For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ನಿಂದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ನಲ್ಲಿ 1500 ಕೋಟಿ ಹೂಡಿಕೆ

By ಅನಿಲ್ ಆಚಾರ್
|

ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ನಲ್ಲಿ 7.8% ಷೇರಿನ ಪಾಲಿಗಾಗಿ 1500 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಬೆಂಗಳೂರು ಮೂಲದ ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಶುಕ್ರವಾರದಂದು (ಅಕ್ಟೋಬರ್ 23, 2020) ಘೋಷಣೆ ಮಾಡಿದೆ. ಈ ಹೂಡಿಕೆಯಿಂದ ಬರುವ ಮೊತ್ತವನ್ನು ಫ್ಯಾಷನ್ ವಿಭಾಗದ ಬೆಳವಣಿಗೆಗೆ ಬಳಸುವುದಾಗಿ ಆದಿತ್ಯ ಬಿರ್ಲಾ ಫ್ಯಾಷನ್ ತಿಳಿಸಿದೆ.

ಇದರ ಜತೆಗೆ ಡಿಜಿಟಲ್ ಬದಲಾವಣೆಯ ವ್ಯೂಹದ ವಿಸ್ತರಣೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ಸಿಕ್ಕಂತೆ ಆಗುತ್ತದೆ ಎಂದು ತಿಳಿಸಿದೆ. ಇನ್ನು ಫ್ಲಿಪ್ ಕಾರ್ಟ್ ನಿಂದ ಅದರ ಬ್ರ್ಯಾಂಡ್ ವ್ಯಾಪ್ತಿ ವಿಸ್ತಾರವಾಗಿದೆ; ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ. ಫ್ಲಿಪ್ ಕಾರ್ಟ್ ಹಾಗೂ Myntra ಎರಡಕ್ಕೂ ಉತ್ಪನ್ನಗಳನ್ನು ಪೂರೈಸುತ್ತದೆ.

 

ಹಬ್ಬದ ಋತು: 2000 + ಫ್ಯಾಷನ್ ಸ್ಟೋರ್ ಜೊತೆ -ಫ್ಲಿಪ್ ಕಾರ್ಟ್ ಒಪ್ಪಂದ

ಗ್ರಾಹಕರು ಅನುಭವವನ್ನು ಇದು ಹೆಚ್ಚಿಸುತ್ತದೆ ಎಂದು ಕಂಪೆನಿಗಳು ಹೇಳಿವೆ. ಫ್ಲಿಪ್ ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತಣಾಡಿ, ಆದಿತ್ಯ ಬಿರ್ಲಾ ಜತೆಗಿನ ಈ ಸಹಭಾಗಿತ್ವದ ಮೂಲಕ ದೇಶದಾದ್ಯಂತ ಇರುವ, ಫ್ಯಾಷನ್ ಬಗ್ಗೆ ಕಾಳಜಿ ಇರುವವರಿಗೆ ದೊಡ್ಡ ಪ್ರಮಾಣದ ಆಯ್ಕೆಗಳನ್ನು ನೀಡುತ್ತೇವೆ ಎಂದಿದ್ದಾರೆ.

ಫ್ಲಿಪ್ ಕಾರ್ಟ್ ನಿಂದ ಆದಿತ್ಯ ಬಿರ್ಲಾ ಫ್ಯಾಷನ್ 7.8% ಷೇರು ಖರೀದಿ

ಆದಿತ್ಯ ಬಿರ್ಲಾ ಫ್ಯಾಷನ್ಸ್ ಎಂ.ಡಿ. ಆಶೀಶ್ ದೀಕ್ಷಿತ್ ಮಾತನಾಡಿ, ಭಾರತದ ಬಟ್ಟೆಗಳ ವಲಯಕ್ಕೆ ನಾಟಕೀಯ ಬೆಳವಣಿಗೆಯ ಚಲನೆ ಕೊಡುವಂಥ ಶಕ್ತಿ ಈ ಸಹಭಾಗಿತ್ವಕ್ಕೆ ಇದೆ. ಇದರಿಂದ ಉತ್ತಮ ಅವಕಾಶಗಳು ಸೃಷ್ಟಿ ಆಗುತ್ತವೆ ಎಂದು ಹೇಳಿದ್ದಾರೆ.

English summary

Flipkart Investing 1500 Crore Rupees In Aditya Birla Fashions And Retail

E commerce giant Flipkart investing 1500 crore rupees in Aditya Birla fashions and retail. Company announced on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X