For Quick Alerts
ALLOW NOTIFICATIONS  
For Daily Alerts

'ಗಿಗ್' ಕಾರ್ಮಿಕರಿಗೆ ವಾರದ ರಜೆ ಸೇರಿ ಹಲವು ಸೌಲಭ್ಯ

|

ಬೆಂಗಳೂರು, ಅಕ್ಟೋಬರ್ 22: ಶೀಘ್ರದಲ್ಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ಯೋಗ ನೀತಿ ಜಾರಿಗೆ ತರಲಿದ್ದು, ಉದ್ಯೋಗದ ವ್ಯಾಪ್ತಿಗೆ ಗಿಗ್ ಕಾರ್ಮಿಕರು(ನಿರ್ದಿಷ್ಟ ಅವಧಿಯ ಕಾರ್ಮಿಕರು), ಅಂಗನವಾಡಿ ಕಾರ್ಯಕರ್ತರು, ಫ್ಲಾಟ್ ಫಾರಂ ಕಾರ್ಮಿಕರನ್ನು ಸೇರಿಸಲು ಚಿಂತನೆ ನಡೆಸಲಾಗಿದೆ.

 

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ರಜೆ ಸೇರಿದಂತೆ, ವಿವಿಧ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ.

 

ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಹಲವರು ತಮ್ಮನ್ನು ಉದ್ಯೋಗ ನಿಯಮ ವ್ಯಾಪ್ತಿಗೆ ಒಳಪಡಿಸುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ.

'ಗಿಗ್' ಕಾರ್ಮಿಕರಿಗೆ ವಾರದ ರಜೆ ಸೇರಿ ಹಲವು ಸೌಲಭ್ಯ

ದೇಶದಲ್ಲಿ ಹೊಸ ಹೊಸ ರೀತಿಯ ಉದ್ಯೋಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗದ ವ್ಯಾಖ್ಯಾನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ನಿಯಮ ಜಾರಿಯಾದರೇ ಓಲಾ, ಊಬರ್, ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಆ್ಯಪ್ ಬೇಸ್ ನಲ್ಲಿ ಕೆಲಸ ಮಾಡುವ ನೌಕರರು ಇದರ ವ್ಯಾಪ್ತಿಗೆ ಬರಲಿದ್ದಾರೆ. ಈ ನಿಯಮದಡಿ ಗಿಗ್ ಕಾರ್ಮಿಕರು ಕನಿಷ್ಟ ವೇತನ, ವಾರದ ರಜೆ , ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ಪಡೆಯಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಅಕ್ಟೋಬರ್ 30 ರ ಉಪಚುನಾವಣೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೆಬ್ಬಾರ್ ಹೇಳಿದರು.

ಸೆಪ್ಟೆಂಬರ್ ತಿಂಗಳಿನಲ್ಲಿ ಶುರುವಾದ ಅಸಂಘಟಿತ ಕಾರ್ಮಿಕರಿಗಾಗಿ ಕರ್ನಾಟಕದ 7 ಲಕ್ಷಕ್ಕೂ ಹೆಚ್ಚು ಜನರು ಇ-ಶ್ರಾಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ 1.6 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಧಿವೇಶನದಲ್ಲಿ ಹೆಬ್ಬಾರ್ ಮಾಹಿತಿ ನೀಡಿದ್ದರು.

ಪ್ರಸ್ತುತ, ಗಿಗ್ ಕೆಲಸಗಾರರು, ಆಹಾರ ವಿತರಣಾ ಏಜೆಂಟ್‌ಗಳು ಮತ್ತು ಮೊಬೈಲ್-ಅಪ್ಲಿಕೇಶನ್ ಆಧಾರಿತ ಚಾಲಕರು ಕಂಪನಿಯ ಉದ್ಯೋಗಿಗಳಲ್ಲ-ಅವರಿಗೆ ಪ್ರತಿ ಡೆಲಿವರಿ ಮತ್ತು ಟ್ರಿಪ್ ಗೆ ಹಣ ಪಾವತಿಸಲಾಗುತ್ತದೆ ಮತ್ತು ಅವರು ಇಂಧನದ ವೆಚ್ಚವನ್ನು ಭರಿಸಬೇಕಾಗಿದೆ.

ಕೇಂದ್ರ ಸರ್ಕಾರ ನೀತಿಯನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ, ಕರ್ನಾಟಕವು ಮೊಬೈಲ್ ಆಧಾರಿತ ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು, ವಿತರಣಾ ಏಜೆಂಟ್‌ಗಳು ಮತ್ತು ಆಹಾರ ವಿತರಣಾ ಏಜೆಂಟ್‌ಗಳ ಜಿಲ್ಲಾವಾರು ಸಮೀಕ್ಷೆಯನ್ನು ನಡೆಸುತ್ತೇವೆ.

ಫಲಾನುಭವಿಗಳು ಸರಿಯಾದ ಮಾಹಿತಿ ಹೊಂದಿದ್ದರೆ ಮಾತ್ರ ನಾವು ಅವರಿಗೆ ಸೌಲಭ್ಯಗಳನ್ನು ಒದಗಿಸಬಹುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ 'ಇಂಡಿಯನ್ ಎಕ್ಸ್‌ಪ್ರೆಸ್‌ಗೆ' ತಿಳಿಸಿದ್ದಾರೆ.

English summary

Gig Workers With E-Commerce Platforms In Karnataka To Get Benefits Like Weekly Offs And Minimum Wages

Gig workers with e-commerce platforms can hope for better days with various benefits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X