For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಮತ್ತೊಮ್ಮೆ ಜೆಟ್ ಇಂಧನ ಬೆಲೆ ಇಳಿಕೆ, ವಿಮಾನಯಾನ ದರ?

|

ರಷ್ಯಾ- ಉಕ್ರೇನ್ ನಡುವಿನ ಯುದ್ಧ, ಇಂಧನ ಮೇಲಿನ ಯುರೋಪಿಯನ್ ಯೂನಿಯನ್ ನಿರ್ಬಂಧ, ಮುಂದುವರೆದ ಪೂರೈಕೆಯಲ್ಲಿನ ವ್ಯತ್ಯಯ, ಕಚ್ಚಾತೈಲ ದರ ಪ್ರತಿ ಬ್ಯಾರೆಲ್ ಬೆಲೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಜೆಟ್ ಇಂಧನ ದರವನ್ನು ಇಳಿಕೆ ಮಾಡಿವೆ. ಬ್ರೆಂಟ್ ಕಚ್ಚಾತೈಲ ದರ ಪ್ರತಿ ಬ್ಯಾರೆಲ್ ಮೇಲೆ 100 ಯುಎಸ್ ಡಾಲರ್ ಗಿಂತ ಕೆಳಗಿಳಿದಿರುವುದೇ ಮುಖ್ಯ ಕಾರಣ ಎನ್ನಲಾಗಿದೆ. ಜೂನ್ ತಿಂಗಳ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಜೆಟ್ ಇಂಧನ(ATF) ದರ ಪರಿಷ್ಕರಣೆಯಾಗಿದೆ.

ಜೆಟ್ ಇಂಧನ (ಎಟಿಎಫ್) ಬೆಲೆಗಳನ್ನು ಶೇಕಡಾ 2.2 ರಷ್ಟು ಕಡಿಮೆ ಮಾಡಲಾಗಿದೆ, ಇದು ಅಂತಾರಾಷ್ಟ್ರೀಯ ತೈಲ ಬೆಲೆಗಳ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳನ್ನು ಪ್ರತಿ ಕಿಲೋಲೀಟರ್‌ಗೆ ರೂ 3,084.94 ಅಥವಾ ಶೇಕಡಾ 2.2 ರಷ್ಟು ಕಡಿತಗೊಳಿಸಲಾಗಿದ್ದು, ಪ್ರತಿ ಕಿಲೋಗೆ ರೂ 138,147.93 ಕ್ಕೆ ತಲುಪಿದೆ ಎಂದು ಸರ್ಕಾರಿ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆಯಲ್ಲಿ ಹೇಳಿದೆ.

ಸರ್ಕಾರಿ ಸ್ವಾಮ್ಯದ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದು!ಸರ್ಕಾರಿ ಸ್ವಾಮ್ಯದ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದು!

ಕಳೆದ ತಿಂಗಳು ಪ್ರತಿ ಕಿಲೋಗೆ ರೂ 141,232.87 (ಪ್ರತಿ ಲೀಟರ್‌ಗೆ ರೂ 141.23) ಕ್ಕೆ ತಲುಪಿತ್ತು. ಜುಲೈ ತಿಂಗಳ ಆರಂಭದಲ್ಲಿ ಜೆಟ್ ಇಂಧನ ತಗ್ಗಿಸಲಾಗಿತ್ತು. ಬೆಲೆ ಏರಿಕೆಯಿಂದ ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಸುಮಾರು 40% ರಷ್ಟನ್ನು ಹೊಂದಿರುವ ಜೆಟ್ ಇಂಧನವು ಈ ವರ್ಷ ಹೊಸ ಗರಿಷ್ಠ ಮಟ್ಟಕ್ಕೆ ಏರಿದೆ. 2022 ರ ಆರಂಭದಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಎಟಿಎಫ್ ಬೆಲೆಗಳು ಹೆಚ್ಚಾಗುತ್ತಿವೆ.

ಭಾರತದಲ್ಲಿ ಜೆಟ್ ಇಂಧನ ಬೆಲೆ ಇಳಿಕೆ, ವಿಮಾನಯಾನ ದರ?

ಎಟಿಎಫ್ ಕೂಡಾ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಮತ್ತು ಮಾರಾಟ ತೆರಿಗೆ ಅಥವಾ ರಾಜ್ಯಗಳ ವ್ಯಾಟ್ ಎರಡನ್ನೂ ಆಕರ್ಷಿಸುತ್ತದೆ.

ಎಟಿಎಫ್ ಪ್ರಸ್ತುತ ಅಬಕಾರಿ ಸುಂಕದ ಶೇ 11 ರಷ್ಟು ಜಾಹೀರಾತು ಮೌಲ್ಯದ ದರದಲ್ಲಿ ವಿಧಿಸಬಹುದಾಗಿದೆ. ಪ್ರಾದೇಶಿಕ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ಮಾರಾಟವಾಗುವ ಎಟಿಎಫ್‌ಗೆ ಶೇಕಡಾ 2 ರಷ್ಟು ರಿಯಾಯಿತಿ ದರವು ಅನ್ವಯಿಸುತ್ತದೆ.

ವಿಮಾನ ಇಂಧನ ದರ ಇಳಿಕೆ ಮಾಡಿದ ಇಂಡಿಯನ್ ಆಯಿಲ್

ಹಿಂದಿನ ಹದಿನೈದು ದಿನಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಸರಾಸರಿ ಬೆಲೆಯನ್ನು ಆಧರಿಸಿ, ಜೆಟ್ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಪರಿಷ್ಕರಿಸಲಾಗುತ್ತದೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆ ಸತತ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಇಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಕಳೆದ ಎರಡು ತಿಂಗಳಲ್ಲಿ ಸತತವಾಗಿ ನಾಲ್ಕು ಬಾರಿ ಎಟಿಎಫ್ ಬೆಲೆ ಏರಿಕೆ ಕಂಡಿದೆ.

English summary

Fall in international oil prices, Jet fuel prices in India cut

Jet fuel (ATF) prices on Saturday were reduced by 2.2 per cent, reflecting a fall in international oil prices. Aviation turbine fuel (ATF) prices were cut by Rs 3,084.94 per kilolitre, or 2.2 per cent, to Rs 138,147.93 per kl, a price notification of state-run fuel retailers showed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X