For Quick Alerts
ALLOW NOTIFICATIONS  
For Daily Alerts

ಇಪಿಎಫ್ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ: 3 ತಿಂಗಳು ಸರ್ಕಾರವೇ ಇಪಿಎಫ್ ಪಾವತಿಸಲಿದೆ

|

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ನಲ್ಲಿ ಇಪಿಎಫ್ ವಲಯಕ್ಕೆ ಉತ್ತಮ ಕೊಡುಗೆ ನೀಡಿದೆ. ಜೂನ್ ಜುಲೈ ಮತ್ತು ಆಗಸ್ಟ್‌ ತಿಂಗಳ ಮೂರು ತಿಂಗಳ ಇಪಿಎಫ್ ಹಣವನ್ನು ಕೇಂದ್ರ ಸರ್ಕಾರವೇ ಪಾವತಿಸಲಿದ್ದು, ಈ ಹಿಂದೆ ನೀಡಿದ್ದ ಸೌಲಭ್ಯವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.

ಇಪಿಎಫ್ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ

ಕೇವಲ ನೌಕರರ ಪಾಲನ್ನು ಅಷ್ಟೇ ಪಾವತಿ ಮಾಡದೇ, ನೌಕರರು ಮತ್ತು ಉದ್ಯೋಗದಾತರ ಪಾಲನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡಲಿದ್ದು, 15 ಸಾವಿರ ಒಳಗಿನ ಸಂಬಳ ಪಡೆಯುವವರಿಗೆ ಈ ರಿಯಾಯಿತಿ ಸಿಗಲಿದೆ. ಇದರಿಂದಾಗಿ 72.5 ಲಕ್ಷ ಕಾರ್ಮಿಕರಿಗೆ ಇಪಿಎಫ್‌ನಿಂದ ಅನುಕೂಲವಾಗುವುದು.

ಇದರ ಜೊತೆಗೆ ಉದ್ಯೋಗದಾತರ ಇಪಿಎಫ್ ಪಾಲನ್ನು ಇಳಿಕೆ ಮಾಡಲಾಗಿದೆ. ಈ ಹಿಂದೆ 12 ಪರ್ಸೆಂಟ್ ಇಪಿಎಫ್ ಪಾಲನ್ನು 10 ಪರ್ಸೆಂಟ್‌ಗೆ ತಗ್ಗಿಸಿದೆ. ಅಲ್ಲದೆ ಕೇಂದ್ರವೇ 6,750 ಕೋಟಿ ರುಪಾಯಿ ಹಣವನ್ನು ಪಾವತಿ ಮಾಡಲಿದೆ.

English summary

FM Nirmala Sitharaman Economy Package to EPF Contribution

FM Nirmala Sitharaman Economy Package to Workers Details Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X