ್ಟದ ಕೆಲಸ. ಆದ್ದರಿಂದ ಯು.ಎಸ್.ಗೆ ವಾಪಸಾಗುವ ಆಲೋಚನೆಯನ್ನೇ ಕೈ ಬಿಟ್ಟು, ಪೌರತ್ವವನ್ನು ಬಿಟ್ಟುಕೊಡುತ್ತಿದ್ದಾರೆ.

English summary

Expats are giving up American citizenship in record numbers: Report

Including corona pandemic more number of expats giving up American citizenship in 2020. Here is the details.
Company Search
COVID-19