For Quick Alerts
ALLOW NOTIFICATIONS  
For Daily Alerts

ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿ

|

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲು 45 ದಿನಗಳ ವಿನಾಯಿತಿ ನೀಡಿತ್ತು. ಇದೀಗ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಗುಡ್‌ ನ್ಯೂಸ್ ಇಲ್ಲಿದೆ. ಯಾವುದೇ ಟೋಲ್ ಪ್ಲಾಜ್ಹಾಗಳಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಇಲ್ಲವೇ ಫಾಸ್ಟ್‌ ಟ್ಯಾಗ್ ಸ್ಕ್ಯಾನರ್ ಇಲ್ಲದೇ ಹೋದಲ್ಲಿ ಉಚಿತವಾಗಿ ಪ್ರವೇಶ ಪಡೆಯಬಹುದು.

ಫಾಸ್ಟ್‌ಟ್ಯಾಗ್ ಡೆಡ್‌ಲೈನ್‌ಗೆ ಸ್ವಲ್ಪ ವಿನಾಯಿತಿಫಾಸ್ಟ್‌ಟ್ಯಾಗ್ ಡೆಡ್‌ಲೈನ್‌ಗೆ ಸ್ವಲ್ಪ ವಿನಾಯಿತಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಕಟಣೆಯುನ್ನು ಹೊರಡಿಸಿದ್ದು, ಫಾಸ್ಟ್‌ಟ್ಯಾಗ್‌ ಹೊಂದಿರುವ ವಾಹನವು ಟೋಲ್ ಪ್ಲಾಜ್ಹಾ ಮೂಲಕ ಸಂಚಾರ ಮಾಡುವಾಗ ಫಾಸ್ಟ್‌ಟ್ಯಾಗ್‌ ಸ್ಕ್ಯಾನರ್ ಕೆಟ್ಟಿದ್ದರೆ ಇಲ್ಲವೇ ಆ ಟೋಲ್‌ನಲ್ಲಿ ಸ್ಕ್ಯಾನರ್ ಇಲ್ಲದೇ ಹೋದಲ್ಲಿ ವಾಹನ ಸವಾರರು ಉಚಿತವಾಗಿ ಆ ಟೋಲ್ ಮೂಲಕ ಸಂಚಾರ ನಡೆಸಬಹುದಾಗಿದೆ.

ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿ

ಹೀಗೆ ಉಚಿತವಾಗಿ ಟೋಲ್‌ಗಳಲ್ಲಿ ಸಂಚಾರ ನಡೆಸುವ ವಾಹನ ಸವಾರರು ಅಥವಾ ವಾಹನ ಮಾಲೀಕರಿಗೆ ಶೂನ್ಯ ವಹಿವಾಟು ರಶೀದಿಯನ್ನು ನೀಡಲಾಗುತ್ತದೆ. ಯಾವುದೇ ರೀತಿಯ ಶುಲ್ಕ ಪಡೆಯದೇ ಈ ರಶೀದಿ ಪಡೆಯಬಹುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಫಾಸ್ಟ್‌ ಟ್ಯಾಗ್‌ ಮೂಲಕ ಭರ್ಜರಿ ಕಲೆಕ್ಷನ್: ನಗದು ಶುಲ್ಕ ಸಂಗ್ರಹ ಕುಸಿತಫಾಸ್ಟ್‌ ಟ್ಯಾಗ್‌ ಮೂಲಕ ಭರ್ಜರಿ ಕಲೆಕ್ಷನ್: ನಗದು ಶುಲ್ಕ ಸಂಗ್ರಹ ಕುಸಿತ

ದೇಶಾದ್ಯಂತ ಫಾಸ್ಟ್‌ಟ್ಯಾಗ್ ಬಳಕೆದಾರರ ಪ್ರಮಾಣ ಹೆಚ್ಚಾಗತೊಡಗಿದ್ದು, ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಣ ಸಂಗ್ರಹದ ಪ್ರಮಾಣವು ದಿನಕ್ಕೆ 66 ಪರ್ಸೆಂಟ್ ಏರಿಕೆಯಾಗಿದೆ. ಇದಕ್ಕೆ ತದ್ವಿರುದ್ದವಾಗಿ ನಗದು ಶುಲ್ಕ ಸಂಗ್ರಹವು ಇಳಿಕೆ ಕಂಡಿದೆ. ನವೆಂಬರ್‌ 17ರಿಂದ 23ರ ಅವಧಿಯಲ್ಲಿ ದೇಶಾದ್ಯಂತ ಫಾಸ್ಟ್‌ಟ್ಯಾಗ್ ಮೂಲಕ 26.4 ಕೋಟಿ ರುಪಾಯಿ ಸಂಗ್ರಹವಾಗಿದೆ. ಡಿಸೆಂಬರ್‌ 15 ರಿಂದ 21ರ ಅವಧಿಯಲ್ಲಿ 44 ಕೋಟಿ ರುಪಾಯಿಗೆ ಏರಿಕೆಯಾಗಿದೆ.

English summary

Get Free Trip If Fastag Scanner Doesn't Work

If Fastag scnnner doesn't workd in toll plaza vehicle owner do not need to pay at all and can have a free trip
Story first published: Friday, January 3, 2020, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X