For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1800 ಡಾಲರ್‌ಗಿಂತ ಕೆಳಕ್ಕೆ ಇಳಿಕೆ, ಕಾರಣವೇನು?

|

ಜಾಗತಿಕ ಮಾರುಕಟ್ಟೆಯು ಚಿನ್ನದ ಬೆಲೆಯು ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1800 ಡಾಲರ್‌ನಷ್ಟು ಚಿನ್ನದ ಮೌಲ್ಯ ಕೆಳಕ್ಕೆ ಇಳಿದಿದೆ. ಇದಕ್ಕೆ ಕಾರಣವೇನು ಎಂದು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

19:26 ನ್ಯೂಯಾರ್ಕ್ ಸಮಯ ಅಥವಾ ಭಾರತೀಯ ಸಮಯದ ಪ್ರಕಾರ ಮುಂಜಾನೆ 4:59 ಸಮಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸುಮಾರು 1768.9ಕ್ಕೆ ಕುಸಿತ ಕಂಡಿದೆ. ಏಕಾಏಕಿ ಚಿನ್ನದ ಬೆಲೆಯು ಸುಮಾರು 35 ಡಾಲರ್‌ನಷ್ಟು ಕುಸಿತ ಕಂಡಿದೆ.

Gold Rate Today: ಚಿನ್ನದ ಬೆಲೆ ಏರಿಕೆ: ಪ್ರಮುಖ ನಗರಗಳಲ್ಲಿ ಜು.5ರ ದರ ತಿಳಿಯಿರಿGold Rate Today: ಚಿನ್ನದ ಬೆಲೆ ಏರಿಕೆ: ಪ್ರಮುಖ ನಗರಗಳಲ್ಲಿ ಜು.5ರ ದರ ತಿಳಿಯಿರಿ

ಈ ನಡುವೆ ಭಾರತದಲ್ಲಿ ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಜುಲೈ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ ಬೆಲೆಯು 47,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 130 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,930 ರೂಪಾಯಿ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಷ್ಟು ಪ್ರಮಾಣದಲ್ಲಿ ಕುಸಿಯಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ...

Gold Rate Today: ಚಿನ್ನದ ಬೆಲೆ ಸ್ಥಿರ: ದೇಶದ ಪ್ರಮುಖ ನಗರಗಳಲ್ಲಿ ಜು.4ರಂದು ದರ ಎಷ್ಟಿದೆ?Gold Rate Today: ಚಿನ್ನದ ಬೆಲೆ ಸ್ಥಿರ: ದೇಶದ ಪ್ರಮುಖ ನಗರಗಳಲ್ಲಿ ಜು.4ರಂದು ದರ ಎಷ್ಟಿದೆ?

 ಏಕಾಏಕಿ ಚಿನ್ನದ ಬೆಲೆ ಕುಸಿತ ಕಂಡಿದ್ದೇಕೆ?

ಏಕಾಏಕಿ ಚಿನ್ನದ ಬೆಲೆ ಕುಸಿತ ಕಂಡಿದ್ದೇಕೆ?

ಸಾಮಾನ್ಯವಾಗಿ ಡಾಲರ್ ಬಲಗೊಳ್ಳುತ್ತಿದ್ದಂತೆ ಚಿನ್ನದ ಬೆಲೆಯು ಇಳಿಕೆಯಾಗುತ್ತದೆ. ಡಾಲರ್ ಮೌಲ್ಯ ಹಾಗೂ ಚಿನ್ನದ ಬೆಲೆ ಎರಡು ಕೂಡಾ ವ್ಯತಿರಿಕ್ತವಾಗಿರುತ್ತದೆ. ಪ್ರಸ್ತುತ ಡಾಲರ್ ಮೌಲ್ಯವು ಸುಮಾರು ಎರಡು ದಶಕಗಳ ಅಧಿಕ ಮಟ್ಟಕ್ಕೆ ಏರಿಕೆಯಾಗಿದೆ. ಈ ನಡುವೆ ಹೂಡಿಕೆದಾರರು ಉದ್ಯೋಗದ ಡೇಟಾ ಮೇಲೆ ಗಮನ ಹರಿಸಿದ್ದಾರೆ. ಫೆಡ್ ಸಭೆಯು ಕೂಡಾ ಇಂದು ನಡೆಯಲಿದೆ. ಇವೆಲ್ಲವೂ ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡಿದೆ. ಒಂದು ದಿನದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯವು ಸುಮಾರು 35 ಡಾಲರ್‌ನಷ್ಟು ಕುಸಿತ ಕಂಡಿದೆ.

