For Quick Alerts
ALLOW NOTIFICATIONS  
For Daily Alerts

ಇಂದಿನಿಂದ ಸವರನ್ ಗೋಲ್ಡ್‌ ಬಾಂಡ್‌ ಚಂದಾದಾರಿಕೆ ಶುರು: ಪ್ರತಿ ಗ್ರಾಂಗೆ 4,777 ರೂಪಾಯಿ

|

ಬಹುನಿರೀಕ್ಷಿತ ಸವರನ್ ಗೋಲ್ಡ್ ಬಾಂಡ್ ಯೋಜನೆ (2021) ಚಂದಾದಾರಿಕೆಯು ಇಂದಿನಿಂದ ಅಂದರೆ ಮೇ 17ರಿಂದ ಐದು ದಿನಗಳ ಕಾಲ ತೆರೆಯಲಿದೆ. ಸವರನ್ ಗೋಲ್ಡ್‌ ಬಾಂಡ್ ಯೋಜನೆಯ ವಿತರಣಾ ಬೆಲೆ ಈಗಾಗಲೇ ನಿಗದಿಯಾಗಿದ್ದು, ಪ್ರತಿ ಗ್ರಾಂಗೆ 4,777 ರೂಪಾಯಿ ಎಂದು ಆರ್‌ಬಿಐ ಪ್ರಕಟಿಸಿದೆ.

 

ಒಟ್ಟು ಆರು ಕಂತುಗಳಲ್ಲಿ ನೀಡಲಾಗುವ ಚಂದಾದಾರಿಕೆಯಲ್ಲಿ ಮೇ 17 ರಿಂದ ಮೊದಲ ಕಂತು ಬಿಡುಗಡೆಯಾಗಲಿದ್ದು, ಮೇ 25 ರಂದು ಬಾಂಡ್‌ಗಳನ್ನು ನೀಡಲಾಗುತ್ತದೆ. ನಂತರ ಎರಡನೇ ಕಂತು ಮೇ 24ರಿಂದ 28ರವರೆಗೆ ವಿತರಣೆಯಾಗಲಿದೆ.

ಇಂದಿನಿಂದ ಸವರನ್ ಗೋಲ್ಡ್‌ ಬಾಂಡ್‌ ಚಂದಾದಾರಿಕೆ ಶುರು

ಇನ್ನು ಮೂರನೇ ಚಂದಾದಾರಿಕೆ ದಿನಾಂಕವು ಮೇ 31ರಿಂದ ಜೂನ್ 04ರವರೆಗಿದ್ದು, ನಾಲ್ಕನೇ ಸಿರೀಸ್ ಜುಲೈ 12 ರಿಂದ 16ರವರೆಗೆ ನಿಗದಿಯಾಗಿದೆ. ನಂತರದಲ್ಲಿ ಐದನೇ ಚಂದಾದಾರಿಕೆಯು ಆಗಸ್ಟ್ 09ರಿಂದ 13ರವರೆಗೆ ಹಾಗೂ ಆರನೇ ಅಥವಾ ಅಂತಿಮ ಸಿರೀಸ್ ಆಗಸ್ಟ್‌ 30ರಿಂದ ಸೆಪ್ಟೆಂಬರ್ 03ರವರೆಗೆ ಚಂದಾದಾರಿಕೆಯ ದಿನಾಂಕ ಪ್ರಕಟಿಸಲಾಗಿದೆ.

ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ನಾಮಮಾತ್ರ ಮೌಲ್ಯಕ್ಕಿಂತ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಅರ್ಜಿಯ ವಿರುದ್ಧ ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ.

ಇಂದು ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.7ರಷ್ಟು ಏರಿಕೆಗೊಂಡು 48,003 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಶೇಕಡಾ 1.2ರಷ್ಟು ಜಿಗಿದು ಪ್ರತಿ ಕೆಜಿಗೆ 71,940 ರೂಪಾಯಿ ಮುಟ್ಟಿದೆ.

English summary

Gold Bond Opens For Subscription: Issue Price And Discount Rate Here

The Sovereign Gold Bond Scheme 2021-22 Series-I or first tranche of gold bonds of this fiscal opened for subscription today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X