For Quick Alerts
ALLOW NOTIFICATIONS  
For Daily Alerts

ಮೇ ತಿಂಗಳಲ್ಲಿ 23.7 ಬಿಲಿಯನ್‌ ಡಾಲರ್‌ಗೆ ಏರಿದ ರಫ್ತು

|

ಪೆಟ್ರೋಲಿಯಂ ಉತ್ಪನ್ನಗಳು, ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ಸರಕುಗಳಂತಹ ವಿವಿಧ ವಲಯಗಳಲ್ಲಿನ ಆರೋಗ್ಯಕರ ಬೆಳವಣಿಗೆಯಿಂದಾಗಿ ದೇಶದ ರಫ್ತುಗಳು ಮೇ 1-21 ರ ಅವಧಿಯಲ್ಲಿ ಶೇಕಡಾ 21.1 ರಷ್ಟು ಏರಿಕೆಯಾಗಿ 23.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ತಿಂಗಳ ಎರಡನೇ ವಾರದಲ್ಲಿ (ಮೇ 15-21), ರಫ್ತುಗಳು ಸುಮಾರು 24 ಪ್ರತಿಶತದಷ್ಟು ಹೆಚ್ಚಾಗಿದ್ದು, 8.03 ಬಿಲಿಯನ್‌ ಡಾಲರ್‌ಗೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಮೇ ತಿಂಗಳ ಒಟ್ಟು ಅಂಕಿಅಂಶವನ್ನು ಜೂನ್‌ನಲ್ಲಿ ವಾಣಿಜ್ಯ ಸಚಿವಾಲಯವು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಪೆಟ್ರೋಲಿಯಂ ಉತ್ಪನ್ನಗಳು, ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಫ್ತುಗಳು ಮೇ 1-21 ರ ಅವಧಿಯಲ್ಲಿ ಕ್ರಮವಾಗಿ 81.1 ಶೇಕಡಾ, ಸುಮಾರು 17 ಶೇಕಡಾ ಮತ್ತು ಶೇಕಡಾ 44 ರಷ್ಟು ವಿಸ್ತಾರವಾಗಿದೆ. ಏಪ್ರಿಲ್‌ನಲ್ಲಿ ರಫ್ತು ಶೇ.30.7ರಷ್ಟು ಏರಿಕೆಯಾಗಿ 40.19 ಬಿಲಿಯನ್ ಡಾಲರ್‌ಗೆ ತಲುಪಿದೆ. ತಿಂಗಳಲ್ಲಿ ಆಮದು ಶೇ.30.97ರಷ್ಟು ಏರಿಕೆಯಾಗಿ 60.3 ಶತಕೋಟಿ ಡಾಲರ್‌ಗೆ ತಲುಪಿದೆ.

ಮೇ ತಿಂಗಳಲ್ಲಿ 23.7 ಬಿಲಿಯನ್‌ ಡಾಲರ್‌ಗೆ ಏರಿದ ರಫ್ತು

ಮೌಲ್ಯವರ್ಧಿತ ರಫ್ತುಗಳ ಮೇಲೆ ಗಮನ

ಸೇವಾ ವಲಯದ ರಫ್ತಿನ ಮೇಲೆ ಹೆಚ್ಚು ಗಮನಹರಿಸುವ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಇದು ದೇಶದ ಒಟ್ಟಾರೆ ರಫ್ತನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಹಾಗೆಯೇ ಸರ್ಕಾರ ಮತ್ತು ಉದ್ಯಮಗಳು ಪರಸ್ಪರ ಬೆಂಬಲಿಸಲು ಕರೆ ನೀಡಿದರು.

ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆ 2022 ರ ಹಿನ್ನೆಲೆಯಲ್ಲಿ ಉದ್ಯಮ ಸಂಸ್ಥೆ ಸಿಐಐ ಮತ್ತು ಡೆಲಾಯ್ಟ್ ಆಯೋಜಿಸಿದ್ದ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೋವಿಡ್ ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಸವಾಲುಗಳನ್ನು ಉಲ್ಲೇಖ ಮಾಡಿದರು.

ಸಚಿವರ ಪ್ರಕಾರ, 250 ಶತಕೋಟಿ ಡಾಲರ್‌ರಷ್ಟು ರಫ್ತುಗಳು ಆತಿಥ್ಯ ಮತ್ತು ಇತರ ಕೆಲವು ಪ್ರಮುಖ ಕ್ಷೇತ್ರಗಳಿಲ್ಲನ್ನು ಹೊರತುಪಡಿಸಿ ಆಗಿದೆ. ಹಾಗೆಯೇ ಸೇವಾ ವಲಯದ ಮೇಲೆ ಹೆಚ್ಚುವರಿ ಗಮನವು ರಫ್ತು ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

"ಭಾರತವು ಈಗ ಮೌಲ್ಯವರ್ಧಿತ ರಫ್ತುಗಳನ್ನು ಮಾಡಬೇಕಾಗಿದೆ. ದೇಶಕ್ಕೆ ಉದ್ಯೋಗ ಸೃಷ್ಟಿ ಮಾಡುವುದು ಮುಖ್ಯ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿದೆ. ದೊಡ್ಡ ಯೋಜನೆಗಳ ಮೇಲ್ವಿಚಾರಣೆಗೆ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಲು ನಾವು ಸಿದ್ಧರಿದ್ದೇವೆ. ದೊಡ್ಡ ಯೋಜನೆಗಳಲ್ಲಿ, ದೇಶಕ್ಕೆ ಪ್ರಮಾಣವನ್ನು ತರಲು ನಾವೆಲ್ಲರೂ ಪರಸ್ಪರ ಬೆಂಬಲಿಸಬೇಕಾಗಿದೆ," ಎಂದು ಕೂಡಾ ಹೇಳಿದರು.

English summary

Exports Rise To $23.7 Billion During May, Here's a Details

Exports Rise To $23.7 Billion During May, Here's a Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X