 ಡಾಲರ್ ಮೌಲ್ಯ ಏರಿಕೆಗೆ ಕಾರಣವೇನು?

ಡಾಲರ್ ಮೌಲ್ಯ ಏರಿಕೆಗೆ ಕಾರಣವೇನು?

"ಯುಎಸ್ ಡಾಲರ್ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆಯಾಗುವಂತೆ ಮಾಡಿದೆ. ಪ್ರತಿ ಔನ್ಸ್‌ 1,800 ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ," ಎಂದು ಕಾಮರ್ಜ್‌ಬ್ಯಾಂಕ್ ವಿಶ್ಲೇಷಕ ಕಾರ್ಸ್ಟನ್ ಫ್ರಿಟ್ಸ್ ಕಿಟ್ಕೊ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು ಈ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಆರ್ಥಿಕ ಹಿಂಜರಿತದ ಆತಂಕದ ಕಾರಣದಿಂದಾಗಿ ಯುಎಸ್‌ ಡಾಲರ್‌ 106.66ಕ್ಕೆ ಏರಿಕೆ ಕಂಡಿದೆ.

 ಚಿನ್ನದ ಎಂಸಿಎಕ್ಸ್ ದರ

ಚಿನ್ನದ ಎಂಸಿಎಕ್ಸ್ ದರ

ಈ ನಡುವೆ ಜುಲೈ 6ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51378.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 56510.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಹಿಗ್ಗಿದ್ದು 1,767.45 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.38ರಷ್ಟು ಇಳಿಕೆಯಾಗಿದ್ದು, 19.09 ಯುಎಸ್ ಡಾಲರ್ ಆಗಿದೆ.

 ಮುಂದೆ ಚಿನ್ನದ ಭವಿಷ್ಯ ಹೇಗಿದೆ?

ಮುಂದೆ ಚಿನ್ನದ ಭವಿಷ್ಯ ಹೇಗಿದೆ?

ಆರ್ಥಿಕ ಹಿಂಜರಿತದ ಸಾಧ್ಯತೆ ಹಾಗೂ ಹಣದುಬ್ಬರದ ಆತಂಕದ ನಡುವೆ ಚಿನ್ನದ ಬೆಲೆಗಳು ಪ್ರಭಾವಿತವಾಗುತ್ತಿದೆ. ಮೇ-ಜೂನ್‌ನಲ್ಲಿ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿರುವ ಕಾರಣದಿಂದಾಗಿ ಭವಿಷ್ಯದಲ್ಲಿ ಚಿನ್ನ ಓಟವು ಹಾಗೆಯೇ ಉಳಿಯುತ್ತದೆ ಎಂದು WGC ವರದಿಗಳನ್ನು ಹೇಳುತ್ತದೆ. ಕಿಟ್ಕೊ ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ 19.4 ಟನ್ ಖರೀದಿಸಿದ ನಂತರ ಕೇಂದ್ರ ಬ್ಯಾಂಕ್‌ಗಳು ಮೇ ತಿಂಗಳಲ್ಲಿ ಜಾಗತಿಕ ಚಿನ್ನದ ಸಂಪತ್ತಿಗೆ 35 ಮೆಟ್ರಿಕ್ ಟನ್‌ಗಳನ್ನು ಸೇರಿಸಿದೆ.

English summary

Gold Price Slips Below $1800 As Global Commodities Take A Knock

Gold prices all of a sudden have cracked immensely and fallen below the critical psychological level of $1800 per ounce in the international market.
Story first published: Wednesday, July 6, 2022, 12:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X